ಲೈವ್ನಲ್ಲಿ ನಮ್ರತಾ ಸೌಂದರ್ಯ ಹೊಗಳಿದ ಕಾರ್ತಿಕ್: ಸ್ನೇಹಿತ್ನ ಕಾಲು ಹೀಗೆ ಎಳೆಯೋದಾ ಫ್ಯಾನ್ಸ್?
ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಕಾರ್ತಿಕ್, ನಮ್ರತಾ ಅವರ ಸೌಂದರ್ಯವನ್ನು ಹೊಗಳಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ಸ್ನೇಹಿತ್ನ ಕಾಲೆಳೆಯುತ್ತಿದ್ದಾರೆ ಫ್ಯಾನ್ಸ್.
ಬಿಗ್ಬಾಸ್ ಸೀಸನ್ 10 ಮುಗಿದು ಹಲವು ದಿನಗಳೇ ಕಳೆದಿದ್ದರೂ ಇದರ ಗುಂಗಿನಿಂದ ಫ್ಯಾನ್ಸ್ ಹೊರಕ್ಕೆ ಬರಲಿಲ್ಲ. ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದ ಮೇಲೂ ತಮ್ಮ ನೆಚ್ಚಿನ ಸ್ಪರ್ಧಿಗಳ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಮಾತುಕತೆ ಮುಂದುವರೆದಿದೆ. ಒಂದಿಷ್ಟು ಮೀಮ್ಸ್, ಒಂದಿಷ್ಟು ಸಲ ಕಾಲೆಳೆಯುವುದು ಎಲ್ಲವೂ ನಡೆಯುತ್ತಿದೆ. ಬಿಗ್ಬಾಸ್ ಮನೆಯಲ್ಲಿ ನಡೆಯುವುದು ಒಂದಿಷ್ಟು ಪೂರ್ವ ನಿಯೋಜಿತವೇ ಎಂಬ ಆರೋಪ ಇದ್ದರೂ ಅಲ್ಲಿ ನಡೆಯುವುದೆಲ್ಲವೂ, ಎಲ್ಲ ಸನ್ನಿವೇಶಗಳು ನಿಜವೆಂದು ನಂಬಿ ನೋಡುವ ಬಹುದೊಡ್ಡ ವರ್ಗವೇ ಇದೆ. ಆದ್ದರಿಂದಲೇ ಬಿಗ್ಬಾಸ್ ಮನೆಯಿಂದ ಬಂದ ಸ್ಪರ್ಧಿಗಳೆಲ್ಲರೂ ಬಹುದೊಡ್ಡ ಸೆಲೆಬ್ರಿಟಿಗಳಾಗಿ ಬದಲಾಗುತ್ತಾರೆ. ಅವರನ್ನು ಒಂದಿಷ್ಟು ಜನರು ನೋಡುವ ದೃಷ್ಟಿಯೇ ಬದಲಾಗುತ್ತದೆ. ಕಾಂಟ್ರವರ್ಸಿ ಮಾಡಿಕೊಂಡು ಫೇಮಸ್ ಆದವರೇ ಬಿಗ್ಬಾಸ್ ಮನೆಯೊಳಕ್ಕೆ ಹೋದರೂ ಹೊರಗೆ ಬಂದ ಮೇಲೆ ಅಭಿಮಾನಿಗಳ ಸಂಖ್ಯೆ ದಿಢೀರ್ ಏರಿಕೆ ಆಗುವುದೂ ಇದೆ.
ಅದೇನೇ ಇದ್ದರೂ ಇದೀಗ ಬಿಗ್ಬಾಸ್ ಮನೆಯಲ್ಲಿ ಸಕತ್ ಸದ್ದು ಮಾಡಿದ್ದ ಬಿಗ್ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಗೌಡ ಅವರ ಮೀಮ್ಸ್ ಮತ್ತೆ ಸದ್ದು ಮಾಡುತ್ತಿದೆ. ಒಂದಿಷ್ಟು ವಾರ ನಮ್ರತಾ ಮತ್ತು ಸ್ನೇಹಿತ್ ಒಳ್ಳೆಯ ಸ್ನೇಹಿತರಾಗಿದ್ದರು. ಅದಾದ ಬಳಿಕ, ಸ್ನೇಹಿತ್ ದೂರವಾಗಿ ಕಾರ್ತಿಕ್-ನಮ್ರತಾ ಸ್ನೇಹಿತರಾದರು. ಇದೀಗ ಈ ಮೂವರನ್ನು ಎಳೆದು ತಂದಿರುವ ಟ್ರೋಲಿಗರು ತಮ್ಮದೇ ಆದ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ರಾಹುಲ್ ಗಾಂಧಿ ಕೈಹಿಡಿದು ಸುದ್ದಿಯಾಗಿದ್ದ ನಟಿಗೆ ಬಟ್ಟೆ ತೊಡಲು ಕಷ್ಟವಾದ ಕಾಯಿಲೆ! ನೋವು ತೋಡಿಕೊಂಡ ಪೂನಂ
ಅಷ್ಟಕ್ಕೂ, ಆಗಿದ್ದೇನೆಂದರೆ, ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬರುತ್ತಿದ್ದಂತೆಯೇ ಒಂದಿಷ್ಟು ಸ್ಪರ್ಧಿಗಳು ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಅದರಂತೆಯೇ ವಿನ್ನರ್ ಕಾರ್ತಿಕ್ ಕೂಡ ಮಾತುಕತೆ ನಡೆಸಿದ್ದಾರೆ. ಅವರು ನೇರ ಪ್ರಸಾರದಲ್ಲಿ ಬಂದಾಗ ನಮ್ರತಾ ಗೌಡ ಕೂಡ ಬಂದಿದ್ದರು. ಆಗ ಕಾರ್ತಿಕ್ ಅವರು, ನಮ್ರತಾರನ್ನು ಹೊಗಳಿದ್ದೇ ಅಭಿಮಾನಿಗಳು ಸ್ನೇಹಿತ್ ಕಾಲೆಳೆಯಲು ಕಾರಣವಾಗಿದೆ. ಬಿಗ್ಬಾಸ್ ಮನೆಯಲ್ಲಿ ಕಾರ್ತಿಕ್ ಮತ್ತು ನಮ್ರತಾ ಕೈ ಕೈ ಹಿಡಿದು ಸುತ್ತಾಡಿಕೊಂಡಿದ್ದರು. ಅದೇ ರೀತಿ ಹೊರ ಬಂದ ಮೇಲೂ ಬಾಂಡಿಂಗ್ ಮುಂದುವರಿದಿದೆ. ಅದಕ್ಕಾಗಿಯೇ ಲೈವ್ನಲ್ಲಿ ಕಾರ್ತಿಕ್ ಅವರು, ನಮ್ರತಾರ ಸೌಂದರ್ಯ ಹೊಗಳಿದ್ದಾರೆ.
ಕಾರ್ತಿಕ್ ಲೈವ್ಗೆ ಬಂದಾಗ ನಮ್ರತಾ ಡ್ಯಾನ್ಸ್ ಕ್ಲಾಸ್ನಲ್ಲಿ ಇದ್ದರು. ಅಲ್ಲಿಂದಲೇ ಅವರು ಕಾರ್ತಿಕ್ ಜೊತೆ ಮಾತನಾಡಿದರು. ಆಗ ಕಾರ್ತಿಕ್ ‘ಡ್ಯಾನ್ಸ್ ಕ್ಲಾಸ್ನಲ್ಲಿ ಇದ್ದರೂ ಚೆನ್ನಾಗಿ ಕಾಣುತ್ತಾ ಇದೀರಾ. ಸೈಡ್ಗೆ ತಿರುಗಿದ್ರಲ್ಲ ಆಗ ನಿಮ್ಮ ಮೂಗುಬೊಟ್ಟು ಚೆನ್ನಾಗಿ ಕಾಣುತ್ತಿತ್ತು’ ಎಂದು ನಮ್ರತಾ ಸೌಂದರ್ಯ ಹೊಗಳಿದ್ದಾರೆ. ಕೂಡಲೇ ನಾಚಿ ನೀರಾದ ನಮ್ರತಾ ‘ಇದನ್ನು ನಿಲ್ಲಿಸಿ’ ಎಂದಿದ್ದಾರೆ. ಈ ವಿಡಿಯೋ ಸಕತ್ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತ್ ಹಾಗೂ ನಮ್ರತಾ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದ್ದ ಹಾಗೆ ಹೊರಗೆ ಬಂದ ಮೇಲೆ ಇಲ್ಲ ಎನ್ನುವುದು ಟ್ರೋಲಿಗರ ಮಾತು. ಇದೇ ಕಾರಣಕ್ಕೆ, ನಮ್ರತಾ ಮತ್ತು ಕಾರ್ತಿಕ್ ವಿಡಿಯೋ ಹಾಕಿ ಅದರಲ್ಲಿ ಸ್ನೇಹಿತ್ ಅವರನ್ನು ಎಳೆದು ತಂದಿದ್ದಾರೆ.
ಡ್ರೋನ್ ಪ್ರತಾಪ್ ರನ್ನರ್ ಅಪ್ ಆದ ಕುರಿತು ನಟಿ ತಾರಾ ಹೇಳಿದ್ದೇನು? ನೇರಪ್ರಸಾರದಲ್ಲಿ ಫ್ಯಾನ್ಸ್ ಜೊತೆ ಮಾತು...
ನಮ್ರತಾ ಅವರನ್ನು ಕಾರ್ತಿಕ್ ಹೊಗಳುವ ವಿಡಿಯೋದಲ್ಲಿ ಸ್ನೇಹಿತ್ ಅವರನ್ನು ತೋರಿಸಿ ‘ಕರಿಮಣಿ ಮಾಲೀಕ ನೀನಲ್ಲ’ ಎಂದು ಸಾಂಗ್ ಹಾಕಲಾಗಿದೆ. ಇದರ ಸಕತ್ ಚರ್ಚೆಯಾಗುತ್ತಿದೆ. ಹಲವಾರು ಮಂದಿ ಕಮೆಂಟ್ ಮಾಡುತ್ತಿದ್ದಾರೆ. ಬಹುತೇಕರು ನಿಜ ನಿಜ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಬಿಗ್ಬಾಸ್ ಚರ್ಚೆ ಸದ್ಯ ನಿಲ್ಲುವಂತೆ ಕಾಣುತ್ತಿಲ್ಲ.