ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನ ಪುನೀತ್ ರಾಜ್‌ಕುಮಾರ್‌ಗೆ ಸಮರ್ಪಣೆ ಮಾಡಿದ ವಾಹಿನಿ. ಒಂದೇ ವೇದಿಕೆ ಮೇಲೆ ಡಬಲ್ ಪವರ್ ಹೌಸ್....
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ (Dancing Champion) ರಿಯಾಲಿಟಿ ಶೋ ಫಿನಾಲೆ ಹಂತ ತಲುಪಿದೆ. ಗ್ರ್ಯಾಂಡ್ ಫಿನಾಲೆ ಪ್ರಸಾರಕ್ಕೆ ಕೌಂಟ್‌ಡೌನ್ ಶುರುವಾಗಿದ್ದು ಕಾರ್ಯಕ್ರಮದ ಮೆರುಗು ಹೆಚ್ಚಿಸಲು ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ (Ashwini Puneeth Rajkumar) ಮತ್ತು ಧ್ರುವ ಸರ್ಜಾ (Dhruva Sarja) ಭಾಗಿಯಾಗಿದ್ದಾರೆ. ಈಗಾಗಲೆ ವಾಹಿನಿ ಪ್ರೋಮೋ ಬಿಡುಗಡೆ ಮಾಡಿದ್ದಾರೆ, ವೀಕೆಂಡ್ ಎಪಿಸೋಡ್‌ಗೆ ಕಾಯುತ್ತಿರುವುದಾಗಿ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.
ನಟಿ ಮೇಘನಾ ರಾಜ್ (Meghana Raj), ನಟ ವಿಜಯ್ ರಾಘವೇಂದ್ರ (Vijay Raghavendra) ಮತ್ತು ಮಯೂರಿ ಉಪಾಧ್ಯ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ರಿಯಾಲಿಟಿ ಶೋಗೆ ಸೃಜನ್ ಲೋಕೇಶ್ (Srujan Lokesh) ಅವರ ಲೋಕೇಶ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಅಕುಲ್ ಬಾಲಾಜಿ (Akul Balaji) ಅವರ ನಿರೂಪಣೆಯಲ್ಲಿ ಬರಲಿರುವ ಈ ಕಾರ್ಯಕ್ರಮವನ್ನು ಮೇ 29 ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.
'ಇಡೀ ಡ್ಯಾನ್ಸಿಂಗ್ ಚಾಂಪಿಯನ್ ಸಂಭ್ರಮವನ್ನು ನಾವು ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ಸಮರ್ಪಣೆ ಮಾಡ್ತಿದ್ದೀವಿ. ಅದರ ಭಾಗಿಯಾಗಿ ನೀವು ಬಂದಿದ್ದೀರಾ. ನೀವು ಬಂದಿರುವುದಕ್ಕೆ ನಾವು ಬಹಳ ಕೃತಜ್ಞರಾಗಿರುತ್ತೀವಿ' ಎಂದು ವಿಜಯ್ ರಾಘವೇಂದ್ರ ವೇದಿಕೆ ಮೇಲೆ ಹೇಳಿದ್ದಾರೆ. 'ಇಡೀ ಕರ್ನಾಟಕನೇ ಮಗು ತರ ಎತ್ತಿ ಬೆಳಸಿರುವಂತ ನಮ್ಮ ಪುನೀತ್ ಅವರನ್ನು ಡ್ಯಾನ್ಸಿಂಗ್ ರೂಪದಲ್ಲಿ ಶೊ ವಿನ್ನರ್ ಅವರ ಮನೆಗೆ ಹೋಗುತ್ತಿದ್ದಾರೆ' ಎಂದು ಅಕುಲ್ ಬಾಲಾಜಿ ಹೇಳಿದ್ದಾರೆ. 'ಫಿನಾಲೆ ಹಂತ ತಲುಪಿರುವ ಎಲ್ಲಾ ಸ್ಪರ್ಧಿಗಳಿಗೆ ಆಲ್ ದಿ ಬೆಸ್ಟ್' ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ವೇದಿಕೆ ಮೇಲಿಂದ ವಿಶ್ ಮಾಡಿದ್ದಾರೆ.
ಶೂಟಿಂಗ್ ಸೆಟ್‌ನಲ್ಲಿ ಎಷ್ಟು ಕೂಲ್ ಆಗಿರುತ್ತಾರೆ ಮೇಘನಾ ರಾಜ್ ನೋಡಿ!
ಪ್ರಸಾರವಾದ ನಂತರವೇ ವಿನ್ನರ್‌ಗಳ ಬಗ್ಗೆ ರಿವೀಲ್ ಮಾಡಲಾಗುತ್ತದೆ. ಆದರೆ ವೀಕ್ಷಕರು ಮತ್ತು ಫ್ಯಾನ್ ಪೇಜ್‌ಗಳು ಗೆಸ್ ಮಾಡಿರುವ ಪ್ರಕಾರ ಆಧಿತ್ಯಾ ಮತ್ತು ಅನ್ಮೋಲ್ ಎನ್ನಲಾಗಿದೆ. ಇನ್ನೂ ಕೆಲವರು ಚಂದನಾ ಆಂಡ್ ಟೀಂ ಎಂದಿದ್ದಾರೆ. 'ಇದು ತುಂಬಾ ಖುಷಿಯಾದ ವಿಷಯ ಅಪ್ಪು ಸರ್ ಟ್ರೋಫಿ ಅದರಲ್ಲೂ ಅಶ್ವಿನಿ ಮೇಡಂ ಕೈಯಲ್ಲಿ ಇದು ಡ್ಯಾನ್ಸ್ ಚಾಂಪಿಯನ್‌ಗೆ ನಿಜವಾದ ಕೊಡುಗೆ. ಕಲರ್ಸ್ ಕನ್ನಡ ಒಂದು ಹೆಜ್ಜೆ ಮುಂದೆನೆ ಹೋಗಿ ಅಪ್ಪು ಸರ್‌ಗೆ ಗೌರವ ಸಲ್ಲಿಸಿದ್ದೀರಿ' ಎಂದು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.
ಮಾಂಸ ತ್ಯಜಿಸಿ ಮಡಿಯಿಂದ ವಿಶೇಷ ಪೂಜೆ ಸಲ್ಲಿಸಿ 'ತೆಯ್ಯಂ' ವೇಷ ಧರಿಸಿದ ಇಶಿತಾ ವರ್ಷ!
ಪೊಗರು (Pogaru) ಚಿತ್ರದ ಕರಾಬು ಹಾಡಿಗೆ ಹೆಜ್ಜೆ ಹಾಕುವ ಮೂಲಕ ಧ್ರುವ ಸರ್ಜಾ ವೇದಿಕೆ ಮೇಲೆ ಎಂಟ್ರಿ ಕೊಟ್ಟಿದ್ದಾರೆ. ಧ್ರುವ ಎಂಟ್ರಿ ಕೊಡುತ್ತಿದ್ದಂತೆ ಮೇಘನಾ ರಾಜ್ ಸಂತೋಷದಿಂದ ಚಪ್ಪಾಳೆ ಹೊಡೆಯುತ್ತಿರುವುದನ್ನು ಪ್ರೋಮೋದಲ್ಲಿ ನೋಡಬಹುದು.
ಫಿನಾಲೆ ತಲುಪಿರುವ ಸ್ಪರ್ಧಿಗಳು ಯಾರು:
1) ಚಂದನಾ ಮತ್ತು ಅಕ್ಷತಾ
2) ಅರ್ಜುನ್ ಯೋಗಿ ಮತ್ತು ರಾಣಿ
3) ಆರತಿ ಮತ್ತು ಸಾಗರ್
4) ಆರಾಧ್ಯಾ ಮತ್ತು ನಿವೇದಿತಾ
5) ಅನ್ಮೋಲ್ ಮತ್ತು ಆದಿತ್ಯಾ
ರಿಯಾಲಿಟಿ ಶೋನಿಂದ ಪುಟ್ಟಗೌರಿ ಔಟ್:
'ಎಲ್ಲರಿಗೂ ನಮಸ್ಕಾರ. ಅನೇಕರು ನನಗೆ ಮೆಸೇಜ್ ಮಾಡಿ ನಾವು ಯಾಕೆ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ.ಅವರಿಗೆ ಈ ವಿಡಿಯೋ ಮೂಲಕ ಕಾರಣ ತಿಳಿಸುತ್ತಿರುವೆ. ಈ ವಿಡಿಯೋ ಯಾಕೆ ಟಿವಿಯಲ್ಲಿ ಪ್ರಸಾರ ಆಗಲಿಲ್ಲ ಎಂದು ನನಗೆ ಗೊತ್ತಿಲ್ಲ.ನನ್ನ ಡ್ಯಾನ್ಸಿಂಗ್ ಪಾರ್ಟನರ್ ನಿಹಾಲ್ ಅವರು ಮದುವೆಯಾಗುತ್ತಿದ್ದಾರೆ, ಅವರ ಜೀವನದ ಬಹು ಮುಖ್ಯವಾದ ಘಟನೆ ಇದು ಹೀಗಾಗಿ ನಾನು ಏನೂ ಮಾಡುವುದಕ್ಕೆ ಆಗೋಲ್ಲ ಒಪ್ಪಿಕೊಳ್ಳಬೇಕು. ಫಿನಾಲೆ ಹಂತ ತಲುಪುವುದಕ್ಕೆ ನಮಗೆ ಕೇವಲ ನಾಲ್ಕು ಎಪಿಸೋಡ್ ಇತ್ತು. ಪಾರ್ಟನರ್ ಬದಲಾಯಿಸಬೇಕು ಎಂದು ಮನವಿ ಮಾಡಿಕೊಂಡೆ ಆದರೆ ಆಗಲಿಲ್ಲ. ಕೆಲವೊಮ್ಮೆ ಕೆಲವೊಂದು ಘಟನೆಗಳು ನಮ್ಮ ಕೈಯಲ್ಲಿ ಇರುವುದಿಲ್ಲ. ಬದಲಾವಣೆಗಳನ್ನು ಒಪ್ಪಿಕೊಂಡು ಮುಂದೆ ಸಾಗಬೇಕು' ಎಂದು ಸಾನ್ಯಾ ಬರೆದುಕೊಂಡಿದ್ದಾರೆ.
