ಮೊದಲ ಬಾರಿ ವಿಭಿನ್ನ ತೆಯ್ಯಂ ವೇಷ ಧರಿಸಿ ಹೆಜ್ಜೆ ಹಾಕಿದ ಕಿರುತೆರೆ ನಟಿ ಇಶಿತಾ. ಹೇಗಿತ್ತು ತಯಾರಿ?

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ (Dancing Champion) ರಿಯಾಲಿಟಿ ಶೋನಲ್ಲಿ ಇಶಿತಾ ವರ್ಷ (Ishitha Varsha) ಕೂಡ ಸ್ಪರ್ಧಿಸುತ್ತಿದ್ದಾರೆ. ವಾರದಿಂದ ವಾರಕ್ಕೆ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿರುವ ಇಶಿತಾ ಆಂಡ್ ಟೀಂ ಮೊದಲ ಬಾರಿ ಕೇರಳಾದ (Kerela) ಜನಪ್ರಿಯಾ ತೆಯ್ಯಂ ವೇಷ ಧರಿಸಿ ಹಿರಣ್ಯ ಕಶಿಪು, ಪ್ರಹ್ಲಾದ ಮತ್ತು ನರಸಿಂಹ ದೃಶ್ಯವನ್ನು ತೋರಿಸಿ ಗೋಲ್ಡನ್ ಬಜರ್ ಪಡೆದುಕೊಂಡಿದ್ದಾರೆ.

ತಯಾರಿ ಬಗ್ಗೆ ಇಶಿತಾ ಮಾತು:

'ತೆಯ್ಯಂ ಕೇರಳಾದ ರಿಚ್ಯುಯಲ್ ಡಾನ್ಸ್‌ ಫಾರ್ಮ್. ನಮ್ಮ ಕೋರಿಯಾಗ್ರಾಫರ್‌ ಇದರ ಬಗ್ಗೆ ಹೇಳಿ ಒಂದಿಷ್ಟು ರೀಸರ್ಚ್ ಮಾಡಬೇಕಿತ್ತು. 456 ರೀತಿಯ ತೆಯ್ಯಂ ಇದೆ. ಇದರಲ್ಲಿ ದೇವ ಕೂತು ತೆಯ್ಯಂ ಮಾತ್ರ ಹೆಣ್ಣುಮಕ್ಕಳು ಮಾಡಬೇಕು. ಒಂದು ರೀತಿ ಮಡಿಯಲ್ಲಿ ಎಲ್ಲಾನೂ ಮಾಡಬೇಕಿದೆ. ನೃತ್ಯ ಅಭ್ಯಾಸ ಮಾಡುವಾಗ ತುಂಬಾ ಮಡಿ ಇರಬೇಕು ಹೇಗಂದ್ರೆ ಹಾಗೆ ವೇಷ ಹಾಕಿಕೊಳ್ಳುವ ಹಾಗಿಲ್ಲ ತುಂಬಾ ಭಕ್ತಿಯಿಂದ ಪೂಜೆ ಸಲ್ಲಿಸಿ ಶುರುಮಾಡಬೇಕು. ಈ ಸಂಪ್ರದಾಯನೇ ತುಂಬಾ ಡಿವೈನ್' ಎಂದು ಇಶಿತಾ ಮಾತನಾಡಿದ್ದಾರೆ.

Istha Muruga periods quiz ಪತಿಗೆ ಮುಟ್ಟಿನ ಬಗ್ಗೆ ಎಷ್ಟು ಗೊತ್ತೆಂದು ಟೆಸ್ಟ್ ಮಾಡಿದ ನಟಿ!

'ತೆಯ್ಯಂ ( Theyyam) ಮಾಡುವಾಗ ಮಾಂಸ ತ್ಯಜಿಸಬೇಕು ಹಾಗೆ ನಾವು ಮಾಡುವ ಯೋಚನೆ ತುಂಬಾ ಪಾಸಿಟಿವ್ ಆಗಿಬೇಕು. ತುಂಬಾ ಪೂಜೆಗಳು ಮಾಡಬೇಕು. ಮೊದಲ ತೆಯ್ಯಂ ಅಂತ ಹೇಳಿದಾಗ ಸರಿ ಮಾಡೋಣ ನಾನು ರೆಡಿ ಅಂತ ಹೇಳಿದೆ ನನ್ನ ತೆಲೆಯಲ್ಲಿ ಬರಿ ವಿಶ್ಯುಯಲ್ ಸೂಪರ್ ಆಗಿರಬೇಕು ಅಂತ ಅಷ್ಟೆ. ತೆಯ್ಯಂ ಬಗ್ಗೆ ಗೂಗಲ್ ಮಾಡಿದ ಮೇಲೆ ಅನೇಕರ ಜೊತೆ ಮಾತನಾಡಿದೆ. ಈ ತೆಯ್ಯಂಗೆ ಒಂದು ಪದ್ಧತಿ ಇರುತ್ತೆ ಅದರ ಪ್ರಕಾರ ಮಾಡಿಲ್ಲ ಅಂದ್ರೆ ತೊಂದರೆ ಆಗುತ್ತೆ. ಸಾಕಷ್ಟು ಜನರಿಗೆ ರಕ್ತವಾಂತಿ ಆಗಿದೆ ಅಂತ ಗೊತ್ತಾಗಿದೆ. ಕೋರಿಯೋಗ್ರಾಫರ್‌ ಜೊತೆ ಮತ್ತೆ ಮಾತನಾಡಿ ಸಂಪೂರ್ಣ ಮಾಹಿತಿ ಪಡೆದುಕೊಂಡೆ, ಶುರು ಮಾಡುವ ಮುನ್ನ ಬಲಿ ಕೊಡಬೇಕು ಅದೆಲ್ಲಾ ನಡೆಯುತ್ತಾ ಅಂತ ಕೇಳಿ ನಾವು ಶುರು ಮಾಡಿದ್ದು. ಶೂಟಿಂಗ್ ಮುಂಚೆನೂ ನಾವು ಪೂಜೆ ಮಾಡಿಬೇಕು' ಎಂದು ಇಶಿತಾ ಹೇಳಿದ್ದಾರೆ.

ಇಶಿತಾಗೆ ಎಷ್ಟು ಹುಡುಗರು ಮೆಸೇಜ್ ಮಾಡಿದ್ದಾರೆಂದು ಮೊಬೈಲ್ ಚೆಕ್ ಮಾಡಿದ ಪತಿ ಮುರುಗಾ

'ಒಬ್ಬರಿಗೆ ರೆಡಿ ಮಾಡುವುದಕ್ಕೆ ಕನಿಷ್ಠ 2 ಗಂಟೆ ಬೇಕು. ನನ್ನ ಪಾರ್ಟನರ್ ಸಾಗರ್, ಕೋರಿಯಾಗ್ರಾಫರ್ ಸುಚಿನ್ ಇರಲಿದ್ದಾರೆ. ಈ ಡ್ಯಾನ್ಸ್ ಮಾಡಲು ಶುರು ಮಾಡಿದಾಗಿನಿಂದಲ್ಲೂ ತುಂಬಾನೇ ಪಾಸಿಟಿವ್ ಫೀಲ್ ಆಗುತ್ತಿದೆ. ನಾವು ತಲೆಗೆ ಧರಿಸಬೇಕಿರುವುದು ಎಲ್ಲಾ ತೂಕ ಇರುತ್ತದೆ. ನಾನು ಧರಿಸುವುದು 10-15 ಕೆಜಿ ಇರುತ್ತದೆ, ಹಿರಣ್ಯ ಕಶಿಪು ಪಾತ್ರಕ್ಕೆ 20-25ಕೆಜಿ ಧರಿಸುತ್ತಾರೆ, ನರಸಿಂಹ ಪಾತ್ರಕ್ಕೆ 30 -35ಕೆಜಿ ತೂಕ ಇರಲಿದೆ. ಏಕೆಂದರೆ ಇದನ್ನು ಧರಿಸುವಾಗ ತೆಂಗು ಮತ್ತು ತುಂಬಾ ಬಟ್ಟೆ ಬಳಸುತ್ತಾರೆ. ಮೊದಲ ಬಾರಿ ನಾನು ಇಷ್ಟು ಸಂಪ್ರದಾಯ ಇರುವ ನೃತ್ಯವನ್ನು ಮಾಡುತ್ತಿರುವುದು. ತೆಯ್ಯಂಗೆ ಸಂಬಂಧ ಪಟ್ಟ ಪ್ರತಿಯೊಂದು ವಸ್ತುನೂ ಸಿಗುವುದು Kannurನಲ್ಲಿ. ಈಗ ನಮಗೆ ಮೇಕಪ್ ಮಾಡುವುದಕ್ಕೆ ಮತ್ತು ವಸ್ತು ತರೆಸಿರುವುದು ಅಲ್ಲಿಂದಲೇ' ಎಂದಿದ್ದಾರೆ ಇಶಿತಾ.

YouTube video player