Asianet Suvarna News Asianet Suvarna News

ರಾಕೇಶ್‌ ಔಟ್‌ ಆರ್ಯವರ್ಧನ್‌ ಇನ್: ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಗುರೂಜಿ!

ಸದಸ್ಯರ ಆಯ್ಕೆ ಮುಖ್ಯವಲ್ಲ ಜನರ ಆಯ್ಕೆ ಮುಖ್ಯ ಎಂದು ಮತ್ತೆ ಸಾಭೀತು ಮಾಡಿದ ಬಿಗ್ ಬಾಸ್.....

Aryavardhan guruji gets public support in bigg boss ott 1 kannada vcs
Author
Bangalore, First Published Aug 18, 2022, 1:06 PM IST

ವೋಟ್ ಸೆಲೆಕ್ಟ್‌ನಲ್ಲಿ ಮೊದಲ ಬಾರಿಗೆ ಕನ್ನಡ ಬಿಗ್ ಬಾಸ್ 1 ಸೀಸನ್‌ ಪ್ರಸಾರವಾಗುತ್ತಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಲ ವಾರ ಕಡಿಮೆ ವೋಟ್ ಪಡೆದುಕೊಂಡು ಕಿರಣ್ ಯೋಗೇಶ್ವರ್ ಎಲಿಮಿನೇಟ್ ಆಗುತ್ತಾರೆ. ಬೆಸ್ಟ್‌ ಪರ್ಫಾರ್ಮರ್ ಅಗಿ ರಾಕೇಶ್ ಮೆಡಲ್ ಪಡೆದರೆ, ಕಳಪೆ ಪರ್ಫಾರ್ಮರ್ ಆಗಿ ಅಕ್ಷತಾ ಜೈಲು ಸೇರುತ್ತಾರೆ. ವಾರದ ಕಥೆ ಎಲ್ಲವೂ ಕಿಚ್ಚನ ಜೊತೆ ಚರ್ಚೆ ಮಾಡಿ ಎರಡನೇ ವಾರಕ್ಕೆ ಕಾಲಿಡುತ್ತಾರೆ. 

ಪ್ರತಿ ವಾರವೂ ವಿಭಿನ್ನ ಟಾಸ್ಕ್‌ಗಳನ್ನು ನೀಡುವ ಮೂಲಕ ವಾರದ ಕ್ಯಾಪ್ಟನ್‌ನ ಆಯ್ಕೆ ಮಾಡಲಾಗುತ್ತದೆ. ಈ ವಾರ ಎರಡು ಗುಂಪುಗಳನ್ನು ಮಾಡಲಾಗಿತ್ತು. ಒಂದು ತಂಡ ಕರುನಾಡ ವಾರಿಯರ್ಸ್‌ ಮತ್ತೊಂದು ತಂಡ ಶಕ್ತಿ. ಪ್ರತಿ ತಂಡದಲ್ಲೂ 6 ಮಂದಿ ಸ್ಪರ್ಧಿಗಳಿದ್ದಾರೆ ಆದರೆ ಆರ್ಯವರ್ಧನ್ ಗುರೂಜಿ 7ನೇ ವ್ಯಕ್ತಿಯಾಗಿ ಯಾವ ತಂಡಕ್ಕೂ ಆಯ್ಕೆ ಅಗುವುದಿಲ್ಲ. ಬೇಸರದಲ್ಲಿರುವ ಗುರೂಜಿ ಕೈಯನ್ನು ವೀಕ್ಷಕರು ಬಿಟ್ಟಿಲ್ಲ....

Aryavardhan guruji gets public support in bigg boss ott 1 kannada vcs

ಹೌದು! ವೀಕ್ಷಕರ ಅಭಿಪ್ರಾಯ ಪಡೆಯಲು ಓಟಿಟಿಯಲ್ಲಿ ಪ್ರಶ್ನೆ ಕೇಳಲಾಗುತ್ತದೆ. ಆರ್ಯವರ್ಧನ್ ಯಾವ ತಂಡಕ್ಕೆ ಸೇರಬೇಕು ಎಂದು. ಆಗ ಜನರು ಕರುನಾಡ ವಾರಿಯರ್ಸ್‌ನ ಆಯ್ಕೆ ಮಾಡುತ್ತಾರೆ.  ಬಿಗ್ ಬಾಸ್ ವಿಚಾರ ತಿಳಿಸುತ್ತಿದ್ದಂತೆ ಅರ್ಯವರ್ಧನ ಸಂತಸ ವ್ಯಕ್ತ ಪಡಿಸುತ್ತಾರೆ ಆನಂತರ ಅಡುಗೆ ಮನೆಯಲ್ಲಿರುವ ಕ್ಯಾಮೆರಾ ಮುಂದೆ ನಿಂತು ಕಣ್ಣೀರಿಡುತ್ತಾರೆ.'ನಾನು ಸಂಕೋಚ ಪಡುವುದು ಜಾಸ್ತಿ ಕೋಪನೂ ಜಾಸ್ತಿ. ಆಟದಲ್ಲಿ ನಿಮಗೋಸ್ಕರ ಚೆನ್ನಾಗಿ ಆಡುತ್ತೀನಿ ಏಕೆಂದರೆ ನೀವು ನನ್ನನ್ನು ಆಯ್ಕೆ ಮಾಡಿದ್ದೀನಿ ಅದಿಕ್ಕೆ ಚೆನ್ನಾಗಿ ಆಟವಾಡುತ್ತೀನಿ' ಎಂದು ಅರ್ಯವರ್ಧನ್ ಕಣ್ಣೀರಿಡುತ್ತಾರೆ.

Bigg Boss OTT; ತಾರಕಕ್ಕೇರಿದ ಅರ್ಜುನ್ - ರೂಪೇಶ್ ಜಗಳ, ಕಂಗಾಲಾದ ಉಳಿದ ಸ್ಪರ್ಧಿಗಳು

'ಆಳಬೇಡಿ ಜನರಿಗೆ ಥ್ಯಾಂಕ್ಸ್ ಹೇಳಿ ಸಾಕು. ಜನರು ನಿಮ್ಮನ್ನು ಸೆಲೆಕ್ಟ್ ಮಾಡಿರುವುದು ಅವರಿಗೆ ನೀವು ಯೋಗ್ಯ ಅನಿಸಿದ್ದೀರಾ. ಮನೆಯಲ್ಲಿ ಯಾರ ಮಾತು ಮುಖ್ಯವಲ್ಲ ಹೊರಗಡೆ ಜನರ ಪ್ರೀತಿ ಮುಖ್ಯ ಅವರ ಪ್ರೀತಿ ನಿಮಗೆ ತೋರಿಸಿದ್ದಾರೆ ಅದಕ್ಕೆ ಖುಷಿ ಪಡಿ. ಯಾರ ವೋಟ್ ಯಾರ ಮಾತು ಮುಖ್ಯವಲ್ಲ' ಎಂದು ಜಯಶ್ರೀ ಆರಾಧ್ಯ ಧೈರ್ಯ ತುಂಬಿದ್ದಾರೆ. 

ಆರ್ಯವರ್ಧನ್ ಗುರೂಜಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೆಂದರೆ ಇರುವ ಸದಸ್ಯರಲ್ಲಿ ಒಬ್ಬರನ್ನು ಹೊರ ಕಳುಹಿಸಬೇಕು. 'ಬಿಗ್ ಬಾಸ್ ಕರುನಾಡ ವಾರಿಯರ್ಸ್‌ನ ಎಲ್ಲಾ ಸದಸ್ಯರ ಜೊತೆ ನಾನು ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿರುವೆ. ನಮ್ಮಮ ತಂಡದಲ್ಲಿರುವ ರಾಕೇಶ್ ಅವರನ್ನು ಕೈ ಬಿಟ್ಟಿದ್ದೀವಿ ಅವರನ್ನು ಕಳುಹಿಸಿ ಆರ್ಯವರ್ಧನ್ ಅವರನ್ನು ಕರೆದುಕೊಳ್ಳುತ್ತಿದ್ದೀವಿ' ಎಂದು ಸೋಮಣ್ಣ ಮಾಚಿಮಾಡ ಹೇಳುತ್ತಾರೆ.

Bigg Boss OTT; ನನಗೆ ಮೂಡ್ ಬಂದಾಗ 3 ದಿನಕ್ಕೆ ಒಮ್ಮೆ ಮಾಡ್ತೀನಿ, ಸೋನು ಗೌಡ ಮಾತು ಕೇಳಿ ದಂಗಾದ ಸುದೀಪ್

ರೂಪೇಶ್‌ ಈ ವಾರ ಯಾವ ತಂದಡ ಸದಸ್ಯರಾಗಿರುವುದಿಲ್ಲ ಈ ವಾರ ಯಾವ ಟಾಸ್ಕ್‌ನೂ ಮಾಡುವುದಿಲ್ಲ ಎಂದು ಬಿಗ್ ಬಾಸ್ ತಿಳಿಸಿದ್ದಾರೆ.

Follow Us:
Download App:
  • android
  • ios