Asianet Suvarna News Asianet Suvarna News

Bigg Boss OTT; ತಾರಕಕ್ಕೇರಿದ ಅರ್ಜುನ್ - ರೂಪೇಶ್ ಜಗಳ, ಕಂಗಾಲಾದ ಉಳಿದ ಸ್ಪರ್ಧಿಗಳು

ಅರ್ಜುನ್ ಮತ್ತು ರೂಪೇಶ್ ನಡುವಿನ ಜಗಳ ತಾರಕ್ಕೇರಿಸಿದೆ. ಇಬ್ಬರ ಕಿತ್ತಾಟ ನೋಡಿ ಉಳಿದ ಸ್ಪರ್ಧಿಗಳು ದಂಗಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಜಗಳ, ಕಿತ್ತಾಟ ಎಲ್ಲಾ ಕಾಮನ್. ಸ್ಪರ್ಧಿಗಳು  ಆಗಾಗ ಕಿತ್ತಾಡುತ್ತಾರೆ, ಬಳಿಕ ಒಂದಾಗುತ್ತಾರೆ. ಬಿಗ್ ಬಾಸ್ ಒಟಿಟಿಯಲ್ಲೂ ಕಿತ್ತಾಟ, ಜಗಳ ಪ್ರಾರಂಭವಾಗಿದೆ. ಮೊದಲ ವಾರ ಕೊಂಚ ತಣ್ಣಗಿದ್ದ ಬಿಗ್ ಮನೆ ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ ಬಿಸಿ ಏರಿದೆ. 

Big fight between Arjun and rupesh in Bigg Boss ott Kannada sgk
Author
Bengaluru, First Published Aug 16, 2022, 11:03 AM IST

ಬಿಗ್ ಬಾಸ್ ಕನ್ನಡ ಒಟಿಟಿ ಶೋ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೊದಲ ಬಾರಿಗೆ ಬಿಗ್ ಬಾಸ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಬಿಗ್ ಬಾಸ್ ಒಟಿಟಿ ಪ್ರಾರಂಭವಾಗಿ ಒಂದು ವಾರ ಕಳೆದು ಹೋಗಿದೆ. ಸ್ಪರ್ಧಿಗಳ ನಡುವೆ ಕಿತ್ತಾಟ, ಜಗವೂ ಜೋರಾಗಿದೆ. ಬಿಗ್ ಬಾಸ್ ಮನೆ ಎರಡನೇ ವಾರ ಸಿಕ್ಕಾಪಟ್ಟೆ ಕಾವೇರಿದೆ.  ಅರ್ಜುನ್ ಮತ್ತು ರೂಪೇಶ್ ನಡುವಿನ ಜಗಳ ತಾರಕ್ಕೇರಿಸಿದೆ. ಇಬ್ಬರ ಕಿತ್ತಾಟ ನೋಡಿ ಉಳಿದ ಸ್ಪರ್ಧಿಗಳು ದಂಗಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಜಗಳ, ಕಿತ್ತಾಟ ಎಲ್ಲಾ ಕಾಮನ್. ಸ್ಪರ್ಧಿಗಳು  ಆಗಾಗ ಕಿತ್ತಾಡುತ್ತಾರೆ, ಬಳಿಕ ಒಂದಾಗುತ್ತಾರೆ. ಬಿಗ್ ಬಾಸ್ ಒಟಿಟಿಯಲ್ಲೂ ಕಿತ್ತಾಟ, ಜಗಳ ಪ್ರಾರಂಭವಾಗಿದೆ. ಮೊದಲ ವಾರ ಕೊಂಚ ತಣ್ಣಗಿದ್ದ ಬಿಗ್ ಮನೆ ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ ಬಿಸಿ ಏರಿದೆ. 

ಸದ್ಯ ಕಲರ್ಸ್ ವಾಹಿನಿ ಸದ್ಯ ಪ್ರೋಮೋ ಮಾಡಿದ್ದು ಅರ್ಜುನ್ ಮತ್ತು ರೂಪೇಶ್ ನಡುವೆ ಜಗಳ ತಾರಕಕ್ಕೇರಿದೆ. ರೊಟ್ಟಿಯ ವಿಚಾರಕ್ಕೆ ಪ್ರಾರಂಭವಾದ ಜಗಳ ಬಿಗ್ ಮನೆಯ ಉಳಿದ ಸ್ಪರ್ಧಿಗಳವನ್ನು ಕಂಗಾಲಾಗುವಂತೆ ಮಾಡಿದೆ. ಜಗಳ, ಮನಸ್ತಾಪವಿದ್ದಾಗ ರಾಕೇಶ್ ಎಲ್ಲರನ್ನೂ ಸಮಾಧಾನ ಮಾಡಿ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡುತ್ತಿದ್ದರು. ಆದರೆ ರಾಕೇಶ್‌ಗೆ ಇಲ್ಲಿ ಇಬ್ಬರನ್ನು ಕಂಟ್ರೋಲ್ ಮಾಡಲು  ಸಾಧ್ಯವಾಗದೆ ತಲೆಮೇಲೆ ಕೈಹೊತ್ತು ಕುಳಿತುದ್ದರು.

ಅಷ್ಟಕ್ಕೂ ರೂಪೇಶ್ ಮತ್ತು ಅರ್ಜುನ್ ನಡುವೆ ಜಗಳ ಪ್ರಾರಂಭವಾಗಿದ್ದು ರೊಟ್ಟಿಯ ವಿಚಾರಕ್ಕೆ. ರೂಪೇಶ್ ರೊಟ್ಟಿ ಹೆಚ್ಚಾಯಿತು ಎಂದು ಡಸ್ಟ್‌ಬಿನ್ ಗೆ ಹಾಕಿದ್ದರು. ಇದನ್ನು ನೋಡಿದ ಅರ್ಜುನ್ ರೊಟ್ಟಿ ಎಸೆದಿದ್ದು ಯಾರು ಎಂದು ಕೇಳಿದರು. ಆಗ ರೂಪೇಶ್ ನಾನೆ ಎಸೆದಿದ್ದು ನನಗೆ ಸೇರಿಲ್ಲ ಹಾಗಾಗಿ ಬಿಸಾಡಿದೆ ಕ್ಷಮೆ ಇರಲಿ ಎಂದರು. ಇದರಿಂದ ಕೆಂಡವಾದ ಅರ್ಜುನ್ ಎಷ್ಟೊ ಜನ ಊಟ ವಿಲ್ಲದೆ ಸಾಯುತ್ತಿದ್ದಾರೆ. ಹಾಗಿರುವಾಗ ಊಟ ಎಸೆಯುವುದು ತಪ್ಪು ಎಂದು ಹೇಳುತ್ತಿದ್ದಂತೆ ರೂಪೇಶ್ ಕೋಪ ನೆತ್ತಿಗೇರಿತು. ಹಾಗೆಲ್ಲಾ ಹೇಳಬೇಡ, ನನಗೂ ಗೊತ್ತು, ಯಾವಾಗಲು ಹೀಗೆ ಮಾಡುತ್ತೀಯಾ ಎಂದು ಇಬ್ಬರು ಜಗಳ ಅರಭಿಸಿದ್ದರು. ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಇಬ್ಬರ ಕಿತ್ತಾಡಿಕೊಂಡರು. ಬಳಿಕ ಉಳಿದ ಸ್ಪರ್ಧಿಗಳು ಇಬ್ಬರನ್ನು ಎಳೆದು ಜಗಳ ನಿಲ್ಲಿಸಲು ಪ್ರಯತ್ನ ಪಟ್ಟರು ಆದರೂ ಕಿತ್ತಾಟ ತಾರಕ್ಕೇರಿತು. 

Bigg Boss OTT; ನನಗೆ ಮೂಡ್ ಬಂದಾಗ 3 ದಿನಕ್ಕೆ ಒಮ್ಮೆ ಮಾಡ್ತೀನಿ, ಸೋನು ಗೌಡ ಮಾತು ಕೇಳಿ ದಂಗಾದ ಸುದೀಪ್

ಈ ಪ್ರೋಮೋ ಸದ್ಯ ವೈರಲ್ ಆಗಿದೆ. ಮುಂದೇನಾಯಿತು ಎಂದು ನೋಡಲು ವೂಟ್ ಲಾಗಿನ್ ಆಗಬೇಕು. ಅಂದಹಾಗೆ ಅರ್ಜುನ್ ಮತ್ತು ರೂಪೇಶ್ ನಡುವೆ ಬಿಗ್ ಮನೆಯಲ್ಲಿ ಕೋಲ್ಡ್ ವಾರ್ ಇತ್ತು. ಆದರೀಗ ಇಬ್ಬರು ಓಪನ್ ಆಗಿ ಕಿತ್ತಾಡಿಕೊಂಡಿದ್ದಾರೆ. ಇಬ್ಬರ ಜಗಳದ ಬಳಿಕ ಬಿಗ್ ಬಾಸ್ ಮನೆ ಅಷ್ಟೆ ತಣ್ಣಗಿರುತ್ತಾ ಕಾದುನೋಡಬೇಕು.

ಮೊದಲ ವಾರ ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿ

ಮೊದಲ ವಾರದ ಎಲಿಮಿನೇಷನ್ ನಲ್ಲಿ ಕಿರಣ್ ಯೋಗೇಶ್ವರ್ ಬಿಗ್ ಬಾಸ್ ಮನೆಯಿಂದ ಹೊರನಡೆದಿದ್ದಾರೆ. ಕಿರಣ್ ಮನೆಯಿಂದ ಹೊರಬಂದಿರುವುದು ಸ್ಪರ್ಧಿಗಳಿಗೆ ಅಚ್ಚರಿ ಮೂಡಿಸಿದೆ. 

Bigg Boss OTT; ಸೋನು ಗೌಡ ವರ್ತನೆಯಿಂದ ನೆತ್ತಿಗೇರಿದ ಸುದೀಪ್ ಕೋಪ, ಸರಿಯಾಗೇ ಕ್ಲಾಸ್ ತೆಗೆದುಕೊಂಡ ಕಿಚ್ಚ

ಬಿಗ್ ಮನೆಯಲ್ಲಿರುವ ಸ್ಪರ್ಧಿಗಳು 

ಬಿಗ್ ಬಾಸ್ ಒಟಿಟಿ ಮನೆಗೆ ಒಟ್ಟು 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಆರ್ಯವರ್ಧನ್ ಗುರೂಜಿ, ಸೋನು ಗೌಡ, ಅರ್ಜುನ್, ಉದಯ್, ರಾಕೇಶ್ ಅಡಿಗ, ಸ್ಪೂರ್ತಿ ಗೌಡ, ಸಾನಿಯಾ ಐಯ್ಯರ್, ಜಯಶ್ರೀ ಆರಾಧ್ಯ, ಚೈತ್ರ ಹಳ್ಳಿಕೇರಿ, ರೂಪೇಶ್ ಶೆಟ್ಟಿ, ಲೋಕೇಶ್, ಸೋಮಣ್ಣ ಮಾಚಿಮಾಡ, ಕಿರಣ್, ಅಕ್ಷತಾ ಕುಕಿ, ನಂದಿನಿ ಮತ್ತು ಜಶ್ವಂತ್. ಇವರಲ್ಲಿ ಇದೀಗ ಕಿರಣ್ ಮನೆಯಿಂದ ಹೊರಬಂದಿದ್ದು ಸದ್ಯ 15 ಸ್ಪರ್ಧಿಗಳು ಇದ್ದಾರೆ. ಇವರಲ್ಲಿ ಈ ವಾರ ಮನೆಯಿಂದ ಹೊರಬರುವ ಸ್ಪರ್ಧಿ ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ.

Follow Us:
Download App:
  • android
  • ios