Asianet Suvarna News Asianet Suvarna News

Bigg Boss OTT; ನನಗೆ ಮೂಡ್ ಬಂದಾಗ 3 ದಿನಕ್ಕೆ ಒಮ್ಮೆ ಮಾಡ್ತೀನಿ, ಸೋನು ಗೌಡ ಮಾತು ಕೇಳಿ ದಂಗಾದ ಸುದೀಪ್

ಸುದೀಪ್ ಸ್ಪರ್ಧಿಗಳ ಜೊತೆ  ಅನೇಕ ವಿಚಾರಗಳ ಬಗ್ಗೆ ಚರ್ಚಿಸಿದರು. ಈ ವೇಳೆ ಮನೆಯಲ್ಲಿ ತುಂಬಾ ಗಲೀಜು ಆಗಿ ಇರುವುದು ಯಾರು ಕೇಳಿದರು. ಇದಕ್ಕೆ ಅನೇಕ ಹೆಸರು ಹೊರಬಂತು. ಸ್ಫೂರ್ತಿ ಗೌಡ ಮತ್ತು ಸಾನ್ಯಾ ಇಬ್ಬರೂ ಬಟ್ಟೆಗಳನ್ನು ಇಟ್ಟುಕೊಳ್ಳುವ ವಿಚಾರದಲ್ಲಿ ಗಲೀಜಾಗಿ ಇರುತ್ತಾರೆ ಎಂದು ಅನೇಕರು ಆರೋಪ ಮಾಡಿದರು. ಇದೇ ವೇಳೆ ಸ್ನಾನದ ವಿಚಾರವೂ ಪ್ರಸ್ತಾಪ ಆಗಿದೆ. 

bigg Boss ott Kannada Sonu Gowda reveals she does not take bath daily sgk
Author
Bengaluru, First Published Aug 15, 2022, 1:16 PM IST

ಬಿಗ್ ಬಾಸ್ ಕನ್ನಡ ಒಟಿಟಿ ಶೋ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೊದಲ ಬಾರಿಗೆ ಬಿಗ್ ಬಾಸ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಬಿಗ್ ಬಾಸ್ ಒಟಿಟಿ ಪ್ರಾರಂಭವಾಗಿ ಒಂದು ವಾರ ಕಳೆದೆ ಹೋಗಿದೆ. ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಅವರ ಪಂಚಾಯತಿ ಇದ್ದು ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಮಾತುಕತೆ ನಡೆಸಿದರು. ಶನಿವಾರ ಮತ್ತು ಭಾನುವಾರ ಎರಡು ದಿನ ಅಭಿನಯಚಕ್ರವರ್ತಿ ಪಂಚಾಯತಿಯಲ್ಲಿ ಹಾಜರಾಗಿದ್ದರು. ಭಾನುವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಅನೇಕ ಗಮನ ಸೆಳೆಯುವ ಘಟನೆ ನಡೆದಿದೆ. 

ಸುದೀಪ್ ಸ್ಪರ್ಧಿಗಳ ಜೊತೆ  ಅನೇಕ ವಿಚಾರಗಳ ಬಗ್ಗೆ ಚರ್ಚಿಸಿದರು. ಈ ವೇಳೆ ಮನೆಯಲ್ಲಿ ತುಂಬಾ ಗಲೀಜು ಆಗಿ ಇರುವುದು ಯಾರು ಕೇಳಿದರು. ಇದಕ್ಕೆ ಅನೇಕ ಹೆಸರು ಹೊರಬಂತು. ಸ್ಫೂರ್ತಿ ಗೌಡ ಮತ್ತು ಸಾನ್ಯಾ ಇಬ್ಬರೂ ಬಟ್ಟೆಗಳನ್ನು ಇಟ್ಟುಕೊಳ್ಳುವ ವಿಚಾರದಲ್ಲಿ ಗಲೀಜಾಗಿ ಇರುತ್ತಾರೆ ಎಂದು ಅನೇಕರು ಆರೋಪ ಮಾಡಿದರು. ಇದೇ ವೇಳೆ ಸ್ನಾನದ ವಿಚಾರವೂ ಪ್ರಸ್ತಾಪ ಆಗಿದೆ. ಪ್ರತಿ ದಿನ ಸ್ನಾನ ಮಾಡದೆ ಇರುವ ಸ್ಪರ್ಧಿ ಯಾರು ಎನ್ನುವ ಪ್ರಶ್ನೆ ಎದುರಾಯಿತು. ಆಗ ಸಾನ್ಯಾ ಐಯ್ಯರ್, ಸೋನು ಗೌಡ ಹೆಸರು ಹೇಳಿದರು. ಸೋನು ಕೂಡ ಸಾನ್ಯಾ ಒಂದು ದಿನ ಸ್ನಾನ ಮಾಡಿರಲಿಲ್ಲ, ಪರ್ಫ್ಯೂಮ್ ಹಾಕಿಕೊಂಡು ಓಡಾಡಿದ್ರು ಎಂದರು. ಬಳಿಕ ಸೋನು ಗೌಡ ಇವತ್ತು ಸ್ನಾನ ಮಾಡದೆ ಹಾಗೆ ಬಂದು ಕುಳಿತಿದ್ದಾರೆ ಎಂದು ರಿವೀಲ್ ಮಾಡಿದರು. ಸನು ಕೂಡ ಹೌದು ಎಂದು ಒಪ್ಪಿಕೊಂಡರು. 

Bigg Boss OTT; ಸೋನು ಗೌಡ ವರ್ತನೆಯಿಂದ ನೆತ್ತಿಗೇರಿದ ಸುದೀಪ್ ಕೋಪ, ಸರಿಯಾಗೇ ಕ್ಲಾಸ್ ತೆಗೆದುಕೊಂಡ ಕಿಚ್ಚ

ಆಗ ಸುದೀಪ್ ಯಾವಾಗಲೂ ಹೀಗೆನಾ, ಮನೆಯಲ್ಲೂ ಹೀಗೆ ಮಾಡ್ತೀರಾ ಎಂದು ಕೇಳಿದರು. ಇದಕ್ಕೆ ಸೋನು ಮನೆಯಲ್ಲಿದ್ದಾಗ ಮೂಡ್ ಬಂದಾಗ 3 ದಿನಕ್ಕೆ ಒಮ್ಮೆ ಮಾಡ್ತೀನಿ ಎಂದು ಹೇಳಿದರು. ಸೋನು ಮಾತು ಕೇಳಿ ದಂಗಾದ ಸುದೀಪ್, ಮೂಡ್ ಬಂದಾಗ ಏನ್ ಮಾಡ್ತೀರಾ ಎಂದು ಕಾಲೆಳೆದರು. ಬಳಿಕ ಸ್ಪರ್ಧಿಗಳೆಲ್ಲಾ ಜೋರಾಗಿ ನಕ್ಕಿದರು. ಆಗ ಸೋನು ಗೌಡ ಸ್ನಾನ ಮಾಡುವ ಬಗ್ಗೆ ಹೇಳಿದ್ದು ಎಂದರು. ಏನು ಅಂತ ಸರಿಯಾಗಿ ಅರ್ಥವಾಗುವ ಹಾಗೆ ಹೇಳಬೇಕು, ಇಲ್ಲವಾದರೇ ವಿಷಯ ಎಲ್ಲಿಂದನೋ ಎಲ್ಲಿಗೋ ಹೋಗುತ್ತೆ ಎಂದು ಸುದೀಪ್ ಹೇಳಿದರು.    

Bigg Boss OTT; ರಾತ್ರಿ 1 ಮೊಟ್ಟೆ ಕೊಟ್ಟಿದ್ರೆ ಏನಾಗ್ತಿತ್ತು, ಗುರೂಜಿಗೆ ಸೋನು ಗೌಡ ಸಖತ್ ಕ್ಲಾಸ್

ಇನ್ನು ಯೆಸ್ ಆರ್ ನೋ ರೌಂಡ್ ನಲ್ಲಿ ಸೋನು ಮಾತು ಕೇಳಿ ಸುದೀಪ್ ಕೆಂಡ ಆಗಿದ್ದರು. ಈ ರೌಂಡ್ ನಲ್ಲಿ ಸೋನು ಗೌಡ ಸಿಡಿ ಸಿಡಿ ಮಾಡಿದ್ದಾರೆ. ಸೋನು ವರ್ತನೆ ಕಿಚ್ಚನ ಕೋಪ ನತ್ತಿಗೇರಿಸಿತ್ತು. 
ಇದನ್ನು ಗಮನಿಸಿದ ಸುದೀಪ್, 'ನೀವು ತಮಾಷೆ ಮಾಡಿದಾಗ ಬೇರೆಯವರು ನಗುತ್ತಾರೆ. ಆದರೆ ಬೇರೆಯವರು ನಿಮಗೆ ತಮಾಷೆ ಮಾಡಬಾರದು ಎನ್ನುವುದು ಸರಿನಾ. ನೀವು ಬೇರೆಯವರಿಗೆ ತಮಾಷೆ ಮಾಡಿದಾಗ ಅವರು ಕೂಡ ಹೀಗೆಯೇ ರೇಗಾಡಬಹುದಿತ್ತಲ್ಲ. ಎಲ್ಲರೂ ತಮಾಷೆಯಾಗಿ ತೆಗೆದುಕೊಂಡರು. ಆರ್ಯವರ್ಧನ್ ಬಗ್ಗೆ ತೀರ ತಮಾಶೆ ಮಾಡಿದ್ರಿ, ಅವರು ಸೈಲೆಂಟ್ ಆಗಿಯೇ ಇದ್ರಲ್ವಾ. ಇನ್ಮುಂದೆ ನೀವು ಬೇರೆಯವರಿಗೆ ಲೇವಡಿ ಮಾಡುವಂತಿಲ್ಲ. ನೀವು ಹೀಗೆ ಮಾಡಿದ್ರೆ ಈ ಶೋ ನಡೆಯಲ್ಲ. ಯೆಸ್​ ಅಥವಾ ನೋ ರೌಂಡ್​ ಇಲ್ಲಿಗೆ ಮುಗಿಯಿತು' ಎಂದು ಸುದೀಪ್​ ಹೇಳಿದರು. 

Follow Us:
Download App:
  • android
  • ios