Asianet Suvarna News Asianet Suvarna News

ಒಬ್ಬಳು ಸಾಲಲ್ಲಾ ಅಂತ ಇನ್ನೊಬ್ಬಳು ಬಂದ್ಲಾ? ಒಳ್ಳೆಯ ಸೀರಿಯಲ್​ ಹಳಿ ತಪ್ಪಿಸಬೇಡಿ ಅಂದ ಫ್ಯಾನ್ಸ್​

ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಇದಾಗಲೇ ಶಾರ್ವರಿ ಎನ್ನುವ ಓರ್ವ ವಿಲನ್​ ಇರುವಾಗ ಮತ್ತೋರ್ವ ಲೇಡಿ ವಿನಲ್​ ಎಂಟ್ರಿಯಾಗಿರುವುದಕ್ಕೆ ಫ್ಯಾನ್ಸ್​ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಏನಿದು ವಿಷ್ಯ?
 

Another lady villain in Sreerastu Shubhamastu serial fans react negatively to this suc
Author
First Published Feb 8, 2024, 6:02 PM IST

ಎಲ್ಲಾ ಸಮಸ್ಯೆಗಳನ್ನು ದಾಟಿ ತುಳಸಿ ಮಾಧವ್​ ಮಗ ಅಭಿಯ  ಮದುವೆ ಮಾಡಿಸಿದ್ದಾಳೆ. ಅಭಿಯ  ಮದುವೆ ಆಗಬಾರದು ಎಂದು ಚಿಕ್ಕಮ್ಮ ಶಾರ್ವರಿ ಮಾಡಿದ ಪ್ಲ್ಯಾನ್​ ಎಲ್ಲಾ ಠುಸ್​ ಆಗಿದೆ. ಅಭಿಯ  ಮಾವನ ಜೊತೆ ಸೇರಿ ತಂತ್ರ ಹೆಣೆದಿದ್ದಳು ಶಾರ್ವರಿ. ಆದರೆ ಅಭಿಯ  ಪ್ರೇಯಸಿ ಇದಕ್ಕೆ ಅವಕಾಶ ಕೊಡದೇ ಅಪ್ಪನ ವಿರುದ್ಧವೇ ತಿರುಗಿ ಬಿದ್ದಳು. ಇದರಿಂದ ಮದುವೆಯೇನೋ ಆಗಿಬಿಟ್ಟಿದೆ. ಆದರೆ ಮದುವೆ ಮನೆಯಲ್ಲಿ, ಅಭಿಯ  ಮಾವ ತುಳಸಿಗೆ ಕಂಡೀಷನ್​ ಹಾಕಿದ್ದಾನೆ. ಅದೇನೆಂದರೆ, ನನ್ನ ಮಗಳು ದೀಪಿಕಾ ಬರಬೇಕು ಎಂದರೆ ಮದುವೆ ಮನೆ ಹೊಸಲು ದಾಟಿ ಹೋಗಬೇಕು ಎಂದು. ಸದಾ ಎಲ್ಲರ ಹಿತವನ್ನೇ ಬಯಸುವ ತುಳಸಿ ತನ್ನಿಂದ ಮನೆಯವರಿಗೆ ಸಮಸ್ಯೆ ಆಗಬಾರದು ಎಂದುಕೊಂಡು ಇದಕ್ಕೆ ಒಪ್ಪಿದ್ದಾಳೆ. 

ಅತ್ತ ಮದುವೆಯಾಗುತ್ತಿದ್ದಂತೆಯೇ ಇತ್ತ ಮನೆ ಬಿಟ್ಟು ಹೋಗಿದ್ದಾಳೆ ತುಳಸಿ. ದೀಪಿಕಾಳ ಮನೆ  ತುಂಬಿಸಿಕೊಳ್ಳುವ ಹೊತ್ತಿನಲ್ಲಿ ಎಲ್ಲರೂ ತುಳಸಿಗಾಗಿ ಹುಡುಕಾಡಿದ್ದರು. ಆದ ದೀಪಿಕಾಳ ಅಪ್ಪ, ನನ್ನ ಮಗಳನ್ನು ಬೇಗನೇ ಮನೆ ತುಂಬಿಸಿಕೊಳ್ಳಿ, ಆಮೇಲೆ ತುಳಸಿಯನ್ನು ಹುಡುಕುವಿರಂತೆ ಎಂದಿದ್ದ. ಎಲ್ಲರೂ ದೀಪಿಕಾಳನ್ನು ಮನೆ ತುಂಬಿಸಿಕೊಳ್ಳಲು ಮುಂದಾದಾಗಿದ್ದರು. ಆದರೆ ದೀಪಿಕಾ, ಹೊಸಲು ದಾಟುವ ಮೊದಲೇ  ತುಳಸಿ ಅತ್ತೆ ಎಲ್ಲಿ ಎಂದು ಕೇಳಿದ್ದಳು. ನಂತರ ದೀಪಿಕಾಳ ಹಠಕ್ಕೆ ಬಿದ್ದು ಎಲ್ಲರೂ ತುಳಸಿಯನ್ನು ಹುಡುಕಿ ಕೊನೆಗೂ ಮನೆ ಸೇರಿಸಿದ್ದಾರೆ.

ಬಿಗ್​ಬಾಸ್​ನಲ್ಲಿ ವಿನಯ್​ ಸದಾ ಆಕ್ರಮಣಿಕಾರಿಯಾಗಿ ಇರ್ತಿದ್ದುದು ಯಾಕೆ? ಅವರ ಬಾಯಲ್ಲೇ ಕೇಳಿ...

ಈಗ ಎಲ್ಲರ ಕಣ್ಣಲ್ಲಿ ದೀಪಿಕಾ ಹೀರೋ ಆಗಿದ್ದಾಳೆ. ಆದರೆ ನಿಜಕ್ಕೂ ಆಕೆಯ ಬಣ್ಣವೇ ಬೇರೆ. ಇದಾಗಲೇ ಇರುವ ವಿಲನ್​ ಶಾರ್ವರಿಯನ್ನೂ ಮೀರಿಸಿ ಒಂದು ಹೆಜ್ಜೆ ಮುಂದೆ ಪ್ಲ್ಯಾನ್​ ಮಾಡಿದ್ದಾಳೆ ದೀಪಿಕಾ. ಅಪ್ಪ ಹೀಗೆಲ್ಲಾ ಯಾಕೆ ಮಾಡಿದ್ದಿ? ತಮ್ಮ ಉದ್ದೇಶವೇ ತುಳಸಿಯನ್ನು ಓಡಿಸುವುದು ಆಗಿತ್ತಲ್ಲವೆ ಎಂದಾಗ ದೀಪಿಕಾ ತನ್ನ ಅಸಲಿ ಬಣ್ಣ ತೋರಿಸಿದ್ದಾಳೆ. ನಾನು ಈ ಮನೆಗೆ ಬಂದಿರುವ ಉದ್ದೇಶವೇ ಮನೆಯವರ ನೆಮ್ಮದಿ ಹಾಳು ಮಾಡಲು. ತುಳಸಿಯನ್ನು ದಾಳವಾಗಿಸಿ ಮನೆ ನೆಮ್ಮದಿ ಹಾಳು ಮಾಡುತ್ತೇನೆ. ಆಕೆ ಮನೆ ಬಿಟ್ಟು ಎಲ್ಲೋ ಹೋಗಿ ನೆಮ್ಮದಿಯಿಂದ ಇದ್ದರೆ ಮನೆ ಹಾಳು ಮಾಡಲು ಆಗುವುದಿಲ್ಲ ಎಂದಿದ್ದಾರೆ.

ಇದರ ಪ್ರೊಮೋ ಬಿಡುಗಡೆಯಾಗಿದೆ. ಮಧ್ಯ ವಯಸ್ಕರ ಮದುವೆ ಕುರಿತ ಧಾರಾವಾಹಿ ಒಂದು ಕುತೂಹಲ ಹಂತಕ್ಕೆ ಬಂದಿತ್ತು ಎನ್ನುವಾಗಲೇ ಶಾರ್ವರಿಯೆಂದು ಓರ್ವ ವಿಲನ್​ನ ನಡುವೆಯೇ ಇನ್ನೋರ್ವ ವಿಲನ್​ ತಂದಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಒಬ್ಬಳು ಸಾಲುವುದಿಲ್ಲ ಎಂದು ಹಲವು ಮಹಿಳೆಯರನ್ನು ವಿಲನ್​ ಮಾಡುವ ಎಲ್ಲಾ ಸೀರಿಯಲ್​ಗಳಂತೆಯೇ ಇದು ಕೂಡ ದಾರಿ ತಪ್ಪುತ್ತಿದೆಯೇ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಮಹಿಳೆಯರು ತುಂಬಾ ಒಳ್ಳೆಯವರಾಗಿದ್ದರೆ ಕಷ್ಟ ಎನ್ನುವುದನ್ನೇ ಬಹುತೇಕ ಸೀರಿಯಲ್​ಗಳು ತೋರಿಸುವ ಹೊತ್ತಿನಲ್ಲಿ, ಈ ಸೀರಿಯಲ್​ ಕೂಡ ತುಳಸಿ ಎನ್ನುವ ಒಳ್ಳೆಯ ಹೆಣ್ಣನ್ನು ಟಾರ್ಗೆಟ್​ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ವರ್ಷಾನುಗಟ್ಟಲೆ ಸೀರಿಯಲ್​ ಅನ್ನು ಎಳೆದು ಕೊನೆಗೆ ಒಳ್ಳೆಯವರೇ ಒಳ್ಳೆಯದಾಗುತ್ತದೆ ಎನ್ನುವ ಸಿದ್ಧ ಮಂತ್ರ ಇಟ್ಟುಕೊಂಡರೂ ಅತಿ ಎನಿಸುವಷ್ಟು ವಿಲನ್​ಗಳನ್ನು ತುರುಕಿ ಸುಂದರ ಧಾರಾವಾಹಿಯನ್ನು ಹಾಳು ಮಾಡಬೇಡಿ ಎನ್ನುತ್ತಿದ್ದಾರೆ. 

ಆಗ ನನಗಿನ್ನೂ 19 ವರ್ಷ... ಸೌತ್​ ನಿರ್ಮಾಪಕ ಮಂಚಕ್ಕೆ ಕರೆದ್ರು... ಅನುಭವ ಹೇಳಿದ ಬಿಗ್​ಬಾಸ್​ ಅಂಕಿತಾ

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios