ಬಿಗ್ಬಾಸ್ನಲ್ಲಿ ವಿನಯ್ ಸದಾ ಆಕ್ರಮಣಿಕಾರಿಯಾಗಿ ಇರ್ತಿದ್ದುದು ಯಾಕೆ? ಅವರ ಬಾಯಲ್ಲೇ ಕೇಳಿ...
ವಿನಯ್ ಸದಾ ಸಿಟ್ಟಿನಲ್ಲೇ ಇರ್ತಿದ್ದುದು ಏಕೆ? ನಮ್ರತಾ-ವಿನಯ್ ಸಂಬಂಧ ಅಣ್ಣ-ತಂಗಿದ್ದು ಆಗಿದ್ಹೇಗೆ? ನಮ್ರತಾ ಪ್ಲಸ್-ಮೈನಸ್ ಗುಣ ಯಾವುದು? ಅವರ ಬಾಯಲ್ಲೇ ಕೇಳಿ...
ಬಿಗ್ಬಾಸ್ನಲ್ಲಿ ಜಗಳದ ಮೂಲಕ ಅತಿ ಹೆಚ್ಚು ಸದ್ದು ಮಾಡಿದವರಲ್ಲಿ ವಿನಯ್ ಗೌಡ ಒಬ್ಬರು. ವಿನಯ್ ಮತ್ತು ಡ್ರೋನ್ ಪ್ರತಾಪ್ ನಡುವಿನ ಕಾಳಗ, ಜಟಾಪಟಿ ಬಿಗ್ಬಾಸ್ ವೀಕ್ಷಕರಿಗೆ ತಿಳಿದದ್ದೇ. ಕೆಲವರು ವಿನಯ್ ಪರವಾಗಿ ನಿಂತಿದ್ದರೆ, ಇನ್ನು ಕೆಲವರು ಡ್ರೋನ್ ಪ್ರತಾಪ್ ಮಾಡುತ್ತಿರುವುದು ಸರಿಯೆನ್ನುತ್ತಿದ್ದರು. ವೀಕ್ಷಕರಲ್ಲಿ ಕೂಡ ಇವರಿಬ್ಬರ ಜಗಳದ ಕುರಿತು ಭಿನ್ನ ಅಭಿಪ್ರಾಯಗಳೇ ವ್ಯಕ್ತವಾಗುತ್ತಿದ್ದವು. ಕೆಲವರು ವಿನಯ್ ಸುಮ್ಮನೇ ಪ್ರವೋಕ್ ಮಾಡ್ತಿದ್ದಾರೆ ಎಂದರೆ ಇನ್ನು ಕೆಲವರು ಡ್ರೋನ್ ಪ್ರತಾಪ್ ಪ್ರವೋಕ್ ಮಾಡುವುದು ಎನ್ನುತ್ತಿದ್ದರು. ಒಟ್ಟಿನಲ್ಲಿ ಇವರಿಬ್ಬರ ಜಗಳ ಹಾಟ್ ಟಾಪಿಕ್ ಆಗಿತ್ತು. ಡ್ರೋನ್ ಪ್ರತಾಪ್ ಜೊತೆ ಮಾತ್ರವಲ್ಲದೇ ವಿನಯ್ ಎಂದರೆ ಹಲವರ ಕಣ್ಣಿನಲ್ಲಿ ಇವರೊಬ್ಬರು ಅಗ್ರೀಸಿವ್(agressive) ಅಂದರೆ ಆಕ್ರಮಣಕಾರಿ ಎನ್ನಿಸಿದ್ದು ಉಂಟು. ಸೋಷಿಯಲ್ ಮೀಡಿಯಾಗಳಲ್ಲಿಯೂ ಇವರು ಗೆಲ್ಲಬೇಕು ಎಂದು ಹಲವು ಅಭಿಮಾನಿಗಳು ಹೇಳುತ್ತಿದ್ದರೂ, ಇವರು ಸಿಟ್ಟಿನ ಮನುಷ್ಯ ಎಂದೇ ಹೇಳುತ್ತಿದ್ದವರು ಹಲವರು.
ಹಾಗಿದ್ದರೆ ಇವರು ಹೀಗೆ ಯಾಕೆ ಇದ್ದರು ಎನ್ನುವುದು ಹಲವರ ಪ್ರಶ್ನೆ. ಅದಕ್ಕೆ ಈಗ ಖುದ್ದು ವಿನಯ್ ಅವರೇ ಉತ್ತರ ಕೊಟ್ಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ವಿನಯ್ ಈ ಬಗ್ಗೆ ಮಾತನಾಡಿದ್ದಾರೆ. ವಿನಯ್ ಅಂದಾಕ್ಷಣ ತುಂಬಾ ಅಗ್ರಸಿವ್ ಅಂತಾನೇ ಫೇಮಸ್. ಯಾಕೆ ಹೀಗೆ ಎಂಬ ಪ್ರಶ್ನೆಗೆ ವಿನಯ್ ಉತ್ತರಿಸಿದ್ದಾರೆ. ಬಿಗ್ಬಾಸ್ ಎನ್ನುವುದು ಆಟ. ನಾನು ಅಲ್ಲಿ ಆರ್ಟಿಫಿಷಿಯಲ್ ಆಗಿ ಆಡಲು ಇಷ್ಟಪಡುವುದಿಲ್ಲ. ಆಟದ ವಿಷಯ ಬಂದಾಗ ಎಲ್ಲರೂ ಗೆಲ್ಲಲೇಬೇಕು ಎಂದೇ ಬಂದಿರುವವರು. ಆ ಸಮಯದಲ್ಲಿ ಆಟ ಎಂದು ಬಂದಾಗ ಈ ಸಿಟ್ಟು, ಕೋಪ ತಾಪ ಸಹಜ ಎಂದಿದ್ದಾರೆ. ಜೊತೆಗೆ ಇಲ್ಲಷ್ಟೇ ಅಲ್ಲ, ಮಗನ ಜೊತೆ ಆಟವಾಡುವಾಗಲೂ ಹೀಗೆಯೇ ಎಂದು ಉತ್ತರಿಸಿದ್ದಾರೆ.
ಪ್ರತಾಪ್ ಹೀರೋ ಆದ್ರೆ ಫ್ರೀಯಾಗಿ ವಿಲನ್ ಆಗುವೆ! ಡ್ರೋನ್ ಆ್ಯಕ್ಟಿಂಗ್ ಬಗ್ಗೆ ವಿನಯ್ ಗೌಡ ಹೇಳಿದ್ದೇನು?
ಇದೇ ವೇಳೆ ಬಿಗ್ಬಾಸ್ ಎಂದರೆ ಅಲ್ಲಿ ಪ್ರೇಮದ ವಿಷಯಗಳೇ ಹೆಚ್ಚು ಚರ್ಚೆಯಾಗುತ್ತದೆ. ಹೀಗಿರುವಾಗ ನಮ್ರತಾ ಮತ್ತು ವಿನಯ್ ಸಂಬಂಧ ಅಣ್ಣ-ತಂಗಿ ರೀತಿ ಇತ್ತು. ಅದ್ಹೇಕೆ ಬಾಂಡಿಂಗ್ ಆಯಿತು ಎಂಬ ಬಗ್ಗೆ ಮಾತನಾಡಿದ ವಿನಯ್. ನಮ್ಮಿಬ್ಬರ ವಿಚಾರಧಾರೆ, ಪ್ರಸೆಂಟೇಷನ್, ಓಪಿನಿಯ್ ಎಲ್ಲವೂ ಒಂದೇ ರೀತಿ ಇರುತ್ತಿದ್ದವು. ಅದು ನಾಮಿನೇಷನ್ ವಿಷಯ ಬರಲಿ, ಯಾವುದೇ ಇರಲಿ ಇಬ್ಬರೂ ಈ ಬಗ್ಗೆ ಮಾತನಾಡಿಕೊಳ್ತಿರಲಿಲ್ಲ, ಇದರ ಹೊರತಾಗಿಯೂ ಒಂದೇ ರೀತಿ ಒಪೀನಿಯನ್ ಇರುತ್ತಿದ್ದವು. ನನಗೆ ತಂಗಿ ಇದ್ದರೂ ಬಹುಶಃ ಹೀಗೆ ಇರುತ್ತಿದ್ದಳು ಎಂದಿದ್ದಾರೆ.
ಇದೇ ವೇಳೆ, ನಮ್ರತಾ ಬಗ್ಗೆ ಜನರು ಕಲಿಯಬೇಕಾದದ್ದು, ಕಲಿಯಬಾರದ್ದು ಏನು ಎಂಬ ಪ್ರಶ್ನೆಗೆ ಉತ್ತರಿಸಿದ ನಮ್ರತಾ, ನಾನು ತುಂಬಾ ಕೂಲ್ ಆಗಿ ಇರುವವಳು. ಎಲ್ಲರ ಮಾತನ್ನು ಕೂಲ್ ಆಗಿ ಕೇಳಿಸಿಕೊಂಡು ಪ್ರತಿಕ್ರಿಯೆ ಮಾಡುತ್ತೇನೆ. ನನ್ನಿಂದ ತಾಳ್ಮೆಯನ್ನು ಎಲ್ಲರೂ ಕಲಿಯಬಹುದು ಎನ್ನಿಸುತ್ತದೆ. ಅದೇ ರೀತಿ ಜೋರಾಗಿ ಕಿರುಚುವ ನನ್ನ ಗುಣ ಯಾರೂ ಕಲಿಯುವುದು ಬೇಡ ಎಂದಿದ್ದಾರೆ.