Asianet Suvarna News Asianet Suvarna News

ಆಗ ನನಗಿನ್ನೂ 19 ವರ್ಷ... ಸೌತ್​ ನಿರ್ಮಾಪಕ ಮಂಚಕ್ಕೆ ಕರೆದ್ರು... ಅನುಭವ ಹೇಳಿದ ಬಿಗ್​ಬಾಸ್​ ಅಂಕಿತಾ

19ನೇ ವಯಸ್ಸಿನಲ್ಲಿ ನಿರ್ಮಾಪಕನೊಬ್ಬ ಮಂಚಕ್ಕೆ ಕರೆದಿದ್ದ ಕರಾಳ ಅನುಭವ ಹಂಚಿಕೊಂಡಿದ್ದಾರೆ ಬಿಗ್​ಬಾಸ್​ ಖ್ಯಾತಿಯ ನಟಿ ಅಂಕಿತಾ ಲೋಖಂಡೆ.
 

Bigg Boss Ankita Lokhande made a big disclosure said Casting Couch at the age of 19 suc
Author
First Published Feb 8, 2024, 5:32 PM IST

ಆಗ ನನಗಿನ್ನೂ 19 ವರ್ಷವಾಗಿತ್ತಷ್ಟೇ. ಸಿನಿಮಾದಲ್ಲಿ ಗುರುತಿಸಿಕೊಳ್ಳಬೇಕು ಎಂದು ಸೌತ್​ಗೆ ಬಂದಿದ್ದೆ. ಒಂದು ಸೌತ್​ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅಂದರೆ ಆಡಿಷನ್​ಗೆ ಕರೆದದ್ದು.  ನಾನು ತುಂಬಾ ಬುದ್ಧಿವಂತಳಾಗಿದ್ದೆ, ನಾನು ಕೋಣೆಯಲ್ಲಿ ಒಂಟಿಯಾಗಿ ಇದ್ದೆ. ಆಗ ನಿರ್ಮಾಪಕನ ಸಹಾಯಕ ಬಂದು ನಮ್ಮ ಬಾಸ್​ ನಿಮ್ಮ ಜೊತೆ ರಾಜಿ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ ಎಂದ. ಆಗ ನಾನು  ಅವರೊಂದಿಗೆ ಪಾರ್ಟಿ ಅಥವಾ ಡಿನ್ನರ್‌ಗೆ ಹೋಗಬೇಕೇ ಎಂದು ಪ್ರಶ್ನಿಸಿದೆ.  ಅದಕ್ಕೆ ಆತ ಅಲ್ಲ.  ನೀವು ಅವರ ಜತೆಗೆ ಮಲಗಬೇಕು ಎಂದ. ನನಗೆ ತುಂಬಾ ಶಾಕ್​ ಆಗಿ ಬೆಚ್ಚಿ ಬಿದ್ದೆ...

 ಹೀಗೆಂದು ಹೇಳಿಕೊಂಡವರು ಹಿಂದಿ ಬಿಗ್​ಬಾಸ್​ ಖ್ಯಾತಿಯ ಅಂಕಿತಾ ಲೋಖಂಡೆ. ನಟ ಸುಶಾಂತ್​ ಸಿಂಗ್​ ಅವರ ಪ್ರೇಯಸಿಯಾಗಿದ್ದ ಅಂಕಿತಾ ಲೋಖಂಡೆ ಮೊದಲಿನಿಂದಲೂ ಸುದ್ದಿಯಲ್ಲಿ ಇರುವವರೇ. ಇದೀಗ ಬಿಗ್​ಬಾಸ್​ ಮನೆಗೆ ಹೋದ ಮೇಲಂತೂ ಅವರು ಮತ್ತು ಪತಿ ವಿಕ್ಕಿ ಜೈನ್​ ಡ್ರಾಮಾ ಅಷ್ಟಿಷ್ಟಲ್ಲ. ಅಷ್ಟಕ್ಕೂ ನಟಿ ಸುಶಾಂತ್ ಸಿಂಗ್​ಗೆ ಕೈಕೊಟ್ಟವರು ಎಂದೇ ಖ್ಯಾತಿ ಪಡೆದಿರುವ ಅಂಕಿತಾ ನಂತರ ವಿಕ್ಕಿ ಜೈನ್​ ಅವರನ್ನು ಮದುವೆಯಾಗಿದ್ದು, ಈ ಜೋಡಿ ಬಿಗ್​ಬಾಸ್​ 17ನ ಒಳಗೆ ಹೋಗಿ ಹಂಗಾಮಾ ಸೃಷ್ಟಿಸಿದ್ದು ಬಿಗ್​ಬಾಸ್​ ಪ್ರಿಯರಿಗಎ ಗೊತ್ತೇ ಇದೆ. ಪ್ರತಿದಿನವೂ ಹಲ್​ಚಲ್​ ಸೃಷ್ಟಿಸುವ ಮೂಲಕ ಅಸಭ್ಯ, ಅಶ್ಲೀಲ ವರ್ತನೆಗಳಿಂದ ಬಿಗ್​ಬಾಸ್​ನ ಟಿಆರ್​ಪಿ ಹೆಚ್ಚಿಸುವಲ್ಲಿ ಈ ದಂಪತಿ ಬಹುದೊಡ್ಡ ಕೊಡುಗೆ ನೀಡಿದ್ದರು.  ಒಂದು ಹಂತದಲ್ಲಿ ಅಂಕಿತಾ ಪತಿಯ ಮೇಲೆ ಚಪ್ಪಲಿ ಕೂಡ ಎಸೆದು ಅಸಭ್ಯವಾಗಿ ವರ್ತಿಸಿದ್ದರು. ತಾವು ಗರ್ಭಿಣಿ ಎಂದು ಹೇಳುವ ಮೂಲಕ ಪ್ರಚಾರ ಗಿಟ್ಟಿಸಿಕೊಂಡಿದ್ದರು.

ಮಗನ ಹೊಡೆದು, ಚಪ್ಪಲಿ ಎಸೆದ ಬಿಗ್​ಬಾಸ್​ ಡ್ರಾಮಾಕ್ವೀನ್ ​ಅಂಕಿತಾ ಲೋಖಂಡೆ ಅತ್ತೆಯಿಂದ ಶಾಕಿಂಗ್​ ಹೇಳಿಕೆ!

ವಿಕ್ಕಿ ಜೈನ್​ ಕೆಲ ವಾರಗಳಲ್ಲಿ ಬಿಗ್​ಬಾಸ್​ನಿಂದ ಹೊರಕ್ಕೆ ಬಂದಿದ್ದರೆ, ಅಂಕಿತಾ ನಾಲ್ಕನೇ ರನ್ನರ್​ ಅಪ್​ ಆದರು. ಈ ಬಗ್ಗೆ ಹೊರಕ್ಕೆ ಬಂದು ಬಹಳ ಬೇಸರ ಕೂಡ ವ್ಯಕ್ತಪಡಿಸಿದ್ದಿದೆ. ಬಿಗ್​ಬಾಸ್​ನಲ್ಲಿ ಗೆಲ್ಲಲಿ, ಬಿಡಲಿ ಅಲ್ಲಿ ಹೋಗಿ ಬಂದವರೆಲ್ಲರೂ ಸೆಲೆಬ್ರಿಟಿಗಳಾಗುವುದು ಮಾಮೂಲು. ಅಭಿಮಾನಿಗಳ ಸಂಖ್ಯೆಯೂ ಏರುತ್ತದೆ. ಅದೇ  ರೀತಿ ಇದೀಗ ಅಂಕಿತಾ ಪಬ್ಲಿಕ್​ ಫಿಗರ್​ ಆಗಿ ಹೊಮ್ಮಿದ್ದು, ತಾವು ಕಾಸ್ಟಿಂಗ್​ ಕೌಚ್​ ಅನುಭವಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಯಾರ ಹೆಸರನ್ನೂ ಉಲ್ಲೇಖಿಸದ ಅವರು, ಈ ಹಿಂದೆ ಕೆಲವು ನಟಿಯರು ಹೇಳಿದ ಡೈಲಾಗ್​ಗಳನ್ನು ಪುನಃ ಹೇಳಿದ್ದಾರೆ. 

ತಮ್ಮನ್ನು ತಾವು ಹೊಗಳಿಕೊಂಡಿರುವ ಅಂಕಿತಾ  19 ವರ್ಷ ವಯಸ್ಸಿಗೆಲ್ಲಾ ವಯಸ್ಸು ಮೀರಿದ  ಪ್ರಬುದ್ಧತೆ ನನಗೆ ಬಂದಿತ್ತು.  ನಟನೆ ಆಸಕ್ತಿ ಇದ್ದಿದ್ದರಿಂದ ಆಡಿಷನ್‌ ಕೊಡುತ್ತಿದ್ದೆ. ಹೀಗಿರುವಾಗಲೇ ಸೌತ್‌ ಸಿನಿಮಾವೊಂದರ ಆಡಿಷನ್‌ಗೆ ಹೋದಾಗ ನಿರ್ಮಾಪಕ ಮಂಚಕ್ಕೆ ಕರೆದ ಘಟನೆ ನಡೆಯಿತು.  ಇದರಿಂದ ತುಂಬಾ ಶಾಕ್​ ಆದೆ.  ಆದರೂ ಧೈರ್ಯ ಕಳೆದುಕೊಳ್ಳದೇ, ನಿಮ್ಮ ನಿರ್ಮಾಪಕರ ಜತೆ ಮಲಗಲು ಒಬ್ಬ ಹುಡುಗಿ ಬೇಕಾಗಿದ್ದಾಳೆಯೇ ಹೊರತು, ಸಿನಿಮಾದಲ್ಲಿ ನಟಿಸಲು ಪ್ರತಿಭಾವಂತ ಹುಡುಗಿ ಬೇಕಿಲ್ಲ ಎಂದು ತಿರುಗೇಟು ಕೊಟ್ಟು ಹೊರಟು ಬಂದೆ. ನಂತರ  ಅದೇ ನಿರ್ಮಾಪಕ ಕ್ಷಮೆ ಕೋರಿ,  ಅದೇ ಸಿನಿಮಾದಲ್ಲಿ ಚಾನ್ಸ್‌ ನೀಡುವುದಾಗಿಯೂ ಹೇಳಿದ. ಆದರೆ ನಾನು ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. 

2ನೇ ಮಗುವಾದ್ಮೇಲೆ ಇಶಾ ಡಿಯೋಲ್​ ಪತಿಗೆ ಬೆಂಗಳೂರು ಬೆಡಗಿ ನಂಟು? ಅಂದು ಅಮ್ಮ, ಇಂದು ಮಗಳು!

Follow Us:
Download App:
  • android
  • ios