ʼಅಣ್ಣಯ್ಯʼ ಧಾರಾವಾಹಿಯಲ್ಲಿ ಪಾರು ಮನಸ್ಸು ನುಚ್ಚು ನೂರಾಗಿದೆ. ಈ ಬಾರಿ ಶಿವು, ಪಾರು ಮನಸ್ಸನ್ನು ಹಾಳು ಮಾಡಿದ್ದಾನೆ.  

ʼಅಣ್ಣಯ್ಯʼ ಧಾರಾವಾಹಿಯಲ್ಲಿ ಮಾರಿಗುಡಿ ಶಿವು ಹಾಗೂ ಪಾರು ಜೋಡಿಯನ್ನು ದೂರ ಮಾಡಬೇಕು, ಅವರಿಬ್ಬರು ಡಿವೋರ್ಸ್‌ ತಗೊಳ್ಳಲು ಮುಂದಾಗಿರೋ ವಿಷಯವನ್ನು ಎಲ್ಲರೆದುರು ಬಯಲು ಮಾಡಬೇಕು ಅಂತ ವೀರಭದ್ರ ಪ್ಲ್ಯಾನ್‌ ಮಾಡಿದ್ದನು. ಆದರೆ ಸ್ವತಃ ಶಿವುನೇ ಮಾತಾಡಿ ಎಲ್ಲರ ಬಾಯಿ ಮುಚ್ಚಿಸಿದ್ದನು.

ಪಾರು ಬಗ್ಗೆ ಶಿವು ಹೀಗೆ ಹೇಳಿದ್ನಾ?
“ನನ್ನ ಪಾರು ನನ್ನ ತಾಯಿ ಥರ ಅಲ್ಲ. ಪಾರು ಅಂದ್ರೆ ನನ್‌ ಜೀವ. ನಾನು ಪಾರು ಹೇಳಿದ ಹಾಗೆ ಕೇಳೋದು, ನಮ್ಮ ಮನೆಯೂ ಕೂಡ ಪಾರು ಹೇಳಿದಂತೆ ನಡೆಯೋದು. ಪಾರು ನಮ್ಮನ್ನು ಬಿಟ್ಟು ಹೋಗೋದಿಲ್ಲ” ಎಂದು ಶಿವು ಎಲ್ಲರೆದುರು ಹೇಳಿದ್ದನು. ಶಿವು ನನ್ನ ಬಗ್ಗೆ ಹೀಗೆಲ್ಲ ಹೇಳಿದ್ನಾ? ನನಗೋಸ್ಕರ ಎಲ್ಲರ ಮುಂದೆ ದನಿ ಎತ್ತಿದ್ನಾ? ಶಿವು ಮಾವನ ಮನಸ್ಸಿನಲ್ಲಿ ಹೀಗೆಲ್ಲ ಇದ್ಯಾ ಅಂತ ಪಾರು ಸಖತ್‌ ಅಚ್ಚರಿ ಆಗಿದ್ದಳು.

ಅಣ್ಣಯ್ಯ ಧಾರಾವಾಹಿ: ಈ ಕಾರಣಕ್ಕೆ ಗುಂಡಮ್ಮಗೆ ಈ ವಾರದ ಕಿಚ್ಚನ ಚಪ್ಪಾಳೆ ಕೊಡ್ಲೇಬೇಕು ಎಂದ ವೀಕ್ಷಕರು!

ಪಾರು ಮನಸ್ಸು ಒಡೆದೋಯ್ತು! 
ಶಿವುಗೆ ತನ್ನ ಮನಸ್ಸಿನಲ್ಲಿರೋದು ಹೇಳಿಕೊಳ್ಳಬೇಕು ಅಂತ ಪಾರು ಅಂದುಕೊಂಡಿದ್ದಳು. ತುಂಬ ಸಲ ಪ್ರಯತ್ನಪಟ್ಟಿದ್ದರೂ ಕೂಡ ಅವಳಿಗೆ ಭಯ ಆಗ್ತಿತ್ತು. ಶಿವು ಮಾತಾಡಿದ್ದು ಕೇಳಿ ನಾನು ಈಗ ಪ್ರೇಮ ನಿವೇದನೆ ಮಾಡಬಹುದು ಅಂತ ಅವಳು ಅಂದುಕೊಂಡಿದ್ದಳು. ಆದರೆ ಈಗ ಪಾರು ಮನಸ್ಸು ಒಡೆದಿದೆ.

ಪಾರು ಏನ್‌ ಮಾಡ್ತಾಳೆ?
ಮನೆಗೆ ಬಂದ ಶಿವು, ಪಾರು ಬಳಿ “ನಾನು ಪಂಚಾಯಿತಿಯಲ್ಲಿ ಬಾಯಿಗೆ ಬಂದಿದ್ದು ಮಾತನಾಡಿದೆ. ದಯವಿಟ್ಟು ನನ್ನ ತಂಗಿಯಂದಿರ ಮದುವೆ ಆಗೋವರೆಗೂ ಈ ಮನೆ ಬಿಟ್ಟು ಹೋಗಬೇಡ, ಕಾಲು ಮುಗಿಯುವೆ” ಎಂದು ಹೇಳಿದ್ದಾನೆ. ಈ ಮಾತು ಪಾರುಗೆ ಬೇಸರ ತರಿಸಿದೆ. ಈಗ ಅವಳು ಏನ್‌ ಮಾಡ್ತಾಳೆ ಅಂತ ಕಾದು ನೋಡಬೇಕಿದೆ.

ʼರಿಯಲ್‌ ಆಗಿ ನಂಗೆ ಬ್ರೇಕಪ್‌ ಆಗಿದೆʼ-ಅಣ್ಣಯ್ಯ ಧಾರಾವಾಹಿ ವಿಕಾಶ್‌ ಉತ್ಯಯ್ಯ

ಸಾಕಷ್ಟು ಬಾರಿ ಶಿವು ಬಳಿ ಪಾರು ಪ್ರೇಮ ನಿವೇದನೆ ಮಾಡಿಕೊಂಡರೂ ಕೂಡ ಏನೂ ಪ್ರಯೋಜನ ಆಗಿಲ್ಲ. ಅವಳ ಮನಸ್ಸಿನ ಮಾತು ಅವನಿಗೆ ಅರ್ಥವೇ ಆಗಿಲ್ಲ. ಮುಂದೆ ಈ ಜೋಡಿ ಒಂದಾಗಲಿದೆಯೋ ಏನೋ! ನಾನು, ಮಾವ ಒಂದಾಗಬೇಕು ಅಂತ ಪಾರು ಬೇಡಿಕೊಂಡಿದ್ದಳು. ಆಗ ಮಂಕಾಳಮ್ಮ ಎಡಗಡೆ ಪ್ರಸಾದ ಕೊಟ್ಟಿದ್ದಳು. ಈಗ ದೇವಿ ಹೇಳಿದಂತೆ ಪಾರು-ಶಿವು ದೂರ ಆಗ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ.

ಪಾತ್ರಧಾರಿಗಳು
ಶಿವು-ವಿಕಾಶ್‌ ಉತ್ತಯ್ಯ
ಪಾರು-ನಿಶಾ ರವಿಕೃಷ್ಣನ್‌
ವೀರಭದ್ರ- ನಾಗೇಂದ್ರ ಶಾ