Annayya Kannada Serial: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಅಣ್ಣಯ್ಯʼ ಧಾರಾವಾಹಿಯಲ್ಲಿ ಪ್ರೀತಿಸಿದ ಹುಡುಗಿಗೆ ಜಿಮ್‌ ಸೀನ ಮದುವೆಯಾಗಿರೋದು ಗೊತ್ತಾಗಿದೆ. ಹೀಗಾಗಿ ಹುಡುಗಿ ತಂದೆ ಸೀನನಿಗೆ ನಿಂದಿಸಲು ಬಂದರೆ, ಗುಂಡಮ್ಮ ಮಾತ್ರ ಚಾಮುಂಡಿ ಅವತಾರ ತಾಳಿದ್ದಾಳೆ.  

‘ಅಣ್ಣಯ್ಯ’ ಧಾರಾವಾಹಿಯಲ್ಲಿ ಗುಂಡಮ್ಮ-ಜಿಮ್‌ ಸೀನ ಮದುವೆಯಾಗಿದೆ. ಇವರಿಬ್ಬರಿಗೂ ಪರಸ್ಪರ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗೋದಿಲ್ಲ. ಈ ಜೋಡಿ ಹೇಗೆ ಸಂಸಾರ ಮಾಡುತ್ತಿದೆ ಎಂದು ವೀಕ್ಷಕರು ಅಂದುಕೊಳ್ಳುತ್ತಿರುವಾಗಲೇ ಜಿಮ್‌ ಸೀನ ಪರ ಗುಂಡಮ್ಮ ಬ್ಯಾಟ್‌ ಬೀಸಿದ್ದಾಳೆ. 

ನಿಜಕ್ಕೂ ಏನಾಯ್ತು? 
ಜಿಮ್‌ ಸೀನ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದರೂ ಕೂಡ, ತಂದೆ ಒತ್ತಾಯಕ್ಕೆ ಗುಂಡಮ್ಮಳನ್ನು ಮದುವೆಯಾಗೋ ಪರಿಸ್ಥಿತಿ ಬಂತು. ಗುಂಡಮ್ಮಳ ಸೈಜ್‌ ಕಂಡರೆ ಸೀನಗೆ ಆಗೋದಿಲ್ಲ. ಗುಂಡಮ್ಮಗೆ ಬೇರೆ ಹುಡುಗನ ಜೊತೆ ಮದುವೆ ಫಿಕ್ಸ್‌ ಆಗಿತ್ತು. ಪೂರ್ತಿ ವರದಕ್ಷಿಣೆ ಹಣ ಕೊಟ್ಟರೆ ಮಾತ್ರ ತಾಳಿ ಕಟ್ಟೋದು ಅಂತ ಹುಡುಗನ ತಂದೆ ಹೇಳಿದರು. ಸೀನನ ಬಳಿ ಹತ್ತು ಲಕ್ಷ ರೂಪಾಯಿ ಹಣ ಇಟ್ಟುಕೋ ಅಂತ ಅವರ ತಂದೆ ನೀಡಿದ್ದರು. ಆದರೆ ಆ ಹಣವನ್ನು ಶಿವು ತಾಯಿ ಕದ್ದು ಇಟ್ಟುಕೊಂಡಿದ್ದರು. ಕೊಟ್ಟ ಹಣವನ್ನು ಕಳೆದುಹಾಕಿದ ಅಂತ ಸೀನನ ತಂದೆ ಕೂಗಾಡಿದರು.

ಬೆಲ್ದಚ್ಚಂಗೆ ಹಾಡಿಗೆ… ಪಾರು -ಶಿವು ಆಯ್ತು... ಈಗ ರೂಪಾ - ರಾಜು ರೋಮ್ಯಾನ್ಸ್... ಫ್ಯಾನ್ಸ್ ಫಿದಾ

ಜಗಳ ಮುಗಿಯುತ್ತಿರಲಿಲ್ಲ! 
ಮಗ ಮಾಡಿದ ತಪ್ಪಿಗೆ ಶಿಕ್ಷೆಯಾಗಿ ಅವರು ಸೀನ ಹಾಗೂ ಗುಂಡಮ್ಮಳ ಮದುವೆ ಮಾಡಿಸಿದರು. ಸೀನ ಎಷ್ಟೇ ಅಂಗಲಾಚಿದರೂ ಕೂಡ, ಎಷ್ಟೇ ಬೇಡಿಕೊಂಡರೂ ಕೂಡ ಮದುವೆ ನಿಲ್ಲಲೇ ಇಲ್ಲ. ಆದರೆ ಆ ಹುಡುಗ ಸರಿ ಇಲ್ಲ ಎನ್ನೋದು ಆಮೇಲೆ ಗೊತ್ತಾಯ್ತು. ಮದುವೆಗೋಸ್ಕರ ಗುಂಡಮ್ಮ ಸಣ್ಣ ಆಗಬೇಕು ಅಂತ ಜಿಮ್‌ಗೆ ಬರುತ್ತಿದ್ದಳು. ಆಗಲೂ ಇವರಿಬ್ಬರಿಗೂ ಜಗಳವೇ ಮುಗಿಯುತ್ತಿರಲಿಲ್ಲ.

ಸೀನ ಈಗಾಗಲೇ ಇನ್ನೊಂದು ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದರೂ ಕೂಡ ತಂದೆಯ ಮಾತಿಗೆ ಕಟ್ಟುಬಿದ್ದು ಬೇರೆ ಹುಡುಗಿಯನ್ನು ಮದುವೆಯಾದನು. ಈ ವಿಷಯ ಈಗ ಅವನ ಹುಡುಗಿ ಮುಂದೆ ಬಯಲಾಗಿದೆ. ಕಳಸೇಗೌಡ್ರಂತೂ ಈ ಸೀನ ಒಬ್ಬಳನ್ನು ಪ್ರೀತಿಸಿ, ಇನ್ನೊಬ್ಬಳನ್ನು ಮದುವೆಯಾದ ಅಂತ ಸಿಕ್ಕಾಪಟ್ಟೆ ಸಿಟ್ಟಿನಲ್ಲಿದ್ದಾರೆ. ಸೀನನ ಮನೆಗೆ ಬಂದ ಕಳಸೇಗೌಡ್ರು ಏಕಾಏಕಿ ಕೂಗಾಡಿದ್ದಾರೆ. ಸುಮ್ನೆ ಇರಿ, ಅರ್ಥ ಮಾಡಿಕೊಳ್ಳಿ ಅಂತ ಸೀನ ಹೇಳಿದರೂ ಕೂಡ ಅವರು ಕೇಳೋಕೆ ರೆಡಿ ಇಲ್ಲ. ಸೀನನಿಗೆ ಅವರು ಹೊಡೆಯೋದನ್ನು ನೋಡಿದ ಗುಂಡಮ್ಮ ಅಲಿಯಾಸ್‌ ರಶ್ಮಿ ಕಳಸೇಗೌಡ್ರಿಗೆ ಅವಾಜ್‌ ಹಾಕಿದ್ದಾಳೆ.

“ಏ ಕಳಸೇಗೌಡ, ಸೀನನಿಗೆ ಅವನು ಇವನು ಅಂತ ಹೇಳಬೇಡ. ಹೊಸಿಲು ಮೇಲೆ ಕೂರಿಸಿಕೊಂಡು ಎದೆ ಬಗೆದುಬಿಡ್ತೀನಿ. ಹುಷಾರ್” ಎಂದು ರಶ್ಮಿ ಅವಾಜ್‌ ಹಾಕಿದ್ದಾಳೆ. ಈ ಮಾತು ಕೇಳಿ ಸೀನ, ಸೀನನ ತಾಯಿ ಕೂಡ ನಡುಗಿಹೋಗಿದ್ದಾರೆ. 

'ಅಣ್ಣಯ್ಯʼ ಧಾರಾವಾಹಿ ಹೀರೋ-ಹೀರೋಯಿನ್‌ ರಿಯಲ್‌ ಆಗಿ ಲವ್‌ ಮಾಡ್ತಿದ್ದಾರಾ?

ಈ ಪ್ರೋಮೋಕ್ಕೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನೇಕರು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

  • ಹೆಣ್ಣು ಗಂಡನಿಗೆ ಅವಮಾನ ಆದ್ರೆ ಕಾಳಿ ರೂಪ ತಾಳಿ ಸಂಹಾರ ಮಾಡೋದು ಗ್ಯಾರಂಟಿ. ವೆರಿ ಗುಡ್ ಗುಂಡಮ್ಮ 
  • ಯಪ್ಪ…ನಾನು ಈ ಪ್ರೋಮೋವನ್ನು 10 ಸಲ ನೋಡಿದೆ. ಶಿವು ತಂಗಿರೆಲ್ಲ, ಪಾರು ದಾರಿಯನ್ನೇ ಹಿಡೀತಿದ್ದಾರೆ. ಶಭಾಷ್‌ ಗುಂಡಮ್ಮ
  • ಸೀನ, ಗುಂಡಮ್ಮನ ಮದುವೆ ಆಗಿದ್ದಕ್ಕೆ ಸಾರ್ಥಕ ಆಯ್ತು
  • ಇದಪ್ಪಾ ನಮ್ಮ ಗುಂಡು ವರ್ಸೆ ಅಂದ್. ನಿನ್ನತ್ತೆ ಥರ ಥರಾ ನಡುಗ್ಬೇಕು ನಿಂಗೆ ಕಿರಿಕ್ ಮಾಡೋಕೆ