Small Screen
ʼಅಣ್ಣಯ್ಯʼ ಧಾರಾವಾಹಿಯಲ್ಲಿ ಮಾರಿಗುಡಿ ಶಿವು ಪಾತ್ರದಲ್ಲಿ ವಿಕಾಶ್ ಉತ್ಯಯ್ಯ ಅವರು ನಟಿಸುತ್ತಿದ್ದಾರೆ.
ಮಡಿಕೇರಿ ಮೂಲದ ವಿಕಾಶ್ ಉತ್ತಯ್ಯ ಅವರು ʼಅಪಾಯವಿದೆ ಎಚ್ಚರಿಕೆʼ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಫೆಬ್ರವರಿ 28ರಂದು ಈ ಸಿನಿಮಾ ರಿಲೀಸ್ ಆಗಿದೆ.
ವಿಕಾಶ್ ಉತ್ಯಯ್ಯ ಅವರು ಸಿಂಗಲ್ ಆಗಿದ್ದಾರಂತೆ. ನಾನು ಬ್ಯಾಚುಲರ್ ಲೈಫ್ ಲೀಡ್ ಮಾಡ್ತಿದೀನಿ ಎಂದು ಅವರು ಹೇಳಿದ್ದಾರೆ.
ವಿಕಾಶ್ ಉತ್ತಯ್ಯ ಅವರು “ನನಗೆ ಲವ್ ಆಗಿತ್ತು” ಎಂದು Asianet Suvarna News ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ವಿಕಾಶ್ ಉತ್ತಯ್ಯ ಅವರು ʼಕಾಲೇಜಿನಲ್ಲಿದ್ದಾಗಲೇ ಲವ್ ಆಗಿತ್ತು, ಬ್ರೇಕಪ್ ಆಗಿದೆ, ತುಂಬ ಹಿಂದಿನ ಕಥೆ ಇದುʼ ಎಂದು ಹೇಳಿದ್ದರು.
ʼಅಣ್ಣಯ್ಯʼ ಧಾರಾವಾಹಿ ಹೀರೋ ಅಂತ ಹುಡುಗ, ಹುಡುಗಿಯರು ಎಲ್ಲರೂ ವಿಕಾಶ್ ಅವರನ್ನು ಅಣ್ಣಾ ಅಂತ ಕರೀತಾರಂತೆ. ಯಾರು ಅಣ್ಣಾ ಅಂತ ಕರೆದರೂ ವಿಕಾಶ್ ಈಗ ತಿರುಗಿ ನೋಡ್ತಿದ್ದಾರಂತೆ.