ಸೀರಿಯಲ್ ವಿಷ್ಯ ಅಲ್ಲ, ಸೀರಿಯಸ್ ವಿಷ್ಯ ಎನ್ನುತ್ತಾ ಪ್ರೀತಿಸುವ ಹುಡುಗಿಯ ಗುಟ್ಟು ಬಿಚ್ಚಿಟ್ಟ ಅಣ್ಣಯ್ಯ ನಟ ವಿಕಾಶ್
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಸೀರಿಯಲ್ ನಲ್ಲಿ ಅಣ್ಣಯ್ಯ ಶಿವು ಪಾತ್ರದಲ್ಲಿ ನಟಿಸುತ್ತಿರುವ ನಟ ವಿಕಾಶ್ ಉತ್ತಯ್ಯ ತಾವು ಪ್ರೀತಿಸುತ್ತಿರೋ ಹುಡುಗಿ ಬಗ್ಗೆ ಕ್ಲೂ ಕೊಟ್ಟಿದ್ದಾರೆ.
ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಅಣ್ಣಯ್ಯ ಸೀರಿಯಲ್ (Annaiah serial). ಈ ಧಾರಾವಾಹಿಯಲ್ಲಿ ಅಣ್ಣ ತಂಗಿಯರ ಭಾಂದವ್ಯ ನೋಡೊದಕ್ಕೆ ಚೆಂದ. ಅಣ್ಣ ಶಿವುನ ಪಾತ್ರವಂತೂ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಶಿವು ಮತ್ತು ಪಾರು ಜೋಡಿಯಂತೂ ವೀಕ್ಷಕರ ಮೋಸ್ಟ್ ಫೇವರಿಟ್. ಶಿವು ಅಭಿನಯ ನೋಡಿ, ನಮಗೂ ಇಂಥ ಅಣ್ಣ ಇದ್ರೆ ಚೆನ್ನಾಗಿರೋದು ಅಂತ ಹೇಳೋರೇ ಹೆಚ್ಚು.
ಇನ್ನು ಪಾರು ಮತ್ತು ಶಿವು ಜೋಡಿ ನೋಡಿ, ಇವರಿಬ್ಬರು ಜೋಡಿಯಾದ್ರೆ ಸೂಪರ್ ಅಂತಾನು ಹೇಳುತ್ತಾರೆ ವೀಕ್ಷಕರು. ಇತ್ತೀಚೆಗೆ ಝೀ ಎಂಟರ್ಟೇನ್ಮೆಂಟ್ (zee entertainment) ಕಾರ್ಯಕ್ರಮದಲ್ಲಿ ಟ್ರುಥ್ ಆರ್ ಡೇರ್ ಎನ್ನುವ ಗೇಮ್ ನಲ್ಲಿ ಪಾರು ಆಲಿಯಾಸ್ ನಿಶಾ ರವಿಕೃಷ್ಣನ್ ಭಾಗವಹಿಸಿದ್ದರು. ಇವರು ಆಡುತ್ತಾ, ಡೇರ್ ಆಯ್ಕೆ ಮಾಡಿದ್ದಾರೆ. ಅದಕ್ಕೆ ನಿರೂಪಕ ಅಕುಲ್ ಬಾಲಾಜಿ, ನಿಮ್ಮ ಫೋನ್ ತೆಗೆದುಕೊಂಡು, ಅಮ್ಮನಿಗೆ ಫೋನ್ ಮಾಡಿ, ಅಮ್ಮ ನಾನು ಒಬ್ಬ ಹುಡುಗನ್ನ ಇಷ್ಟಪಡ್ತಾನೆ ಅಂತ ಹೇಳು ಎಂದು ಡೇರಿಂಗ್ ಚಾಲೆಂಜ್ ಕೊಟ್ಟಿದ್ದಾರೆ. ನಿಶಾ ಫೋನ್ ಮಾಡಿ, ಅಮ್ಮ ನಾನೊಬ್ಬ ಹುಡುಗನ್ನ ಇಷ್ಟಪಡ್ತಿದ್ದೇನೆ ಎಂದಿದ್ದಾರೆ, ಅದಕ್ಕೆ ಅಮ್ಮ ಯಾರು ಅಂದಾಗ, ಅಕುಲ್ ವಿಕಾಶ್ ಉತ್ತಯ್ಯ (Vikash Uttaiah) ಹೆಸರು ಹೇಳುವಂತೆ ಹೇಳಿದ್ದಾರೆ. ನಿಶಾ ವಿಕಾಶ್ ಎಂದಾಗ, ಅಮ್ಮ ಅದು ಹೇಳಿದ್ಯಲ್ವಾ, ಗೊತ್ತಲ್ವಾ ಅಂತ ಹೇಳಿರುವ ವಿಡಿಯೋ ವೈರಲ್ ಆಗಿತ್ತು. ಆಮೇಲೆ ನಿಶಾ ಅಮ್ಮ ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಮತ್ತು ಪಾರು ಜೋಡಿ, ಇಷ್ಟಪಡುವ ಬಗ್ಗೆ ಮಾತಾನಾಡಿರೋದಾಗಿ ಹೇಳಿದ್ದರು. ಈ ವಿಡೀಯೋ ವೈರಲ್ ಆದ ಬಳಿಕ, ಇವರಿಬ್ಬರು ಲವ್ ಮಾಡ್ತಿದ್ದಾರೇನೋ ಎನ್ನುವ ಗುಸು ಗುಸು ಸಹ ಕೇಳಿ ಬಂದಿತ್ತು.
‘ಅಪಾಯವಿದೆ ಎಚ್ಚರಿಕೆ’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಅಣ್ಣಯ್ಯ ಶಿವು, ನಾಯಕಿ ಅಮೃತಧಾರೆಯ ಮಲ್ಲಿ
ಇದೀಗ ವಿಕಾಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು, ನಮಸ್ಕಾರ ಎಲ್ಲರಿಗೂ, ನಾನು ನಿಮ್ಮ ವಿಕಾಶ್ ಉತ್ತಯ್ಯ ಮಾತನಾಡ್ತಿದ್ದೀನಿ. ಸಾಧಾರಣವಾಗಿ ಯಾರೇ ಪ್ರೀತಿಸುತ್ತಿದ್ದರೂ, ಅವರ ಎಂಗೇಜ್ ಮೆಂಟ್ ಆಗುವವರೆಗೂ ಅಥವಾ ಮದುವೆ ಆಗುವವರೆಗೂ, ಅವರು ಪ್ರೀತಿಸುತ್ತಿರುವ ಹುಡುಗಿಯ ಬಗ್ಗೆ ಯಾವುದೇ ಕಾರಣಕ್ಕೂ ಎಲ್ಲೂ ಹೇಳಲ್ಲ. ಆದ್ರೆ ನಾನು ಈ ವರ್ಷದ ರಿಸಲ್ಯೂಶನ್ ಎನು ಇಟ್ಟುಕೊಂಡಿದ್ದೇನೆ ಅಂದ್ರೆ, ನಾನು ಪ್ರೀತಿಸುವ ಹುಡುಗಿಗೆ ಪ್ರಪೋಸ್ ಮಾಡುವ ಮೊದಲು, ಅವಳ ಬಗ್ಗೆ ನಿಮಗೆ ಹೇಳೋಣ ಅಂತ ಅಂದುಕೊಂಡಿದ್ದೇನೆ. ನಾನು ಪ್ರೀತಿಸುತ್ತಿರುವ ಹುಡುಗಿ ಯಾರು ಅನ್ನುವಂತದ್ದನ್ನು ನಾನು ನಿಮಗೆಲ್ಲರಿಗೂ ತಿಳಿಸುತ್ತೇನೆ. ಅವಳ ಹೆಸರು P, Q, R, ಈ ಮೂರು ಅಕ್ಷರಗಳಲ್ಲಿ ಒಂದರಲ್ಲಿ ಶುರುವಾಗುತ್ತೆ. ಇದು ಸೀರಿಯಲ್ ವಿಷಯ ಅಲ್ಲ, ಸೀರಿಯಸ್ ವಿಷ್ಯ. ಸದ್ಯದಲ್ಲೇ ತಿಳಿಸುತ್ತೇನೆ ಎಂದು ವೀಡಿಯೋ ಮುಗಿಸಿದ್ದಾರೆ.
ನಾಲ್ವರು ತಂಗಿಯರ ಮುದ್ದಿನ ‘ಅಣ್ಣಯ್ಯ’ನಾಗಿ ಮೋಡಿ ಮಾಡ್ತಿರೋ ಶಿವಣ್ಣನ ಕುರಿತು ಇಂಟ್ರೆಸ್ಟಿಂಗ್ ಕಹಾನಿ
ವಿಕಾಶ್ ಮಾತು ಕೇಳಿ ಅಭಿಮಾನಿಗಳಲ್ಲಿ ಸದ್ಯ ಕುತೂಹಲ ಹೆಚ್ಚಾಗಿದೆ. ಒಹೋ ಹೌದಾ. ಬೇಗ ಹೇಳಿ. ಕೇಳನ ಒಳ್ಳೆ ವಿಷಯ ಒಳ್ಳೆಯದಾಗಲಿ. ಹೊಸ ವರ್ಷ ಎಲ್ಲಾ ಗೆಲುವು ನಿಮ್ಮ ಪಾಲಾಗಲಿ. ಎಂದು ಹಾರೈಸಿದ್ದಾರೆ. ಇನ್ನೂ ಕೆಲವರು ನೀವು ಪಾರುನ ಅಲ್ವಾ ಪ್ರೀತಿ ಮಾಡ್ತಿರೋದು ಅಂತಾನೂ ಹೇಳಿದ್ದಾರೆ. ಮತ್ತೆ ಕೆಲವರು ಇದು P, Q, R, ಎನ್ನುವ ಸಿನಿಮಾ ಸಂಬಂಧಿಸಿರೋದು ಅಂದ್ರೆ, ಮತ್ತೊಬ್ಬರು ಇದು ಅಪಾಯವಿದೆ ಎಚ್ಚರಿಕೆ ಸಿನಿಮಾ ಬಗ್ಗೆ ಹೇಳುತ್ತಿರೋದು ಅಂತಾನು ಹೇಳಿದ್ದಾರೆ. ಯಾವುದಕ್ಕೂ ವಿಕಾಶ್ ಮತ್ತೆ ಲೈವ್ ಯಾವಾಗ ಬರ್ತಾರೆ? ಏನು ಹೇಳ್ತಾರೆ? ಅನ್ನೋದನ್ನು ಕೇಳಲು ಕಾಯಬೇಕು.