ಮದ್ವೆ ಬಗ್ಗೆ ಗುಡ್‌ನ್ಯೂಸ್ ಕೊಡ್ತೀನೆಂದ ರಚಿತಾ ರಾಮ್: ಫಸ್ಟ್ ನೈಟ್ ಹೇಳಿಕೆಯಿಂದ ಸುಮ್ಮನಾದ್ರಾ?
ರಿಯಾಲಿಟಿ ಶೋ ಒಂದರಲ್ಲಿ ಶೀಘ್ರ ಮದುವೆ ಬಗ್ಗೆ ಹೇಳ್ತೀನಿ ಅಂದ ರಚಿತಾ ಆಮೇಲೆ ಆ ಬಗ್ಗೆ ಸೈಲೆಂಟಾಗಿರೋದ್ಯಾಕೆ? ಅಷ್ಟಕ್ಕೂ ಈ ಡಿಂಪಲ್ ಕ್ವೀನ್ ಮದುವೆ ಆಗ್ತಿರೋ ಹುಡುಗ ಯಾರು?
ರಚಿತಾ ರಾಮ್ ಡಿಂಪಲ್ ಕ್ವೀನ್ ಅಂತಲೇ ಮನೆ ಮಾತಾದವರು. ಆರಂಭದಲ್ಲಿ ತನ್ನ ಟಾಮ್ ಬಾಯಿಶ್ ನೇಚರ್‌ನಿಂದ, ಲವಲವಿಕೆಯಿಂದ, ಖುಷಿಯಿಂದ ಕಾಣಿಸಿಕೊಳ್ಳುತ್ತಿದ್ದ ಈಕೆ ಕ್ರಮೇಣ ಯಾಕೋ ಹಿನ್ನೆಲೆಗೆ ಸರಿದು ಬಿಟ್ಟರು. ಈಕೆಯನ್ನು ಬಹಳ ಇಷ್ಟಪಡುತ್ತಿದ್ದ ಜನರಿಗೆ ಇದು ಕೊಂಚ ನಿರಾಸೆ ಆಯ್ತು. ಆದರೆ ರಚಿತಾ ರಾಮ್ ಪ್ರೆಸ್‌ಮೀಟ್‌ನಲ್ಲಿ ಆಡಿದ ಮಾತುಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಬಂದ ರೆಸ್ಪಾನ್ಸ್ ಈಕೆಯನ್ನು ಸುಮ್ಮನಿರಿಸಿದವು ಅಂತ ಆಕೆಯ ಕೆಲವು ಆಪ್ತರು ಹೇಳ್ತಾರೆ. ಅದು 'ಲವ್ ಯೂ ರಚ್ಚು' ಸಿನಿಮಾದ ಪ್ರೆಸ್ ಮೀಟ್. ಅದರಲ್ಲಿ ಮುದ್ದು ನೀನು ಅನ್ನುವ ಹಾಡಿಗೆ ಸಖತ್ ಹಾಟ್ ಮತ್ತು ರೊಮ್ಯಾಂಟಿಕ್ ಆಗಿ ರಚಿತಾ ಕಾಣಿಸಿಕೊಳ್ತಾರೆ. ಈ ಕುರಿತು ಕೇಳಿದ ಪ್ರಶ್ನೆಗೆ, 'ಫಸ್ಟ್ ನೈಟಲ್ಲಿ ಏನು ಮಾಡ್ತಾರೋ ನಾವೂ ಅದನ್ನೇ ಮಾಡಿದ್ದೀವಿ' ಅಂದು ಬಿಟ್ಟಿದ್ದರು. ಅದನ್ನು ಬಹಳ ಮಂದಿ ಟ್ರೋಲ್ ಮಾಡಿದರು.
ಕೆಟ್ಟ ಕೆಟ್ಟ ಟ್ರೋಲ್‌ಗಳಿಗೆ ಮನಸ್ಸಲ್ಲಿದ್ದದ್ದನ್ನು ನೇರವಾಗಿ ಹೇಳುವ ಸ್ವಭಾವದ ಈ ಡಿಂಪಲ್ ಕ್ವೀನ್ ಅಪ್‌ಸೆಟ್ ಆದರು. ಮುಂದೆ ಒಂದು ಸಿನಿಮಾದ ಸೆಟ್ ಬಾಯ್ ನಿಧನದ ವಿಚಾರದಲ್ಲೂ ರಚಿತಾ ಹೆಸರು ನೆಗೆಟಿವ್ ಆಗಿ ಬಹಳ ಟ್ರೋಲ್ ಆಯ್ತು. ಈ ಘಟನೆಯ ಬಳಿಕ ರಚಿತಾ ಕಂಪ್ಲೀಟ್ ಸೈಲೆಂಟ್ ಆಗಿ ಬಿಟ್ಟರು. ಆದರೆ ಇವರನ್ನು ನಿಜಕ್ಕೂ ಆರಾಧಿಸುತ್ತಿದ್ದ ಮಂದಿಗೆ ಈಕೆ ನಿರಾಸೆ ಮಾಡಲಿಲ್ಲ. ಕಿರುತೆರೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಲ್ಲಿ ತನ್ನ ಕೈಲಾದ ಮನರಂಜನೆ ನೀಡುವ ಪ್ರಯತ್ನ ಮಾಡಿದರು.
ಅಣ್ಣಯ್ಯದಲ್ಲಿ ಗುಂಡಮ್ಮಂಗೆ ಬಾಲ್ಯವಿವಾಹ ಮಾಡ್ತಿದ್ದಾರ? ಗುಂಡಮ್ಮಂಗೆ ಸೀನನೇ ಇರಲಿ ಅಂತಿರೋ ನೆಟ್ಟಿಗರು
ಹಾಗೆ ನೋಡಿದರೆ ರಚಿತಾ ರಾಮ್ ಸಿನಿಮಾ ಜರ್ನಿಯೇ ಬಹಳ ಇಂಟರೆಸ್ಟಿಂಗ್. 'ಬುಲ್ ಬುಲ್' ಸಿನಿಮಾ ಮೂಲಕ ಬೆಳ್ಳಿತೆರೆ ಪ್ರೇಕ್ಷಕರಿಗೆ ಪರಿಚಯವಾದರು. ಅಸಲಿಗೆ ನಟಿ ರಚಿತಾ ರಾಮ್ ಅವರ ಮೂಲ ಹೆಸರು ಬಿಂದ್ಯಾ ರಾಮ್. ಸಿನಿಮಾಗೋಸ್ಕರ ಇವರ ಹೆಸರು ಬದಲಾಯಿತು. ರಚಿತಾ ಆದರೆ ಡಿಂಪಲ್ ಕ್ವೀನ್ ಅನ್ನೋ ಬಿರುದು ಪಡೆದರು. ಈ ನಟಿ ಬುಲ್ ಬುಲ್ ಚಿತ್ರದ ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟಿದ್ದಷ್ಟೇ ಅಲ್ಲದೆ ಬೆಸ್ಟ್ ಆಕ್ಟರ್ಸ್ ಎಂಬ ಫಿಲಂ ಫಾರ್ ಅವಾರ್ಡ್ ಅನ್ನು ಕೂಡ ಪಡೆದರು.
'ಬುಲ್ ಬುಲ್' ಚಿತ್ರದ ನಂತರ 'ರನ್ನ', 'ಪುಷ್ಪಕ ವಿಮಾನ', 'ಭರ್ಜರಿ', 'ಅಯೋಗ್ಯ', 'ಸೀತಾರಾಮ ಕಲ್ಯಾಣ', 'ಲವ್ ಯು ರಚ್ಚು', 'ಏಕ್ ಲವ್ಯ', 'ರಥಾವರ', 'ವೀರ, ಅಂಬರೀಶ', 'ಲಿಲ್ಲಿ', 'ಜಾನಿ ಜಾನಿ ಎಸ್ ಪಪ್ಪಾ', 'ಅಮರ್', 'ಭರಾಟೆ', 'ನಟಸಾರ್ವಭೌಮ', 'ಆಯುಷ್ಮಾನ್ ಭವ', 'ಮಾನ್ಸೂನ್ ರಾಗ', 'ಕ್ರಾಂತಿ' ಹೀಗೆ ಹಲವು ಚಿತ್ರಗಳಲ್ಲಿ ರಚಿತಾ ರಾಮ್ ನಟಿಸಿದ್ದಾರೆ. ಈಗಲೂ ಒಂದಿಷ್ಟು ಸಿನಿಮಾ ಕೈಯಲ್ಲಿವೆ.
ಸುದೀಪ್ ಮ್ಯಾಕ್ಸ್ ಸಿನಿಮಾ ಹೊಗಳಿ 'ಜೈ ಕಿಚ್ಚ ಬಾಸ್' ಎಂದ ಯಶ್ ಫ್ಯಾನ್ಸ್!
ಸಿನಿರಂಗಕ್ಕೆ ಕಾಲಿಡುವ ಮೊದಲು ನಟಿ ರಚಿತಾ ರಾಮ್ ಅವರು 'ಬೆಂಕಿಯಲ್ಲಿ ಅರಳಿದ ಹೂವು', 'ಅರಸಿ' ಎಂಬ ಧಾರಾವಾಹಿಗಳ ಮೂಲಕ ಜನಮನ ಗೆದ್ದಿದ್ದರು. ಅರಸಿ ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರ ಮಾಡಿದ್ದರೂ ನಟನೆಯಿಂದ ಬಹಳಷ್ಟು ಅಭಿಮಾನಿಗಳನ್ನು ಪಡೆದಿದ್ದರು. ಸದ್ಯ ಕಿರುತೆರೆಯಲ್ಲಿಯೂ ಆಕ್ಟಿವ್ ಆಗಿರುವ ಈಕೆ, ಕಾಮಿಡಿ ಟಾಕೀಸ್, ಮಜಾ ಭಾರತ, ಡ್ರಾಮಾ ಜೂನಿಯರ್ಸ್ ಸೀಸನ್ 4, ಸೂಪರ್ ಕ್ವೀನ್ ಭರ್ಜರಿ ಬ್ಯಾಚುಲರ್ಸ್ ಮುಂತಾದ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈಕೆ ತನ್ನ ರಿಯಾಲಿಟಿ ಶೋದಲ್ಲೇ ಕೊಂಚ ಸಮಯದ ಹಿಂದೆ ಆದಷ್ಟು ಬೇಗ ಮದುವೆ ಸುದ್ದಿ ಹೇಳೋದಾಗಿ ತಿಳಿಸಿದ್ದರು. ಆದರೆ ಆಮೇಲೆ ಯಾಕೋ ಸೈಲೆಂಟಾಗಿ ಬಿಟ್ಟರು. ಬಹುಶಃ ಮುಂದೆ ಯಾರಾದರೂ ಮದುವೆ ಪ್ರಸ್ತಾಪ ಮಾಡಿದರೆ ರಚಿತಾ ಉತ್ತರಿಸುತ್ತಾರೋ ಏನೋ. ಕೆಲ ಸಮಯದ ಹಿಂದೆ ನಟ ಧನ್ವೀರ್, ನಿಖಿಲ್ ಸೇರಿದಂತೆ ಕೆಲವು ನಟರ ಜೊತೆಗೆ ರಚಿತಾ ಹೆಸರು ಕೇಳಿಬಂದಿತ್ತು. ಇದನ್ನೆಲ್ಲ ನಟಿ ಸಾರಾಸಗಟಾಗಿ ನಿರಾಕರಿಸಿದ್ದರು. ಸದ್ಯ 'ಕ್ವೀನ್ ಕೈ ಹಿಡಿಯೋ ಕಿಂಗ್ ಯಾರು?' ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಈಕೆಯೇ ಉತ್ತರ ಕೊಡಬೇಕಿದೆ.