ದುಬೈನಲ್ಲಿ ಒಂಟಿಯಾಗಿ ನಿಂತಾಗ ಅಪ್ಪು ಸರ್‌ ಊಟಕ್ಕೆ ಕರೆದುಕೊಂಡು ಹೋಗಿದ್ರು: ಅನುಶ್ರೀ ಭಾವುಕ

ಅಶ್ವಿನಿ ಪುನೀತ್ ರಾಜ್‌ಕುಮಾರ್‌ರಿಂದ ಬೆಸ್ಟ್‌ ನಿರೂಪಕಿ ಅವಾರ್ಡ್‌ ಪಡೆದ ಅನುಶ್ರೀ. ಜೀವನದಲ್ಲಿ ಮರೆಯಲಾಗದ ಕ್ಷಣ ಹಂಚಿಕೊಂಡರು....

Anchor Anushree dedicates best anchor award to Puneeth Rajkumar vcs

ಜೀ ಕನ್ನಡ ವಾಹಿನಿ ಅದ್ಧೂರಿಯಾಗಿ 2022ರ ಕುಟುಂಬ ಅವಾರ್ಡ್‌ ನಡೆಸಿತ್ತು. ಅನುಶ್ರೀ, ಮಾಸ್ಟರ್ ಆನಂದ್, ಶ್ವೇತಾ ಚಂಗಪ್ಪ, ಮಾಳವಿಕಾ ಅವಿನಾಶ್ ಮತ್ತು ನೆನಪಿರಲಿ ಪ್ರೇಮ್ ನಿರೂಪಣೆ ಮಾಡಿದ್ದರು. ಬೆಸ್ಟ್‌ ಕುಟುಂಬ, ಬೆಸ್ಟ್‌ ಧಾರಾವಾಹಿ, ನೆಚ್ಚಿನ ನಟ-ನಟಿ ಹೀಗೆ ಸಾಲು ಸಾಲು ಪ್ರಶಸ್ತಿಗಳನ್ನು ನೀಡಲು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದ್ದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಗಮಿಸಿದ ಕ್ಷಣ. 

ಜೀ ಕನ್ನಡ ವಾಹಿನಿ ಅಪ್ಪು ಅಜರಾಮರ ಪ್ರಶಸ್ತಿ ಗೌರವವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಅವರಿಗೆ ಕೊಟ್ಟಿದ್ದಾರೆ. ಧಾರಾವಾಹಿಗಳ ಲೀಡ್ ಆರ್ಟಿಸ್ಟ್‌ಗಳು ಸೇರಿ ನೀಡಿದ್ದಾರೆ. 'ಪ್ರತಿ ವರ್ಷವೂ ಅವಾರ್ಡ್ ಕೊಡ್ತೀವಿ ಆದರೆ ಈ ಅವಾರ್ಡ್‌ ಅವರಿಗೆಂದು exclusive ಆಗಿ ಮಾಡಿಸಿರುವುದು. ಪ್ರಶಸ್ತಿಯಲ್ಲಿ ಅಪ್ಪು ಸರ್ ಅವರ ಭಾವ ಚಿತ್ರದ ಜೊತೆ ಅಪ್ಪು ಅಜರಾಮ ಎಂದು ಬರೆಯಲಾಗಿದೆ. ಸಾಮಾನ್ಯವಾಗಿ ಕುಟುಂಬ ಅವಾರ್ಡ್ ಅಂತ ಹಾಕ್ತೀವಿ ಅಂದ್ರೆ ಅಪ್ಪು ಸರ್‌ನ ಸೆಲೆಬ್ರೇಟ್ ಮಾಡಬೇಕು ಎಂದು ಈ ರೀತಿ ಮಾಡಿಸಿರುವುದು' ಎಂದು ಅನುಶ್ರೀ ಹೇಳಿದ್ದಾರೆ.  'ಜೀ ಕುಟುಂಬ ಟೀಂಗೆ ನನ್ನ ಧನ್ಯವಾದಗಳು' ಎಂದು ಅಶ್ವಿನಿ ಪುನೀತ್ ಮಾತನಾಡಿದ್ದಾರೆ. 

Anchor Anushree dedicates best anchor award to Puneeth Rajkumar vcs

ಇದೇ ಸಮಯದಲ್ಲಿ ವಾಹಿನಿಯ ಬೆಸ್ಟ್ ನಿರೂಪಕಿ ಅವಾರ್ಡ್‌ ಅನೌನ್ಸ್‌ ಮಾಡಿದ್ದು, ಅನುಶ್ರೀ ಪಡೆದುಕೊಂಡಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಅವರಿಂದ ಅವಾರ್ಡ್ ಪಡೆದುಕೊಂಡು ಭಾವುಕರಾಗಿದ್ದಾರೆ. 'ಇದು ಫೇವರೆಟ್  ಆ್ಯಂಕರ ಅವಾರ್ಡ್‌ (Anchor Award) ಎಲ್ಲಾ ಅಭಿಮಾನಿಗಳು ವೋಟ್ ಮಾಡಿ ಗೆಲ್ಲಿಸಿರುವ ಅವಾರ್ಡ್. ಪ್ರತಿ ವರ್ಷ ಗೆಲ್ಲುವಂತ ಅವಾರ್ಡ್ ಒಂದು ಕಡೆ ಈ ವರ್ಷ ನಿಜಕ್ಕೂ ವಿಶೇಷ ...ಅಭಿಮಾನಿಗಳ ಅನುಮತಿ ಪಡೆದುಕೊಂಡು ಈ ಅವಾರ್ಡ್‌ನ ಎಲ್ಲರ ಪರವಾಗಿ ನನ್ನ ನೆಚ್ಚಿನ ಪರಮಾತ್ಮ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಅರ್ಪಣೆ ಮಾಡುತ್ತೀನಿ,' ಎಂದು ಅನುಶ್ರೀ ಹೇಳಿದ್ದಾರೆ.

ಕಾಫಿ ನಾಡು ಚಂದುಗೆ ದುಬಾರಿ ವಾಚ್‌ ಗಿಫ್ಟ್‌ ಕೊಟ್ಟ ಅನುಶ್ರೀ!

ಅಪ್ಪು ಜೊತೆ ಮರೆಯಲಾಗದ ಕ್ಷಣ:
ಸಿನಿಮಾ ಅವಾರ್ಡ್‌ ಫಂಕ್ಷನ್‌ ಒಂದನ್ನು ಅನುಶ್ರೀ ಹೋಸ್ಟ್‌ ಮಾಡಿದ್ದರು. ದುಬೈನಲ್ಲಿ ಕಾರ್ಯಕ್ರಮ ನಡೆದಿತ್ತು. ಹಲವಾರು ನಟ ನಟಿಯರು ಪ್ರಶಸ್ತಿ ಸ್ವೀಕರಿಸಿದ್ದರು. ಈ ಬಗ್ಗೆ ನೆನಪಿರಲಿ ಪ್ರೇಮ್‌ ನೆನಪಿಸಿಕೊಂಡರು. "ಎಲ್ಲರೂ ಅವರವರ ಅವಾರ್ಡ್‌ ಪಡೆದು ಊಟಕ್ಕೆ ಹೋಗುತ್ತಿದ್ದರು. ಆದರೆ ಅನುಶ್ರೀ ಕಾರ್ಯಕ್ರಮ ಮುಗಿದ ನಂತರವೂ ಊಟ ಮಾಡಿರಲಿಲ್ಲ. ಒಬ್ಬರೇ ಒಂದು ಜಾಗದಲ್ಲಿ ನಿಂತುಕೊಂಡಿದ್ದರು. ಈ ವೇಳೆ ಪುನೀತ್‌ ರಾಜ್‌ಕುಮಾರ್ ಅಲ್ಲಿ ಬಂದರು. ಬಂದು ಅನುಶ್ರೀ ಅವರನ್ನು ಮಾತನಾಡಿಸಿದ್ದರು. ಊಟ ಆಯ್ತಾ ಎಂದು ಕೇಳಿದಾಗ ಅನುಶ್ರೀ ಇನ್ನೂ ಇಲ್ಲ ಎಂದರು. ನಂತರ ಅನುಶ್ರೀಯನ್ನು ಕರೆದುಕೊಂಡು ಹೋಗಿ ಜೊತೆಯಲ್ಲೇ ಕುಳಿತು ಊಟ ಮಾಡಿದ್ದರು. ಇದು ಎಲ್ಲರಿಗೂ ಬರುವಂತದ್ದಲ್ಲ. ಅವರವರ ಪಾಡಿಗೆ ಊಟ ಮಾಡಿ ಹೋಗುತ್ತಾರೆ. ಆದರೆ ನಮ್ಮೂರಿನ ಹುಡುಗಿ ವಿದೇಶಿ ನೆಲದಲ್ಲಿ ಇದ್ದಾಳೆ. ಆಕೆ ಊಟ ಆಯಿತಾ ಇಲ್ಲವಾ ಎಂದು ಕೇಳುವ ಗುಣ ಕೇವಲ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮಾತ್ರ ಇರಲು ಸಾಧ್ಯ," ಎಂದು ಪ್ರೇಮ್‌ ಹೇಳಿದರು.

ಜಾಕೆಟ್‌ ಸೂಪರ್ ಅಂದಿದ್ದಕ್ಕೆ ಆಟೋಗ್ರಾಫ್‌ ಹಾಕಿ ಅನುಶ್ರೀಗೆ ಕೊಟ್ಟ ಶಿವಣ್ಣ; ವಿಡಿಯೋ ವೈರಲ್

'ಅಪ್ಪು ಸರ್ ಯಾವಾಗಲ್ಲೂ ನನ್ನ ಬಿಗ್ ಸಪೋರ್ಟ್‌ ಎಲ್ಲಾ ಸಮಯದಲ್ಲೂ ನನ್ನ ಬೆನ್ನಲ್ಲಿ ನಿಂತಿದ್ದ ನಿಮ್ಮ ಪವರ್‌ಗೆ ಧನ್ಯವಾದಗಳು. ಸಂಜೆ ಆಗ್ತಾ ಆಗ್ತಾ ಅಯ್ಯೋ ಇಷ್ಟೊಂದು ಜನ ಸೇರ್ತಾ ಇದ್ದಾರೆ. ಇಷ್ಟು ಜನದ ಜೊತೆನಾಡುತ್ತ ಇದ್ದೇವೆ. ಇಷ್ಟು ಜನರಲ್ಲಿ ನಾವು ಕೆಲಸ ಮಾಡ್ತಾ ಇದ್ದೇವೆ.ಯಾರಿಗೆ ಇಷ್ಟೆಲ್ಲಾ ಮಾಡ್ತಾ ಇದ್ದೀವಿ. ಅದನ್ನು ಅವರು ನೋಡ್ತಾರಾ ಅನ್ನೋ ಸಂಕಟ ತುಂಬಾ ಕಾಡ್ತಾ ಇರುತ್ತೆ. ಎಮೋಷನಲ್ ತುಂಬಾ ಸ್ಟ್ರೆಸ್ (Emotional Stress) ಆಗುತ್ತೆ. ಪ್ರತಿಯೊಂದು ಹೆಜ್ಜೆಯಲ್ಲೂ ಅಶ್ವಿನಿ ಮೇಡಂ ನಮಗೆ ತುಂಬಾ ಶಕ್ತಿ ನೀಡಿದ್ದಾರೆ. ಇವತ್ತುಈ ಕ್ಷಣ ನನ್ನ ಜೀವನದ ಬೆಸ್ಟ್‌ ಮೊಮೆಂಟ್ ಮಾಡಿದಕ್ಕೆ ಥ್ಯಾಂಕ್ಸ್‌' ಎಂದಿದ್ದಾರೆ ಅನುಶ್ರೀ. 

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios