ಅಮೃತಧಾರೆ: ಗೌತಮ್ ಅತ್ತ ಅನ್ನೋದು ತಿಳಿದು ಸಂತೋಷಪಟ್ಟ ಆನಂದ್; ಇವನೆಂಥಾ ಆಪ್ತಮಿತ್ರ?!
ಜೀ ಕನ್ನಡದಲ್ಲಿ ಬರುವ 'ಅಮೃತಧಾರೆ' ಧಾರಾವಾಹಿ ಜನಮನ ಗೆದ್ದು ಮುಂದುವರಿಯುತ್ತಿದೆ. ಗೌತಮ್ ತನ್ನೆದುರು ಅತ್ತ ಎಂದು ಭೂಮಿ ಹೇಳುತ್ತಿದ್ದಂತೆ ಗೌತಮ್ ಆಪ್ತಮಿತ್ರ ಆನಂದ್ ಸಂತೋಷ ಪಡುವ ಪ್ರೋಮೋವನ್ನು ಇನ್ಸ್ಟಾದಲ್ಲಿ ಹಂಚಿಕೊಳ್ಳಲಾಗಿದೆ. ಗೌತಮ್ ಅತ್ರೆ ಆನಂದ್‌ಗೆ ಸಂತೋಷನಾ?
ಅಮೃತಧಾರೆ ಸೀರಿಯಲ್ ನೋಡೋರಿಗೆ ಆನಂದ್ ಮತ್ತು ಗೌತಮ್ ಸ್ನೇಹ ಬಹಳ ಇಷ್ಟ. ಇಂಥ ಒಬ್ಬ ಸ್ನೇಹಿತ ಇದ್ರೆ ಎಷ್ಟೇ ಕಷ್ಟ ಬಂದ್ರೂ ಜಯಿಸ್ಬೋದು ಅಂತಾರೆ ಜನ. ಆದರೆ, ಚಾನೆಲ್ ಹಂಚಿಕೊಂಡ ಹೊಸ ಪ್ರೋಮೋದಲ್ಲಿ ಆನಂದ್‌ಗೆ ಗೆಳೆಯ ಗೌತಮ್ ಅತ್ತಿದ್ದು ಸಂತೋಷ ತರುತ್ತದೆ. ಅದು ಏಕೆ, ಹೇಗೆ? ಆನಂದ್ ನಿಜಕ್ಕೂ ವಿಲನ್ನಾ ಎಂದೆಲ್ಲಾ ಡೌಟ್ ಬರ್ತಿದ್ಯಾ?
ಪ್ರೋಮೋ ಹೀಗಿದೆ.
ಗೌತಮ್ ಪತ್ನಿ ಭೂಮಿ ಆನಂದ್ ಬಳಿ ಗೌತಮ್ ಅವರಲ್ಲಿ ಏನಾದ್ರೂ ಚೇಂಜಸ್ ಕಾಣ್ಸತ್ತಾ, ಮಹಿಮಾ ವಿಷಯಕ್ಕೆ ಇನ್ನೂ ಡಿಸ್ಟರ್ಬ್ ಆಗಿದಾರ ಕೇಳ್ತಾಳೆ.
ಇದಕ್ಕೆ ಆನಂದ್, 'ಅವ್ನ ಕ್ಯಾರೆಕ್ಟರೇ ವಿಚಿತ್ರ. ಸಂತೋಷನ್ನ ಊರಿಗೆಲ್ಲ ಹಂಚಿಕೊಳ್ತಾನೆ. ಆದ್ರೆ ನೋವನ್ನ ತನ್ನೊಳಗೇ ಇಟ್ಕೊಂಡು ಒದ್ದಾಡ್ತಾನೆ. ಅವ್ನು ಕಣ್ಣೀರು ಹಾಕಿದ್ನ ನನ್ನ ಬಿಟ್ಟು ಇನ್ಯಾರೂ ನೋಡಿಲ್ಲ ಅನ್ಸತ್ತೆ ಅತ್ಗೆ' ಅಂತಾನೆ.
ಅದ್ಕೆ ಭೂಮಿ 'ನಾನ್ ನೋಡಿದೀನಿ' ಅಂತಾಳೆ.
ಭೂಮಿಯ ಈ ಮಾತು ಕೇಳಿ ಆನಂದ್ ಆಶ್ಚರ್ಯ ಪಡ್ತಾನೆ.
'ನನ್ ಗೆಳೆಯ ಅತ್ತ ಅನ್ನೋ ಬೇಜಾರಿಗಿಂತ ನಿಮ್ ಮುಂದೆ ಅತ್ತ ಅನ್ನೋದು ಸಂತೋಷ ತರ್ತಿದೆ ಅತ್ಗೆ' ಅಂತಾನೆ.
ಕೆಲ್ಸನೇ ಇಲ್ಲದವ್ನಿಗೆ ಲವ್ ಯಾಕೆ ಅಂತ ಇವ್ರು... ಮಿಲೇನಿಯರ್ ಮಕ್ಳಿಗೆ ಕೆಲ್ಸ ಯಾಕೆ ಅಂತ ಅವ್ರು... ಯಾರು ಸರಿ?
ಅರೆ ಇದೇನಪ್ಪಾ ಅಂಥ ಭೂಮಿ ಗಲಿಬಿಲಿಯಲ್ಲಿದ್ದಾಗ ಇದಕ್ಕೆ ಕಾರಣನೂ ಬಿಡಿಸಿ ಹೇಳ್ತಾನೆ ಆನಂದ್- 'ಅವ್ನು ಯಾರ ಮುಂದೆನೂ ತನ್ನ ವೀಕ್ನೆಸ್ ತೋರಿಸಿಕೊಂಡವ್ನಲ್ಲ. ಅಂತವ್ನು ನಿಮ್ಮ ಮುಂದೆ ಕಣ್ಣೀರು ಹಾಕಿದಾನೆ ಅಂದ್ರೆ ನೀವು ಅವ್ನಿಗೆ ಅಷ್ಟು ಹತ್ರ ಆಗಿದೀರಿ ಅಂತ ಅರ್ಥ.'
'ಅತ್ಗೆ ಇದು ಸಣ್ಣ ವಿಷ್ಯ ಅಲ್ಲ. ತುಂಬಾ ದೊಡ್ ವಿಷ್ಯ' ಅಂತ ಆನಂದ್ ಹೇಳ್ತಿದ್ರೆ ಭೂಮಿಗೆ ಗೊಂದಲದ ಜೊತೆಗೆ ಸಂತೋಷ ಕೂಡಾ ಆಗುತ್ತೆ.
'ನೋಡಿ ಅತ್ಗೆ, ನಾವು ಯಾರ ಮುಂದೆ ಬೇಕಾದ್ರೂ ನಗಬಹುದು. ಆದ್ರೆ ನಮ್ಮ ನೋವನ್ನು, ಅಳುವನ್ನು ಹಂಚಿಕೊಳ್ಳೋದು ಆತ್ಮೀಯರ ಮುಂದೆ ಮಾತ್ರ. ಅವ್ನು ನಿಮ್ ಮುಂದೆ ದುಃಖ ತೋಡಿಕೊಂಡಿದ್ದಾನೆ ಅಂದ್ರೆ ನೀವು ಅವ್ನ ಮನ್ಸಲ್ಲಿ ಆಳವಾಗಿ ಬೇರೂರಿದೀರಿ ಅಂತಾನೇ ಅರ್ಥ' ಎನ್ನುತ್ತಾನೆ. ಇದು ಭೂಮಿಯ ಮುಖದಲ್ಲಿ ಸಂತೋಷ ತರುತ್ತದೆ.
ಮೊಟ್ಟೆ ಕರಿಯಿಂದಾದ್ರೂ ಹುಟ್ಟುತ್ತಾ ಪ್ರೀತಿ? ವೆಜ್-ನಾನ್ವೆಜ್ ಮದ್ವೆಯಾದ್ರೆ ಹೀಗೇ ಆಗೋದು ಎಂದ ಫ್ಯಾನ್ಸ್!
ಅಂದ್ರೆ ಭೂಮಿಯನ್ನು ಗೌತಮ್ ತುಂಬಾ ಪ್ರೀತಿಸ್ತಿದಾನಾ? ಇದನ್ನು ಹೇಳ್ಕೊಳ್ಳೋ ಟೈಂ ಹತ್ರಾ ಬಂತಾ ಅಂತಾ ಜನ ಕಾತರದಿಂದ ಕಾಯ್ತಿದಾರೆ.
ಅಂದ ಹಾಗೆ, ಎಲ್ಲ ಸಂಬಂಧಗಳೂ ಹೀಗೆಯೇ. ನಾವು ತುಂಬಾ ಪ್ರೀತ್ಸೋರ ಎದುರು ಮಾತ್ರ ತೀರಾ ದುಃಖವನ್ನು, ನಮ್ಮ ಒಳ ಬೇಗುದಿಗಳನ್ನು ಹಂಚಿಕೊಳ್ಳಬಹುದು. ಉಳಿದೆಲ್ಲರಿಗೂ ನಗುಮುಖ ಮಾತ್ರ ಕಾಣಿಸುತ್ತದೆ. ಈ ಪ್ರೋಮೋ ನೋಡಿದಾಗ ನೀವು ಯಾರೆದುರಾದರೂ ಅಳಬಹುದೆಂದಿದ್ದರೆ ಆ ವಿಶೇಷ ವ್ಯಕ್ತಿ ಯಾರು ಎಂಬುದನ್ನು ನೆನಪು ಮಾಡಿಕೊಳ್ಳಿ.