Amruthadhaare Serial Episode: ರಾಜೇಶ್‌ ನಟರಂಗ, ಛಾಯಾ ಸಿಂಗ್‌ ನಟನೆಯ ʼಅಮೃತಧಾರೆʼ ಧಾರಾವಾಹಿಯಲ್ಲಿ ಭೂಮಿಕಾ ಪ್ರಗ್ನೆಂಟ್‌ ಎನ್ನುವ ಪ್ರಶ್ನೆ ಎದ್ದಿದೆ.  

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಅಮೃತಧಾರೆʼ ಧಾರಾವಾಹಿಯಲ್ಲಿ ಗೌತಮ್‌ ಕುಟುಂಬದ ಖುಷಿಯನ್ನು ಹಾಳುಮಾಡಲು ಶಾಕುಂತಲಾ ನಿತ್ಯ ಒಂದಲ್ಲ ಒಂದು ಪ್ಲ್ಯಾನ್‌ ಮಾಡುತ್ತಿದ್ದಾಳೆ. ಇನ್ನೊಂದು ಕಡೆ ಅವಳ ಮಗ ಜಯದೇವ್‌ ಕೂಡ ತನ್ನ ಅಣ್ಣನಿಗೆ ಖೆಡ್ಡಾ ತೋಡುತ್ತಲೇ ಇದ್ದಾನೆ. ಈಗ ಭೂಮಿ ಗುಡ್‌ನ್ಯೂಸ್‌ ನೀಡುವ ಹಾಗೆ ಕಾಣ್ತಿದೆ.

ಭೂಮಿಕಾ ಪ್ರಗ್ನೆಂಟ್‌ ಆಗಿರೋದು ನಿಜಾನಾ? 
ಈಗ ರಿಲೀಸ್‌ ಆಗಿರೋ ಪ್ರೋಮೋ ನೋಡಿದರೆ ಭೂಮಿಕಾ ಪ್ರಗ್ನೆಂಟ್‌ ಆಗಿದ್ದಾಳೆ. ಪದೇ ಪದೇ ಅವಳು ವಾಂತಿ ಮಾಡುತ್ತಿದ್ದಾಳೆ. ಇದನ್ನು ನೋಡಿ ಅಜ್ಜಿ ತನ್ನ ಮೊಮ್ಮಗಳು ಪ್ರಗ್ನೆಂಟ್‌ ಆಗಿರಬಹುದು ಎಂದು ಊಹಿಸಿದ್ದಾಳೆ. ಇನ್ನೊಂದು ಕಡೆ ಭೂಮಿಕ ಕೂಡ ನಾಚಿಕೊಂಡಿದ್ದಾಳೆ.

ಗೌತಮ್ ಮಲತಾಯಿ ಅಲ್ಲವಾ ಶಕುಂತಲಾ? ಜೈದೇವ್ ಮಾತು ಕೇಳಿ ಬೆಕ್ಕಸ ಬೆರಗಾಗಿ ನ್ಯಾಯ ಬೇಕೆಂದ ವೀಕ್ಷಕರು!

ಶಾಕುಂತಲಾ ಪ್ಲ್ಯಾನ್‌ ಹಾಳಾಯ್ತು! 
ಗೌತಮ್‌ಗೆ ಮದುವೆಯಾದರೆ ಅವನ ಹೆಂಡ್ತಿಗೆ ಎಲ್ಲ ಆಸ್ತಿ ಸೇರುತ್ತದೆ ಅಂತ ಶಾಕುಂತಲಾ ಅಂದುಕೊಂಡಿದ್ದಳು. ಹೀಗಾಗಿಯೇ ಅವಳು ಗೌತಮ್‌ ಮದುವೆ ಮಾಡಿರಲಿಲ್ಲ. ಕೊನೆಗೂ ವಿಧಿಯ ಪ್ರಕಾರ ಗೌತಮ್-ಭೂಮಿಕಾ ಮದುವೆ ಆಯ್ತು. ಈಗ ಗೌತಮ್-ಭೂಮಿಕಾ ಹೊಸ ಜೀವನ ಶುರು ಮಾಡಬಾರದು, ಮಗು ಮಾಡಿಕೊಳ್ಳಲೂಬಾರದು ಎಂದು ಶಾಕುಂತಲಾ ಪ್ಲ್ಯಾನ್‌ ಮಾಡಿದ್ದಳು. ಈಗ ಎಲ್ಲ ಯೋಜನೆ ಹಳ್ಳ ಹಿಡಿದಿದೆ. ಈ ಜೋಡಿ ಮಧ್ಯೆ ಪ್ರೀತಿ ಹುಟ್ಟಿ ಇವರಿಬ್ಬರು ಒಂದಾಗಿದ್ದಾರೆ. 

ಸೈಲೆಂಟ್‌ ಆಗಿರುತ್ತಿದ್ದ ಭೂಮಿಕಾ! 
ಸ್ವಲ್ಪ ವಯಸ್ಸಾದಮೇಲೆ ಗೌತಮ್-ಭೂಮಿಕಾ ಮದುವೆ ಆಯ್ತು. ಹೀಗಾಗಿ ಭೂಮಿಕಾ ತಾಯಿಯಾಗೋದು ಸ್ವಲ್ಪ ಕಷ್ಟ ಇದೆ ಎಂದು ವೈದ್ಯರು ಹೇಳಿದ್ದರು. ಮಗುವಿಗೋಸ್ಕರ ಭೂಮಿ ಹಂಬಲಿಸಿದ್ದಳು. ಆದರೆ ವಿಧಿ ಅವಕಾಶ ಕೊಡಲಿಲ್ಲ. ಗೌತಮ್‌ ಕೂಡ ಮಗುವಿನ ಆಸೆ ಕೈಬಿಟ್ಟಿದ್ದನು. ಇನ್ನೊಂದು ಕಡೆ ಪದೇ ಪದೇ ಮಗು ಯಾವಾಗ ಅಂತ ಮನೆಯವರು ಕೇಳಿದಾಗ, ಭೂಮಿಕಾ ಮಾತ್ರ ಸೈಲೆಂಟ್‌ ಆಗಿರುತ್ತಿದ್ದಳು. ಈಗ ಅವಳಿಗೆ ಗುಡ್‌ನ್ಯೂಸ್‌ ಸಿಕ್ಕಿದೆ.

ʼಅಮೃತಧಾರೆʼ ಧಾರಾವಾಹಿಯಿಂದ ಹೊರ ಬಂದಿದ್ದೇಕೆ ಶಶಿ ಹೆಗಡೆ, ಸಾರಾ ಅಣ್ಣಯ್ಯ? ಇದೇ ಅಸಲಿ ಕಾರಣಾನಾ?

99% ಭೂಮಿಕಾ ತಾಯಿಯಾಗಿದ್ದಾಳೆ. ಇದನ್ನು ಕೂಡ ಕನಸಿನ ಥರ ತೋರಿಸೋದಿಲ್ಲ ಎಂದು ಕಾಣುತ್ತದೆ. ಭೂಮಿಕಾ ತಾಯಿಯಾದರೆ ಆ ಮಗುವಿಗೆ ಎಲ್ಲ ಆಸ್ತಿ ಸೇರುತ್ತದೆ ಎನ್ನೋದು ಶಾಕುಂತಲಾ ಪ್ಲ್ಯಾನ್.‌ ಗೌತಮ್‌ಗೆ ತಾನು ತಂದೆ ಆಗ್ತಿದೀನಿ ಎನ್ನುವ ವಿಷಯ ಗೊತ್ತಾದರೆ ಅವನು ಕುಣಿದು ಕುಪ್ಪಳಿಸುತ್ತಾನೆ. ಈ ವಿಷಯ ಎಲ್ಲರಿಗೂ ಗೊತ್ತಾದರೆ ಭೂಮಿ ಮಗುಗೆ ಅಪಾಯ ಕಟ್ಟಿಟ್ಟಬುತ್ತಿ. ಈಗ ಜಯದೇವ್‌ ಮಾವನಿಗೆ ಭೂಮಿಕಾ ಪ್ರಗ್ನೆಂಟ್‌ ಅನ್ನೋದು ಗೊತ್ತಾಗಿದೆ. ಈ ವಿಷಯ ಶಾಕುಂತಲಾ ಕಿವಿ ತಲುಪಿದೆ. ಈಗ ಶಾಕುಂತಲಾ ಆ ಮಗುಗೆ ಅಪಾಯ ತರಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕವಾಗಿವೆ.

ಧಾರಾವಾಹಿ ಕತೆ ಏನು?
ಗೌತಮ್‌ಗೆ ಶಾಕುಂತಲಾ ಎನ್ನುವ ಮಲತಾಯಿ ಇದ್ದಾಳೆ. ಶಾಕುಂತಲಾಗೆ ನಾಲ್ವರು ಮಕ್ಕಳಿದ್ದಾರೆ. ಗೌತಮ್‌ ಆಸ್ತಿಯನ್ನು ಹೊಡೆಯೋದು ಶಾಕುಂತಲಾ ಹಾಗೂ ಅವರ ಮಕ್ಕಳ ಕನಸು. ಈ ಕನಸಿಗೆ ಗೌತಮ್‌ ಪತ್ನಿ ಭೂಮಿ ಕೊಳ್ಳು ಇಡುತ್ತಿದ್ದಾಳೆ. ಗೌತಮ್‌ ರಿಯಲ್‌ ತಾಯಿ ಭಾಗ್ಯಳನ್ನು ಮಾನಸಿಕ ಅಸ್ವಸ್ಥೆಯನ್ನಾಗಿ ಶಾಕುಂತಲಾ ಮಾಡಿದ್ದಳು. ಒಟ್ಟಿನಲ್ಲಿ ಗೌತಮ್‌ ತಂದೆ-ತಾಯಿಗೆ ಶಾಕುಂತಲಾ ಏನು ಮಾಡಿದಳು ಎನ್ನುವ ವಿಷಯ ರಿವೀಲ್‌ ಆಗಬೇಕಿದೆ. ಈ ಧಾರಾವಾಹಿಯಲ್ಲಿ ಸಾಕಷ್ಟು ರಹಸ್ಯಗಳಿವೆ.

ಕುಡಿದ ಮತ್ತಿನಲ್ಲಿ ಪೊಲೀಸ್ ಕೆನ್ನೆಗೆ ಬಾರಿಸಿ ಜೈಲು ಸೇರಿದ ಅಪೇಕ್ಷಾಗೆ ಭೂಮಿಯೇ ಕಾವಲು

ಪಾತ್ರಧಾರಿಗಳು
ಗೌತಮ್-ರಾಜೇಶ್‌ ನಟರಂಗ
ಭೂಮಿಕಾ-ಛಾಯಾ ಸಿಂಗ್‌
ಭಾಗ್ಯ-ಚಿತ್ಕಳಾ ಬಿರಾದಾರ್‌
ಶಾಕುಂತಲಾ-ವನಿತಾ ವಾಸು
ಜಯದೇವ್-ರಾಣವ್‌
ಜಯದೇವ್‌ ಮಾನ-ಕೃಷ್ಣಮೂರ್ತಿ ಕವತ್ತಾರ್‌ 

View post on Instagram