Gautham Divan and Shakuntala: ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ದೇವಿ ಖಳನಾಯಕಿ ಎಂದು ಬಿಂಬಿಸಲಾಗಿದ್ದು, ಗೌತಮ್ ದಿವಾನ್ ಮಲತಾಯಿ ಎಂದು ಪರಿಚಯಿಸಲಾಗಿದೆ. ಆದರೆ ಇದೀಗ ಬಿಡುಗಡೆಯಾದ ಪ್ರೋಮೋದಲ್ಲಿ ಶಕುಂತಲಾ ಗೌತಮ್‌ಗೆ ಮಲತಾಯಿ ಅಲ್ಲ ಎಂಬ ಸುಳಿವು ಸಿಕ್ಕಿದ್ದು, ವೀಕ್ಷಕರಲ್ಲಿ ಕುತೂಹಲ ಮೂಡಿದೆ.

Kannada Serial Amruthadhaare: ಒಂದು ಧಾರಾವಾಹಿ ಯಶಸ್ಸು ಆಗಬೇಕಾದ್ರೆ ಅಲ್ಲಿ ಟ್ವಿಸ್ಟ್‌ಗಳು ಇರಲೇಬೇಕು. ಇಲ್ಲಾಂದ್ರೆ ಜನರು ಧಾರಾವಾಹಿ ವೀಕ್ಷಣೆ ಮಾಡೋದನ್ನೇ ನಿಲ್ಲಿಸುತ್ತಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಸೀರಿಯಲ್ ಆರಂಭದಿಂದಲೂ ಗಟ್ಟಿ ಕಥೆ, ಅರ್ಥಗರ್ಭಿತ ಸಂಭಾಷಣೆ ಮತ್ತು ಕಲಾವಿದರ ಸಹಜ ನಟನೆಯಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದೆ. ಆರಂಭದಿಂದ ಇಂದಿನವರೆಗೂ ಶಕುಂತಲಾ ದೇವಿ ಸೀರಿಯಲ್‌ನ ಖಳನಾಯಕಿ ಎಂದು ಬಿಂಬಿಸಲಾಗಿದೆ. ಗೌತಮ್ ದಿವಾನ್ ಮಲತಾಯಿ ಎಂದೇ ಶಕುಂತಲಾ ಪಾತ್ರವನ್ನು ಪರಿಚಯಿಸಲಾಗಿದೆ. ಇಂದು ಬಿಡುಗಡೆಯಾದ ಪ್ರೋಮೋ ನೋಡಿದ ವೀಕ್ಷಕರಲ್ಲಿ ಗೌತಮ್ ಮಲತಾಯಿ ಅಲ್ಲವಾ ಶಕುಂತಲಾ ಅಲ್ಲವಾ? ಹಾಗಾದ್ರೆ ಶಕುಂತಲಾ ಯಾರು ಎಂಬ ಪ್ರಶ್ನೆ ಮೂಡಿದೆ. 

ಗೌತಮ್‌ನನ್ನು ಕಂಪನಿಯ ಚೇರ್‌ಮ್ಯಾನ್ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಜಯದೇವ್ ಪ್ಲಾನ್ ಮಾಡಿದ್ದನು. ಆದ್ರೆ ಕೊನೆ ಕ್ಷಣದಲ್ಲಿ ಆಫಿಸ್‌ಗೆ ಬಂದ ಭೂಮಿಕಾ ಎಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದಳು. ಕಂಪನಿಯ ಶೇ.51ರಷ್ಟು ಷೇರುಗಳು ಗೌತಮ್ ಮತ್ತು ಶೇ.25ರಷ್ಟು ಷೇರು ಅವರ ತಂಗಿ ಸುಧಾ ಹೆಸರಿನಲ್ಲಿದೆ. ಇನ್ನುಳಿದ ಶೇ.24ರಷ್ಟು ಷೇರು ಪಬ್ಲಿಕ್ ಬಳಿಯಲ್ಲಿವೆ. ಹಾಗಾಗಿ ಸುಧಾ ತೀರ್ಮಾನದಂತೆ ಗೌತಮ್ ದಿವಾನ್ ಚೇರ್‌ಮ್ಯಾನ್ ಆಗಿ ಮುಂದುವರಿದರು. ಇದರಿಂದ ಕೆರಳಿ ಕೆಂಡವಾಗಿರುವ ಶಕುಂತಲಾ ಮತ್ತು ಜೈದೇವ್ ನಡುವೆ ಮಾತಿನ ಚಕಮಕಿ ಉಂಟಾಗಿದೆ. 

ತಾಯಿ ಶಕುಂತಲಾ ಮುಂದೆ ಆಕ್ರೋಶದ ಮಾತುಗಳನ್ನಾಡಿರುವ ಜೈದೇವ್ ತಮ್ಮ ಈ ಸ್ಥಿತಿಗೆ ಕಾರಣ ತಂದೆಯೇ ಕಾರಣ. ಅವನನ್ನು ಹೇಗೆ ನೀನು ಮದುವೆಯಾದ ಅಮ್ಮಾ.. ನೋಡಲು ದೊಡ್ಡ ಮನೆ, ದಿವಾನ್ ಕುಟುಂಬ. ಆದ್ರೆ ನಾವೆಲ್ಲಾ ಗುಲಾಮರಂತೆ ಬದುಕುತ್ತಿದ್ದೇವೆ. ನಮ್ಮ ಇಂದಿನ ಈ ದಯನೀಯ ಸ್ಥಿತಿಗೆ ನಿನ್ನ ಗಂಡನೇ ಕಾರಣ. ಗೌತಮ್ ದಿವಾನ್ ಮನೆತನ ಹಾಗೆ, ಹೀಗೆ ಅಂತ ದೊಡ್ಡ ದೊಡ್ಡ ಸ್ಪೀಚ್ ನೀಡುತ್ತಾರೆ. ನಮಗೆ ಆಗುತ್ತಿರೋ ಅನ್ಯಾಯ ಯಾರಿಗೂ ಕಾಣಿಸುತ್ತಿಲ್ಲ ಯಾಕೆ ಎಂದು ತಾಯಿ ಶಕುಂತಲಾ ಮುಂದೆ ಜೈದೇವ್ ಆಕ್ರೋಶ ಹೊರಹಾಕಿದ್ದಾನೆ. 

ಮನಸ್ಸಲ್ಲಿ ಹತ್ತು ಜನ್ಮಕ್ಕೆ ಆಗುವಷ್ಟು ಉರಿ ಇದ್ರೂ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡು ಬದುಕುತ್ತಿದ್ದೇವೆ. ಇಂತಾ ಒಂದು ದಿನ ಬರುತ್ತೆ ಅಂತ ನಮ್ಮ ಕೈಗೆ ಚೊಂಬು ಕೊಟ್ಟಿ ಹೋಗಿದ್ದಾನೆ. ಇಂತಹವನ್ನು ಹೇಗೆ ಮದುವೆಯಾದೆ? ಯಾವ ಸೌಭಾಗ್ಯಕ್ಕೆ ನಮ್ಮನ್ನು ಹುಟ್ಟಿಸಬೇಕಿತ್ತು? ನಮ್ಮನ್ನು ಹುಟ್ಟಿಸಿದ ಅಪ್ಪ, ನಿನ್ನ ಗಂಡ ಒಬ್ಬ ನಾಲಾಯಕ್. ಎಲ್ಲಾ ಆಸ್ತಿಯನ್ನು ಅವರಿಬ್ಬರ ಹೆಸರಿಗೆ ಬರೆದರೆ ನಾವೇನು ಮಾಡಬೇಕು ಎಂದು ಜೈದೇವ್ ಪ್ರಶ್ನೆ ಮಾಡಿದ್ದಾನೆ.

ಇದನ್ನೂ ಓದಿ: ಅಮೃತಧಾರೆ ಚಿತ್ರೀಕರಣದಲ್ಲಿ ಏನಾಯ್ತು ನೋಡಿ: ವೈರಲ್ ಆಯ್ತು ವಿಡಿಯೋ

ಎಲ್ಲಾ ಆಸ್ತಿಯನ್ನು ಗೌತಮ್ ಮತ್ತು ಸುಧಾಗೆ ನೀಡಿರೋದನ್ನು ಪ್ರಶ್ನೆ ಮಾಡಿರುವ ಜೈದೇವ್‌ ಮಾತಿನಲ್ಲಿ ನ್ಯಾಯವಿದೆ ಅಲ್ಲವಾ ಎಂದು ವೀಕ್ಷಕರು ಕೇಳುತ್ತಿದ್ದಾರೆ. ಗೌತಮ್ ದಿವಾನ್ ಎರಡು ಮದುವೆಯಾಗಿದ್ರೆ ಶಕುಂತಲಾ ಮತ್ತು ಆಕೆಯ ನಾಲ್ಕು ಮಕ್ಕಳಿಗೆ ಏನಾದ್ರು ಆಸ್ತಿ ಕೊಡಬೇಕಿತ್ತು. ಆದ್ರೆ ಇಲ್ಲಿ ಎಲ್ಲವೂ ಗೌತಮ್ ಮತ್ತು ಸುಧಾ ಹೆಸರಿನಲ್ಲಿದೆ. ಹಾಗಾದ್ರೆ ಶಕುಂತಲಾ ಮಲತಾಯಿ ಅಲ್ಲವಾ? ದಿವಾನ್ ಕುಟುಂಬಕ್ಕೂ ಶಕುಂತಲಾಗೆ ಲಿಂಕ್ ಏನು? ಹಾಗಾದ್ರೆ ಶಕುಂತಲಾ ಗಂಡ ಯಾರು ಎಂಬಿತ್ಯಾದಿ ಪ್ರಶ್ನೆಗಳು ಪ್ರೇಕ್ಷಕರಲ್ಲಿ ಹುಟ್ಟಿಕೊಂಡಿವೆ. 

ಈ ಹಿಂದೆ ಗೌತಮ್ ದಿವಾನ್ ಸತ್ತು ಹೋಗಿದ್ದಾಳೆ ಎಂದುಕೊಂಡಿದ್ದ ತಾಯಿಯನ್ನು ಕರೆತರುವ ಮೂಲಕ ಧಾರಾವಾಹಿಯಲ್ಲಿ ಟ್ವಿಸ್ಟ್ ನೀಡಲಾಗಿತ್ತು. ಇತ್ತೀಚೆಗಷ್ಟೇ ಜೀವ ಮತ್ತು ಮಹಿಮಾ ಪಾತ್ರವೂ ಬದಲಾಗಿತ್ತು. ಇದೀಗ ಶಕುಂತಲಾ ಯಾರು ಎಂಬ ಪ್ರಶ್ನೆಯನ್ನು ಮುನ್ನಲೆಗೆ ತರೋ ಸುಳಿವನ್ನು ನಿರ್ದೇಶಕರು ನೀಡಿದ್ದಾರೆ.

ಇದನ್ನೂ ಓದಿ: ಆಂಟಿ ಅಂಕಲ್ ಕಥೆ ಅಂತ ಜನ ಬೈಯ್ಯುತ್ತಿದ್ದ ಅಮೃತಧಾರೆ ನಂಬರ್ 1 ಆಗಿದ್ದು ಹೇಗೆ? ಇದು ಅಮ್ಮಮ್ಮನ ಕೊಡುಗೆಯಾ?