'ಅಮೃತಧಾರೆ'ಯಲ್ಲಿ ಸಚಿನ್ ಮತ್ತು ಸುಧಾ ನಡುವಿನ ಜಗಳ ತಣ್ಣಗಾಗುತ್ತಿದೆ. ಸಚಿನ್, ಗೌತಮ್ ದಿವಾನ್ ಪತ್ನಿಯನ್ನು ಅಪಘಾತದಿಂದ ರಕ್ಷಿಸಿ, ಅವರ ಮನೆಯಲ್ಲಿ ಕೆಲಸ ಪಡೆಯುತ್ತಾನೆ. ಸುಧಾ, ಸಚಿನ್‌ನ ಕ್ಷಮೆಯಾಚನೆ ಸ್ವೀಕರಿಸಿ ಸ್ನೇಹ ಬೆಳೆಸುವ ಸಾಧ್ಯತೆ ಇದೆ. ಸುಧಾ ವಿಧವೆಯಾಗಿದ್ದು, ಸಚಿನ್ ಆಸರೆಯಾಗಬಹುದೆಂಬ ಊಹಾಪನೆ ಇದೆ. ಆದರೆ ಸಚಿನ್‌ನ ನಡವಳಿಕೆಯಲ್ಲಿ ಅನುಮಾನ ಮೂಡುತ್ತಿದೆ.
ʼಅಮೃತಧಾರೆʼ ಧಾರಾವಾಹಿಯಲ್ಲಿ ಸಚಿನ್ ಹಾಗೂ ಸುಧಾ ನಡುವೆ ಯಾವಾಗಲೂ ಜಗಳ ನಡೆಯುತ್ತಲೇ ಇರುತ್ತದೆ. ಈಗ ಸ್ವಲ್ಪ ಇವರಿಬ್ಬರು ಮುನಿಸು ಮರೆತು ಒಂದಾಗುವ ಹಾಗೆಯೂ ಕಾಣ್ತಿದೆ. ಅಚಾನಕ್ ಆಗಿ ಸಚಿನ್ ಗೌತಮ್ ದಿವಾನ್ ಪತ್ನಿಯನ್ನು ಕಾರ್ ಅಪಘಾತದಿಂದ ತಡೆಯುತ್ತಾನೆ. ಹೀಗಾಗಿ ಭೂಮಿ ಅವನಿಗೆ ತನ್ನ ಮನೆಯಲ್ಲಿ ಕೆಲಸ ಕೊಡಿಸುತ್ತಾಳೆ.
ಸ್ನೇಹ ಬೆಳೆಸುವ ಸಾಧ್ಯತೆ ಇದೆ!
ಗೌತಮ್ ದಿವಾನ್ ಮುದ್ದಿನ ತಂಗಿ ಸುಧಾಗೆ ಗಂಡ ಇಲ್ಲ, ಪುಟಾಣಿ ಮಗಳಿದ್ದಾಳೆ. ಈಗ ಅವಳು ತನ್ನ ತವರು ಮನೆಯಲ್ಲಿದ್ದಾಳೆ. ಅಲ್ಲಿ ಸಚಿನ್ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಆಗಾಗ ಇವರಿಬ್ಬರ ಮುಖಾಮುಖಿ ಆಗುವುದು. ಪ್ರತಿ ಬಾರಿಯೂ ಸಚಿನ್ ನೋಡಿ ಸುಧಾ ತಪ್ಪು ತಿಳಿದುಕೊಂಡು, ಬೈಯ್ಯುತ್ತಿರುತ್ತಾಳೆ. ಈ ಬಾರಿ ಸಚಿನ್ ಸುಧಾಗೆ ಮನಸಾರೆ ಕ್ಷಮೆ ಕೇಳಿದ್ದಾನೆ, ಅಷ್ಟೇ ಅಲ್ಲದೆ ಪ್ರತಿ ಬಾರಿ ಆಗುವ ಮನಸ್ತಾಪಕ್ಕೆ ಕಾರಣ ಏನಾಗುತ್ತಿತ್ತು? ಯಾಕೆ ಜಗಳ ಆಗತ್ತೆ ಅಂತ ಹೇಳಿದ್ದಾನೆ. ಈಗ ಸುಧಾ ಮನಸ್ಸು ತಿಳಿಯಾಗಿದ್ದು, ಅವಳೀಗ ಸಚಿನ್ ಜೊತೆ ಸ್ನೇಹ ಬೆಳೆಸುವ ಸಾಧ್ಯತೆ ಕಾಣ್ತಿದೆ.
Amrutadhare Serial: ಮಗಳ ಕಿಡ್ನ್ಯಾಪ್ ಮಾಡಿದ ಜೈಗೆ ಗೌತಮ್ನಿಂದ ಪ್ರಮೋಷನ್! ಮಲ್ಲಿ ಹೇಳ್ತಾಳಾ ಸತ್ಯ?
ಸಚಿನ್ ಆಸರೆ ಸಿಗತ್ತಾ?
ಧಾರಾವಾಹಿ, ಸಿನಿಮಾಗಳಲ್ಲಿ ಒಂದು ಜೋಡಿ ಮಧ್ಯೆ ಜಗಳ ಆಗುತ್ತಿದೆ ಎಂದರೆ ಅವರಿಬ್ಬರು ಆಮೇಲೆ ಲವ್ ಮಾಡಿ ಮದುವೆ ಆಗ್ತಾರೆ ಅಂತಲೇ ಅರ್ಥ ಅಲ್ಲವೇ? ಹೀಗೆ ಸಚಿನ್, ಸುಧಾ ಮಧ್ಯೆ ಈಗ ಜಗಳ ಶುರುವಾಗಿದೆ, ಅದೀಗ ತಣ್ಣಗಾಗಿ ಸ್ನೇಹ ಕೂಡ ಆರಂಭವಾಗಿದೆ. ಮುಂದೆ ಇವರಿಬ್ಬರು ಮದುವೆ ಆಗಲೂಬಹುದು. ಈಗಾಗಲೇ ಗಂಡನನ್ನು ಕಳೆದುಕೊಂಡಿರೋ ಸುಧಾಗೆ ಸಚಿನ್ ಆಸರೆಯೂ ಸಿಗಬಹುದು.
ಮೊದಲ ಗಂಡ ಯಾರು?
ಸಚಿನ್ ತುಂಬ ಒಳ್ಳೆಯವನ ಥರ ಕಾಣ್ತಾನೆ. ʼಅತಿ ವಿನಯಂ ದೂರ್ತ ಲಕ್ಷಣಂʼ ಎನ್ನುವಂತೆ ಸಚಿನ್ ನಡೆಯಲ್ಲಿ ಅನುಮಾನ ಕೂಡ ಕಾಣುತ್ತಿದೆ. ಹೀಗಾಗಿ ಸಚಿನ್ ಅಸಲಿ ಮುಖ ಏನು ಎನ್ನೋದನ್ನು ಮೊದಲು ಕಂಡುಹಿಡಿದುಕೊಳ್ಳಬೇಕು. ಅಷ್ಟೇ ಅಲ್ಲದೆ ಸಚಿನ್ ಒಳ್ಳೆಯವನಾದರೆ ಸುಧಾ ಜೊತೆ ಮದುವೆ ಆದರೆ ಚಿಂತೆ ಇಲ್ಲ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಾಗಿದೆ. ಸುಧಾ ಮೊದಲ ಗಂಡ ಯಾರು? ನಿಜಕ್ಕೂ ಅವನಿಗೆ ಏನಾಗಿತ್ತು ಎನ್ನೋದು ಕೂಡ ರಿವೀಲ್ ಆಗಬೇಕಿದೆ.
ಲಚ್ಚಿಗೆ ಕಂಡೇ ಬಿಡ್ತು ಕಾಲು: ಶಕುಂತಲಾ ಕಥೆ ಫಿನಿಶ್? ಅಮೃತಧಾರೆ ಮುಕ್ತಾಯ?
ʼಅಮೃತಧಾರೆʼ ಧಾರಾವಾಹಿ ಕಥೆ ಏನು?
ಗೌತಮ್ ದಿವಾನ್ ತಂದೆಗೆ ಎರಡು ಮದುವೆಯಾಗಿದೆ. ಈಗ ಗೌತಮ್ ತಂದೆ ಬದುಕಿಲ್ಲ, ತಾಯಿಯೂ ಬದುಕಿಲ್ಲ ಅಂತ ಗೌತಮ್ ಅಂದುಕೊಂಡಿದ್ದನು, ಆದರೆ ಈಗ ಅವನ ತಾಯಿ ಭಾಗ್ಯ, ತಂಗಿ ಸುಧಾ ಬದುಕಿರೋದು ಗೊತ್ತಾಗಿದ್ದು, ಅವರಿಬ್ಬರು ಮನೆಗೆ ಬಂದಿದ್ದಾರೆ. ಮಲತಾಯಿ ಶಕುಂತಲಾ ತುಂಬ ಒಳ್ಳೆಯವಳು ಅಂತ ಗೌತಮ್ ನಂಬಿದ್ದಾನೆ. ಗೌತಮ್ ಆಸ್ತಿ ಹೊಡೆಯಬೇಕು ಅಂತ ಶಕುಂತಲಾ ಪ್ಲ್ಯಾನ್ ಮಾಡುತ್ತಿದ್ದಾಳೆ. ಗೌತಮ್ ಮದುವೆ ಆಗದೆ ಹಾಗೆ ಇರಬೇಕು ಅಂತ ಅವಳು ಪ್ಲ್ಯಾನ್ ಮಾಡಿದ್ದಳು. ಆದರೆ ಗೌತಮ್-ಭೂಮಿ ಮದುವೆ ಆಯ್ತು. ಭೂಮಿ ಈಗ ಪ್ರಗ್ನೆಂಟ್. ಅವಳ ಮಗು ಸಾಯಿಸಲು ಶಕುಂತಲಾ ಪ್ಲ್ಯಾನ್ ಮಾಡುತ್ತಿದ್ದಾಳೆ. ಮಲತಾಯಿಯ ನಿಜವಾದ ಗುಣ ಗೊತ್ತಾದರೆ ಗೌತಮ್ ಮಾನಸಿಕವಾಗಿ ಕುಸಿದು ಹೋಗ್ತಾನೆ. ಗೌತಮ್ ವಿರುದ್ಧ ರಾಜೇಂದ್ರ ಭೂಪತಿ ದ್ವೇಷ ಇಟ್ಟುಕೊಂಡು, ಕಾರಣ ದ್ವೇಷ ಇಟ್ಟುಕೊಂಡು ಅವನ ಮನೆ ಹಾಳು ಮಾಡಲು ಪ್ಲ್ಯಾನ್ ಮಾಡುತ್ತಿದ್ದಾನೆ. ಇದನ್ನೆಲ್ಲ ಭೂಮಿ, ಗೌತಮ್ ಹೇಗೆ ಎದುರಿಸುತ್ತಾರೆ ಎಂದು ಕಾದು ನೋಡಬೇಕಿದೆ.
ಪಾತ್ರಧಾರಿಗಳು
ಗೌತಮ್ - ರಾಜೇಶ್ ನಟರಂಗ
ಭೂಮಿಕಾ - ಛಾಯಾ ಸಿಂಗ್
ಶಕುಂತಲಾ - ವನಿತಾ ವಾಸು
ಭಾಗ್ಯ-ಚಿತ್ಕಳಾ ಬಿರಾದಾರ್
ಅಂದಹಾಗೆ ಕೃಷ್ಣಮೂರ್ತಿ ಕವತ್ತಾರ್, ಸ್ವಾತಿ ರಾಯಲ್, ಸಿಲ್ಲಿ ಲಲ್ಲಿ ಆನಂದ್, ಇಷಿತಾ ವರ್ಷ ಕೂಡ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
