ಲಚ್ಚಿ ಅಪಹರಣದ ಹಿಂದೆ ಶಕುಂತಲಾಳ ಕೈವಾಡವಿದೆ ಎಂಬ ಸುಳಿವು ಲಚ್ಚಿಗೆ ಸಿಕ್ಕಿದೆ. ಜೈದೇವ್ ಲಚ್ಚಿಯೊಂದಿಗೆ ಮಾತನಾಡಿದರೂ, ಸಂಗೀತದಿಂದಾಗಿ ಆತನ ದನಿ ಗುರುತಿಸಲು ಸಾಧ್ಯವಾಗಿಲ್ಲ. ಶಕುಂತಲಾಳ ಅಸಲಿ ಮುಖವಾಡ ಬಯಲಾಗುವ ಸೂಚನೆಗಳಿವೆ. ಜೈದೇವ್ ಮತ್ತು ದಿಯಾಳ ಅಕ್ರಮ ಸಂಬಂಧ ಮಲ್ಲಿಗೆಗೆ ತಿಳಿದಿದ್ದು, ಮುಂದೆ ಏನಾಗುವುದೋ ಎಂಬ ಕುತೂಹಲ ಮೂಡಿದೆ.

ತನ್ನ ಲಾಕೆಟ್​ನಲ್ಲಿ ಮೈಕ್​ ಫಿಕ್ಸ್​ ಮಾಡಿರುವುದು ಶಕುಂತಲಾನೇ ಎನ್ನುವುದು ಭೂಮಿಕಾಗೆ ಇನ್ನೇನು ತಿಳಿಯುವುದರಲ್ಲಿತ್ತು. ಇದು ಶಕುಂತಲಾಗೆ ಗೊತ್ತಾಗಿ ಮನೆಯವರ ತಲೆಯನ್ನು ಬೇರೆ ಕಡೆ ತಿರುಗಿಸುವುದಕ್ಕಾಗಿ ಸುಧಾ ಮಗಳು ಲಚ್ಚಿಯನ್ನು ಕಿಡ್ನಾಪ್​ ಮಾಡಲಾಗಿದೆ. ಜೈದೇವ್​ ಬೇರೆ ದನಿಯಲ್ಲಿ ಗೌತಮ್​ಗೆ ಕರೆ ಮಾಡಿ ಹಣ ತರಲು ಹೇಳಿದ್ದಾನೆ. ಆದರೆ ಇದನ್ನು ಮಾಡಿಸಿರುವುದು ಜೈದೇವ್​, ಶಕುಂತಲಾ ಎನ್ನುವ ಸಣ್ಣ ಗುಮಾನಿ ಕೂಡ ಮನೆಯಲ್ಲಿ ಯಾರಿಗೂ ಬರುವುದಿಲ್ಲ. ಹಣದ ಆಸೆಗಾಗಿ ಲಚ್ಚಿಯನ್ನು ಅಪಹರಣ ಮಾಡಿರುವುದಾಗಿ ಅಂದುಕೊಳ್ಳಲಾಗಿದೆ. ಅತ್ತ ಜೈದೇವ್​, ಲಚ್ಚಿಯ ಕಿವಿಗೆ ಹೆಡ್​ಫೋನ್​ ಹಾಕಿ ಅಸಲಿ ದನಿಯಲ್ಲಿ ಮಾತನಾಡಿದ್ದಾನೆ. ಈ ದನಿಯನ್ನು ಲಚ್ಚಿ ಗುರುತು ಹಿಡಿಯುತ್ತಾಳೆ ಎಂದು ವೀಕ್ಷಕರು ಅಂದುಕೊಂಡಿದ್ದರು. ಆದರೆ ಹಾಗಾಗಲಿಲ್ಲ. ಜೋರಾಗಿ ಸಂಗೀತ ಹಾಕಿರುವ ಕಾರಣ ಲಚ್ಚಿಗೆ ಆತನ ದನಿ ಗುರುತು ಸಿಗಲಿಲ್ಲ.

ಅದೇ ಜಾಗಕ್ಕೆ ಶಕುಂತಲಾ ಮತ್ತು ಸಹೋದರ ಬಂದಿದ್ದಾರೆ. ಮುಂದೇನು ಮಾಡಬೇಕು ಎನ್ನುವ ಪ್ಲ್ಯಾನ್​ ಹಾಕಿದ್ದಾರೆ. ಆದರೆ ಲಚ್ಚಿಯ ಕಿವಿಗೆ ಹೆಡ್​ಫೋನ್​ ಇರುವ ಕಾರಣ ಅದ್ಯಾವುದೂ ಕೇಳುತ್ತಿಲ್ಲ. ಲಚ್ಚಿಯನ್ನು ಒಂದು ಕಡೆ ಬಿಟ್ಟು, ದುಡ್ಡನ್ನು ಇನ್ನೊಂದು ಕಡೆ ಇಡುವಂತೆ ಗೌತಮ್​ಗೆ ಹೇಳಿ ನಾವು ಪರಾರಿಯಾಗಬಹುದು ಎಂದು ಶಕುಂತಲಾ ಹೇಳಿದ್ದು, ಅದರಂತೆಯೇ ಪ್ಲ್ಯಾನ್​ ಮಾಡಲಾಗುತ್ತಿದೆ. ಆದರೆ ಇದೇ ವೇಳೆ ಲಚ್ಚಿ ತನ್ನ ಕಣ್ಣಿಗೆ ಕಟ್ಟಿರೋ ಪಟ್ಟಿಯಿಂದ ಸೂಕ್ಷ್ಮವಾಗಿ ತಲೆಯನ್ನು ಮೇಲಕ್ಕೆ ಮಾಡಿ ಅಲ್ಲಿ ಯಾರಿರುವುದು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಆಗ ಆಕೆಗೆ ಶಕುಂತಲಾಳ ಕಾಲು, ಸೀರೆಯ ತುದಿ ಕಾಣಿಸಿದೆ. ಯಾರೋ ಮಹಿಳೆ ಬಂದಿದ್ದಾಳೆ ಎನ್ನುವುದು ಆಕೆಗೆ ತಿಳಿದಿತ್ತು. ಆಕೆ ಶಕುಂತಲಾಳನ್ನು ಗುರುತು ಹಿಡಿಯುತ್ತಾಳಾ ಎನ್ನುವುದು ಮುಂದಿರುವ ಪ್ರಶ್ನೆ. ಒಂದು ವೇಳೆ ಇದರ ಹಿಂದೆ ಶಕುಂತಲಾ ಇದ್ದಾಳೆ ಎಂಬ ಬಗ್ಗೆ ಲಚ್ಚಿ ಹೇಳಿದರೂ ಅವಳ ಅಮ್ಮ ಸುಧಾ ಅಂತೂ ಅದನ್ನು ಒಪ್ಪುವುದಿಲ್ಲ. ಆಕೆ ಮಗಳ ಬಾಯಿ ಮುಚ್ಚಿಸಲೂಬಹುದು. ಇನ್ನು ಗೌತಮ್​ ಅಂತೂ ಒಪ್ಪಲು ಸಾಧ್ಯನೇ ಇಲ್ಲ. ಲಚ್ಚಿಯನ್ನು ಗೌತಮ್​ ಬಿಡಿಸಿಕೊಂಡು ಬಂದಿದ್ದಾನೆ. ಲಚ್ಚಿ ಶಕುಂತಲಾಳ ಕಾಲನ್ನು ನೋಡಿ ಶಾಕ್​ ಆಗಿದ್ದಾಳೆ. ಅಲ್ಲಿಗೆ ಬಂದಾಕೆ ಇವಳೇ ಎನ್ನುವುದು ಗೊತ್ತಾಗಿದೆ. ಮುಂದೇನು ಎನ್ನುವುದು ಪ್ರಶ್ನೆ. 

ಯಾರ‍್ಯಾರನ್ನೋ ನನ್​ ಗಂಡ ಮಾಡ್ಬೇಡಿ ಪ್ಲೀಸ್​... ಅವ್ರು ಅಕಾಯ್ ಅಲ್ಲ: ವೈಷ್ಣವಿ ಗೌಡ ಬೇಸರ

ಇನ್ನು ಈ ವಿಷಯ ಆನಂದ್​ ಮತ್ತು ಭೂಮಿಕಾ ಕಿವಿಗೆ ಬಿದ್ದರೆ ಮಾತ್ರ ಅಲ್ಲಿಗೆ ಬಹುತೇಕ ಸೀರಿಯಲ್​ ಮುಗಿದಂತೆ. ಏಕೆಂದರೆ, ಈಗ ಏನಿದ್ದರೂ ಇರುವುದು ಶಕುಂತಲಾಳ ಅಸಲಿಯತ್ತು ಬಯಲು ಮಾಡುವುದು ಮಾತ್ರ. ಒಂದು ವೇಳೆ ಆಕೆಯ ಅಸಲಿಯತ್ತು ಬಯಲಾಗದರೆ ಜೈದೇವನ ಅಸಲಿಯತ್ತೂ ಬಯಲಾಗುತ್ತದೆ. ಆತನ ಅಕ್ರಮ ಸಂಬಂಧದ ಬಗ್ಗೆ ಪತ್ನಿ ಮಲ್ಲಿಗೆ ಇದಾಗಲೇ ಗೊತ್ತಾಗಿರೋ ಕಾರಣ, ಎಲ್ಲವೂ ಮುಗಿದಂತೆಯೇ ಆಗುತ್ತದೆ. ಇಷ್ಟು ಮಾಡಿ ಸೀರಿಯಲ್​ ಮುಕ್ತಾಯ ಮಾಡಿದರೆ ಒಳ್ಳೆಯದು. ಆದರೆ ಸದ್ಯ ಸೀರಿಯಲ್​ ಟಿಆರ್​ಪಿ ಹೆಚ್ಚಾಗಿರುವ ಕಾರಣ, ಅನಗತ್ಯ ಟ್ವಿಸ್ಟ್​ ಸೇರಿಸಿ ಎಳೆದರೂ ಅಚ್ಚರಿಯೇನಿಲ್ಲ. ಶಕುಂತಲಾ ಅಸಲಿಯತ್ತು ಲಚ್ಚಿಗೆ ಗೊತ್ತಾದರೂ ಅದನ್ನು ಹೇಳುವುದಕ್ಕೆ ಆಗದೇ ಮತ್ತಷ್ಟು ಟ್ವಿಸ್ಟ್​ ಸೇರಿಸಿ ಚ್ಯೂಯಿಂಗ್​ ಗಮ್​ನಂತೆ ಸೀರಿಯಲ್​ ಎಳೆಯುವುದು ನಿರ್ದೇಶಕರಿಗೆ ಏನೂ ಹೊಸ ವಿಷಯವಲ್ಲ ಬಿಡಿ. 

ಇನ್ನು ಗೌತಮ್​ ವಿಷಯಕ್ಕೆ ಬರುವುದಾದರೆ, ಮಲ್ಲಿಯಂತ ಹೆಂಡ್ತಿ ಇದ್ದರೂ ಜೈದೇವ್​ ದಿಯಾಳ ಬೆನ್ನಹಿಂದೆ ಬಿದ್ದಿದ್ದಾನೆ. ಶ್ರೀಮಂತ ಕುಳಗಳನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ದಿಯಾಳಂತ ಕೆಲವು ಹೆಣ್ಣುಮಕ್ಕಳೂ ಕಮ್ಮಿ ಇಲ್ಲ ಎನ್ನಿ. ಇದು ಸೀರಿಯಲ್​ ಕಥೆಯಾದ್ರೆ, ನಿಜ ಜೀವನದಲ್ಲಿಯೂ ಈಕೆಯಂಥವರು ಕಾಣಸಿಗುತ್ತಾರೆ. ಅದನ್ನೇ ಈಗ ಅಮೃತಧಾರೆಯಲ್ಲಿಯೂ ತೋರಿಸಲಾಗಿದೆ. ಈ ಅಕ್ರಮ ಸಂಬಂಧದ ಬಗ್ಗೆ ಮಲ್ಲಿಗೆ ತಿಳಿದಿದ್ದರೂ ಅದನ್ನು ಆಕೆ ಬಾಯಿ ಬಿಡುತ್ತಿಲ್ಲ.ಪತಿಯನ್ನು ಹೇಗೆ ಹ್ಯಾಂಡಲ್​ ಮಾಡಬೇಕು ಎನ್ನುವುದನ್ನು ಪೆದ್ದು ಮಲ್ಲಿ ಅರಿತಿದಿದ್ದಾಳೆ. ಆದರೆ ದಿಯಾ ಪದೇ ಪದೇ ಕಾಲ್​ ಮಾಡುವ ಕಾರಣ, ಹೆಂಡತಿಯ ಮುಂದೆ ಜೈದೇವ್​ಗೆ ಏನು ಮಾತನಾಡಬೇಕು ಎಂದು ತಿಳಿಯದೇ ಪೇಚಿಗೆ ಸಿಲುಕುವ ಸ್ಥಿತಿ. ಆದರೆ ತನ್ನ ಪತ್ನಿಗೆ ತನ್ನ ಬಂಡವಾಳ ಗೊತ್ತಿಲ್ಲ ಎಂದೇ ಅಂದುಕೊಂಡಿರೋ ಆತ, ಪತ್ನಿ ಮಲ್ಲಿಯ ಎದುರು ಆಫೀಸ್​ನಿಂದ ಯಾವುದೋ ಕಾಲ್​ ಬಂದವರಂತೆ ಮಾತನಾಡುತ್ತಾ ಬ್ಯಾಲೆನ್ಸ್​ ಮಾಡದೇ ವಿಧಿಯಿಲ್ಲ. ಇವೆಲ್ಲಾ ಮಲ್ಲಿಗೆ ತಿಳಿದಿದ್ದರೂ ಅದನ್ನು ಸೂಕ್ಷ್ಮವಾಗಿ ಹ್ಯಾಂಡಲ್​ ಮಾಡುತ್ತಿದ್ದಾಳೆ. ಅದೂ ಎಲ್ಲರ ಎದುರು ಬಯಲಾಗುವ ಕಾಲ ಬಂದಿದೆ. 

ಇವರು ಸೀತಾ ಅಲ್ಲಾ ಗೀತಾ! ಸೀತಾರಾಮ ಸಿಹಿ ರಿಯಲ್​ ಅಮ್ಮನ ಕ್ಯೂಟ್​ ಡಾನ್ಸ್​ ವೈರಲ್​