Amruthadhaare Kannada Serial: 'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಈಗ ಹೊಸ ಜೀವನವನ್ನು ಶುರು ಮಾಡಿದ್ದಾರೆ. ಈ ನಡುವೆ ಜಯದೇವ್‌ನಿಂದ ಇವರ ಮಗ ಆಕಾಶ್ ಹೆದರಿಕೆಯಿಂದ ಬದುಕುತ್ತಿದ್ದಾನೆ. ಈಗ ಮಗನಿಗೋಸ್ಕರ ಗೌತಮ್ ಸಿಂಹದಂತೆ ಘರ್ಜನೆ ಮಾಡೋದು ಫಿಕ್ಸ್ ಎಂದುಕೊಳ್ಳಿ.
'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಒಂದಾಗಿದ್ದು, ಒಟ್ಟಿನಲ್ಲಿ ಈಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ ಎಂದು ಹೇಳಬಹುದು. ಇಷ್ಟು ದಿನ ಇವರಿಬ್ಬರು ಯಾವಾಗ ಒಂದಾಗ್ತಾರೆ ಎನ್ನೋ ಪ್ರಶ್ನೆ ಇತ್ತು. ಈಗ ಭೂಮಿಕಾ-ಗೌತಮ್ ದಂಪತಿ ತಮ್ಮ ಮಕ್ಕಳ ಜೊತೆ ಆರಾಮಾಗಿ ಇರಬೇಕು ಎಂದುಕೊಂಡರೂ ಕೂಡ ಆಕಾಶ್ ಭಯದಿಂದ ಎಲ್ಲವೂ ಹಾಳಾಗಿದೆ.
ಹೊಸ ತಿರುವು ಸಿಕ್ಕಾಯ್ತು
ಯಾವಾಗಲೂ ಪಟ ಪಟ ಎಂದು ಮಾತನಾಡುವ ಆಕಾಶ್ ಸೈಲೆಂಟ್ ಆಗಿರೋದು ಗೌತಮ್‌ಗೆ ಗೊತ್ತಾಗಿದೆ. ಅಷ್ಟೇ ಅಲ್ಲದೆ ರಾತ್ರಿ ಹಾಸಿಗೆಯನ್ನು ಕೂಡ ಒದ್ದೆ ಮಾಡಿಕೊಳ್ತಿದ್ದಾನೆ. ಇದಕ್ಕೆ ಕಾರಣ ಏನು ಎಂದು ಆಕಾಶ್ ಹೇಳಿದ್ದಾನೆ. ಮಲ ಸಹೋದರ ಜಯದೇವ್‌ನ ಕುತಂತ್ರದಿಂದಲೇ ತನ್ನ ಮಗ ಹೀಗೆ ಆಗಿದ್ದಾನೆ ಎಂಬ ಸತ್ಯ ಗೌತಮ್‌ಗೆ ಗೊತ್ತಾಗಿದೆ. ಒಟ್ಟಿನಲ್ಲಿ ಈ ಕಥೆಗೆ ಹೊಸ ತಿರುವು ಸಿಕ್ಕಿದೆ. ಆಕಾಶ್‌ನನ್ನು ಕರೆದುಕೊಂಡು ಗೌತಮ್ ತನ್ನ ಹಳೆಯ ಮನೆಗೆ ಬಂದಿರುವುದು ವೀಕ್ಷಕರಿಗೆ ಕುತೂಹಲ ಮೂಡಿಸಿದೆ.
ಮಗನಿಗೋಸ್ಕರ ಗರ್ಜಿಸುತ್ತಾನೆ
ಇದ್ದ ಆಸ್ತಿಯನ್ನು ಜಯದೇವ್ ಹೆಸರಿಗೆ ಬರೆದಿಟ್ಟು ಗೌತಮ್ ಮನೆಯಿಂದ ಹೊರಬಂದಿದ್ದನು. ಹೀಗಿದ್ದರೂ ಕೂಡ ಜಯದೇವ್ ತೊಂದರೆ ಕೊಡುತ್ತಿರೋದು ಗೌತಮ್ ತಾಳ್ಮೆಯನ್ನು ಹಾಳು ಮಾಡಿದೆ. ಈಗ ಅವನು ತನ್ನ ಮಗನಿಗಾಗಿ ಸಿಂಹದಂತೆ ಗರ್ಜಿಸಲಿದ್ದಾನೆ ಎಂದು ಕಾಣುತ್ತಿದೆ. ತನ್ನ ಪುಟ್ಟ ಮಗನಿಗೆ ಮಾನಸಿಕ ಹಿಂಸೆ ನೀಡಿ, ಬ್ಲ್ಯಾಕ್‌ಮೇಲ್ ಮಾಡಿರುವ ಜಯದೇವ್‌ನನ್ನು ಗೌತಮ್ ಸುಮ್ಮನೆ ಬಿಡುವುದಿಲ್ಲ.
ಜಯದೇವ್ ಸುಮ್ಮನಿರುತ್ತಾನಾ?
ಜಯದೇವ್ ಹಾಗೂ ಶಕುಂತಲಾ ಮಾಡಿದ ತಪ್ಪಿಗೂ ಗೌತಮ್ ಶಿಕ್ಷೆ ಕೊಡೋದಿಲ್ಲ. ಇವರಿಗೆ ಶಿಕ್ಷೆ ಕೊಡಬಾರದು, ನಮ್ಮ ಪಾಡಿಗೆ ನಾವು ಇರೋಣ ಎಂದು ಭೂಮಿಕಾ ಹೇಳಿದ್ದಳು. ಹೀಗಾಗಿ ಗೌತಮ್ ಸುಮ್ಮನೆ ವಾರ್ನ್ ಮಾಡಿ ಹೊರಬರಬಹುದಾ? ಗೌತಮ್ ವಾರ್ನ್ ಮಾಡಿದಕೂಡಲೇ ಜಯದೇವ್ ಸುಮ್ಮನಿರುತ್ತಾನಾ ಎಂಬ ಪ್ರಶ್ನೆ ಕಾಡುತ್ತಿದೆ.
ಕೆಡಿ ಹೊಸ ಪ್ಲ್ಯಾನ್
ಜಯದೇವ್ ಈಗ ಅಷ್ಟು ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳೋದಿಲ್ಲ. ಸದ್ಯಕ್ಕೆ ಗೌತಮ್‌ನ ಆಕ್ರೋಶ ಕಂಡು ಹೆದರಿದ್ದರೂ, ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಥವಾ ಗೌತಮ್, ಭೂಮಿಕಾ, ಮಲ್ಲಿ ಖುಷಿಯನ್ನು ಹಾಳು ಮಾಡಲು ಅವನು ಇನ್ನೊಂದು ತಂತ್ರ ಹೆಣೆಯುತ್ತಾನೆ. ಇನ್ನೊಂದು ಪ್ಲ್ಯಾನ್ ಮಾಡೋದರಲ್ಲಿ ಯಾವುದೇ ಸಂದೇಹ ಇಲ್ಲ.
ಮುಂದೆ ಏನಾಗಬಹುದು?
ತನ್ನ ಮಗನನ್ನು ಹೆದರಿಸಿರೋ ಜಯದೇವ್‌ಗೆ ಶಿಕ್ಷೆ ಆಗಬೇಕು ಎಂದು ಈಗ ಭೂಮಿಕಾ ಹೇಳಿದರೂ ಆಶ್ಚರ್ಯವಿಲ್ಲ. ಆಕಾಶ್‌ನ ಮೇಲಿರುವ ಪ್ರೀತಿಯಿಂದಾಗಿ ಅವಳು ತನ್ನ ಗಂಡ ಗೌತಮ್ ಪರವಾಗಿ ನಿಲ್ಲಬಹುದು. ಗೌತಮ್ ಹಾಗೂ ಭೂಮಿಕಾ ಒಟ್ಟಿಗೆ ಸೇರಿಕೊಂಡು ಜಯದೇವ್‌ಗೆ ಪಾಠ ಕಲಿಸಬಹುದು.
ಅಮೃತಧಾರೆ ಮನೆಯಲ್ಲಿ ಈಗ ಗೌತಮ್ ಹಾಗೂ ಜಯದೇವ್ ಮಧ್ಯೆ 'ಧರ್ಮಯುದ್ಧ' ಶುರುವಾಗಿದೆ. ಬೇರೆಯವರ ಆಸ್ತಿ ಕಸಿದುಕೊಂಡು, ಅವರ ನೆಮ್ಮದಿಯನ್ನು ಕಿತ್ತುಕೊಳ್ಳುವುದೇ ಜಯದೇವ್ ಪ್ಲ್ಯಾನ್. ಹೀಗಾಗಿ ಇವನಿಗೆ ತಕ್ಕ ಶಾಸ್ತಿ ಆಗಲಿದೆಯಾ?
ಪಾತ್ರಧಾರಿಗಳು
ಗೌತಮ್ ದಿವಾನ್- ರಾಜೇಶ್ ನಟರಂಗ
ಭೂಮಿಕಾ ಸದಾಶಿವ- ಛಾಯಾ ಸಿಂಗ್
ಜಯದೇವ್- ರಾಣವ್
ಆಕಾಶ್- ದುಷ್ಯಂತ್ ಚಕ್ರವರ್ತಿ

