ಅಮೃತಧಾರೆ ನಟಿ ಮದುವೆಗೆ ಕ್ಷಣಗಣನೆ: ಅರಶಿನಶಾಸ್ತ್ರದಲ್ಲಿ ಮಿಂದೆದ್ದ ಮೇಘಾ ಶೆಣೈ
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ತಂಗಿ ಸುಧಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಮೇಘಾ ಶೆಣೈ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುವ ಸಂಭ್ರಮದಲ್ಲಿದ್ದು ಇತ್ತೀಚೆಗೆ ಅದ್ದೂರಿಯಾಗಿ ಅರಶಿನ ಶಾಸ್ತ್ರ ಮಾಡಿದ್ದು, ಫೋಟೊಗಳನ್ನು ಶೇರ್ ಮಾಡಿದ್ದಾರೆ.

ಮೇಘಾ ಶೆಣೈ
ಅಮೃತಧಾರೆಯಲ್ಲಿ ಗೌತಮ್ ದಿವಾನ್ ತಂಗಿ ಸುಧಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಮೇಘಾ ಶೆಣೈ ಅವರ ಮದುವೆಗೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಮದುವೆಯ ಶಾಸ್ತ್ರಗಳು ಆರಂಭವಾಗಿವೆ. ಸೋಶಿಯಲ್ ಮೀಡೀಯಾದಲ್ಲಿ ಫೋಟೊಗಳು ವೈರಲ್ ಆಗುತ್ತಿವೆ.
ಅರಶಿನ ಶಾಸ್ತ್ರ
ಮೇಘಾ ಶೆಣೈ ಅವರ ಅರಶಿನ ಶಾಸ್ತ್ರ ನಡೆದಿದ್ದು, ಫೋಟೊಗಳು ಈಗಾಗಲೇ ವೈರಲ್ ಆಗುತ್ತಿವೆ. ಅರಶಿನ ಬಣ್ಣದ ಸೀರೆಯುಟ್ಟು, ಅರಶಿನ ನೀರಲ್ಲಿ ಮಿಂದೆದ್ದ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಭರತ್ ಸಿಂಗ್ ಜೊತೆ ನಿಶ್ಚಿತಾರ್ಥ
ಮೇಘಾ ಶೆಣೈ ಮಂಗಳೂರಿನವರಾಗಿದ್ದು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಮೇಘಾ, ಆಗಸ್ಟ್ 21 ರಂದು ತಮ್ಮ ಗೆಳೆಯ ಭರತ್ ಸಿಂಗ್ ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಮದುವೆ ಸಂಭ್ರಮ ಜೋರು
ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ತಯಾರಿ ನಡೆಸಿರುವ ನಟಿ ಮೇಘಾ ಶೆಣೈ, ಅವರ ಅರಶಿನ ಶಾಸ್ತ್ರ, ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮಗಳು ತುಂಬಾನೆ ಜೋರಾಗಿಯೇ ಬಂಧು ಮಿತ್ರರ ಸಮ್ಮುಖದಲ್ಲಿ ನಡೆದಿದೆ.
ಭರತ್ ಸಿಂಗ್ ಯಾರು?
ಭರತ್ ಸಿಂಗ್ ಯಾರು? ಅವರ ಉದ್ಯೋಗದ ಬಗ್ಗೆ ಮಾಹಿತಿ ಇಲ್ಲ. ಆದರೆ ಇವರು ಉತ್ತರ ಭಾರತದ ಮೂಲದವರಾಗಿದ್ದು, ಬೆಂಗಳೂರಿನಲ್ಲೇ ನೆಲೆಸಿದ್ದಾರೆ ಎನ್ನಲಾಗುತ್ತಿದೆ. ಹಾಗೆಯೇ ಇವರ ಅರಶಿನ ಶಾಸ್ತ್ರದ ಸಂಪ್ರದಾಯಗಳು ಸಹ ಉತ್ತರ ಭಾರತ ಶೈಲಿಯಲ್ಲಿ ನಡೆದಿದೆ.
ಮದುವೆ ಯಾವಾಗ?
ಮೇಘಾ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅರಶಿನ ಶಾಸ್ತ್ರದ ಫೋಟೊಗಳನ್ನು ಶೇರ್ ಮಾಡಿದ್ದಾರೆ ಅಷ್ಟೇ. ಮದುವೆ ಈಗಾಗಲೇ ನಡೆದಿದೆಯೇ? ಅಥವಾ ಇನ್ನಷ್ಟೇ ನಡೆಯಲಿದೆಯೇ ಎನ್ನುವ ಕುರಿತು ಮಾಹಿತಿ ಇಲ್ಲ.
ಅಮೃತಧಾರೆಯಲ್ಲಿ ಏನಾಗ್ತಿದೆ
ಮೇಘಾ ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಆದರೆ ಸದ್ಯ ಅವರ ಪಾತ್ರವನ್ನು ತೋರಿಸಲಾಗುತ್ತಿಲ್ಲ. ಕೇವಲ ಗೌತಮ್ ಮತ್ತು ಭೂಮಿಕಾ ಪಾತ್ರಗಳನ್ನಷ್ಟೇ ತೋರಿಸಲಾಗಿದೆ. ನಟಿ ತಮ್ಮ ಮದುವೆಯ ಕಾರ್ಯಕ್ರಮದಲ್ಲಿ ಸದ್ಯ ನಟಿ ಪೂರ್ತಿಯಾಗಿ ಬ್ಯುಸಿಯಾಗಿದ್ದಾರೆ.
ಮೇಘಾ ಶೆಣೈ ಕರಿಯರ್
‘ಸುಂದರಿ' ಧಾರಾವಾಹಿಯ ಮೂಲಕ ನಟನೆ ಜರ್ನಿ ಶುರು ಮಾಡಿದ ಮೇಘಾ ಬಳಿಕ 'ಬ್ರಾಹ್ಮಿನ್ಸ್ ಕೆಫೆ', .ಜನುಮದ ಜೋಡಿ' ಧಾರಾವಾಹಿಯಲ್ಲಿ ಅಭಿನಯಿಸಿದರು. ನಂತ್ರ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾವೇರಿ' ಧಾರಾವಾಹಿಯಲ್ಲಿ ವಿಲನ್ ಆಗಿ ಸದ್ದು ಮಾಡಿದರು.
ವಿಲನ್ ಪಾತ್ರದಲ್ಲಿ ಮಿಂಚಿಂಗ್
ಇದಲ್ಲದೇ 'ಮಹಾದೇವಿ' ಧಾರಾವಾಹಿಯಲ್ಲಿ ಅಧಿಕಾರಿ ರಶ್ಮಿಯಾಗಿ, 'ರಕ್ಷಾಬಂಧನ' ಧಾರಾವಾಹಿಯಲ್ಲಿ ನಾಯಕನ ಪ್ರೇಯಸಿಯಾಗಿ, 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ಕೀರ್ತಿ ಆಗಿ ಕಾಣಿಸಿಕೊಂಡಿದ್ದರು. ನಂತರ ಜೀವ ಹೂವಾಗಿದೆ ಧಾರಾವಾಹಿಯಲ್ಲಿ ನಟಿಸಿದ್ದರು. ಸದ್ಯ ಅಮೃತಧಾರೆಯಲ್ಲಿ ಸುಧಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.