ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ಪ್ರಾಣಾಪಾಯದಿಂದ ಪಾರಾಗಿ ಮಲ್ಲಿಯೊಂದಿಗೆ ಮನೆಗೆ ಮರಳಿದ್ದಾಳೆ. ನಕಲಿ ಭೂಮಿಕಾಳಾಗಿರುವ ದೀಪಿಕಾಗೆ ಶಕುಂತಲಾ ಮತ್ತು ಜೈದೇವ್ ಅವರ ಕುತಂತ್ರದ ಅರಿವಿಲ್ಲ. ಭೂಮಿಕಾಗೆ ಅವಳಿ ಸಹೋದರಿಯ ಸತ್ಯ ತಿಳಿದಿರುವುದರಿಂದ ಶೀಘ್ರದಲ್ಲೇ ಜೈದೇವ್ ಮತ್ತು ಶಕುಂತಲಾ ಜೈಲು ಸೇರುವುದು ಖಚಿತವಾಗಿದೆ.
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಕೊನೆಗೂ ಭೂಮಿಕಾ ಜೀವಕ್ಕೆ ಏನೂ ಅಪಾಯ ಆಗಲಿಲ್ಲ. ಅವಳನ್ನು ಮಲ್ಲಿ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಇದರ ಅರಿವೇ ಇಲ್ಲದ ದೀಪಿಕಾ ಮನೆಯಲ್ಲಿ ಸೇಬುಹಣ್ಣು ತಿನ್ನುತ್ತಾ ಆರಾಮಾಗಿ ಬಾಲ್ಕನಿಯ ಮೇಲೆ ನಿಂತಿದ್ದಾಳೆ. ದೀಪಿಕಾಳನ್ನು ನೋಡಿ ಭೂಮಿಕಾಗೆ ಅಚ್ಚರಿಯೋ ಅಚ್ಚರಿ. ಆದರೆ ಭೂಮಿಕಾ ಮನೆಗೆ ಕಾಲಿಟ್ಟಿರುವ ವಿಷಯ ಇನ್ನೂ ಜೈದೇವ್, ಶಕುಂತಲಾ ಸೇರಿದಂತೆ ಯಾರಿಗೂ ಗೊತ್ತಿಲ್ಲ. ಆದ್ದರಿಂದ ಮುಂದೆ ಆಗೋದೆಲ್ಲಾ ಟ್ವಿಸ್ಟ್ ಮೇಲೆ ಟ್ವಿಸ್ಟ್ ಎನ್ನಿಸಲಿದೆ.
ಅಷ್ಟಕ್ಕೂ ಇದಾಗಲೇ, ಮಲ್ಲಿಯನ್ನು ಮನೆಯಿಂದ ಹೊರಕ್ಕೆ ಹಾಕುವಲ್ಲಿ ನಕಲಿ ಭೂಮಿಕಾ ಸಕ್ಸಸ್ ಆಗಿದ್ದಾಳೆ. ಮನೆಯಲ್ಲಿ ಈಗ ದೀಪಿಕಾಳದ್ದೇ ಕಾರುಬಾರು ಆಗಿದೆ. ಅತ್ತ ಭೂಮಿಕಾಗೆ ಪ್ರಜ್ಞೆ ಬಂದು ಅವಳು ಈ ವಿಷಯವನ್ನು ತಿಳಿಸಲು ಮಲ್ಲಿಗೆ ಕಾಲ್ ಮಾಡಿದ್ರೆ ಆಕೆ ರಿಸೀವ್ ಮಾಡಿರಲಿಲ್ಲ. ಅದಕ್ಕಾಗಿಯೇ ಮನೆಗೆ ಕಾಲ್ ಮಾಡಿದಾಗ ಅದನ್ನು ದೀಪಿಕಾ ರಿಸೀವ್ ಮಾಡಿದ್ದಳು.
ದೀಪಿಕಾ ಒಳ್ಳೆಯವಳೇ
ಆದರೆ ಇನ್ನೂ ದೀಪಿಕಾಗೆ ಶಕುಂತಲಾ ಮತ್ತು ಜೈದೇವರ ಕುತಂತ್ರ ತಿಳಿದಿಲ್ಲ. ಅದಕ್ಕಾಗಿ ಅವಳು ಖುಷಿಯಿಂದ ಅದನ್ನು ಹೋಗಿ ಶಕುಂತಲಾಗೆ ಭೂಮಿಕಾ ಕಾಲ್ ಮಾಡಿದ್ದ ವಿಷ್ಯ ತಿಳಿಸಿದ್ದಳು. ಅಲ್ಲಿಗೆ ಶಕುಂತಲಾ ಮತ್ತು ಜೈದೇವ್ ತತ್ತರಿಸಿ ಹೋಗಿದ್ದರು. ಭೂಮಿಕಾಳನ್ನು ಸಾಯಿಸುವುದಕ್ಕಾಗಿ ಜೈದೇವ ಆಸ್ಪತ್ರೆಗೆ ಹೋಗಿದ್ದ. ಅದೇ ವೇಳೆ ಭೂಮಿಕಾ ಹೊರಕ್ಕೆ ಬಂದಿದ್ದು, ಜೈದೇವನ ಪ್ಲ್ಯಾನ್ ಬಗ್ಗೆ ಅರಿತು ಅಲ್ಲಿಂದ ಓಡಿ ಹೋಗಿದ್ದಳು.
ಕಂಬಿ ಎಣಿಸೋದು ಗ್ಯಾರೆಂಟಿ
ಕೊನೆಗೂ ಭೂಮಿಕಾ ಮಲ್ಲಿ ಮತ್ತು ಜೀವಾಗೆ ಸಿಕ್ಕಿದ್ದಾಳೆ. ಸ್ಟೋರಿಯನ್ನು ಸಿಕ್ಕಾಪಟ್ಟೆ ಎಳೆಯಲು ಹೋಗದೆ ಶೀಘ್ರದಲ್ಲಿ ಎಲ್ಲವನ್ನೂ ಮುಗಿಸಿರುವ ಖುಷಿಯಲ್ಲಿ ವೀಕ್ಷಕರು ಇದ್ದಾರೆ. ಭೂಮಿಕಾ ನಾಪತ್ತೆಯಾಗಿರುವ ಡ್ರಾಮಾ ಒಂದು ವರ್ಷ ಎಳೆಯಬಹುದು ಎಂದುಕೊಂಡಿದ್ದರು ವೀಕ್ಷಕರು. ಆದರೆ ಫಟಾಫಟ್ ಎಲ್ಲವೂ ಆಗಿದೆ. ವೀಕ್ಷಕರಿಗೆ ಅಷ್ಟೊಂದು ಪೇಷನ್ಸ್ ಇಲ್ಲ ಎನ್ನುವ ಸತ್ಯ ನಿರ್ದೇಶಕರಿಗೆ ತಿಳಿದಂತಿದೆ. ಆದ್ದರಿಂದ ಅಮೃತಧಾರೆ ಸೀರಿಯಲ್ ಜನರಿಗೆ ಪ್ರಿಯವಾಗುತ್ತಿದ್ದು, ಇದೀಗ ಮತ್ತಷ್ಟು ಹತ್ತಿರವಾಗುತ್ತಿದೆ.
ಇದಾಗಲೇ ಭೂಮಿಕಾಗೆ ಅವಳಿ ಮಕ್ಕಳ ಸತ್ಯ ತಿಳಿದಿರುವ ಕಾರಣದಿಂದ, ದೀಪಿಕಾ ತನ್ನ ಅವಳಿ ಸಹೋದರಿ ಎಂದು ತಿಳಿಯಲು ಹೆಚ್ಚು ಹೊತ್ತು ಬೇಕಾಗಲ್ಲ. ಹೀಗಾದರೆ ಶಕುಂತಲಾ ಮತ್ತು ಜೈದೇವ್ ಕಂಬಿ ಎಣಿಸೋದು ಗ್ಯಾರೆಂಟಿ.


