ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರು ನಮ್ರತಾ ಗೌಡ. ಸದ್ಯ ಜೀ ಕನ್ನಡ ವಾಹಿನಿಯ ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಪಾತ್ರದಲ್ಲಿ ನಟಿಸುತ್ತಿದ್ದರು.
tv-talk Nov 13 2026
Author: Pavna Das Image Credits:Instagram
Kannada
ಕರ್ಣ ಧಾರಾವಾಹಿ
ಕರ್ಣ ಧಾರಾವಾಹಿಯಲ್ಲಿ ನಿಧಿ ಅಕ್ಕ ನಿತ್ಯಾ ಆಗಿ ಹಾಗೂ ಕರ್ಣನ ಉತ್ತಮ ಗೆಳತಿಯಾಗಿ ನಿತ್ಯಾ ಅಂದ್ರೆ ನಮ್ರತಾ ಗೌಡ ನಟಿಸಿದ್ದರು.
Image credits: Instagram
Kannada
ಟ್ವಿಸ್ಟ್ ಟರ್ನ್ ಹೊಂದಿದ್ದ ಪಾತ್ರ
ನಿತ್ಯಾ ಪಾತ್ರದಲ್ಲಿ ಹಲವಾರು ಟ್ವಿಸ್ಟ್ ಮತ್ತು ಟರ್ನ್ ಗಳೂ ಇದ್ದವು. ತೇಜಸ್ ಜೊತೆ ಪ್ರೀತಿ, ಕರ್ಣ ಜೊತೆ ಮದುವೆ, ಕೊನೆಗೆ ಒಬ್ಬಂಟಿಯಾಗಿ ಮಗುವಿಗೆ ಜನ್ಮ ನೀಡಿ ಕೊನೆಯುಸಿರೆಳೆದ ಪಾತ್ರ.
Image credits: Instagram
Kannada
ನಿತ್ಯಾ ಪಾತ್ರ ಮುಕ್ತಾಯ
ಧಾರಾವಾಹಿಯಲ್ಲಿ ನಿತ್ಯಾ ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲದೇ ಇರುವುದರಿಂದ, ಮಗುವಿಗೆ ಜನ್ಮ ನೀಡಿ ಪ್ರಾಣ ಬಿಡುವ ಮೂಲಕ ನಮ್ರತಾ ಗೌಡ ಪಾತ್ರಕ್ಕೆ ಅಂತ್ಯ ಹಾಡಲಾಗಿದೆ.
Image credits: Instagram
Kannada
ಟ್ರಾವೆಲ್ ಮೋಡ್ ಆನ್
ಕರ್ಣ ಧಾರಾವಾಹಿಯಲ್ಲಿ ತಮ್ಮ ಪಾತ್ರ ಮುಗಿಯುತ್ತಿದ್ದಂತೆ, ನಮ್ರತಾ ಗೌಡ ಟ್ರಾವೆಲ್ ಮೋಡ್ ಆನ್ ಮಾಡಿದ್ದಾರೆ. ಅಂದರೆ ಒಂದು ಸುಂದರ ಜಾಗಕ್ಕೆ ಟ್ರಾವೆಲ್ ಮಾಡಿದ್ದು, ಅಲ್ಲಿ ಪ್ರಕೃತಿ ನಡುವೆ ಎಂಜಾಯ್ ಮಾಡುತ್ತಿದ್ದಾರೆ.
Image credits: Instagram
Kannada
ಮೇಘಾಲಯದಲ್ಲಿ ನಮ್ರತಾ
ನಮ್ರತಾ ಗೌಡ, ಮೇಘಾಲಯಕ್ಕೆ ತೆರಳಿದ್ದು, ಅಲ್ಲಿನ ಸುಂದರವಾದ ಜಲಪಾತದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Image credits: Instagram
Kannada
ಕಪ್ಪು ಬಿಳುಪು ಡ್ರೆಸಲ್ಲಿ ಮಿಂಚಿಂಗ್
ನಮ್ರತಾ ಗೌಡ ಸುಂದರವಾದ ಕೊರಿಯಲ್ ಸ್ಟೈಲ್ ಕಪ್ಪು ಬಿಳುಪು ಡ್ರೆಸ್ ಧರಿಸಿದ್ದು, ಏಕಾಂತದಲ್ಲಿ ಸಮಯ ಕಳೆಯುವಂತೆ ಕಾಣಿಸುತ್ತಿದೆ.
Image credits: Instagram
Kannada
ಮಿಸ್ ಯೂ ನಿತ್ಯಾ ಎಂದ ಫ್ಯಾನ್ಸ್
Miss you as nitya.. ನಿಮ್ಮ ಎಲ್ಲಾ ಪಾತ್ರಗಳಲ್ಲಿ ನನಗೆ ತುಂಬಾ ಮನ ಮುಟ್ಟಿದ ಪಾತ್ರ ನಿತ್ಯ. ನಿತ್ಯ ಎಂದರೆ ಧೈರ್ಯವಂತೆ, ನಿತ್ಯ ಎಂದರೆ ತಂಗಿಯ ಸಂತೋಷಕ್ಕೆ ತನ್ನ ಜೀವನ ವನ್ನು ತ್ಯಾಗ ಮಾಡಿದವಳು.
Image credits: Instagram
Kannada
ಯಾಕೆ ಈ ದುರಂತ ಅಂತ್ಯ
ಆದರೆ ಇಲ್ಲಿ ಒಂದು ಅರ್ಥ ಆಗಲಿಲ್ಲ ನಿತ್ಯ ಯಾಕೆ ಈ ತರ ದುರಂತ ಅಂತ್ಯ ಕಂಡಳು ಎಂದು...miss you so much nitya ಎಂದು ತಮ್ಮ ನೋವನ್ನು ಬರೆದುಕೊಂಡಿದ್ದಾರೆ ಫ್ಯಾನ್ಸ್