ಬಿಗ್‌ಬಾಸ್ 12ರ ಸ್ಪರ್ಧಿಗಳಾದ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ. ಇದರ ನಡುವೆ ನಟಿ ಕಾವ್ಯಾ ಶೈವ ತಮ್ಮ ಉಡುಪುಗಳ ಬಗ್ಗೆ ಕೇಳುತ್ತಿದ್ದ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಲು ಹೊಸ ಹೆಜ್ಜೆಯಿಟ್ಟಿದ್ದಾರೆ. 'ಕಾವು ಸ್ಟೈಲ್ಸ್' ಹೆಸರಿನಲ್ಲಿ ಹೊಸ ಬಟ್ಟೆ ವ್ಯಾಪಾರವನ್ನು ಶುರು ಮಾಡುವ ಮೂಲಕ ಜವಳಿ ಉದ್ಯಮಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರು: ಬಿಗ್‌ಬಾಸ್ 12 (Bigg Boss 12) ಹವಾ ತಣ್ಣಗಾಗುತ್ತಾ ಬಂದು 13ನೇ ಸೀಸನ್ ಆರಂಭ ಆಗಿದ್ದರೂ, 12ರ ಕೆಲವು ಸ್ಪರ್ಧಿಗಳಿಗೆ ಇನ್ನೂ ಸಕತ್ ಡಿಮಾಂಡ್ ಇದ್ದೇ ಇದೆ. ಕೆಲವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಅಂಥವರಲ್ಲಿ ಒಬ್ಬರು ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟ ಮತ್ತು ಅವರ ಜೊತೆ ಸಕತ್ ಸೌಂಡ್ ಮಾಡಿದ್ದ ಕಾವ್ಯಾ ಶೈವ. ಇನ್ನು ಕಾವ್ಯಾ ಶೈವ ಎಂದಾಕ್ಷಣ ಕೇಳಿ ಬರುವ ಹೆಸರು ಬಿಗ್‌ಬಾಸ್ 12ರ ವಿಜೇತ ಗಿಲ್ಲಿ ನಟ. ಆದರೆ ಬಿಗ್‌ಬಾಸ್ ಮನೆಯಲ್ಲಿ ಇವರ ಜೋಡಿ ನೋಡಿ ಇಷ್ಟಪಟ್ಟವರು ಹಲವರು. ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದೇ ಅಂದುಕೊಂಡವರೂ ಹಲವರು. ಇವರಿಬ್ಬರ ಬಾಂಡಿಂಗ್ ಸಿಕ್ಕಾಪಟ್ಟೆ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಅದೆಷ್ಟರ ಮಟ್ಟಿಗೆ ಎಂದರೆ ಹಲವರು ಇವರಿಬ್ಬರ ಮದುವೆಯನ್ನೂ ಎಐ ಮೂಲಕ ಮಾಡಿಸಿ, ಮಗುವನ್ನೂ ಹುಟ್ಟಿಸಿಬಿಟ್ಟಿದ್ದಾರೆ. ಗಿಲ್ಲಿ ನಟ (Bigg Boss Gilli Nata) ಹೊರಕ್ಕೆ ಬಂದಾಗ ಕಾವ್ಯಾ ಶೈವ ಬಗ್ಗೆ ಕೇಳಿದ ಮಾತಿಗೆ, ನಾವಿಬ್ಬರೂ ಸ್ನೇಹಿತರು ಅಷ್ಟೇ. ಅಂಥದ್ದೇನೂ ಇಲ್ಲ ಎಂದಿದ್ದರು. ಆದರೆ ಅವರ ಕೆಲವು ಅಭಿಮಾನಿಗಳು ಮಾತ್ರ ಬಿಡುತ್ತಿಲ್ಲ. ಕಾವ್ಯಾ ಶೈವ ನಮಗೆ ಇಷ್ಟ ಆಗಿದ್ದಾಳೆ. ಇಬ್ಬರನ್ನೂ ಮದುವೆ ಮಾಡಿಸುತ್ತೇವೆ ಎನ್ನುತ್ತಿದ್ದಾರೆ.
ಆದರೂ ಇವರ ಮದುವೆಯ ಬಗ್ಗೆ ಸುದ್ದಿಗಳು ನಿಲ್ಲುತ್ತಲೇ ಇಲ್ಲ. ಅಷ್ಟೇ ಅಲ್ಲದೇ, ಇವರ ಮುಂದಿನ ಪ್ರಾಜೆಕ್ಟ್ ಯಾವುದು, ನೀವು ಯಾವ ಔಟ್ಫಿಟ್ ಹಾಕುತ್ತೀರಿ. ನೀವು ಮುಂದೆ ಸಿನಿಮಾ ಮಾಡ್ತೀರೋ ಅಥ್ವಾ ಸೀರಿಯಲ್ ಮಾಡ್ತೀರೋ ಇತ್ಯಾದಿಯಾಗಿ ಪ್ರಶ್ನೆ ಕೇಳುತ್ತಲೇ ಇದ್ದಾರೆ. ಅದಕ್ಕಾಗಿ ನಿಮ್ಮ ಈ ಎಲ್ಲಾ ಪ್ರಶ್ನೆಗೆ ಉತ್ತರಿಸುವೆ. ಆದರೆ ಸದ್ಯ ಒಂದೇ ಒಂದು ಪ್ರಶ್ನೆಗೆ ಉತ್ತರಿಸುವ ಎಂದಿರುವ ಕಾವ್ಯಾ ಶೈವ, ಆಯ್ಕೆ ಮಾಡಿಕೊಂಡಿದ್ದು, ಪದೇ ಪದೇ ಅಭಿಮಾನಿಗಳು ಅದರಲ್ಲಿಯೂ ಮಹಿಳಾ ಫ್ಯಾನ್ಸ್ ಕೇಳ್ತಿರೋ ಪ್ರಶ್ನೆ, ಅವರ ಡ್ರೆಸ್ ಅರ್ಥಾತ್ ಔಟ್ಫಿಟ್ ಕುರಿತು.
ಕಾವು ಸ್ಟೈಲ್ಸ್
ಈ ಪ್ರಶ್ನೆಗೆ ಉತ್ತರಿಸುವೆ ಎಂದ ನಟಿ, ಲಿಂಕ್ ಕಳುಹಿಸಿ, ಡ್ರೆಸ್ ಎಲ್ಲಿ ತಗೊಂಡ್ರಿ ಎಂತೆಲ್ಲಾ ಕೇಳ್ತಾ ಇದ್ದೀರಲ್ವಾ, ಅದಕ್ಕಾಗಿ ನಾನೇ ಏಕೆ ಒಂದು ಲಿಂಕ್ ಕ್ರಿಯೇಟ್ ಮಾಡಬಾರದು ಎನ್ನುವ ಕಾರಣಕ್ಕೆ ಮಾಡಿದ್ದೇನೆ ಎನ್ನುತ್ತಲೇ ನಟಿ, ಅದರ ಬಗ್ಗೆ ಶೀಘ್ರದಲ್ಲಿ ಶೇರ್ ಮಾಡುವೆ ಎಂದಿದ್ದಾರೆ. ಈ ಮೂಲಕ ನಟಿ ಜವಳಿ ಉದ್ಯಮಕ್ಕೆ ಕಾಲಿಟ್ಟಿದ್ದಾರೆ ನಟಿ, ಕಾವು ಸ್ಟೈಲ್ಸ್ ಎನ್ನುವ ಹೆಸರಿನಲ್ಲಿ ಬಟ್ಟೆ ವ್ಯಾಪಾರ ಶುರು ಮಾಡಿಕೊಂಡಿರುವುದು ಅವರ ಹೊಸ ವಿಡಿಯೋದಿಂದ ತಿಳಿದುಬರುತ್ತಿದೆ. ಇದಕ್ಕೆ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ನಟಿಯ ಕುರಿತು
ಇನ್ನು ನಟಿ, ಕಾವ್ಯ ಶೈವ ಕುರಿತು ಹೇಳುವುದಾದರೆ, ಇವರು, ಸೀರಿಯಲ್ ತಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಸುಮನಾ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಮೂಲತಃ ಕೆ.ಆರ್.ಪೇಟೆಯವರಾದ ಕಾವ್ಯ ಶೈವ, ಮೈಸೂರಿನಲ್ಲಿ ತಮ್ಮ ಶಿಕ್ಷಣ ಮುಗಿಸಿದ್ದಾರೆ. 'ಭೂಮಿ ತಾಯಾಣೆ' ಕಾವ್ಯ ನಟನೆಯ ಮೊದಲ ಸೀರಿಯಲ್. ಇದಾದ ಬಳಿಕ ಡಾನ್ಸ್ ಶೋನಲ್ಲಿಯೂ ಭಾಗವಹಿಸಿದರು. ನಟ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ಕೊತ್ತಲವಾಡಿ ಚಿತ್ರದಲ್ಲಿಯೂ ಮಿಂಚುವ ಮೂಲಕ ಬಿಗ್ಬಾಸ್ನಲ್ಲಿ ಕಾಣಿಸಿಕೊಂಡಿದ್ದಾರೆ ಕಾವ್ಯಾ.


