'ಅಮೃತಧಾರೆ' ಧಾರಾವಾಹಿಯ ಅಪರ್ಣಾ (ರಾಯಲ್ ಸ್ವಾತಿ), ಮಲ್ಲಿ (ರಾಧಾ ಭಗವತಿ) ಮತ್ತು ದಿಯಾ ಜೊತೆಯಾಗಿ ಹಾಸ್ಯಮಯ ರೀಲ್ಸ್ ಸೃಷ್ಟಿಸಿದ್ದಾರೆ. ರೀಲ್ಸ್‌ನಲ್ಲಿ ಹಾಡಿನ ಧ್ವನಿ ಬಗ್ಗೆ ಕಿತ್ತಾಡುವ ನಟನೆ ಮಾಡಿದ್ದಾರೆ. ಸ್ವಾತಿ ಮತ್ತು ಅನಿಲ್ ದಾಂಪತ್ಯದಲ್ಲಿ ಪ್ರೀತಿ, ಕಾಲೆಳೆಯುವ ಸ್ವಭಾವ ಇದೆಯಂತೆ. ರಾಧಾ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದಾರೆ.
ಸೀರಿಯಲ್ ನಟಿಯರು ಸೀರಿಯಲ್ನಲ್ಲಿ ಎಷ್ಟೇ ಬಿಜಿಯಾಗಿದ್ದರೂ, ಸಮಯ ಸಿಕ್ಕಾಗಲೆಲ್ಲಾ ರೀಲ್ಸ್ ಮಾಡುತ್ತಾ ಕಾಲ ಕಳೆಯುತ್ತಾರೆ. ಮೊದಲೇ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿರುವ ಕಾರಣ, ಸೋಷಿಯಲ್ ಮೀಡಿಯಾಗಳಲ್ಲಿಯೂ ಫಾಲೋವರ್ಸ್ ಹೆಚ್ಚಾಗುತ್ತಾರೆ. ಆದ್ದರಿಂದ ರೀಲ್ಸ್ ಮೂಲಕವೂ ಸಾಕಷ್ಟು ಗಳಿಕೆ ಮಾಡುತ್ತಾರೆ ಚಿತ್ರ ತಾರೆಯರು. ಅದರಂತೆಯೇ ಇದೀಗ ಅಮೃತಧಾರೆ ಸೀರಿಯಲ್ನ ಅಪರ್ಣಾ, ಮಲ್ಲಿ ಮತ್ತು ಜೈದೇವನ ಪ್ರೇಯಸಿ ದಿಯಾ ರೀಲ್ಸ್ ಮಾಡಿದ್ದಾರೆ. ಡಬ್ಸ್ಮ್ಯಾಷ್ ಮಾಡಿರುವ ಇವರು, ರೀಲ್ಸ್ ಮಾಡುತ್ತಲೇ ಕಿತ್ತಾಡಿಕೊಂಡಿದ್ದಾರೆ. ಅಷ್ಟಕ್ಕೂ ಇವರೇನೂ ರಿಯಲ್ ಆಗಿ ಕಿತ್ತಾಡಿಕೊಂಡದ್ದಲ್ಲ, ಬದಲಿಗೆ ಆ ರೀಲ್ಸ್‌ನಲ್ಲಿ ಹಾಗಿದೆ ಅಷ್ಟೇ.
ಅಂದಹಾಗೆ ಅಪರ್ಣಾ ಪಾತ್ರಧಾರಿಯ ಹೆಸರು ರಾಯಲ್ ಸ್ವಾತಿ. ಇವರ ರಿಯಲ್ ಪತಿಯ ಹೆಸರು ಅನಿಲ್. ಇವರದ್ದು ಲವ್ ಮ್ಯಾರೇಜ್. ತಮ್ಮ ಪಕ್ಕದ ಮನೆಯಲ್ಲಿದ್ದ ಹುಡುಗ ಅನಿಲ್ ಅವರನ್ನೇ ಲವ್ ಮಾಡಿ ಮದುವೆಯಾಗಿದ್ದಾರೆ ಸ್ವಾತಿ. ಇವರಿಬ್ಬರ ಪ್ರೀತಿಗೆ ಸುಮಾರು 24-25 ವರ್ಷಗಳೇ ತುಂಬಿದೆಯಂತೆ. . ಸ್ವಾತಿಯವರನ್ನೇ ಮದುವೆಯಾಗಲು ಅನಿಲ್ ಒದೆ ಕೂಡ ತಿಂದಿದ್ದಾರಂತೆ, ಅಷ್ಟೇ ಅಲ್ಲ ಸ್ವಾತಿ ಮನೆಯಲ್ಲಿ ಫೈಟ್ ಕೂಡ ಮಾಡಿದ್ದಾರಂತೆ. ಈವಾಗಲೂ ಕಾಲೆಳೆಯುವ, ಕೀಟಲೆ ಮಾಡುವ ಕೆಲಸ ಮಾಡೋದು ಬಲು ಪ್ರೀತಿ ತಮಗೆ ಎಂದು ಸ್ವಾತಿ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅನಿಲ್ ಸಹ ನಟರಾಗಿದ್ದು, ಮೊದಲೇ ನಟನೆಯತ್ತ ಒಲವಿದ್ದ ಅನಿಲ್ ಅವರಿಗೆ ಈ ಕ್ಷೇತ್ರದಲ್ಲಿ ಕಾಲಿಡುವಂತೆ ಮಾಡಿದ್ದೆ ಪತ್ನಿ ಸ್ವಾತಿ. ಇಬ್ಬರು ಜೊತೆಯಾಗಿ ಮೊದಲ ಬಾರಿಗೆ ಸೂಪರ್ ಜೋಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅದರಲ್ಲಿ ವಿನ್ನರ್ ಆಗಿದ್ದರು. ಇದಾದ ನಂತರ ಅನಿಲ್ ಕೂಡ ನಟನೆಯಲ್ಲಿ ಬಿಜಿಯಾಗಿದ್ದಾರೆ.
ಹೊಸ ಅವತಾರದಲ್ಲಿ ಭೂಮಿಕಾ: ಸುಂಟರಗಾಳಿ ಸುಂಟರಗಾಳಿ ಹಾಡಿಗೆ ಸೊಂಟ ಬಳುಕಿಸಿದ ಅಮೃತಧಾರೆ ಚೆಲುವೆ
ಮಲ್ಲಿ ಪಾತ್ರದಲ್ಲಿ ರಾಧಾ ಭಗವತಿ ಮಿಂಚಿದ್ದಾರೆ. ರಾಮ್ಜಿ ನಿರ್ದೇಶನದ ‘ರಾಮಾಚಾರಿ’ ಧಾರಾವಾಹಿಯಲ್ಲಿ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಧಾ ಅವರು ಇದೀಗ ಮಲ್ಲಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಕಿರುತೆರೆಯಿಂದ ಕಳೆದ ವರ್ಷ ರಿಲೀಸ್ ಆದ ವಸಂತಕಾಲದ ಹೂವುಗಳು ಚಿತ್ರದಲ್ಲಿ ಇವರು ಅಭಿನಯಿಸುವ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟರು. ವಿಜಯಪುರದ ರಾಧಾ ಅವರು, ಈ ಚಿತ್ರದಲ್ಲಿ ಸುಮಾ ಹೆಸರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಧಾ ಅವರು ನಟಿ ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.
ಇವರೆಲ್ಲಾ ಸೇರಿ ಈಗ ರೀಲ್ಸ್ ಮಾಡಿದ್ದಾರೆ. ಮೊದಲಿಗೆ ಒಂದು ಹಾಡು ಹೇಳಿ ಎಂದಾಗ ಅಪರ್ಣಾ ಸಣ್ಣದಾಗಿ ಹಾಡಿ ಎಂದಾಗ ರಾಯಲ್ ಸ್ವಾತಿ ಸಣ್ಣ ದನಿಯಲ್ಲಿ ಹಾಡ್ತಾರೆ, ಸ್ವಲ್ಪ ಜೋರಾಗಿ ಹಾಡಿ ಎಂದಾಗಲೂ ಸಣ್ಣ ದನಿಯಲ್ಲಿಯೇ ಹಾಡ್ತಾರೆ. ಇನ್ನೂ ಸ್ವಲ್ಪ ಜೋರಾಗಿ ಎಂದಾಗ ಸಿಟ್ಟಿನಿಂದ ಕಿರುಚಾಡಿ ನನಗೆ ಜೋರಾಗಿ ಹೇಳಲು ಬರಲ್ಲ ಎನ್ನುತ್ತಾರೆ. ಅಲ್ಲಿಂದ ಅವರಿಬ್ಬರೂ ಕಾಲು ಕೀಳುತ್ತಾರೆ. ಇವರ ಈ ವಿಡಿಯೋಗೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗಿದೆ.
ಮಾನಸಿಕ ಸ್ಥಿಮಿತ ಕಳಕೊಂಡಿರೋ ಅಮೃತಧಾರೆ ಭಾಗ್ಯಮ್ಮ, ಮಗಳೊಂದಿಗೆ ಡ್ರೈವಿಂಗ್: ಬೇಡಮ್ಮಾ ಅಂತಿರೋ ಫ್ಯಾನ್ಸ್!
