ಜೀ ಕನ್ನಡದ 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕಿ ಭೂಮಿಕಾ ಮತ್ತು ನಾಯಕ ಗೌತಮ್ ದಿವಾನ್ ಜೋಡಿ ಪ್ರೇಕ್ಷಕರ ಮನಗೆದ್ದಿದೆ. ಅತ್ತೆ-ಸೊಸೆ ಜಗಳದ ಜೊತೆಗೆ ಪ್ರೀತಿಯ ದೃಶ್ಯಗಳು ಮನರಂಜನೆ ಒದಗಿಸುತ್ತಿವೆ. ಭೂಮಿಕಾ ಅಲಿಯಾಸ್ ಛಾಯಾ ಸಿಂಗ್, ಮೃತ ನೃತ್ಯ ನಿರ್ದೇಶಕ ಶಿವಶಂಕರ್ ಜೊತೆಗಿನ ಹಳೆಯ ನೃತ್ಯದ ವಿಡಿಯೋ ವೈರಲ್ ಆಗಿದೆ.
ಸದ್ಯ ಟಾಪ್-1 ಸೀರಿಯಲ್ ಎನ್ನಿಸಿಕೊಂಡಿರುವುದು ಜೀ ಕನ್ನಡದ ಅಮೃತಧಾರೆ. ಮಧ್ಯವಸ್ಕರು ಇಷ್ಟವಿಲ್ಲದ ಮದುವೆಯಾಗಿ ಕೊನೆಗೆ ಹೇಗೆ ಲವ್ನಲ್ಲಿ ಬಿದ್ದಿದ್ದಾರೆ, ಒಬ್ಬರನ್ನೊಬ್ಬರು ಬಿಟ್ಟಿರಲಾದಷ್ಟು ಪ್ರೀತಿಸುತ್ತಿದ್ದಾರೆ ಎನ್ನುವ ಕಥಾ ಹಂದರವನ್ನು ಹೊಂದಿರುವ ಈ ಸೀರಿಯಲ್, ಅತ್ತೆಯನ್ನು ಮಣಿಸುವ ಸೊಸೆಯಿಂದಾಗಿ ಮತ್ತಷ್ಟು ಜನರಿಗೆ ಪ್ರಿಯವಾಗುತ್ತಿದೆ. ಅಳುಮುಂಜಿ ನಾಯಕಿ, ಅಗತ್ಯಕ್ಕಿಂತ ಹೆಚ್ಚಿನ ಮುಗ್ಧತೆ ಹೊತ್ತು ಸದಾ ಗಂಡನ ಮನೆಯವರು, ಅತ್ತೆ... ಹೀಗೆ ಎಲ್ಲರಿಂದಲೂ ನೋವು ಪಡುತ್ತಿದ್ದರೂ ಒಳಗೊಳಗೇ ಅಳು ಸಹಿಸಿಕೊಳ್ಳುವ ಕ್ಯಾರೆಕ್ಟರ್ಗಳನ್ನು ನೋಡಿ ನೋಡಿ ಬೇಸತ್ತ ಸೀರಿಯಲ್ ಪ್ರೇಮಿಗಳಿಗೆ ಅಮೃತಧಾರೆ ವಿಭಿನ್ನ ರೀತಿಯಲ್ಲಿ ರಂಜಿಸುತ್ತಿದೆ. ಇಲ್ಲಿ ನಾಯಕಿ ಭೂಮಿಕಾ ಮತ್ತು ನಾಯಕ ಗೌತಮ್ ದಿವಾನ್ ಜೋಡಿಯ ಪ್ರೀತಿಯ ಧಾರೆಯ ದೃಶ್ಯಗಳನ್ನು ವೀಕ್ಷಕರು ಸವಿಯುತ್ತಿದ್ದಾರೆ. ಅತ್ತೆ ಮತ್ತು ಸೊಸೆ ಇಬ್ಬರೂ ರಂಗೋಲಿ ಕೆಳಗೆ, ಚಾಪೆಯ ಕೆಳಗೆ ನುಸುಳುತ್ತಾ ಒಂದೊಂದು ಸನ್ನಿವೇಶಗಳಲ್ಲಿ ಒಂದೊಂದು ರೀತಿಯ ಬದಲಾವಣೆ ಆಗುತ್ತಿರುವುದೂ ವೀಕ್ಷಕರಿಗೆ ಹಿಡಿಸುತ್ತಿದೆ.
ಅಷ್ಟಕ್ಕೂ ಮೊದಲೇ ಹೇಳಿದಂತೆ ಇಲ್ಲಿ ಹೈಲೈಟ್ ಆಗಿರುವುದೇ ಡುಮ್ಮಾ ಸರ್ ಗೌತಮ್ ಮತ್ತು ಭೂಮಿಕಾ ಕ್ಯಾರೆಕ್ಟರ್. ಗೌತಮ್ ದಿವಾನ್ ಪಾತ್ರದಲ್ಲಿ ರಾಜೇಶ್ ನಟರಂಗ ಅವರ ಆ್ಯಕ್ಟಿಂಗ್ ಅಂತೂ ಹೇಳುವುದೇ ಬೇಡ, ಕಣ್ಣಿನಲ್ಲಿಯೇ ಎಲ್ಲವನ್ನೂ ತೋರಿಸುವ ನಟನೆ ಅವರದ್ದು. ಅವರಿಗೆ ಪೈಪೋಟಿ ಒಡ್ಡುವಂತೆ ನಟನೆ ಮಾಡುತ್ತಿದ್ದಾರೆ ಭೂಮಿಕಾ ಅರ್ಥಾತ್ ಛಾಯಾ ಸಿಂಗ್. ಎಷ್ಟೋ ಮಂದಿ ರಿಯಲ್ ಲೈಫ್ನಲ್ಲಿಯೂ ಇವರು ಗಂಡ-ಹೆಂಡತಿ ಅಂದುಕೊಂಡದ್ದೂ ಇದೆ. ಅಷ್ಟು ಸೊಗಸಾಗಿ, ಯಾವುದೇ ಅಶ್ಲೀಲತೆಗೆ ಅವಕಾಶ ಇಲ್ಲದಂತೆ, ಎಲ್ಲೆಯನ್ನು ಮೀರಿದ ಪ್ರೀತಿಯ ಧಾರೆ ಹರಿಸುತ್ತಿರುವ ಅಮೃತಧಾರೆಯನ್ನು ವೀಕ್ಷಕರು ಸವಿಯುತ್ತಿರುವ ನಡುವೆಯೇ, ಭೂಮಿಕಾ ಈಗ ಇನ್ನೊಬ್ಬರ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ!
ಗಂಡನ ಜೊತೆ ವರ್ಷದಲ್ಲಿ 10 ದಿನ ಇರೋದೇ ಕಷ್ಟವಾಗಿದೆ: ಸಂಸಾರದ ಸುಖ-ದುಃಖ ಬಿಚ್ಚಿಟ್ಟ ನಟಿ ಛಾಯಾ ಸಿಂಗ್
ಸೀರಿಯಲ್ಗಳಲ್ಲಿ ಸಾಮಾನ್ಯವಾಗಿ ಪಾತ್ರಗಳು ಚೇಂಜ್ ಆಗುವುದು ಹೊಸ ವಿಷಯವೇನಲ್ಲ. ಹಾಗಿದ್ದರೆ ಈಗ ರಾಜೇಶ್ ನಟರಂಗ ಸ್ಥಾನಕ್ಕೆ ಬೇರೆಯವರು ಬಂದ್ರಾ ಎನ್ನುವ ಆತಂಕವನ್ನೂ ಕೆಲವು ಕಮೆಂಟಿಗರು ವ್ಯಕ್ತಪಡಿಸಿದ್ದಾರೆ. ಇವರ ಹೆಸರು ಶಿವಶಂಕರ್. ಸುಂಟರಗಾಳಿ, ಸುಂಟರಗಾಳಿ ಹಾಡಿನ ಹಿನ್ನೆಲೆಯಲ್ಲಿ ಛಾಯಾ ಅವರು ಸ್ಟೆಪ್ ಹಾಕಿದ್ದಾರೆ. ಅವರ ಸ್ಟೆಪ್ ಅನ್ನು ಮೀರಿಸುವಂತೆ ಶಿವಶಂಕರ್ ಅವರು ಸೊಂಟ ಬಳುಕಿಸಿದ್ದಾರೆ. ಕೊನೆಗೆ ಛಾಯಾ ಅವರು ಶಿವಕುಮಾರ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದನ್ನು ನೋಡಬಹುದು.
ಅಸಲಿಗೆ ಶಿವಶಂಕರ್ ಅವರು ಖ್ಯಾತ ಕೊರಿಯೋಗ್ರಾಫರ್ ಆಗಿದ್ದವರು. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತವಾಗಿರುವ ಶಿವಶಂಕರ್ ಅವರು ಕನ್ನಡ, ತಮಿಳು, ತೆಲಗು,ಮಲಯಾಳಂ ಸೇರಿದಂತೆ ಹತ್ತಕ್ಕೂ ಅಧಿಕ ಭಾಷೆಗಳ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಇದೀಗ ಛಾಯಾ ಸಿಂಗ್ ಅವರ ಜೊತೆಗೆ ಸೊಂಟ ಬಳಕಿಸಿರುವ ಪರಿ ನೋಡಿದರೆ, ಅವರ ನೃತ್ಯ ಸಂಯೋಜನೆಯನ್ನು ತಿಳಿಯಬಹುದಾಗಿದೆ. ಛಾಯಾ ಅವರಿಗೆ ಇವರೇ ಈ ಸ್ಟೆಪ್ ಹೇಳಿಕೊಟ್ಟಿರುವುದು. ಅಸಲಿಗೆ ಇದು ಹಳೆಯ ವಿಡಿಯೋ. 2021ರಂದು ಶಿವಶಂಕರ್ ಅವರು ನಿಧನರಾಗಿದ್ದಾರೆ.
ಆ್ಯಕ್ಟಿಂಗ್ ಬರಲ್ಲ ಅಂತ ರಿಜೆಕ್ಟ್ ಮಾಡಿಬಿಟ್ರು, ನಾನ್ ಬಿಡ್ತೀನಾ? ಆ ದಿನಗಳ ನೆನಪಿಸಿಕೊಂಡ 'ಅಮೃತಧಾರೆ' ಭೂಮಿಕಾ!
