Asianet Suvarna News Asianet Suvarna News

ಮಣ್ಣಲ್ಲಿ ಹುಟ್ಟಿ ಮಣ್ಣಾಗಿ ಹೋಗುತ್ತೇವೆ; ಆಕಾಶ್ ಮಾತಿಗೆ ಪುಷ್ಪಾ ಅಣ್ಣ ಫಿದಾ ಆಗ್ಬಿಟ್ರಾ ನೋಡಿ!

ಆಕಾಶ್ ಪುಷ್ಪಾಗೆ ಕೈ ತುತ್ತು ತಿನ್ನಿಸುತ್ತಾನೆ. ಪುಷ್ಪಾ ಕೂಡ ಆಕಾಶ್‌ಗೆ ತಿನ್ನಿಸುತ್ತಾಳೆ. ಈ ಮೂಲಕ ಆಕಾಶ್-ಪುಷ್ಪಾ ತಾವಿಬ್ಬರೂ ಚೆನ್ನಾಗಿದ್ದೀವಿ, ಸಂಸಾರ ಸರಿಯಾಗಿದೆ ಎಂಬ ಸಂದೇಶವನ್ನು ಮನೆಯವರಿಗೆ ಕೊಟ್ಟಿದ್ದಾರೆ.

Akash and pushpa acts like everything is fine in Brundavana Serial srb
Author
First Published Dec 22, 2023, 4:55 PM IST

ಆಕಾಶ್ ಪುಷ್ಪಾಳ ಮನೆಯಲ್ಲಿ ಇದ್ದಾನೆ. ಪುಷ್ಪಾ ಅಣ್ಣ ಅಳಿಯ ಆಕಾಶ್‌ನನ್ನು ಊಟಕ್ಕೆ ಕರೆಯುತ್ತಾನೆ. ಹಳ್ಳಿಯ ಆ ಮನೆಯಲ್ಲಿ ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡಲು ಟೇಬಲ್ ಇಲ್ಲ. ಸಂಕೋಚದಿಂದ ಟೇಬಲ್ ಇಲ್ಲ ಅಂದ ಪುಷ್ಪಾಳ ಅಣ್ಣನಿಗೆ ಅಯ್ಯೋ, ಅದಕ್ಕೇನಂತೆ? ಎಲ್ರೂ ಒಟ್ಟಿಗೇ ನೆಲದ ಮೇಲೆ ಕುಳಿತು ಊಟ ಮಾಡೋಣ. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಅದೇನೇ ಸಾಧಿಸಿದರೂ ಮಣ್ಣಲ್ಲಿಯೇ ಹುಟ್ಟಿ ಮಣ್ಣಲ್ಲಿ ಮಣ್ಣಾಗಿ ಹೋಗುತ್ತೇವೆ' ಎನ್ನುತ್ತಾನೆ ಆಕಾಶ್. ಆತನ ಮಾತು ಕೇಳಿ ಸ್ವತಃ ಪುಷ್ಪಾ ಅಚ್ಚರಿಗೊಳ್ಳುತ್ತಾಳೆ. ಆದರೆ, ಆಕಾಶ್ ನಿಜ ಎನ್ನುವಂತೆ ನಾಟಕವಾಡುತ್ತಾನೆ. ಮನೆಯವರೆಲ್ಲರೂ ಆಕಾಶ್ ನಾಟಕವನ್ನು ನಂಬುತ್ತಾರೆ. 

ಊಟಕ್ಕೆ ಆಕಾಶ್ ಜತೆ ಪುಷ್ಪಾ ಅಣ್ಣ ಕುಳಿತಿರುತ್ತಾನೆ. ಆದರೆ ಆಕಾಶ್ ಜತೆ ಪುಷ್ಪಾ ಕುಳಿತಿಲ್ಲ. ಅದನ್ನು ನೋಡಿದ ಮಲ್ಲಿ ಪುಷ್ಪಾಗೆ 'ನೀನೂ ಆಕಾಶ್ ಜತೆ ಹೋಗಿ ಕುಳಿತುಕೋ' ಎನ್ನಲು ಒಪ್ಪದ ಪುಷ್ಪಾ ನೋಡಿ ಸ್ವತಃ ಆಕಾಶ್ 'ಬನ್ನಿ ಪರ್ವಾಗಿಲ್ಲ' ಎಂದು ಕರೆಯುತ್ತಾನೆ. ಪುಷ್ಪಾ ಆಶ್ಚರ್ಯ ಹಾಗೂ ಖುಷಿಯಿಂದ ಹೋಗಿ ಕುಳಿತುಕೊಳ್ಳುತ್ತಾಳೆ. ಅಷ್ಟಕ್ಕೇ ಸುಮ್ಮನಾಗದ ಮಲ್ಲಿ ಪಾಪು ಮೀನು ಬಳಿ 'ನೀನು ಆಕಾಶ್ ಮಾಮನಿಗೆ ಅತ್ತೆಗೂ ಮತ್ತು ಅತ್ತೆಯ ಬಾಳಿ ಆಕಾಶ್ ಮಾಮನಿಗೂ ತಿನ್ನಿಸಲು ಹೇಳು' ಎಂದು ಹೇಳುವಳು. ಅವರಿಬ್ಬರೂ ಮದುವೆಯಾದ ಹೊಸ ಜೋಡಿ ಎಂದೂ ಹೇಳುತ್ತಾಳೆ. 

ಮನೆಯಿಂದ ಹೊರಗೆ ಇದ್ದಾಗ್ಲೇ ನಾವು ಮಾಡಿರೋ ತಪ್ಪುಗಳು ಅರ್ಥವಾಗುವುದು; ಕುಸುಮಾ ಯಾಕೆ ಹೀಗೆ ಹೇಳಿದ್ದು!?

ಮೀನು ಹೇಳಲು ತಕ್ಷಣವೇ ಒಪ್ಪುವ ಆಕಾಶ್ ಪುಷ್ಪಾಗೆ ಕೈ ತುತ್ತು ತಿನ್ನಿಸುತ್ತಾನೆ. ಪುಷ್ಪಾ ಕೂಡ ಆಕಾಶ್‌ಗೆ ತಿನ್ನಿಸುತ್ತಾಳೆ. ಈ ಮೂಲಕ ಆಕಾಶ್-ಪುಷ್ಪಾ ತಾವಿಬ್ಬರೂ ಚೆನ್ನಾಗಿದ್ದೀವಿ, ಸಂಸಾರ ಸರಿಯಾಗಿದೆ ಎಂಬ ಸಂದೇಶವನ್ನು ಮನೆಯವರಿಗೆ ಕೊಟ್ಟಿದ್ದಾರೆ ಎನ್ನಬಹುದು. ಆದರೆ ವೈಯಕ್ತಿಕವಾಗಿ ಅವರಿಬ್ಬರಿಗೂ ತಾವು ನಾಟಕ ಮಾಡುತ್ತಿದ್ದೇವೆ ಎಂಬುದು ಗೊತ್ತು. ವೀಕ್ಷಕರಿಗೂ ಗೊತ್ತು. 

ಬಿಗ್ ಬಾಸ್ ಏನೋ ಒಂದಕ್ಕೆ ಭಾರೀ ಜಟಾಪಟಿ; ಏನಾಗ್ತಿದೆ ಅಲ್ಲಿ ಕಿತಾಪತಿ!

ಒಟ್ಟಿನಲ್ಲಿ, ಬೃಂದಾವನ ಸೀರಿಯಲ್‌ನಲ್ಲಿ ಪುಷ್ಪಾ-ಆಕಾಶ್ ಮದುವೆಯಾದ ಬಳಿಕ ಮೊದಲನೇ ಬಾರಿ ಪುಷ್ಪಾ ತವರುಮನೆಗೆ ಹೋಗಿದ್ದಾರೆ. ಅಲ್ಲಿ ಎಲ್ಲವೂ ಸರಿಯಾಗಿದೆ, ತಾವಿಬ್ಬರೂ ಖುಷಿಖುಷಿಯಾಗಿದ್ದೀವಿ ಎಂಬ ನಾಟಕ ಮಾಡುತ್ತಾರೆ. ಪುಷ್ಪಾ ಮನೆಯವರೂ ಕೂಡ ಅದನ್ನು ನಂಬುತ್ತಾರೆ. ಆಕಾಶ್ ಯಾಕೆ ಅಷ್ಟು ಚೆನ್ನಾಗಿ ನಾಟಕ ಆಡುತ್ತಾನೆ? ಆತನ ಮನಸ್ಸಿನಲ್ಲಿ ಏನಿದೆ? ಎಲ್ಲದಕ್ಕೂ ಸಂಚಿಕೆ ಉತ್ತರ ನೀಡಲಿದೆ. ಅಂದಹಾಗೆ, ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ರಾತ್ರಿ 8.00ಕ್ಕೆ ಬೃಂದಾವನ ಸೀರಿಯಲ್ ಪ್ರಸಾರವಾಗಲಿದೆ. 

Follow Us:
Download App:
  • android
  • ios