ಭಾಗ್ಯಾಳಿಗೆ ಭಾರೀ ಯೋಚನೆ ಆಗುತ್ತಿದೆ. ಈಗ ಸಿಕ್ಕಿರೋ ದುಡ್ಡಲ್ಲಿ ಹೇಗೋ ಎರಡು ತಿಂಗಳು ಮ್ಯಾನೇಜ್ ಮಾಡಬಹುದು. ಬಳಿಕ ಏನು ಮಾಡುವುದು ಗೊತ್ತಿಲ್ಲ.
ಭಾಗ್ಯಾ ತನ್ನ ಹಾಗೂ ಮಕ್ಕಳ ಒಡವೆ ಅಡವಿಟ್ಟು ಮನೆ ಖರ್ಚಿಗೆ ಹಣ ಹೊಂದಿಸಲು ಯೋಚಿಸಿ ಒಡವೆಗಳನ್ನೆಲ್ಲ ಗಂಟು ಕಟ್ಟಿಕೊಳ್ಳುತ್ತಿದ್ದಾಳೆ. ಅದನ್ನು ತೆಗೆದುಕೊಂಡು ಹೋಗಿ ಅಂಗಡಿಗೆ ಕೊಟ್ಟು ಹಣ ತೆಗೆದುಕೊಳ್ಳುತ್ತಾಳೆ. ಅದನ್ನು ಎಣಿಸಿಕೊಂಡು ಜೋಪಾನವಾಗಿ ಇಟ್ಟುಕೊಳ್ಳುತ್ತಾಳೆ. ಆದರೆ, ಭಾಗ್ಯಾ ಕತೆ ಮುಂದೇನಾಯ್ತು? ಸಂಚಿಕೆ ನೋಡಿದರೆ ಉತ್ತರ ಸಿಗಬೇಕಷ್ಟೇ. ಇತ್ತ ಭಾಗ್ಯಾಳ ತಾಯಿಗೆ ಭಾರೀ ಆತಂಕ ಶುರುವಾಗಿದೆ. ಅವರು ಕುಸುಮಾ ಮುಂದೆ ಅಳಲು ಕುಸುಮಾ ಪ್ರೀತಿಯಿಂದ ಬೀಗರಿಗೆ ಗದರುತ್ತಾಳೆ. ಕುಸುಮಾ ಭರವಸೆ ನೋಡಿ ಭಾಗ್ಯಾ ತಾಯಿಯ ಆತಂಕ ಮರೆಯಾಯ್ತಾ? ಉತ್ತರ ಗೊತ್ತಿಲ್ಲ, ಕಾದು ನೋಡಬೇಕು.
ಇತ್ತ ಕುಸುಮಾ ಮೊಬೈಲಿಗೆ ಕಾಲ್ ಬರುತ್ತಿದೆ. ಪೂಜೆಗೆ ಬಂದಿದ್ದ ಮೂರನೆ ಮನೆ ನಾಗರತ್ನ ಕಾಲ್ ಮಾಡಿ 'ನಾನು ಪೂಜೆಗೆ ಬಂದು ವಾಪಸ್ ಹೋಗುವಾಗ ಪೂಜೆಗೆ ಇಟ್ಟಿದ್ದ ಸರವನ್ನು ವಾಪಸ್ ತೆಗೆದುಕೊಂಡು ಹೋಗೋಕೆ ಮರೆತ್ಬಿಟ್ಟೆ. ನಂಗೆ ತುಂಬಾ ಗಾಬರಿ ಆಗ್ತಿದೆ' ಎನ್ನುತ್ತಾಳೆ. ಅದನ್ನು ಕೇಳಿದ ಕುಸುಮಾ ಕೂಲ್ ಆಗಿ 'ಅಯ್ಯೋ ಅದಕ್ಕೆ ಯಾಕೆ ಅಷ್ಟೊಂದು ಗಾಬ್ರಿ ಆಗಿದೀರ? ಅದನ್ನ ನನ್ನ ಸೊಸೆ ಭಾಗ್ಯಾ ಎಲ್ಲೋ ಗಂಟು ಕಟ್ಟಿ ಜೋಪಾನವಾಗಿ ಇಟ್ಟಿರ್ತಾಳೆ. ಬಂದು ತಗೊಂಡೋಗಿ' ಎನ್ನುತ್ತಾಳೆ. ನಾಗರತ್ನಾಗೆ ಸ್ವಲ್ಪ ಸಮಾಧಾನವಾಗಿದೆ. ಮುಂದೇನು ಎಂಬುದನ್ನು ಕಾದು ನೋಡಬೇಕು.
ಕರೀನಾ ಕಪೂರ್ ಡಯೆಟ್ ಪ್ಲಾನ್ ನೋಡಿದ್ರೆ ತಲೆ ಸುತ್ತಿ ಬೀಳ್ತೀರಾ; ಯಾಕೆ ಬೇಕು ಉಸಾಬರಿ!
ಇತ್ತ ಭಾಗ್ಯಾಳಿಗೆ ಭಾರೀ ಯೋಚನೆ ಆಗುತ್ತಿದೆ. ಈಗ ಸಿಕ್ಕಿರೋ ದುಡ್ಡಲ್ಲಿ ಹೇಗೋ ಎರಡು ತಿಂಗಳು ಮ್ಯಾನೇಜ್ ಮಾಡಬಹುದು. ಬಳಿಕ ಏನು ಮಾಡುವುದು ಗೊತ್ತಿಲ್ಲ. ಈಗ ಅಡವಿಟ್ಟಿರುವ ಚಿನ್ನವನ್ನು ಬಿಡಿಸಿಕೊಳ್ಳುವುದು ಹೇಗೆ? ಹಣ ಎಲ್ಲಿಂದ ಹೊಂದಿಸುವುದು? ಎಲ್ಲವನ್ನೂ ಯೋಚಿಸುವ ಭಾಗ್ಯಾಗೆ ಸಮಸ್ಯೆ ಪರಿಹರಿಸುವ ದಾರಿಯೇ ಕಾಣುವುದಿಲ್ಲ. ಭಾಗ್ಯಾ ತೀವ್ರ ಯೋಚನೆಗೆ ಬಿದ್ದಿದ್ದಾಳೆ. ಕುಸುಮಾಗೆ ಯಾವುದೇ ಭಯವಿಲ್ಲ, ತನ್ನ ಗಂಡನ ಪೆನ್ಶನ್ ಹಣದಿಂದ ಮನೆಯನ್ನು ನಿಭಾಯಿಸಬಹುದು ಎಂಬ ಬಗ್ಗೆ ಆಕೆಗೆ ಭರವಸೆಯಿದೆ.
ಫ್ಯಾನ್ ಕ್ಷಮೆ ಕೇಳಿ ಎಂದು ಬಾಲಿವುಡ್ ನಟ ಗೋವಿಂದಾಗೆ ಸುಪ್ರಿಂ ಕೋರ್ಟ್ ಆದೇಶ!
'ಕೆಲವೊಮ್ಮೆ ಮನೆಯಿಂದ ಹೊರಗೆ ಇದ್ದಾಗಲೇ ನಾವು ಮಾಡಿರುವ ತಪ್ಪುಗಳು ಅರ್ಥವಾಗುವುದು. ಮನೆಯವರ ಬೆಲೆಯೂ ಅರ್ಥವಾಗುವುದು. ಆಗೋದೆಲ್ಲಾ ಒಳ್ಳೆಯದಕ್ಕೇ ಎಂದು ಯೋಚಿಸಬೇಕು' ಎಂದು ಕುಸುಮಾ ಭಾಗ್ಯಾ ತಾಯಿಗೆ ಹೇಳುವ ಮೂಲಕ ಒಂದು ಸಂದೇಶ ನೀಡಿದ್ದಾರೆ ಎನ್ನಬಹುದು. ಮನೆಮಂದಿ ಮನೆಮಂದಿ ನಡುನೀರಲ್ಲಿ ಮುಳುಗದಂತೆ ಕಾಪಾಡುವ ಹೊಣೆ ಹೊತ್ತ ಭಾಗ್ಯಾ, ಅದನ್ನು ನಿಭಾಯಿಸ್ತಾಳಾ ಎಂಬುದನ್ನು ಕಾದು ನೋಡಬೇಕಿದೆ. ಅಂದಹಾಗೆ, ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ಸಂಜೆ 7.00ಕ್ಕೆ ಭಾಗ್ಯಲಕ್ಷ್ಮೀ ಸೀರಿಯಲ್ ಪ್ರಸಾರವಾಗುತ್ತಿದೆ.
