Asianet Suvarna News Asianet Suvarna News

ಹೇಳಿ ಕೇಳಿ ಇವಳು ಭೂಮಿಕಾ, ಸುಮ್ನೆ ಬಿಡ್ತಾಳಾ? ಅತ್ಯಮ್ಮಾ ನಿನ್​ ಟೈಂ ಶುರುವಾಯ್ತಮ್ಮೋ ಹುಷಾರ್​ ಅಂದ ಫ್ಯಾನ್ಸ್​

ಭೂಮಿಕಾಗೆ ಅತ್ತೆಯ ಸತ್ಯ ಗೊತ್ತಾಗಲಿದೆ. ಆಕೆಯ ಮುಂದಿನ ನಿರ್ಧಾರವೇನು? ಅಭಿಮಾನಿಗಳಿಂದ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. 
 

After knowing the truth what is the decision of Bhoomika in Amrutadhare fans reacts suc
Author
First Published Apr 11, 2024, 2:34 PM IST

ಪತ್ನಿ ಭೂಮಿಕಾಳಿಗಾಗಿ  ಗೌತಮ್​, ಉರುಳು ಸೇವೆ ಮಾಡಿದ್ದಾನೆ, ನೆಲದ ಮೇಲೆ ಊಟ ಮಾಡಿದ್ದಾನೆ. ಭೂಮಿಕಾ ಇದೆಲ್ಲಾ ಏನು ಎಂದು ಕೇಳಿದಾಗ, ಮನೆಯವರಿಗಾಗಿ ಎಂದು ಗೌತಮ್​ ಹೇಳಿದ್ದಾನೆ.  ಪತಿಯ ಈ ಸ್ಥಿತಿ ಕಂಡು ಭೂಮಿಕಾ ಕಣ್ಣೀರಾಗಿದ್ದಾಳೆ.  ಆದರೆ ಅವಳಿಗೆ ವಿಷಯವೇ ಗೊತ್ತಿಲ್ಲ. ಆದರೆ ಅಸಲಿ ವಿಷಯವೇ ಬೇರೆಯಾಗಿತ್ತು. ಗೌತಮ್​ ಮತ್ತು ಭೂಮಿಕಾ ಹತ್ತಿರವಾಗುತ್ತಿರುವ ವಿಷಯ ತಿಳಿಯುತ್ತಲೇ ಶಕುಂತಲಾ ದೇವಿ  ಜ್ಯೋತಿಷಿಯನ್ನು ಕರೆತಂದು ಆತನ ಬಾಯಲ್ಲಿ ಸುಳ್ಳು ಹೇಳಿಸಿದ್ದಾಳೆ. ಜ್ಯೋತಿಷಿಯೊಬ್ಬ ಮನೆಗೆ ಬಂದು ಗೌತಮ್​ ಮತ್ತು ಭೂಮಿಕಾ ಪತಿ-ಪತ್ನಿಯಂತೆ ದೈಹಿಕ ಸಂಪರ್ಕ ಹೊಂದಿದರೆ ಭೂಮಿಕಾ ಜೀವಕ್ಕೆ ಅಪಾಯವಿದೆ ಎಂದಿದ್ದಾನೆ. ಇದನ್ನು ಕೇಳಿ ಗೌತಮ್​ಗೆ ಶಾಕ್​ ಆಗಿದೆ. ಶಕುಂತಲಾ ದೇವಿ ಕೂಡ ಶಾಕ್​ ಆದಂತೆ ನಟಿಸಿದ್ದಾಳೆ.  ಗೌತಮ್​ ಅಂತೂ ಚಿಕ್ಕಮ್ಮನ ಮೇಲೆ ಅಭಿಮಾನ, ಪ್ರೀತಿಯನ್ನೇ ಇಟ್ಟವ. ಯಾವುದೇ ಕಾರಣಕ್ಕೂ ಆಕೆಯ ವಿರುದ್ಧ ಅನುಮಾನ ಬರಲು ಸಾಧ್ಯವೇ ಇಲ್ಲ.  ಈ ವಿಷಯವನ್ನು ಗೌತಮ್​ ಗೆಳೆಯ ಆನಂದ್​ಗೆ ಹೇಳಿದ್ದಾನೆ ಬಿಟ್ಟರೆ ಪತ್ನಿಗೆ ಹೇಳಲಿಲ್ಲ. ಆತನಿಗೆ ಈಗ ಭೂಮಿಕಾ ಬೇಕು. ಯಾವುದೇ ಕಾರಣಕ್ಕೂ ಭೂಮಿಕಾಳನ್ನು ಕಳೆದುಕೊಳ್ಳಲು ಇಷ್ಟವಿಲ್ಲ. 

ಇದೀಗ, ಭೂಮಿಕಾ ಅತ್ತೆ ಶಕುಂತಲಾದೇವಿಯ ಕುತಂತ್ರ ಭೂಮಿಗೆ ತಿಳಿದೆ. ಶಕುಂತಲಾ ದೇವಿ ಮಗಳ ಬಳಿ  ತಾನು ಮಾಡಿದ ಕುತಂತ್ರದ ವಿಷಯ ಹೇಳಿದ್ದನ್ನು ಮಲ್ಲಿ ಕೇಳಿಸಿಕೊಂಡಿದ್ದಳು. ಅದನ್ನೀಗ ಅವಳು ಭೂಮಿಕಾಗೆ ಹೇಳಿದ್ದಾಳೆ. ತನ್ನ ಅಮ್ಮನಿಗೆ ಹುಷಾರು ಇಲ್ಲ ಎಂದುಕೊಂಡು ಗೌತಮ್​ ಕಷ್ಟಪಡುತ್ತಿದ್ದಾನೆ ಎಂದು ಭೂಮಿಕಾ ಅಂದುಕೊಂಡಿದ್ದಳು. ಆದರೆ ಅಸಲಿಗೆ ಗೌತಮ್​ ಭೂಮಿಕಾ ಸಲುವಾಗಿ ಹೀಗೆ ಮಾಡುತ್ತಿದ್ದ, ಅದೂ ಜ್ಯೋತಿಷಿಯ ಸುಳ್ಳು ಮಾತನ್ನು ಕೇಳಿಕೊಂಡು. ಇದೀಗ ಸತ್ಯ ಗೊತ್ತಾಗುತ್ತಿದ್ದಂತೆಯೇ ಭೂಮಿಕಾ ಸಿಟ್ಟು ನೆತ್ತಿಗೇರಿದೆ. ಇನ್ನು ಶಕುಂತಲಾದೇವಿಯ ಕೌಂಟ್​ಡೌನ್​ ಶುರುವಾದ ಹಾಗೆ ಕಾಣಿಸುತ್ತಿದೆ. ಅತ್ತೆಯ ಸುಳ್ಳನ್ನು ಭೂಮಿಕಾ ಹೇಗೆ ನಿಭಾಯಿಸುತ್ತಾಳೆ, ಈ ಸತ್ಯವನ್ನು ಗೌತಮ್​ ಎದುರು ಹೇಳುವಂತಿಲ್ಲ ಆಕೆ, ಹೇಳಿದರೂ ಆತ ನಂಬಲಾರ... ಅಮ್ಮನ ಮೇಲೆ ಅಷ್ಟು ಪ್ರೀತಿ. ಇನ್ನು ಸತ್ಯ ಅರಿತ ಭೂಮಿಕಾಳ ಮುಂದಿನ ಹೆಜ್ಜೆಯೇನು ಎನ್ನುವುದು ಈಗಿರುವ ಕುತೂಹಲವಾಗಿತ್ತು.

ಸೀತಾರಾಮ ಸೀರಿಯಲ್​ ಅಜ್ಜಿ ಮನೆ ಹೇಗಿದೆ? ಶೂಟಿಂಗ್ ಸೆಟ್​ನ ಸಂಪೂರ್ಣ ಪರಿಚಯ ಮಾಡಿಸಿದ ಸೀತಾ...

ಆದರೂ ಜಾತಕವನ್ನು ಹಿಡಿದು ಅಮ್ಮನ ಬಳಿ ಹೋಗಿದ್ದಾಳೆ. ಮತ್ತೊಬ್ಬ ಜ್ಯೋತಿಷಿಯ ಬಳಿ ಜಾತಕ ತೋರಿಸಿದಾಗ ಇವರಿಬ್ಬರ ಜಾತಕ ಅದ್ಭುತವಾಗಿದೆ ಎಂದಿದ್ದಾರೆ ಜ್ಯೋತಿಷಿ. ಇನ್ನು ಹೇಳಿ ಕೇಳಿ ಭೂಮಿಕಾ ಈಕೆ. ಸುಮ್ಮನೆ ಇರ್ತಾಳಾ? ಇನ್ನು ಶುರು ಮಾಡ್ತಾಳೆ ತನ್ನ ಆಟ. ಅದೇನು ಎನ್ನುವುದು ಕುತೂಹಲವಷ್ಟೇ. ಇದರ ಪ್ರೊಮೋ ಬಿಡುಗಡೆಯಾಗ್ತಿದ್ದಂತೆಯೇ ಅಭಿಮಾನಿಗಳು ಥಹರೇವಾರಿ ಕಮೆಂಟ್ಸ್​ ಮಾಡಿದ್ದಾರೆ. ಅತ್ಯಮ್ಮಾ ಸೊಸೆ ಭೂಮಿಗೆ ಎಲ್ಲಾ ಗೊತ್ತಾಗಿದೆ, ಇನ್ನು ನಿನ್ನ ಕೌಂಟ್​ಡೌನ್​ ಶುರುವಾಯ್ತು ಎನ್ನುತ್ತಿದ್ದಾರೆ. 

ಮುಂದೆ ಏನಾಗಬಹುದು ಎಂದು ಇನ್ನಷ್ಟೇ ತಿಳಿಯಬೇಕಿದೆ. ಅತ್ತೆ ವಿರುದ್ಧ ಭೂಮಿಕಾ ಏನೆಲ್ಲಾ ಕ್ರಮ ತೆಗೆದುಕೊಳ್ಳಬಹುದು ಎನ್ನುವುದು ಈಗಿರುವ ಕುತೂಹಲ. ಗೌತಮ್​ಗೆ ವಿಷಯವನ್ನು ಅವಳು ತಿಳಿಸುವುದಿಲ್ಲ, ಏಕೆಂದರೆ ಅಮ್ಮನ ವಿರುದ್ಧದ ಮಾತು ಆತ ಕೇಳಲ್ಲ ಎನ್ನುವುದು ಭೂಮಿಗೆ ಗೊತ್ತು. ಆದರೆ ಆನಂದ್​ಗೆ ಚಿಕ್ಕಮ್ಮನ ತಂತ್ರ, ಕುತಂತ್ರ ಎಲ್ಲವೂ ತಿಳಿದಿದ್ದರಿಂದ ಭೂಮಿಕಾ ಅವನ ನೆರವು ಪಡೆಯಬಹುದೆ ಎಂದು ಕಾದು ನೋಡಬೇಕಿದೆ. 

ಬಿಗ್​ಬಾಸ್​ ಓಟಿಟಿ ಷೋ ಡೇಟ್​ ಫಿಕ್ಸ್​? ಖಾಸಗಿ ವಿಡಿಯೋ ಲೀಕ್​ ಬೆಡಗಿಗೆ ಸಿಕ್ಕೇಬಿಡ್ತು ಆಫರ್


Follow Us:
Download App:
  • android
  • ios