Asianet Suvarna News Asianet Suvarna News

ಬಿಗ್​ಬಾಸ್​ ಓಟಿಟಿ ಷೋ ಡೇಟ್​ ಫಿಕ್ಸ್​? ಖಾಸಗಿ ವಿಡಿಯೋ ಲೀಕ್​ ಬೆಡಗಿಗೆ ಸಿಕ್ಕೇಬಿಡ್ತು ಆಫರ್

ಬಿಗ್​ಬಾಸ್​ ಓಟಿಟಿ ಸೀಸನ್​-3ಗಾಗಿ ಕಾಯುತ್ತಿರುವ ವೀಕ್ಷಕರಿಗೆ ಭರ್ಜರಿ ಸುದ್ದಿ. ಮುಂದಿನ ತಿಂಗಳು ಇದರ ಷೋ ನಡೆಯಲಿದೆ. ಇಲ್ಲಿದೆ ಡಿಟೇಲ್ಸ್​.
 

Bigg Boss OTT 3  actress Trisha Kar Madhu who  caught in MMS scandal is FIRST confirmed contestant suc
Author
First Published Apr 11, 2024, 12:05 PM IST

ಬಿಗ್​ಬಾಸ್​ ಎಂದರೆ ಏನು ಎನ್ನುವುದು ಬಹುತೇಕ ಮಂದಿಗೆ ತಿಳಿದಿದೆ. ಭಾಷೆ ಯಾವುದೇ ಇರಲಿ, ಇಲ್ಲಿ ಮೊದಲು ಎಂಟ್ರಿ ಸಿಗುವುದು ವಿವಿಧ ವಲಯಗಳಲ್ಲಿ  ಕಾಂಟ್ರವರ್ಸಿ ಮಾಡಿಕೊಂಡವರಿಗೆ ಎನ್ನುವ ಮಾತಿದೆ. ಇದನ್ನು ಬಿಟ್ಟರೆ ರೀಲ್ಸ್​ ಸ್ಟಾರ್​ಗಳು (ಅದೂ ಕಾಂಟ್ರವರ್ಸಿಯವರಿಗೆ ಹೆಚ್ಚಿನ ಆದ್ಯತೆ), ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​ಗಳು, ರೀಲ್​ ಬಿಡುತ್ತಲೇ ಫೇಮಸ್​ ಆಗಿ  ವಿವಾದದಲ್ಲಿ ಸಿಲುಕಿದವರು... ಹೀಗೆ ಸ್ಪರ್ಧಿಗಳ ಆಯ್ಕೆ ಮಾನದಂಡದ ಬಗ್ಗೆ ಭಾರಿ ಆರೋಪವಿದೆ.  ಇದರ ನಡುವೆಯೇ  ಬಿಗ್​ಬಾಸ್​ ಮನೆಯಿಂದ ಒಂದೆರಡು ವಾರಗಳಲ್ಲಿಯೇ ಹೊರಗೆ ಕಳುಹಿಸಲು ಬೇಕಾಗುತ್ತದೆ ಎನ್ನುವ ಕಾರಣಕ್ಕೆ ಹಾಗೂ ತಾವು ಎಲ್ಲಾ ಕ್ಷೇತ್ರದವರನ್ನೂ ಬಿಗ್​ಬಾಸ್​​ಗೆ ಆಯ್ಕೆ ಮಾಡುತ್ತೇವೆ ಎಂದು ತೋರಿಸಲು ಒಳ್ಳೆಯ ರೀತಿಯಲ್ಲಿ ಹೆಸರು ಮಾಡಿಕೊಂಡವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಅವರು ಒಂದೆರಡು ವಾರಗಳಲ್ಲಿಯೇ ಬೇಗ ಮನೆಯಿಂದ ಹೊರಕ್ಕೆ ಬರುತ್ತಾರೆ ಎನ್ನುವ ಗಂಭೀರ ಆರೋಪವೂ ಇದೆ. 

ಅಷ್ಟಕ್ಕೂ ಬಿಗ್​ಬಾಸ್​ ಎಂದರೇನೇ ಕಚ್ಚಾಟ, ಗಲಾಟೆ, ಒಂದಿಷ್ಟು ಅಶ್ಲೀಲತೆ, ಅತಿ ಎನಿಸುವಷ್ಟು ಪ್ರೀತಿ, ಪ್ರೇಮ, ಕಾಮ... ಎಲ್ಲವುಗಳ ಮಿಶ್ರಣ. ಹೀಗೆ ಇರುವುದಕ್ಕಾಗಿಯೇ ಅದಕ್ಕಷ್ಟು ಟಿಆರ್​ಪಿ. ಇಲ್ಲಿ ನಡೆಯುವುದೆಲ್ಲವೂ ಸ್ಕ್ರಿಪ್ಟೆಡ್​ ಎಂದು ಬಿಗ್​ಬಾಸ್​ನಿಂದ ಹೊರಕ್ಕೆ ಬಂದಿರುವವರೇ ಹೇಳಿದ್ದಿದೆ. ವೀಕ್ಷಕರ ಕಣ್ಣಿಗೆ ಎಲ್ಲವೂ ಸಹಜ, ನಿಜವಾಗಿ ನಡೆಯುತ್ತಿದೆ ಎಂದು ಎನಿಸಿದರೂ ಜಗಳ, ಅಶ್ಲೀಲತೆ, ಪ್ರೀತಿ-ಪ್ರೇಮ ಸೇರಿದಂತೆ ಹೀಗೆಯೇ ಮಾಡಬೇಕು ಎಂದು ಮೊದಲೇ ಹೇಳಿಕೊಡಲಾಗುತ್ತದೆ, ಟಿಆರ್​ಪಿ ಹೆಚ್ಚಾಗುತ್ತಿದ್ದಂತೆಯೇ ಇಂಥ ಸೀನ್​ಗಳನ್ನು ಮತ್ತಷ್ಟು ತುರುಕಲಾಗುತ್ತದೆ ಎಂದು ಸ್ಪರ್ಧಿಗಳೇ ಮಾತನಾಡಿದ್ದೂ ಇದೆ. ಅದೇನೇ ಇದ್ದರೂ ಬಿಗ್​ಬಾಸ್​​ ಎಂದರೆ ಹಲವರಿಗೆ ಪಂಚಪ್ರಾಣ. ಊಟವನ್ನಾದರೂ ಬಿಟ್ಟಿಯಾರು, ಒಂದು ದಿನವೂ ಬಿಗ್​ಬಾಸ್​ ನೋಡಲು ಮರೆಯದವರೇ ಹೆಚ್ಚು. ದಿನವೂ ಬೈದುಕೊಳ್ಳುತ್ತಲೇ ಇದನ್ನು ನೋಡುವ ದೊಡ್ಡ ವರ್ಗವೂ ಇದೆ. 

ಸದ್ದಿಲ್ಲದೇ ಮದ್ವೆಯಾಗಿ ಫೋಟೋ, ವಿಡಿಯೋ ಶೇರ್​ ಮಾಡದ ನಟಿ ತಾಪ್ಸಿ ಪನ್ನು: ಕೊನೆಗೂ ಕಾರಣ ಬಹಿರಂಗ!

ಇದೇ ಕಾರಣಕ್ಕೆ ಟಿ.ವಿಯಲ್ಲಿ ಮಾತ್ರವಲ್ಲದೇ ಓಟಿಟಿಯಲ್ಲಿಯೂ ಬಿಗ್​ಬಾಸ್​ ನಡೆಯುತ್ತಿದೆ. ಇದೀಗ ಬಿಗ್​ಬಾಸ್​ ಅಭಿಮಾನಿಗಳಿಗೆ ಇನ್ನೊಂದು ಖುಷಿ ಸುದ್ದಿ ಇದೆ. ಅದೇನೆಂದರೆ, ಬಿಗ್​ಬಾಸ್​ ಹಿಂದಿನ ಓಟಿಟಿ ಸೀಸನ್​-3 ಶೀಘ್ರದಲ್ಲಿಯೇ ಶುರುವಾಗಲಿದೆ. ನಟ ಸಲ್ಮಾನ್​ ಖಾನ್​ ನಡೆಸಿಕೊಡುವ ಈ ಬಿಗ್​ಬಾಸ್​ನಲ್ಲಿ ಮೊದಲ ಸ್ಪರ್ಧಿಯಾಗಿ,  ಖಾಸಗಿ ವಿಡಿಯೋ ವೈರಲ್​ ಮಾಡಿಕೊಂಡ ನಟಿ ತ್ರಿಶಾ ಕರ್​ ಮಧು (Trisha Kar Madhu) ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ.  ವರದಿಗಳ ಪ್ರಕಾರ ಭೋಜ್​ಪುರಿ ನಟಿ ತ್ರಿಶಾ ಕರ್​ ಮಧು ಅವರಿಗೆ ಆಫರ್​ ನೀಡಲಾಗಿದೆ. 2021ರಲ್ಲಿ ತ್ರಿಶಾ ಕರ್​ ಮಧು ಅವರ ಖಾಸಗಿ ವಿಡಿಯೋ ಲೀಕ್​ ಆಗಿತ್ತು. ಪುರುಷನೊಬ್ಬನ ಜೊತೆ ಕಿಸ್​ ಮಾಡುತ್ತಾ ತುಂಬಾ ಖಾಸಗಿಯಾಗಿ ಕಳೆದ ಕ್ಷಣಗಳ ವಿಡಿಯೋ ಅದಾಗಿತ್ತು. ಇದೀಗ ಇವರು ಓಟಿಟಿಯಲ್ಲಿ ಮೊದಲ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದಾಗಿ ತಿಳಿದು ಬಂದಿದೆ. 
 
ಅಂದಹಾಗೆ,  OTT 3 ಕಾರ್ಯಕ್ರಮವನ್ನು ನೋಡಲು ವೀಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರಂತೆ. ಇದೇ  ಕಾರಣಕ್ಕೆ ನಿರೀಕ್ಷೆಗಿಂತ ಬೇಗ ಪ್ರೀಮಿಯರ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಹಿಂದಿ ಬಿಗ್​ಬಾಸ್​ನಲ್ಲಿ ಕಳೆದ ಬಾರಿ ಅಂದ್ರೆ OTT ಸೀಸನ್​ 2ನಲ್ಲಿ   ಯೂಟ್ಯೂಬರ್ ಎಲ್ವಿಶ್ ಯಾದವ್ ವಿಜೇತರಾಗಿದ್ದರು. ಎಲ್ಲವೂ ಅಂದುಕೊಂಡಂತೆ ಆದರೆ, ಓಟಿಟಿ ಮೂರನೇ ಸೀಸನ್ ಮೇ 15 ರಂದು ಪ್ರೀಮಿಯರ್ ಆಗಲಿದೆ ಎನ್ನಲಾಗುತ್ತಿದೆ. ಇದರಲ್ಲಿ ಯಾರ್ಯಾರು ಇರಲಿದ್ದಾರೆ ಎನ್ನುವ ಕುತೂಹಲ ವೀಕ್ಷಕರದ್ದು. 

ಧನುಷ್​ ಜೊತೆ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ ಹೊತ್ತಲ್ಲೇ ಆರೋಗ್ಯಕರ ಜೀವನದ ಸಲಹೆ ನೀಡಿದ ರಜನಿ ಪುತ್ರಿ ಐಶ್ವರ್ಯಾ!

 

Follow Us:
Download App:
  • android
  • ios