Asianet Suvarna News Asianet Suvarna News

ಸೀತಾರಾಮ ಸೀರಿಯಲ್​ ಅಜ್ಜಿ ಮನೆ ಹೇಗಿದೆ? ಶೂಟಿಂಗ್ ಸೆಟ್​ನ ಸಂಪೂರ್ಣ ಪರಿಚಯ ಮಾಡಿಸಿದ ಸೀತಾ...

ಸೀತಾರಾಮ ಸೀರಿಯಲ್​ನ ಅಜ್ಜಿಮನೆಯ ಶೂಟಿಂಗ್​ ಸೆಟ್​ ಹೇಗಿದೆ? ಇದರ ಸಂಪೂರ್ಣ ಪರಿಚಯ ಮಾಡಿಸಿದ್ದಾರೆ ನಟಿ ವೈಷ್ಣವಿ ಗೌಡ. 
 

shooting set of ajjimane  of Seetharama serial Actress Vaishnavi Gowda has introduced it completely suc
Author
First Published Apr 10, 2024, 5:38 PM IST

ಪ್ರತಿಯೊಬ್ಬರ ಬಾಳಲ್ಲೂ ಅಜ್ಜಿಮನೆ ಎಂದ್ರೆ ಅದರದ್ದೇ ಆದ ಮಹತ್ವ ಇರುತ್ತದೆ. ಎಲ್ಲರಿಗೂ ಅಜ್ಜಿಮನೆ ಎಂದರೆ ಬಲು ಸೊಗಸು, ಚಿಕ್ಕ ವಯಸ್ಸಿನಲ್ಲಿ ಅಜ್ಜಿ ಮನೆಯಲ್ಲಿ ಕಳೆದಿದ್ದರೆ, ಆ ನೆನಪು ನಾವು ಅಜ್ಜ-ಅಜ್ಜಿಯಾಗುವವರೆಗೂ ಇರುತ್ತದೆ, ಅಷ್ಟು ಮಹತ್ವ ಅಜ್ಜಿಯ ಮನೆಗೆ ಇದೆ. ಎಷ್ಟೇ ಆಧುನಿಕತೆ ಕಾಲಿಟ್ಟರೂ, ಸ್ಮಾರ್ಟ್​ ಯುಗದಲ್ಲಿ ನಾವಿದ್ದರೂ ಹಳೆಯ ಕಾಲದ ವಸ್ತುಗಳು, ಅದನ್ನು ಬಳಸಲು ಒದ್ದಾಡುತ್ತಿದ್ದ ಪರಿ ಎಲ್ಲವೂ ಚೆಂದವೇ. ಇದೀಗ ಅಂಥದ್ದೇ ಅಜ್ಜಿಯ ಮನೆಯ ಟೂರ್​ ಮಾಡಿಸಿದ್ದಾರೆ ಸೀತಾರಾಮ ಸೀರಿಯಲ್​ನ ನಾಯಕಿ ಸೀತೆ ಅರ್ಥಾತ್​ ವೈಷ್ಣವಿ ಗೌಡ. 

ಸೀತಾ ರಾಮ ಶೂಟಿಂಗ್ ಸೆಟ್ ಹೆಚ್ಚು ವಿಸ್ತಾರವಾಗಿರಬಹುದು. ಅವುಗಳಲ್ಲಿ ಕೆಲವೊಂದು  ಶಾಶ್ವತವಾಗಿ ಇದ್ದರೆ, ಕೆಲವೊಂದನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಆದರೆ ಪ್ರತಿಯೊಂದಕ್ಕೂ ಕಥೆಯ ಜೊತೆ ಲಿಂಕ್​ ಇರುತ್ತದೆ.  ನಾಯಕ-ನಾಯಕಿಯ ಮನೆಗಳು, ಕೆಲಸದ ಸ್ಥಳ ಮತ್ತು ಸಾಮುದಾಯಿಕ ಪ್ರದೇಶ.. ಹೀಗೆ ಎಲ್ಲವನ್ನೂ ಇಲ್ಲಿ ಚಿತ್ರೀಕರಿಸಲಾಗುತ್ತದೆ.  ವೇಷಭೂಷಣ ಚೇಂಜ್​ ಮಾಡಲು,  ಮೇಕ್ಅಪ್ ಮತ್ತು ಹೇರ್ ಸ್ಟೈಲಿಂಗ್​ಗೆ ಅದರದ್ದೇ ಆದ ಸ್ಥಳಗಳಿವೆ.  ಈ ಶೂಟಿಂಗ್​ ಸ್ಪಾಟ್​ನಲ್ಲಿಯೇ ನಟ-ನಟಿಯರು  ಪೂರ್ವಾಭ್ಯಾಸ ಮಾಡುವುದರಿಂದ ಹಿಡಿದು, ತೆರೆ ಹಿಂದಿನ ಸಿಬ್ಬಂದಿ,  ನಿರ್ದೇಶಕರುಮ ನಿರ್ಮಾಣದ ಮೇಲ್ವಿಚಾರಣೆ ನೋಡಿಕೊಳ್ಳುವವರು ಪ್ರತಿಯೊಬ್ಬರಿಗೂ ಇದೊಂದು ರೀತಿಯಲ್ಲಿ ಎರಡನೆಯ ಮನೆಯೇ ಆಗಿರುತ್ತದೆ ಎಂದು ವೈಷ್ಣವಿ ಹೇಳಿದ್ದಾರೆ.

ಅಮಾಯಕ ಪತಿಗೆ ಮೋಸ ಯಾಕೆ ಮಾಡಿದ್ರಿ ಎಂದು ಸಮಂತಾರನ್ನು ಕೇಳಿದ ಫ್ಯಾನ್ಸ್​: ನಟಿ ಹೇಳಿದ್ದೇನು?

ಅಷ್ಟಕ್ಕೂ, ಪ್ರತಿಯೊಬ್ಬ ನಟ-ನಟಿಯರು ಅವರ ಮನೆಗಿಂತಲೂ ಹೆಚ್ಚಾಗಿ ಶೂಟಿಂಗ್​ ಸ್ಪಾಟ್​ನಲ್ಲಿಯೇ ಇರುತ್ತಾರೆ. ಸಿನಿಮಾಗಳಲ್ಲಿ ಈ ಸ್ಪಾಟ್​ ವಿಭಿನ್ನ ಪ್ರದೇಶಗಳಲ್ಲಿ ನಡೆದರೆ, ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ಒಂದೇ ಕಡೆ ಸೆಟ್​ ಮಾಡಿ ಅಲ್ಲಿಯೇ ಸಂಪೂರ್ಣ ಚಿತ್ರೀಕರಣ ನಡೆಯುತ್ತದೆ. ಇದೇ ಕಾರಣಕ್ಕೆ ಸಂಪೂರ್ಣ ವಾತಾವರಣವನ್ನೇ ಬದಲಾಯಿಸಲಾಗುತ್ತದೆ. ಒಂದು ಸೀರಿಯಲ್​ ಐದಾರು ವರ್ಷಗಳು ನಡೆಯುವ ಕಾರಣ, ಇಲ್ಲಿ ಸೆಟ್​ ಅತ್ಯಂತ ಪ್ರಾಮುಖ್ಯತೆ ವಹಿಸುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ  ಶೂಟಿಂಗ್​ ಮನೆಗಳನ್ನು ಕಟ್ಟಿ ಅದನ್ನು ಬಾಡಿಗೆಗೆ ಕೊಡುವುದು ಇದೆ. ಇನ್ನು ಕೆಲವು ಸೀರಿಯಲ್​ಗಳಲ್ಲಿ ತಮಗೆ ಬೇಕಾದಂತೆ ಹಳ್ಳಿಯ ವಾತಾವರಣ ನಿರ್ಮಾಣ ಮಾಡಿಕೊಂಡೋ ಅಥವಾ ಓಣಿ, ವಠಾರದ ರೀತಿಯಲ್ಲಿ ನೈಜ ಚಿತ್ರಣ ಬರುವಂತೆ ಶೂಟಿಂಗ್​  ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ.

ಅದೇ ಒಂದು ಶೂಟಿಂಗ್​ ಮನೆಯ ಚಿತ್ರಣವನ್ನು ತೋರಿಸಿದ್ದಾರೆ ನಟಿ ವೈಷ್ಣವಿ. ವೈಷ್ಣವಿ ಅವರು ಇದಾಗಲೇ ತಮ್ಮ ಸೋಷಿಯಲ್​ ಮೀಡಿಯಾಗಳಲ್ಲಿ ಹಲವಾರು ವಿಷಯಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಎರಡನೆಯ ಮನೆ ಎಂದೇ ಖ್ಯಾತಿ ಪಡೆದಿರುವ ಸೀತಾರಾಮ ಸೀರಿಯಲ್​ ಸೆಟ್ ಅಜ್ಜಿಮನೆಯ​ ಕುರಿತು ಮಾಹಿತಿ ನೀಡಿದ್ದಾರೆ. ಮನೆಗಿಂತ ಸೆಟ್​ನಲ್ಲಿ ಹೆಚ್ಚು ಹೊತ್ತು ಶೂಟಿಂಗ್​ ಸೆಟ್​ನಲ್ಲಿ ಇರುವುದರಿಂದ ಇದು ನಮ್ಮ ಸೆಕೆಂಡ್​ ಮನೆ ಆಗಿದೆ. ಶೂಟಿಂಗ್​ ಸಮಯದಲ್ಲಿ ಥೇಟ್​ ವಠಾರ ಹಾಗೂ ಮನೆಯ ಚಿತ್ರವಣವನ್ನು ಇಲ್ಲಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹಳೆಯ ಮನೆಗಳಲ್ಲಿ ಇರುವ ಟೇಪ್ ರೆಕಾರ್ಡರ್​, ರೆಡಿಯೋ, ಅಂದು ಬಳಸುತ್ತಿದ್ದ ವಸ್ತುಗಳು ಎಲ್ಲವೂ ಈ ಮನೆಯಲ್ಲಿ ಇವೆ. ಅದರ ಸಂಪೂರ್ಣ ಪರಿಚಯ ಮಾಡಿಸಿದ್ದಾರೆ ನಟಿ.  ಮಿಡ್ಲ್​ ಕ್ಲಾಸ್​ ಅಜ್ಜಿ ಮನೆಯ ಸಂಪೂರ್ಣ ಚಿತ್ರಣ ಈ ಸೆಟ್​ನಲ್ಲಿ ತೋರಿಸಲಾಗಿದೆ.  

ಸದ್ದಿಲ್ಲದೇ ಮದ್ವೆಯಾಗಿ ಫೋಟೋ, ವಿಡಿಯೋ ಶೇರ್​ ಮಾಡದ ನಟಿ ತಾಪ್ಸಿ ಪನ್ನು: ಕೊನೆಗೂ ಕಾರಣ ಬಹಿರಂಗ!
 

Follow Us:
Download App:
  • android
  • ios