ಕಳೆದ ಥರ ಅಲ್ಲ ಇದು, ಇದೇ ನಿಜವಾದ ಎಂಗೇಜ್‌ಮೆಂಟ್: ಕಿಡಿಗೇಡಿಗಳಿಗೆ ಎಚ್ಚರಿಕೆ ಕೊಟ್ಟ ವೈಷ್ಣವಿ ಗೌಡ ತಾಯಿ
ʼಸೀತಾರಾಮʼ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಪರರಾಜ್ಯದ ಅನುಕೂಲ್ ಮಿಶ್ರಾ ಜೊತೆ ಎಂಗೇಜ್ ಆಗಿದ್ದಾರೆ. ಈ ವೇಳೆ ವೈಷ್ಣವಿ ತಾಯಿ, ಭಾನು ಅವರು, “ಈ ಹಿಂದಿನ ಥರ ಅಲ್ಲ ಇದು” ಎಂದು ಹೇಳಿಕೆ ಕೊಟ್ಟಿದ್ದಾರೆ.

ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ನಿಶ್ಚಿತಾರ್ಥ ಆಗಿದೆ. ಈ ಬಗ್ಗೆ ವೈಷ್ಣವಿ ಗೌಡ ಅವರೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವೇಳೆ ವೈಷ್ಣವಿ ಗೌಡ ಅವರ ತಾಯಿ ಕ್ಯಾಮರಾ ಮುಂದೆ ಬಂದು, “ಕಳೆದ ಬಾರಿ ಆಗಿರೋ ಥರ ಅಲ್ಲ ಇದು, ಇದೇ ನಿಶ್ಚಿತಾರ್ಥ” ಎಂದು ಹೇಳಿದ್ದಾರೆ. ಈ ಮೂಲಕ ಕಿಡಿಗೇಡಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ವಿಡಿಯೋವನ್ನು ವೈಷ್ಣವಿ ಗೌಡ ಅವರು ಯುಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೆ ಕೊಟ್ಟಿದ್ದಾರೆ.
ಕಳೆದ ಬಾರಿ ಥರ ಅಲ್ಲ!
“ಕಳೆದ ಬಾರಿ ನಿಶ್ಚಿತಾರ್ಥ ಆಗಿದೆ ಅಂತ ಯುಟ್ಯೂಬ್‌ನಲ್ಲಿ ಒಂದಷ್ಟು ವಿಡಿಯೋ ಮಾಡಿದ್ದರು. ಆ ಥರ ಅಲ್ಲ ಇದು, ಈ ಬಾರಿ ನಿಜಕ್ಕೂ ನಿಶ್ಚಿತಾರ್ಥ ಆಗ್ತಿದೆ. ನನಗೆ ನೀವು ಸುಳ್ಳು ಮಾಹಿತಿ ಕೊಟ್ಟರೆ ನಿಜಕ್ಕೂ ಚಿಂತೆ ಆಗತ್ತೆ, ಹಾಗೆಲ್ಲ ಮಾಡಬೇಡಿ. ನಿಮಗೆ ವಿಡಿಯೋ ಬೇಕು ಅಂದ್ರೆ ನಾನು ಮಾಹಿತಿ ಕೊಡ್ತೀನಿ, ಅದನ್ನೇ ಚೆನ್ನಾಗಿ ಮಾಡಿ ಹಾಕಿ” ಎಂದು ವೈಷ್ಣವಿ ಗೌಡ ತಾಯಿ ಭಾನು ಹೇಳಿಕೆ ನೀಡಿದ್ದಾರೆ.
ಅನುಕೂಲ್ ಮಿಶ್ರಾ ಯಾರು? ಏನು ಕೆಲಸ?; ಈ ಹಿಂದಿ ಹುಡುಗನ ಬಗ್ಗೆ ವಿಡಿಯೋದಲ್ಲಿ ಮಾಹಿತಿ ಕೊಟ್ಟ ಸೀತಾರಾಮ ವೈಷ್ಣವಿ ಗೌಡ
ಈ ಮಾತು ಹೇಳಲು ಕಾರಣ ಏನು?
ವೈಷ್ಣವಿ ಗೌಡ ತಾಯಿ ಹೀಗೆ ಹೇಳಲು ಕಾರಣ ಇದೆ. 2022ರಲ್ಲಿ ನಟ ವಿದ್ಯಾಶಂಕರ್ ಎನ್ನುವವರ ಜೊತೆ ವೈಷ್ಣವಿ ಗೌಡ ಮದುವೆ ಮಾತುಕತೆ ನಡೆದಿತ್ತು. ವೈಷ್ಣವಿ ಗೌಡ, ವಿದ್ಯಾಶಂಕರ್ ಅವರು ಹಾರ ಹಾಕಿಕೊಂಡಿದ್ದು, ಫ್ಯಾಮಿಲಿ ಜೊತೆಗೆ ಫೋಟೋ ತೆಗೆಸಿಕೊಂಡಿದ್ದರು. ಇನ್ನು ಹೂವು, ಹಣ್ಣು ಇರುವ ತಾಂಬೂಲ ಕೂಡ ಅಲ್ಲಿತ್ತು. ಇದನ್ನೇ ಕೆಲವರು ನಿಶ್ಚಿತಾರ್ಥ ಎಂದುಕೊಂಡಿದ್ದರು. ಅದೇ ಟೈಮ್‌ಗೆ ವಿದ್ಯಾಶಂಕರ್‌ಗೆ ಬೇರೆ ಹುಡುಗಿಯ ಜೊತೆ ಸಂಬಂಧ ಇದೆ ಎನ್ನಲಾದ ಆರೋಪ ಕೇಳಿ ಬಂದಿತ್ತು. ವೈಷ್ಣವಿ ಗೌಡ ಫ್ಯಾಮಿಲಿ ಈ ಬಗ್ಗೆ ಮಾತನಾಡಿದ್ದಲ್ಲದೆ, “ಅದು ಹೂ ಮುಡಿಸೋ ಶಾಸ್ತ್ರ, ಎಂಗೇಜ್‌ಮೆಂಟ್ ಅಲ್ಲ. ಜಸ್ಟ್ ಮಾತುಕತೆ ಮಾಡಿದ್ದೇವೆ” ಎಂದು ಸ್ಪಷ್ಟನೆ ನೀಡಿದ್ದರು. ಇನ್ನು ಈ ವಿಚಾರವು ದೊಡ್ಡ ವಿವಾದ ಸೃಷ್ಟಿ ಮಾಡಿದ್ದಲ್ಲದೆ ಈ ಸಂಬಂಧ ಮುರಿದು ಹೋಯ್ತು.
ಬೇಸರ ಆಗಿತ್ತು!
ವೈಷ್ಣವಿ ಗೌಡ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಆಗ ಒಂದಷ್ಟು ಯುಟ್ಯೂಬ್ ಚಾನೆಲ್‌ಗಳು ವಿಡಿಯೋ ಮಾಡಿ ಅಪ್‌ಲೋಡ್ ಮಾಡಿದ್ದರು. ಈ ಬಗ್ಗೆಯೇ ಭಾನು ಅವರು ಬೇಸರ ಮಾಡಿಕೊಂಡಿದ್ದಾರೆ. ಅನೇಕರು ವೈಷ್ಣವಿ ಗೌಡಗೆ ಇದು ಎರಡನೇ ಎಂಗೇಜ್‌ಮೆಂಟ್ ಎಂದು ತಪ್ಪು ಮಾತನಾಡಬಹುದು ಎಂದು ಅರಿತು ಅವರು ಪರೋಕ್ಷವಾಗಿ ಈಗ ಹೇಳಿದ್ದಾರೆ.
PHOTOS: ಪರರಾಜ್ಯದವರ ಜೊತೆ ವೈಷ್ಣವಿ ಗೌಡ ನಿಶ್ಚಿತಾರ್ಥ; ವಿಧಿ ಬರೆದ ಲವ್‌ಸ್ಟೋರಿ ಇದು ಎಂದ ಸೀತಾರಾಮ ನಟಿ
ಈ ಹಿಂದೆ ಗಾಸಿಪ್ ಸೃಷ್ಟಿ ಆಗಿತ್ತು!
ಕನ್ನಡ ಕಿರುತೆರೆಯಲ್ಲಿ ʼಅಗ್ನಿಸಾಕ್ಷಿʼ ಧಾರಾವಾಹಿಯಲ್ಲಿ ನಟಿಸುವಾಗ ವಿಜಯ್ ಸೂರ್ಯ ಹಾಗೂ ವೈಷ್ಣವಿ ಗೌಡ ಲವ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಸೃಷ್ಟಿ ಆಗಿತ್ತು. ಆಗ ಇವರಿಬ್ಬರೂ ಎಷ್ಟೇ ಸ್ಪಷ್ಟನೆ ನೀಡಿದರೂ ಕೂಡ ಕೆಲವರು ಈ ಜೋಡಿ ಲವ್ ಮಾಡುತ್ತಿದೆ ಎಂದು ಭ್ರಮೆಯಲ್ಲಿತ್ತು. ಇನ್ನು ವಿಜಯ್ ಸೂರ್ಯ ಅವರು ಬೇರೆ ಹುಡುಗಿ ಜೊತೆ ಮದುವೆ ಆದಾಗಲೇ ಅನೇಕರು ಇದೆಲ್ಲ ಸುಳ್ಳು ಎಂದು ಆಗ ನಂಬಿದ್ದರು.
ಸದ್ಯ ʼಸೀತಾರಾಮʼ ಧಾರಾವಾಹಿಯಲ್ಲಿ ಸೀತಾ ಪಾತ್ರ ಮಾಡ್ತಿರುವ ವೈಷ್ಣವಿ ಗೌಡ ಅವರು, ಮದುವೆ ಬಳಿಕ ಸಿನಿಮಾದಲ್ಲಿ ನಟಿಸ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಾಗಿದೆ. ಈ ಬಗ್ಗೆ ವೈಷ್ಣವಿ ಮಾತನಾಡಲೂಬಹುದು. ಒಟ್ಟಿನಲ್ಲಿ ವೈಷ್ಣವಿ ಗೌಡ ಅವರು ಮದುವೆಯಾಗುತ್ತಿರೋದು ಅನೇಕರಿಗೆ ಖುಷಿ ಕೊಟ್ಟಿದೆ. ಅವರ ವೈವಾಹಿಕ ಜೀವನ ಚೆನ್ನಾಗಿರಲಿ ಎಂದು ಹಾರೈಸೋಣ..