ನಟಿ ವೈಷ್ಣವಿ ಗೌಡ ಅವರು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೀತಾರಾಮ, ಮಹಾದೇವಿ ಧಾರಾವಾಹಿಗಳಲ್ಲಿ ನಟಿಸಿರುವ ವೈಷ್ಣವಿ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ನಿಶ್ಚಿತಾರ್ಥದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರ ತಂದೆ ತಾಯಿ ಮತ್ತು ಸಹೋದರ ಶುಭ ಹಾರೈಸಿದ್ದಾರೆ. ವೈಷ್ಣವಿ ಅವರ ಪತಿ ಅನುಕೂಲ್ ಮಿಶ್ರಾ ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಕನ್ನಡ ಬರುವುದಿಲ್ಲ. ವೈಷ್ಣವಿಗಾಗಿ ಗೂಗಲ್ ಟ್ರಾನ್ಸ್‌ಲೇಟರ್ ಬಳಸಿ ಕನ್ನಡದಲ್ಲಿ ಮಾತನಾಡಿದ್ದಾರೆ.

ʼಸೀತಾರಾಮʼ, ʼಮಹಾದೇವಿʼ, ‘ಅಗ್ನಿಸಾಕ್ಷಿ’, ʼಪುನರ್‌ ವಿವಾಹʼ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 31 ವರ್ಷದ ಈ ನಟಿ ಈಗ ಮದುವೆಯಾಗಲು ರೆಡಿಯಾಗಿದ್ದಾರೆ. ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಆಕ್ಟಿವ್‌ ಆಗಿರುವ ವೈಷ್ಣವಿ ಗೌಡ ಅವರಿಗೆ ಮದುವೆ ಯಾವಾಗ ಎನ್ನುವ ಪ್ರಶ್ನೆ ಏಳುತ್ತಿತ್ತು. ಈಗ ಅವರು ಪ್ರಶ್ನೆಗೆ ಉತ್ತರ ಕೊಟ್ಟಿದ್ದಲ್ಲದೆ ಗುಡ್‌ನ್ಯೂಸ್‌ ನೀಡಿದ್ದಾರೆ.

ನಿಶ್ಚಿತಾರ್ಥದ ವಿಡಿಯೋ ಹಂಚಿಕೊಂಡ್ರು! 
ನಿಶ್ಚಿತಾರ್ಥದ ಬಗ್ಗೆ ಮಾಹಿತಿ ಕೊಡುವ, ಜೊತೆಗೆ ನಿಶ್ಚಿತಾರ್ಥದ ಝಲಕ್‌ ತೋರಿಸುವ ವಿಡಿಯೋವನ್ನು ವೈಷ್ಣವಿ ಗೌಡ ಅವರು ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಶುಭ ಹಾರೈಸಿದ ಅಪ್ಪ-ಅಮ್ಮ, ಅಣ್ಣ! 
“ನಿಶ್ಚಿತಾರ್ಥಕ್ಕೆ ಬನ್ನಿ ಅಂತ ಎಲ್ಲರಿಗೂ ಫೋನ್ ಮಾಡಿ ಕರೆಯುವಾಗ ಎಲ್ಲರಿಗೂ ಹುಡುಗ ಯಾರು ಎಂದು ಪ್ರಶ್ನೆ ಕೇಳಿದ್ದಾರೆ. ಈ ಕುತೂಹಲ ನೋಡಿ ನನಗೂ ಖುಷಿ ಆಯ್ತು. ನನಗೂ ಕೂಡ ಯಾರು ಹುಡುಗ ಎನ್ನೋದು ಗೊತ್ತಿರಲಿಲ್ಲ. ಇಂದು ನಿಶ್ಚಿತಾರ್ಥ ಅಂತ ನಾನು ಫುಲ್‌ ಎಕ್ಸೈಟ್‌ ಆಗಿದ್ದೇನೆ” ಎಂದು ವೈಷ್ಣವಿ ಗೌಡ ಹೇಳಿದ್ದಾರೆ. 

PHOTOS: ಪರರಾಜ್ಯದವರ ಜೊತೆ ವೈಷ್ಣವಿ ಗೌಡ ನಿಶ್ಚಿತಾರ್ಥ; ವಿಧಿ ಬರೆದ ಲವ್‌ಸ್ಟೋರಿ ಇದು ಎಂದ ಸೀತಾರಾಮ ನಟಿ

ವೈಷ್ಣವಿ ಗೌಡ ಅವರು ಅಪ್ಪ-ಅಮ್ಮ, ಅಣ್ಣನನ್ನು ಕೂಡ ಮಾತನಾಡಿಸಿದ್ದಾರೆ. ಆ ವೇಳೆ ಅಣ್ಣ ಸುನೀಲ್‌ ಗೌಡ ಅವರು, “ಇಲ್ಲಿಯವರೆಗೆ ಎಲ್ಲ ಹಂತದಲ್ಲಿ ಚೆನ್ನಾಗಿ ನಿಭಾಯಿಸಿಕೊಂಡು ಬಂದಿದ್ದೀಯಾ. ಇನ್ನು ಮುಂದೆ ಕೂಡ ನೀನು ಒಳ್ಳೆಯ ಪತ್ನಿ ಆಗಿರುತ್ತೀಯಾ, ಒಳ್ಳೆ ಹೆಂಡ್ತಿ ಆಗಿರ್ತೀಯಾ ಎಂದು ಗೊತ್ತಿದೆ. ಒಳ್ಳೆಯದಾಗಲಿ” ಎಂದು ಶುಭ ಹಾರೈಸಿದ್ದಾರೆ.

“ಇನ್ನು ನಿಶ್ಚಿತಾರ್ಥದ ದಿನ ತಾಯಿ ಕೂಲಿಂಗ್‌ ಗ್ಲಾಸ್‌ ಹಾಕಿದ್ದು ನೋಡಿ ವೈಷ್ಣವಿ ಗೌಡಗೆ ಶಾಕ್‌ ಆಗಿದೆ. ಇದನ್ನು ಅವರು ಕ್ಯಾಮರಾ ಮುಂದೆ ಬಂದು ಹೇಳಿದ್ದರು. ವೈಷ್ಣವಿ ಗೌಡ ಮಾತಿಗೆ, ತಾಯಿ ಭಾನುಮತಿ ಠಕ್ಕರ್‌ ಕೊಟ್ಟಿದ್ದು, "ನಾವು ಸೆಲೆಬ್ರಿಟಿಗಳು, ನಾವು ಕೂಲಿಂಗ್‌ಗ್ಲಾಸ್‌ಹಾಕಬಾರದಾ? ಇದು ನಿಶ್ಚಿತಾರ್ಥ. ಕಳೆದ ಥರ ಅಲ್ಲ ಇದು. ನಾನೇ ಮಾಹಿತಿ ಕೊಟ್ಟಂತೆ ಯುಟ್ಯೂಬ್‌ನಲ್ಲಿ ವಿಡಿಯೋ ಮಾಡಿ ಹಾಕಿ, ಸುಳ್ಳು ಸುದ್ದಿ ಹಬ್ಬಿಸಬೇಡಿ" ಎಂದು ಹೇಳಿದ್ದಾರೆ.

ವೈಷ್ಣವಿ ಗೌಡ ತಂದೆ ಕೂಡ ಮಾತನಾಡಿ, “ನನ್ನ ಮಗಳು ನಿಶ್ಚಿತಾರ್ಥ ಮಾಡಿಕೊಳ್ತಿದ್ದಾಳೆ. ಇದು ನನಗೆ ತುಂಬ ಖುಷಿ ಕೊಟ್ಟಿದೆ. ಅವಳಿಗೆ ಸುಖ ಶಾಂತಿ ಸಿಗಲಿ, ದಾಂಪತ್ಯ ಜೀವನ ಚೆನ್ನಾಗಿರಲಿ” ಎಂದು ಹಾರೈಸಿದ್ದಾರೆ. 

ಬಯಸಿದಂತೆ ಅದ್ದೂರಿಯಾಗಿ ಅಕಾಯ್‌ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ ಸೀತಾರಾಮ ನಟಿ Vaishnavi Gowda!

ಅನುಕೂಲ್‌ಗೆ ಬೇಸರ ಆಗಿದ್ದು ಏನು? 
ವೈಷ್ಣವಿ ಗೌಡ ಅವರಿಗೆ ನಿಶ್ಚಿತಾರ್ಥದ ದಿನ ಬಾರ್ಬಿ ಡಾಲ್‌ ಥರ ರೆಡಿ ಆಗಬೇಕು ಎಂದು ಆಸೆ ಇಟ್ಟುಕೊಂಡಿದ್ದರು. ವೈಷ್ಣವಿ ಗೌಡ ಅವರ ಪತಿ ಅನುಕೂಲ್‌ ಮಿಶ್ರಾ ಅವರು ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲ ಯುಟ್ಯೂಬ್‌ ಚಾನೆಲ್‌ಗಳು ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೋಸ್ಟ್‌ ಮಾಡಿರೋದು ಅನುಕೂಲ್‌ಗೆ ತುಂಬ ಬೇಸರ ಬಂದಿದೆ ಎಂದು ವೈಷ್ಣವಿ ಗೌಡ ಅವರು ಹೇಳಿದ್ದಾರೆ, ಆಮೇಲೆ ಇದನ್ನು ಅವರು ಫನ್‌ ಆಗಿ ತಗೊಂಡಿದ್ದಾರಂತೆ.

ಕನ್ನಡ ಬರೋದಿಲ್ಲ! 
ವೈಷ್ಣವಿ ಗೌಡ ಮದುವೆಯಾಗೋ ಅನುಕೂಲ್‌ ಮಿಶ್ರಾಗೆ ಕನ್ನಡ ಬರೋದಿಲ್ಲ, ಅವರು ಹಿಂದಿಯನ್ನೇ ಮಾತಾಡ್ತಾರೆ. ವೈಷ್ಣವಿಗೋಸ್ಕರ ಅವರು ಗೂಗಲ್‌ ಟ್ರಾನ್ಸ್‌ಲೇಟರ್‌ ಬಳಸಿ, “ನಾನು ನಿನ್ನನ್ನು ಇಷ್ಟಪಡ್ತಿದೀನಿ ವೈಷ್ಣವಿ” ಎಂದು ಕನ್ನಡ ಕಲಿತು ಹೇಳಿದ್ದಾರೆ. 

ವೈಷ್ಣವಿ ಗೌಡ ಹುಡುಗ ಅನುಕೂಲ್‌ ಮಿಶ್ರಾ ಅವರು ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಉತ್ತರ ಪ್ರದೇಶದವರು ಎಂದು ಹೇಳಲಾಗಿದೆ. ಈ ಬಗ್ಗೆ ವೈಷ್ಣವಿ ಗೌಡ ಅವರು ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದ್ದಾರಂತೆ. ಅಂದಹಾಗೆ ಹಿಂದಿ, ಇಂಗ್ಲಿಷ್‌ ಮಾತನಾಡುವ ಅನುಕೂಲ್‌ ಮುಂದಿನ ದಿನಗಳಲ್ಲಿ ವೈಷ್ಣವಿ ಜೊತೆಗೆ ವ್ಲಾಗ್‌ ಕೂಡ ಮಾಡಲಿದ್ದಾರಂತೆ. 

YouTube video player