Spandana Somanna: ಕನ್ನಡ ಕಿರುತೆರೆ ನಟಿ, ಬಿಗ್ ಬಾಸ್ ಸೀಸನ್ 12ರ ಬ್ಯೂಟಿ ಸ್ಪಂದನಾ ಸೋಮಣ್ಣ, ತಮ್ಮ ಪ್ಯಾರೀಸ್ ಜರ್ನಿಯ ಹೊಸದೊಂದು ಫೋಟೊ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಕಳ್ಳ ಪುಟ್ಟಿಯ ಈ ರೂಪ ನೋಡಿ ಅಭಿಮಾನಿಗಳ ಹೃದಯ ಚೂರಾಗಿರೋದಂತೂ ಖಂಡಿತಾ.
ಸ್ಪಂದನಾ ಸೋಮಣ್ಣ
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಸೀಸನ್ 12ರಲ್ಲಿ ತಮ್ಮ ಮುಗ್ಧತೆಯಿಂದಲೇ ಹಾಗೂ ತಮ್ಮ ಕ್ಯೂಟ್ ನೆಸ್ ಮೂಲಕ ಕಳ್ಳ ಪುಟ್ಟಿ ಎಂದೇ ಹೆಸರು ಪಡೆದಿರುವ ನಟಿ ಸ್ಪಂದನಾ ಸೋಮಣ್ಣ. ಇದಿಗ ಸ್ಪಂದನಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸದೊಂದು ಫೋಟೊ ಶೇರ್ ಮಾಡುವ ಮೂಲಕ, ಪಡ್ಡೆ ಹುಡುಗರ ಹೃದಯವನ್ನು ಚೂರು ಮಾಡಿದ್ದಂತು ನಿಜಾ. ಅಷ್ಟಕ್ಕೂ ಸ್ಪಂದನಾ ಇನ್’ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೊದಲ್ಲಿ ಅಂತದ್ದೇನಿದೆ? ನೀವೆ ನೋಡಿ.
ಪ್ರಣಯ ನಗರಿಯಲ್ಲಿ ಹುಡುಗನ ಕೈ ಹಿಡಿದು ನಡೆದ ಸ್ಪಂದನಾ
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಸ್ಪಂದನಾ ಈ ಬಾರಿ ಪ್ಯಾರೀಸ್ ನ ಐಫೆಲ್ ಟವರ್ ಹಿನ್ನೆಲೆಯಲ್ಲಿ, ಹುಡುಗನೊಬ್ಬನ ಕೈಹಿಡಿದು ಸಂತೋಷದಿಂದ ನಡೆಯುತ್ತಿರುವ ಫೋಟೊ ಎರಡನ್ನು ಶೇರ್ ಮಾಡಿದ್ದು, ಅದರ ಜೊತೆಗೆ Plot Twist : Paris was not the Main Character! ಎಂದು ಬರೆದಿದ್ದಾರೆ. ಅಂದರೆ, ಪ್ಯಾರೀಸ್ ಇಲ್ಲಿ ಮುಖ್ಯ ಪಾತ್ರ ಅಲ್ಲ, ನಾಯಕ ಬೇರೆಯವರೇ ಇದ್ದಾರೆ ಎನ್ನುವಂತಿದೆ ಈ ಮಾತು. ಅಂದ್ರೆ, ಈ ಫೋಟೊ ಮೂಲಕ ಕಳ್ಳ ಪುಟ್ಟಿ ತಮ್ಮ ಬಾಯ್ ಫ್ರೆಂಡ್ ನ್ನು ಪರಿಚಯಿಸಿದ್ದಾರೆಯೇ? ಅನ್ನೋದು ಗೊತ್ತಿಲ್ಲ. ಆದರೆ ನಟಿ ಪೋಸ್ಟ್ ನೋಡಿದ್ರೆ, ತಮ್ಮ ಜೀವನದ ಮುಖ್ಯ ಪಾತ್ರವನ್ನು ರಿವೀಲ್ ಮಾಡಿದಂತಿದೆ. ಆದರೆ ಫೋಟೊದಲ್ಲಿ ಇರುವವರು ಯಾರು ಎಂಬುದನ್ನು ನಟಿ ರಿವೀಲ್ ಮಾಡಿಲ್ಲ, ಕೇವಲ ಬ್ಯಾಕ್ ಸೈಡ್ ಫೋಟೊ ಹಂಚಿಕೊಂಡಿದ್ದಾರೆ.
ಶುಭಾಶಯ ತಿಳಿಸಿದ ಸ್ನೇಹಿತರು ಮತ್ತು ಫ್ಯಾನ್ಸ್
ನಟಿ ಹಂಚಿಕೊಂಡ ಫೋಟೊ ನೋಡಿ ಕನ್ನಡ ಕಿರುತೆರೆಯ ಹಲವಾರು ನಟಿಯರು ಕಂಗ್ರಾಜುಲೇಶನ್ಸ್ ಹೇಳಿದ್ದಾರೆ. ಅಭಿಮಾನಿಗಳು ಶಾಕ್ ಆಗಿದ್ದು, ದೇವರೇ ಇದು ಎಐ ಫೋಟೊ ಆಗಿದ್ರೆ ಸಾಕು ಎಂದಿದ್ದಾರೆ. ಇನ್ನೂ ಕೆಲವರು ಏನ್ರೀ ಕಳ್ಳಪುಟ್ಟಿ ಇದು ಅಂದ್ರೆ, ಇನ್ನೂ ಕೆಲವರು ಇದು ಸುಳ್ಳು ಅಂತ ಹೇಳಿ ಅಂತಾನೂ ಹೇಳಿದ್ದಾರೆ. ಮತ್ತೆ ಕೆಲವರು ಹುಡುಗ ಯಾರು ಅಂತನಾದ್ರೂ ಹೇಳಿ ಎಂದು ಹೇಳಿದ್ದಾರೆ. ಮತ್ತಷ್ಟು ಅಭಿಮಾನಿಗಳು ತುಂಬು ಹೃದಯದಿಂದ ಶುಭ ಹಾರೈಸಿದ್ದಾರೆ. ಇನ್ನು ಹುಡುಗ ಯಾರು? ನಿಜವಾಗಿಯೂ ಸ್ಪಂದನಾ ಬಾಯ್ ಫ್ರೆಂಡಾ? ಅಥವಾ ಸಿನಿಮಾ ಶೂಟಿಂಗಾ? ಏನು ಅನ್ನೋದನ್ನು ತಿಳಿಯಲು ನಟಿಯೇ ಸ್ವತಃ ರಿವೀಲ್ ಮಾಡಬೇಕು.


