- Home
- Entertainment
- TV Talk
- 'ಸತ್ಯ' ಸೀರಿಯಲ್ ಖ್ಯಾತಿಯ ನಟಿ ಅನು ಜನಾರ್ಧನ ಮನೆ ಗೃಹ ಪ್ರವೇಶ: ಸುಂದರ ಫೋಟೋಗಳು ಇಲ್ಲಿವೆ
'ಸತ್ಯ' ಸೀರಿಯಲ್ ಖ್ಯಾತಿಯ ನಟಿ ಅನು ಜನಾರ್ಧನ ಮನೆ ಗೃಹ ಪ್ರವೇಶ: ಸುಂದರ ಫೋಟೋಗಳು ಇಲ್ಲಿವೆ
'ಸತ್ಯ' ಧಾರಾವಾಹಿಯ ಕೀರ್ತನಾ ಪಾತ್ರದ ಮೂಲಕ ಖ್ಯಾತರಾದ ನಟಿ ಅನು ಜನಾರ್ದನ್ ಅವರು ಹೊಸ ಮನೆಯನ್ನು ಕಟ್ಟಿಸಿದ್ದಾರೆ. ಇತ್ತೀಚೆಗೆ ತಮ್ಮ ಕನಸಿನ ಮನೆಯ ಗೃಹಪ್ರವೇಶವನ್ನು ನೆರವೇರಿಸಿದ್ದು, ಅದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಅನು ಜನಾರ್ದನ
'ಸತ್ಯ' ಧಾರಾವಾಹಿಯಲ್ಲಿ ನಟಿಸಿದ್ದ ಎಲ್ಲರ ಮನ ಗೆದ್ದವರು ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಂಡಿದ್ದ ನಟಿ ಅನು ಜನಾರ್ದನ್. ಸತ್ಯಳ ಅಕ್ಕ ಕೀರ್ತನಾ ಆಗಿ ಕಾಣಿಸಿಕೊಂಡಿದ್ದ ಅನು ಅವರು ಮಧ್ಯದಲ್ಲಿಯೇ ಸೀರಿಯಲ್ ಬಿಟ್ಟು ಹೋಗಿದ್ದರು. ಇದರ ಹೊರತಾಗಿಯೂ ಇಂದಿಗೂ ಅವರನ್ನು ಕೀರ್ತನಾ ಎಂದು ಗುರುತಿಸುವವರೇ ಹೆಚ್ಚು.
ಸಕ್ಕರೆ ನಾಡು ಮಂಡ್ಯದವರು
ಮೂಲತಃ ಸಕ್ಕರೆ ನಾಡು ಮಂಡ್ಯದವರಾಗಿರುವ ಅನು ಅವರು, ತೆರೆ ಮೇಲೆ ತುಂಬಾ ಸ್ಟೈಲ್ ಆಗಿದ್ದು, ಸ್ಟೈಲ್ ಐಕಾನ್ ಕೂಡ ಹೌದು. ಇದೀಗ ಅವರ ಹೊಸ ಮನೆಯನ್ನು ಕಟ್ಟಿದ್ದು, ಅದರ ಗೃಹಪ್ರವೇಶದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ನಮ್ಮನೆ ಗೃಹಪ್ರವೇಶ ಎಂದು ಹೇಳಿರುವ ಅವರು ಗೃಹ ಪ್ರವೇಶದ ಸಂಪೂರ್ಣ ವಿಡಿಯೋ ಶೇರ್ ಮಾಡಿದ್ದಾರೆ. ಇವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ನಟಿಯ ಕುರಿತು
ಇನ್ನು ಅನು ಜನಾರ್ದನ ಕುರಿತು ಹೇಳುವುದಾದರೆ, 'ಮಹಾಕಾಳಿ' ಧಾರಾವಾಹಿ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ ಅನು 'ಬ್ರಹ್ಮಗಂಟು', 'ಜೈ ಹನುಮಾನ್','ಶ್ರೀವಿಷ್ಣು ದಶಾವತಾರ', 'ರಂಗನಾಯಕಿ', 'ಸತ್ಯ' ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. 'ರಂಗನಾಯಕಿ' ಧಾರಾವಾಹಿಯಲ್ಲಿ ಖಳನಾಯಕಿ ವಿಭಾ ಆಗಿ ನಟಿಸಿದ್ದ ಇವರು ಸಕತ್ ಫೇಮಸ್ ಆಗಿದ್ದರು. 'ರಂಗನಾಯಕಿ'ಯ ವಿಭಾ ಎಂದೇ ಈಗಲೂ ಗುರುತಿಸಿಕೊಂಡಿದ್ದಾರೆ. 'ರಂಗನಾಯಕಿ' ಧಾರಾವಾಹಿ ಬಳಿಕ ನಟಿ ಅನು 'ಸತ್ಯ'ದಲ್ಲಿ ನಟಿಸಿದ್ದರು. ಖಡಕ್ ಕೀರ್ತನಾ ಆಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದ್ದ ಅನು ಅವರು ಧಾರಾವಾಹಿಯಿಂದ ಹೊರಬಂದಿದ್ದು ಇನ್ನೂ ಹಲವು ಪ್ರೇಕ್ಷಕರಿಗೆ ಅರಗಿಸಿಕೊಳ್ಳಲು ಆಗಿರಲಿಲ್ಲ.
ಗಿನ್ನೆಸ್ ಅವಾರ್ಡ್
ಇನ್ನು ನಟಿ, ಚಿಕ್ಕವರಿದ್ದಾಗಿನಿಂದಲೂ ಡ್ಯಾನ್ಸರ್ ಆಗಬೇಕೆಂದು ಕನಸು ಕಾಣುತ್ತಿದ್ದರು. ನಟನೆಗೆ ಬರುವ ಮುನ್ನ ಅನು ಪೂಮಾ ಸ್ಪೋರ್ಟ್ಸ್ ಕಂಪನಿಯಲ್ಲಿ ಹೆಚ್ ಆರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲಿ ಮಹಿಳೆಯರಿಗಾಗಿ ಡುಯು ಕ್ಯಾಂಪೇನ್ ಮಾಡಿದ್ದರು. ಅದಕ್ಕೆ ಅವರಿಗೆ ಗಿನ್ನೆಸ್ ಅವಾರ್ಡ್ ಕೂಡ ಬಂದಿದೆ.
ಶಾಸ್ತ್ರೀಯ ನೃತ್ಯಗಾತಿ
ಅನು ಜನಾರ್ದನ್ ಅವರು ಶಾಸ್ತ್ರೀಯ ನೃತ್ಯವನ್ನು ಕಲಿತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್. ಅಭಿಮಾನಿಗಳಿಗೆ ನಿತ್ಯ ಒಂದಲ್ಲ ಒಂದು ರೀಲ್ಸ್, ಫೋಟೋ ಅಥವಾ ಸ್ಟೋರಿಗಳನ್ನು ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ. ಅನುಗೆ ಕೊಂಚ ಬಿಡುವು ಸಿಕ್ಕರೂ ಸಾಕು ಅಡ್ವೆಂಚರ್ ಮಾಡಲು ಹೊರಟು ಬಿಡುತ್ತಾರೆ.
ಪ್ರವಾಸದ ಹುಚ್ಚು
ಟ್ರಾವೆಲ್ ಮಾಡುವುದನ್ನು ಹೆಚ್ಚು ಇಷ್ಟಪಡುವ ಅನು ಆಗಾಗ ಪ್ರವಾಸಕ್ಕೆ ತೆರಳುತ್ತಿರುತ್ತಾರೆ. ಕಳೆದ ವರ್ಷವೂ ಕೂಡ ಸ್ನೇಹಿತರ ಜೊತೆ ಗೋವಾ ಟ್ರಿಪ್ ಹೋಗಿ ಸಖತ್ ಎಂಜಾಯ್ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

