- Home
- Entertainment
- TV Talk
- ಆರಂಭಕ್ಕೂ ಮುನ್ನವೇ ದಾಖಲೆ ಬರೆಯಿತು Bigg Boss 13: ಕಿಚ್ಚ ಸುದೀಪ್ ಕಮಾಲ್ ಎಂದ ಫ್ಯಾನ್ಸ್
ಆರಂಭಕ್ಕೂ ಮುನ್ನವೇ ದಾಖಲೆ ಬರೆಯಿತು Bigg Boss 13: ಕಿಚ್ಚ ಸುದೀಪ್ ಕಮಾಲ್ ಎಂದ ಫ್ಯಾನ್ಸ್
ಸುದೀಪ್ ಸಾರಥ್ಯದ ಬಿಗ್‌ಬಾಸ್ 13ರ ಪ್ರೊಮೋ ಬಿಡುಗಡೆಯಾದ 24 ಗಂಟೆಗಳಲ್ಲಿ 1.5 ಕೋಟಿ ವೀಕ್ಷಣೆ ಪಡೆದು ದಾಖಲೆ ಬರೆದಿದೆ. ಈ ಬಾರಿ ಜನಸಾಮಾನ್ಯರಿಗೂ ಅವಕಾಶವಿದ್ದು, ಹೊಸ ಸ್ಪರ್ಧಿಗಳ ಆಯ್ಕೆಗೆ ಮಾಜಿ ಸ್ಪರ್ಧಿಗಳಾದ ಸಂಗೀತಾ, ವಿನಯ್ ಮತ್ತು ಗಿಲ್ಲಿ ನಟ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತಿದೆ.

ಬಿಗ್‌ಬಾಸ್ 13ಕ್ಕೆ ಕಾತರ
ಸುದೀಪ್ ಸಾರಥ್ಯದ ಬಿಗ್‌ಬಾಸ್ 13ಗೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನೇನು ಕೆಲವೇ ವಾರಗಳಲ್ಲಿ ಸೀಸನ್ ಶುರುವಾಗಲಿದ್ದು, ಇದಾಗಲೇ ಮನೆಯೊಳಕ್ಕೆ ಯಾರು ಹೋಗಲಿದ್ದಾರೆ ಎನ್ನುವ ಬಗ್ಗೆ ಗುಸುಗುಸು-ಪಿಸುಪಿಸು ಮಾತುಗಳು ಶುರುವಾಗಿವೆ.
ಷೋ ಕುರಿತು ಕುತೂಹಲ
ಕಳೆದ ಭಾನುವಾರವಷ್ಟೇ ಸುದೀಪ್ ಇರೋ ಪ್ರೊಮೋ ಬಿಡುಗಡೆಯಾಗಿದ್ದು, ಷೋ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಳವಾಗಿದೆ. ಇದರ ನಡುವೆಯೇ, ಬಿಗ್‌ಬಾಸ್ ನೋಡಲು ಎಷ್ಟು ಜನ ಕಾತರರಾಗಿದ್ದಾರೆ ಎನ್ನುವುದಕ್ಕೆ ಬಿಡುಗಡೆಗೂ ಮುನ್ನವೇ ಬರೆದ ದಾಖಲೆಯೇ ಸಾಕ್ಷಿಯಾಗಿದೆ.
24 ಗಂಟೆಗಳಲ್ಲಿ ದಾಖಲೆ
ಬಿಗ್‌ಬಾಸ್ ಪ್ರೊಮೋ (Bigg Boss Promo) ರಿಲೀಸ್ ಆಗುತ್ತಿದ್ದಂತೆಯೇ, 24 ಗಂಟೆಗಳಲ್ಲಿಯೇ ದಾಖಲೆ ಬರೆದಿದೆ ಪ್ರೊಮೋ. ಇದನ್ನು 15 ಮಿಲಿಯನ್ಗೂ ಅಧಿಕ ಅಂದರೆ 1.5 ಕೋಟಿಗೂ ಅಧಿಕ ಮಂದಿ ಇದನ್ನು ವೀಕ್ಷಣೆ ಮಾಡಿದ್ದಾರೆ. ಈ ಕುರಿತು ವಾಹಿನಿ ಶೇರ್ ಮಾಡಿಕೊಂಡಿದೆ.
ಜನಸಾಮಾನ್ಯರ ಆಯ್ಕೆ
ಈ ಬಾರಿ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಲಾಗಿದ್ದು, ಅವರ ಪೈಕಿ ಯಾರು ಆಯ್ಕೆ ಆಗಿದ್ದಾರೆ ಎನ್ನುವುದು ಕೂಡ ಸಸ್ಪೆನ್ಸ್ ಇಡಲಾಗಿದೆ. ಸೀಸನ್ 13ರ ಸ್ಪರ್ಧಿಗಳಾಗಬೇಕಾದ್ರೆ ಮೊದಲು ಮೂರು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಕೂಡ ಆಗುತ್ತಿದೆ.
ಈ ಮೂವರು ಫಿಕ್ಸ್?
ಇದೀಗ ಸೀಸನ್ 13ರ ಓಪನಿಂಗ್ ಎಪಿಸೋಡ್‌ನಲ್ಲಿ ಮಾಜಿ ಸ್ಪರ್ಧಿಗಳಾದ ನಟಿ ಸಂಗೀತಾ ಶೃಂಗೇರಿ, ನಟ ವಿನಯ್ ಗೌಡ ಮತ್ತು ಹಾಸ್ಯ ಕಲಾವಿದ ಗಿಲ್ಲಿ ನಟ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂವರು ಸಮ್ಮತಿ ಸೂಚಿಸಿದ ನಂತರವಷ್ಟೇ ಹೊಸ ಸ್ಪರ್ಧಿಗಳಿಗೆ ಬಿಗ್‌ಬಾಸ್ ಮನೆಯ ಪ್ರವೇಶ ಸಿಗಲಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.
12ರ ದಾಖಲೆ ಮುರಿಯತ್ತಾ?
ಬಿಗ್‌ಬಾಸ್ 12ರಲ್ಲಿ ಗಿಲ್ಲಿ ನಟ, ಈವರೆಗೆ ಅತ್ಯಂತ ಹೆಚ್ಚು ವೋಟ್ ಪಡೆದು ದಾಖಲೆ ಬರೆದಿದ್ದರು. ಆ ದಾಖಲೆಯನ್ನು ಯಾರು ಮುರಿಯುತ್ತಾರೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

