'ರಾಮಾಚಾರಿ' ಧಾರಾವಾಹಿಯಿಂದ ಹೊರ ನಡೆದ ನಟಿ ಸಿರಿ: ಕಾರಣವೇನು?

'ರಾಮಾಚಾರಿ' ಧಾರಾವಾಹಿಯಲ್ಲಿ ಶರ್ಮಿಳಾ ಪಾತ್ರ ಮಾಡುತ್ತಿದ್ದ ನಟಿ ಸಿರಿ ಸೀರಿಯಲ್‌ನಿಂದ ಹೊರ ನಡೆದಿದ್ದಾರೆ. ನಟಿ ಸಿರಿ ಜಾಗಕ್ಕೆ ಯಾರು ಬರುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. 

Actress Siri walks out from Ramachari serial sgk

ಕನ್ನಡ ಕಿರುತೆರೆ ಲೋಕದ ಖ್ಯಾತ ನಟಿ ಸಿರಿ ರಾಮಾಚಾರಿ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಅನೇಕ ವರ್ಷಗಳ ಬಳಿಕ ನಟಿ ಸಿರಿ ರಾಮಾಚಾರಿ ಮೂಲಕ ಕಿರುತೆರೆಗೆ ಮರಳಿದ್ದರು. ಆದರೀಗ ಈ ಧಾರಾವಾಹಿಯಿಂದನು ಹೊರ ಹೋಗಿದ್ದಾರೆ. ರಾಮಾಚಾರಿ ಧಾರಾವಾಹಿಯಲ್ಲಿ ನಟಿ ಸಿರಿ ಶರ್ಮಿಳಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜಯಶಂಕರ್ ಎರಡನೇ ಪತ್ನಿ ಶರ್ಮಿಳಾ ಪಾತ್ರದಲ್ಲಿ ಸಿರಿ ಬಣ್ಣ ಹಚ್ಚಿದ್ದರು. ಜಯಶಂಕರ್ ಆಗಿ ಗುರುದತ್ ನಟಿಸುತ್ತಿದ್ದಾರೆ. 

ಸಿರಿ ಧಾರಾವಾಹಿಯಿಂದ ಹೊರಬಂದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ದಿಢೀರ್ ಅಂತ ಸೀರಿಯಲ್‌ನಿಂದ ಔಟ್ ಆಗಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಅಂದಹಾಗೆ ಧಾರಾವಾಹಿಯಿಂದ ಹೊರನಡೆದ ಬಗ್ಗೆ ಯಾವುದೇ ಕಾರಣ ಕೂಡ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ ತಮ್ಮ ವೈಯಕ್ತಿಕ ಕಾರಣಕ್ಕೆ ಸೀರಿಯಲ್ ತೊರೆದಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಸದ್ಯ ಧಾರಾವಾಹಿ ತಯಾರಕರು ಸಿರಿ ಪಾತ್ರಕ್ಕೆ ಹೊಸ ಕಲಾವಿದೆಯನ್ನು ಹುಡುಕುತ್ತಿದ್ದಾರೆ. ಅಂದಹಾಗೆ ಸಿರಿ ಜೊತೆಗೆ ಪುತ್ರಿಯ ಪಾತ್ರ ಕೂಡ ಧಾರಾವಾಹಿಯಲ್ಲಿ ಕಣ್ಮರೆಯಾಗಿದೆ. ಎರಡು ಪಾತ್ರಗಳ ಹೊಸ ಮುಖ ಇನ್ಮುಂದೆ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ. ಪ್ರಾರಂಭದಲ್ಲಿ ಶರ್ಮಿಳಾ ಪಾತ್ರ ತುಂಬಾ ಸೈಲೆಂಟ್ ಆಗಿತ್ತು. ಮೊದಲ ಪತ್ನಿ ಮಾನ್ಯತಾ ಹೇಳಿದ ಹಾಗೆ ಕೇಳಬೇಕಿತ್ತು. ಆದರೆ ಶರ್ಮಿಳಾ ಈಗ ಸ್ವಲ್ಪ ಜೋರಾಗಿದ್ದಳು. ಅಷ್ಟರಲ್ಲೇ ಪಾತ್ರದಿಂದ ಸಿರಿ ಹೊರ ಹೋಗಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.  

ಮತ್ತೆ ದಪ್ಪಗಾಗಿರುವೆ ರಾಮಾಚಾರಿ; ನಟ ರಿತ್ವಿಕ್‌ ಲುಕ್‌ ಬಗ್ಗೆ ತಲೆ ಕೆಡಿಸಿಕೊಂಡ ಹೆಣ್ಣುಮಕ್ಕಳು!

ರಾಮಾಚಾರಿ ಧಾರಾವಾಹಿ ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್‌ಗಳಲ್ಲಿ ಒಂದಾಗಿದೆ. ಪ್ರಮುಖ ಪಾತ್ರದಲ್ಲಿ ರಾಮಚಾರಿಯಾಗಿ ನಟ ರಿತ್ವಿಕ್ ಕೃಪಾಕರ್ ಕಾಣಿಸಿಕೊಂಡಿದ್ದಾರೆ. ಇನ್ನೂ ನಾಯಕಿ ಚಾರುಲತಾ ಪಾತ್ರದಲ್ಲಿ ಮೌನಾ ಗುಡ್ಡೆಮನೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ರಾಮಾಚಾರಿ ತಂದೆ ನಾರಾಯಣ ಪಾತ್ರದಲ್ಲಿ ಖ್ಯಾತ ನಟ ಶಂಕರ್ ಅಶ್ವತ್ಥ್ ನಟಿಸಿದ್ದಾರೆ. ಆಚಾರ, ವಿಚಾರ, ಸಂಪ್ರದಾಯಸ್ಥ ಕುಟುಂಬದ ಹುಡುಗ ರಾಮಾಚಾರಿಯಾದ್ರೆ, ಹೈ ಫೈ ಫ್ಯಾಮಿಲಿಯಿಂದ ಬಂದವಳು ಚಾರುಲತಾ. ಹಾವು ಮುಂಗುಸಿಯ ಹಾಗಿದ್ದ ಚಾರು ಮತ್ತು ರಾಮಚಾರಿ ಬಳಿಕ ಸ್ನೇಹಿತರಾಗಿ, ಪ್ರೀತಿಸಿ ಮದುವೆಯಾಗಿದ್ದಾರೆ.

ಕಿರುತೆರೆಯ ಹ್ಯಾಂಡ್ಸಮ್, ಮಲ್ಟಿ ಟ್ಯಾಲೆಂಟೆಡ್ ರಾಮಾಚಾರಿ ನಿರ್ದೇಶನಕ್ಕೂ ಸೈ, ಹಾಡು, ಡ್ಯಾನ್ಸಿಂಗ್‌ಗೂ ಸೈ

ಇಬ್ಬರೂ ಕೆಲಸದ ಜಾಗದಲ್ಲಿ ಪರಿಚಿತರಾದರು. ರಾಮಚಾರಿಯ ಒಳ್ಳೆತನದ ಮುಂದೆ ಚಾರುಲತಾ ದ್ವೇಷ ಕರಗಿ ನೀರಾಗಿ ಪ್ರೀತಿಯಲ್ಲಿ ಬೀಳುತ್ತಾಳೆ. ಒಂದಿಷ್ಟು ಟ್ವಿಸ್ಟ್ ಅಂಡ್ ಟರ್ನ್‌ಗಳೊಂದಿಗೆ ರಾಮಚಾರಿ ಮತ್ತು ಚಾರು ಇಬ್ಬರೂ ಯಾರಿಗೂ ಹೇಳದೆ ಕೇಳದೆ ಮದುವೆಯಾದರು. ಸದ್ಯ ರಾಮಚಾರಿ ಮತ್ತು ಚಾರುಲತಾ ಮದುವೆ ಸೀಕ್ರೆಟ್ ಮನೆಯವರ ಮುಂದೆ ಬಯಲಾಗಿದೆ. ರಾಮಾಚಾರಿ ಮಾಡಿದ ತಪ್ಪನ್ನು ಕುಟುಂಬದವರು ಕ್ಷಮಿಸುತ್ತಾರಾ? ಚಾರುನೇ ತನ್ನ ಮನೆಯ ಸೊಸೆ ಎಂದು ಒಪ್ಪಿಕೊಳ್ಳುತ್ತಾರಾ ಕಾದು ನೋಡಬೇಕಿದೆ. 
 

Latest Videos
Follow Us:
Download App:
  • android
  • ios