ಮಂತ್ರಾಲಯದಲ್ಲಿ ಭಕ್ತಿಯ ಗಾನಸುಧೆ ಹರಿಸಿದ ‘ಶ್ರೀ ರಾಘವೇಂದ್ರ ಮಹಾತ್ಮೆ’ ತಂಡ
‘ಶ್ರೀ ರಾಘವೇಂದ್ರ ಮಹಾತ್ಮೆ ಮಹಾತ್ಮೆ ಸೀರಿಯಲ್ ತಂಡ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ದರ್ಶನ ಪಡೆದು, ಎಲ್ಲರೂ ಜೊತೆಯಾಗಿ ಸೇರಿ ರಾಘವೇಂದ್ರ ಸ್ವಾಮಿ ಸ್ತುತಿಯನ್ನು ಹಾಡಿದ್ದಾರೆ. ಈ ಫೋಟೊಗಳನ್ನು ನಟಿ ಪುಣ್ಯ ಬಸವರಾಜು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಶ್ರೀ ರಾಘವೇಂದ್ರ ಮಹಾತ್ಮೆ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಶ್ರೀ ರಾಘವೇಂದ್ರ ಮಹಾತ್ಮೆ’. ರಾಘವೇಂದ್ರ ಸ್ವಾಮಿಗಳ ಜೀವನದ ಕಥೆಯು ಅದ್ಭುತವಾಗಿ ಮೂಡಿ ಬರುತ್ತಿದ್ದು. ಸದ್ಯ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಕಥೆ ಪ್ರಸಾರವಾಗುತ್ತಿದೆ.
ಮಂತ್ರಾಲಯದಲ್ಲಿ ಸೀರಿಯಲ್ ತಂಡ
ಇದೀಗ ಶ್ರೀ ರಾಘವೇಂದ್ರ ಮಹಾತ್ಮೆ ಸೀರಿಯಲ್ ತಂಡದ ನಿರ್ದೇಶಕರಾದ ನವೀನ್ ಕೃಷ್ಣ ಸೇರಿ, ನಾಯಕ, ನಾಯಕಿ, ಸಹನಟರು ಎಲ್ಲರೂ ಸೇರಿ ಮಂತ್ರಾಲಯ ರಾಯರ ಸನ್ನಿಧಾನಕ್ಕೆ ಭೇಟಿ ನೀಡಿ ಸ್ವಾಮಿಗಳ ದರ್ಶನ ಪಡೆದು ಬಂದಿದ್ದಾರೆ.
ಮಂತ್ರಾಲಯದಲ್ಲಿ ಭಕ್ತಿ ಗಾನ ಸುಧೆ
ತಂಡ ಎಲ್ಲಾ ಸದಸ್ಯರು ಸೇರಿ ಮಂತ್ರಾಲಯದಲ್ಲಿ ಭಕ್ತಿ ಗಾನ ಸುಧೆ ಹರಿಸಿದ್ದಾರೆ. ಹಾಲಲ್ಲಾದರೂ ಹಾಕು ನೀರಲ್ಲಾದರು ಹಾಕು ರಾಘವೇಂದ್ರ, ಹಾಗೂ ಧಾರಾವಾಹಿಯ ಟೈಟಲ್ ಹಾಡು ಧರ್ಮದ ಹರಿಕರ ನೀನಲ್ಲವೇ ಹಾಡನ್ನು ಭಕ್ತಿಯಿಂದ ಹಾಡಿದ್ದಾರೆ.
ಫೋಟೋ-ವಿಡೀಯೋ ಹಂಚಿಕೊಂಡ ಪುಣ್ಯ
ಧಾರಾವಾಹಿಯಲ್ಲಿ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಪತ್ನಿ ಸರಸ್ವತಿ ಪಾತ್ರದಲ್ಲಿ ನಟಿಸುತ್ತಿರುವ ಪುಣ್ಯ ಬಸವರಾಜು, ತಮ್ಮ ಸೋಶಿಯಲ್ ಮೀಡೀಯಾದಲ್ಲಿ ತಮ್ಮ ಕುಟುಂಬದೊಂದಿಗಿನ ಹಾಗೂ ಸೀರಿಯಲ್ ತಂಡದೊಂದಿಗಿನ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.
ಕೊಂಡಾಡಿದ ಅಭಿಮಾನಿಗಳು
ರಾಘವೇಂದ್ರ ಮಹಾತ್ಮೆ ಧಾರಾವಾಹಿಯನ್ನು ನೋಡುವವರು ಬಹಳಷ್ಟು ಜನ ಇದ್ದಾರೆ. ಮಂತ್ರಾಲಯದಲ್ಲಿ ಸೀರಿಯಲ್ ತಂಡವನ್ನು ನೋಡಿ ಅಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಯರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ. ಇನ್ನೂ ಹೆಚ್ಚು ಅವಕಾಶ ಒದಗಿ ಬರಲಿ. ನಿಮಗೆ ನಿಮ್ಮ ಸೀರಿಯಲ್ ತಂಡಕ್ಕೂ ನಿಮಗೂ ಆರಾಯರ ಆಶೀರ್ವಾದ ಸದಾ ಯಾವಾಗಲೂ ಇರಲಿ ಎಂದು ಹಾರೈಸಿದ್ದಾರೆ.
ಯಾರೆಲ್ಲಾ ನಟಿಸುತ್ತಿದ್ದಾರೆ?
ನವೀನ್ ಕೃಷ್ಣ ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಧಾರಾವಾಹಿಯಲ್ಲಿ ಶ್ರೇಯಸ್ ಕಷ್ಯಪ್ ರಾಘವೇಂದ್ರ ಸ್ವಾಮಿಗಳಾಗಿ, ಪುಣ್ಯ ಸರಸ್ವತಿಯಾಗಿ, ಡಾ. ಸಂಜಯ್ ವಿಜಯೇಂದ್ರ ತೀರ್ಥ ಸ್ವಾಮಿಗಳಾಗಿ, ವೀಣೆ ತಿಮ್ಮಣ್ಣರಾಗಿ ಯಧುಶ್ರೇಷ್ಠ, ಶ್ರೀಲತಾ ಅನೂಪ್ ಗೋಪಿಕಾಂಬರಾಗಿ, ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

