- Home
- Entertainment
- TV Talk
- ಮತ್ತೆ ದಪ್ಪಗಾಗಿರುವೆ ರಾಮಾಚಾರಿ; ನಟ ರಿತ್ವಿಕ್ ಲುಕ್ ಬಗ್ಗೆ ತಲೆ ಕೆಡಿಸಿಕೊಂಡ ಹೆಣ್ಣುಮಕ್ಕಳು!
ಮತ್ತೆ ದಪ್ಪಗಾಗಿರುವೆ ರಾಮಾಚಾರಿ; ನಟ ರಿತ್ವಿಕ್ ಲುಕ್ ಬಗ್ಗೆ ತಲೆ ಕೆಡಿಸಿಕೊಂಡ ಹೆಣ್ಣುಮಕ್ಕಳು!
ರಾಮಾಚಾರಿ ಪಾತ್ರ ಬೇಕೇ ಬೇಕು ಎಂದು ಸಣ್ಣಗಾಗಿದ್ದ ರಿತ್ವಿಕ್ ಮತ್ತೆ ದಪ್ಪಗಾಗಿದ್ದಾರೆ ಅನ್ನೋದು ಹೆಣ್ಣು ಮಕ್ಕಳ ದೂರು....

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಪಾತ್ರದಲ್ಲಿ ಮಿಂಚುತ್ತಿರುವುದು ನಟ ರಿಥ್ವಿಕ್ ಕೃಪಾಕರ್.
ರಾಮಾಚಾರಿ ಧಾರಾವಾಹಿ ಆಡಿಷನ್‌ನಲ್ಲಿ ಭಾಗಿಯಾಗಿ ಸಣ್ಣಗಾದರೆ ಮಾತ್ರ ಸೆಲೆಕ್ಟ್ ಮಾಡುವುದು ಎಂದು ಹೇಳಿದ್ದಕ್ಕೆ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ರಿತ್ವಿಕ್ ತೂಕ ಇಳಿಸಿಕೊಂಡರು.
ಆರಂಭದಲ್ಲಿ ಅಷ್ಟಕ್ಕೆ ಅಷ್ಟೆ ಆಗಿತ್ತು...ಆದರೆ ದಿನ ಕಳೆಯುತ್ತಿದ್ದಂತೆ ರತ್ವಿಕ್ ಫ್ಯಾನ್ಸ್ ಹೆಚ್ಚಾದರು ಹಾಗೂ ಟಿಆರ್‌ಪಿ ಕೂಡ ಗಗನ ಮುಟ್ಟಿತ್ತು.
ಕಳೆದು ಮೂರ್ನಾಲ್ಕು ಎಪಿಸೋಡ್‌ನಲ್ಲಿ ರಾಮಾಚಾರಿ ತುಂಬಾ ದಪ್ಪ ಕಾಣಿಸುತ್ತಿದ್ದಾರೆ ಅನ್ನೋದು ನೆಟ್ಟಿಗರು ಕಾಮೆಂಟ್. ಇದರ ಬಗ್ಗೆ ರಿತ್ವಿಕ್ ಪ್ರಿತಿಕ್ರಿಯೆ ನೀಡಿಲ್ಲ.
ಸದ್ಯ ರಾಮಾಚಾರಿ ಮತ್ತು ಚಾರು ನಡುವೆ ಮದುವೆ ಅನ್ನೋ ಜಗಳ ನಡೆಯುತ್ತಿದೆ. ಕಟ್ಟಿರುವ ತಾಳಿಯನ್ನು ತೆಗೆಯುವಂತೆ ಚಾರಿ ಹೇಳಿದೆ ಆಗಲ್ಲ ಎಂದು ಚಾರು ವಾದ ಮಾಡುತ್ತಿದ್ದಾಳೆ.
ಚಾರು ಬಲವಂತ ಪ್ರೀತಿಗೆ ರಾಮಾಚಾರಿ ಸೋಲುತ್ತಾನೆ ಅಂದುಕೊಂಡರೆ ಕುಟುಂಬವೇ ನನ್ನ ಮೊದಲ ಆಧ್ಯತೆಯಂದು ಚಾರುಯಿಂದ ದೂರು ಉಳಿಯುತ್ತಿದ್ದಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.