Asianet Suvarna News Asianet Suvarna News

ಚಂದನ್‌ ಶೆಟ್ಟಿ-ನಿವೇದಿತಾಗೆ ಸಿಕ್ತು ಒಂದೇ ದಿನದಲ್ಲಿ ಡಿವೋರ್ಸ್‌, ಏನಿದು ಫ್ಯಾಮಿಲಿ ಕೋರ್ಟ್‌ 13ಬಿ ಸೆಕ್ಷನ್‌?

ಅದನ್ನ ಫ್ರೆಂಡ್ಲಿ ಡಿವೋರ್ಸ್‌  (divorce) ಅಂತೀರೋ, ನಿಜವಾದ ಡಿವೋರ್ಸ್‌ ಅಂತೀರೋ ಗೊತ್ತಿಲ್ಲ. ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ (chandan shetty) ಹಾಗೂ ನಿವೇದಿತಾ ಗೌಡ (niveditha gowda ) ಮಾತ್ರ ಅಧಿಕೃತವಾಗಿ ಬೇರೆ ಬೇರೆಯಾಗಿದ್ದಾರೆ. ಇದರ ನಡುವೆ ಇವರಿಬ್ಬರಿಗೆ ಒಂದೇ ದಿನದಲ್ಲಿ ವಿಚ್ಛೇದನ ಸಿಕ್ಕಿದ್ದುಹೇಗೆ ಎನ್ನುವ ಪ್ರಶ್ನೆಯೂ ಎಲ್ಲರಲ್ಲಿ ಉದ್ಭವವಾಗಿದೆ.
 

actress niveditha gowda chandan shetty 13b of family court act Get divorce in One day san
Author
First Published Jun 7, 2024, 9:52 PM IST

ಬೆಂಗಳೂರು (ಜೂ.7): ಅದು ಮೈಸೂರು ಯುವ ದಸರಾ (Mysuru Yuva Dasara) ವೇದಿಕೆಯಲ್ಲಿ ಚಂದನ್‌ ಶೆಟ್ಟಿ (chandan shetty) ಆಗಷ್ಟೇ ತಮ್ಮ ಕಾರ್ಯಕ್ರಮ ಮುಗಿಸಿದ್ದರು. ಮುಗಿಸಿದವರೇ ನೇರವಾಗಿ ಮಂಡಿಯೂರಿ, ನಿವೇದಿತಾ ಗೌಡಗೆ (actress niveditha gowda ) ಪ್ರಪೋಸ್‌ ಮಾಡಿಬಿಟ್ಟರು. ನೆರೆದಿದ್ದ ಜನಸ್ತೋಮ 'ಹೋ..' ಎಂದು ಕೂಗಿ ಸಂಭ್ರಮಿಸಿತ್ತು. ಅದಾದ ನಂತರ ಆಗಿದ್ದು ಮಾತ್ರ ವಿವಾದ. ಯುವ ದಸರಾ ಇಂಥದ್ದಕ್ಕೆಲ್ಲಾ ವೇದಿಕೆಯಲ್ಲ ಅನ್ನೋದರೊಂದಿಗೆ ಅಂದಿನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣನವರ (V Somanna) ಟೀಕೆಗೂ ಕಾರಣವಾಗಿತ್ತು.  ಚಂದನ್‌ ಶೆಟ್ಟಿ ವರ್ತನೆಗೆ ಅವರು ತೀವ್ರ ಅಸಮಾಧಾನ ಕೂಡ ವ್ಯಕ್ತಪಡಿಸಿದ್ದರು. ಕೊನೆಗೆ ಚಂದನ್‌ ಶೆಟ್ಟಿಯೇ ಇದಕ್ಕೆ ಕ್ಷಮೆ ಕೇಳಿದರೆ, ಅಂದಿನ ಮೈಸೂರು ಕೊಡಗು ಸಂಸದ ಪ್ರತಾಪ್‌ ಸಿಂಹ ಹೊಸ ಜೋಡಿಯ ಪರವಾಗಿ ಮಾತನಾಡಿ ವಿಚಾರ ತಣ್ಣಗೆ ಮಾಡಿದ್ದರು. ಅದಾಗಿ ಸ್ವಲ್ಪವೇ ದಿನಗಳಲ್ಲಿ 2020ರ ಫೆಬ್ರವರಿ 26 ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯಾಗಿದ್ದರು. ಬಿಗ್‌ ಬಾಸ್‌ನಲ್ಲಿ (Bigg Boss Kannada actress niveditha gowda ) ಚಂದನ್‌ ಶೆಟ್ಟಿ, ನಿವೇದಿತಾ ಗೌಡರನ್ನು ತಂಗಿ ತಂಗಿ ಎಂದೇ ಕರೆಯುತ್ತಿದ್ದರು. ಕೊನೆಗೆ ಇದೇ ಜೋಡಿ ಗಂಡ ಹೆಂಡ್ತಿಯಾದಾಗ ಎಲ್ಲರೂ ಅಚ್ಚರಿ ಪಟ್ಟಿದ್ದರು. ಆದರೆ, ಇವರಿಬ್ಬರ ಸಂಸಾರ ತೀರಾ ಕಳೆದ ವಾರದವರೆಗೂ ಚೆನ್ನಾಗಿಯೇ ಇತ್ತು. ಗುರುವಾರದವರೆಗೂ ಗಂಡ-ಹೆಂಡ್ತಿಯಾಗಿದ್ದ ಜೋಡಿ ಇಂದಿ ನೀನ್ಯಾರೋ? ನಾನ್ಯಾರೋ? ಅಂತಿದ್ದಾರೆ.

ಯೆಸ್‌ ಈ ಜೋಡಿಗೆ ಒಂದೇ ದಿನದಲ್ಲಿ ವಿಚ್ಛೇದನ ಸಿಕ್ಕಿದೆ. ಫ್ಯಾಮಿಲಿ ಕೋರ್ಟ್‌ನಲ್ಲಿ ಗುರುವಾರ ಅರ್ಜಿ ಹಾಕಿದ್ದ ಈ ಜೋಡಿಗೆ ಶುಕ್ರವಾರ ವಿಚ್ಛೇದನ ಸಿಕ್ಕಿದೆ. ಅರೇ ಇದೇನಿದು ದೇಶದ ಎಲ್ಲಾ ಕಡೆ ವಿಚ್ಛೇದನ ಅಂದ್ರೆ ವರ್ಷಗಳ ಕಾಲ ನಡೆಯುವ ಪ್ರಕ್ರಿಯೆ ಆಗಿರುವಾಗ ಇವರಿಗೆ ವಿಚ್ಛೇದನ ಒಂದೇ ದಿನದಲ್ಲಿ ಸಿಕ್ಕಿದ್ದಾದರೂ ಹೇಗೆ ಎನ್ನುವ ಅನುಮಾನ ವ್ಯಕ್ತವಾಗಿತ್ತು. ಕೆಲವರು ಇವರು ವಿಚ್ಛೇದನ ಪಡೆದಿದ್ದೇ ಸುಳ್ಳು ಎನ್ನತೊಡಗಿದರು. ಆದರೆ, ಸಂಜೆಯ ವೇಳೆಗೆ ಇವರಿಬ್ಬರೂ ತಮ್ಮ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಸುದ್ದಿ ಹಂಚಿಕೊಂಡಾಗ ಖಚಿತವಾಗಿತ್ತು. ಆದರೆ, ಒಂದೇ ದಿನದಲ್ಲಿ ಇವರಿಗೆ ವಿಚ್ಛೇದನ ಸಿಕ್ಕಿದ್ದು ಹೇಗೆ ಎನ್ನುವುದಕ್ಕೆ ಮಾತ್ರ ಉತ್ತರ ಸಿಕ್ಕಿರಲಿಲ್ಲ. ಇದಕ್ಕೆ ಕಾರಣವಾಗಿದ್ದು, ಫ್ಯಾಮಿಲಿ ಕೋರ್ಟ್‌ನ 13ಬಿ ಸೆಕ್ಷನ್‌..

ಏನಿದು 13 ಬಿ ಸೆಕ್ಷನ್‌: ಗಂಡ-ಹೆಂಡತಿಗೆ ಜತೆಯಾಗಿ ಬದುಕಲು ಕಷ್ಟವಾಗುತ್ತಿದೆ ಎಂದಾಗ ಅತ್ಯಂತ ಸುಲಭವಾಗಿ ಹಾಗೂ ತ್ವರಿತವಾಗಿ ವಿಚ್ಛೇದನ ಪಡೆಯುವ ಮಾರ್ಗ ಇದು. ಹಿಂದೂ ವಿವಾಹ ಕಾಯಿದೆ 1955ರ ಸೆಕ್ಷನ್‌ 13ಬಿಯು ಫ್ಯಾಮಿಲಿ ಕೋರ್ಟ್‌ನಲ್ಲಿ ದಂಪರಿಗಳಿಗೆ ಸಮ್ಮತಿಯ ಒಪ್ಪಿಗೆ ನೀಡಿ ಡಿವೋರ್ಸ್‌ ಪಡೆಯಲು ಅವಕಾಶ ದಯಪಾಲಿಸುತ್ತದೆ. ಇದಕ್ಕಾಗಿ ಗಂಡ-ಹೆಂಡತಿ ಇಬ್ಬರೂ ಮ್ಯೂಚುವಲ್‌ ಕನ್ಸೆಂಟ್‌ ಅಂದರೆ ಶಾಂತಿಯುತ ಪ್ರತ್ಯೇಕತೆಗೆ ಒಪ್ಪಿಗೆ ನೀಡುವ ಅಗ್ರಿಮೆಂಟ್‌ಅನ್ನು ಕೋರ್ಟ್‌ಗೆ ನೀಡಬೇಕು. 1976ರ ಮೇ 27 ರಂದು ಹಿಂದೂ ವಿವಾಹ ಕಾಯಿದೆಯಲ್ಲಿ ಈ ನಿಬಂಧನೆಯನ್ನು ಸೇರಿಸಲಾಗಿದೆ. ಹಾಗಂತ ಈ ಕನ್ಸೆಂಟ್‌ ಫಾರ್ಮ್‌ನಲ್ಲಿ ಡಿವೋರ್ಸ್‌ ಅರ್ಜಿ ಸಲ್ಲಿಕೆ ಮಾಡಬೇಕಾದಲ್ಲಿ ಎರಡೂ ಕಡೆಯವರು ಕೆಲವೊಂದು ಷರತ್ತುಗಳನ್ನು ಪಾಲನೆ ಮಾಡಬೇಕಾಗುತ್ತದೆ. ಇಬ್ಬರೂ ಕೂಡ ಕಳೆದೊಂದು ವರ್ಷದಿಂದ ಒಟ್ಟಿಗೆ ವಾಸ ಮಾಡುತ್ತಿರುವ ಮಾಹಿತಿ ನೀಡಬೇಕು. ಮದುವೆ ಮುರಿಯುವ ಮಾತಿಗೆ ಇಬ್ಬರದೂ ಬೇಷರತ್‌ ಒಪ್ಪಿಗೆ ಇರಬೇಕು. ತೀರಾ ಕೆಲವೊಂದು ಸಂದರ್ಭದಲ್ಲಿ ಮಾತ್ರವೇ 1 ವರ್ಷ ಒಟ್ಟಿಗೆ ಬಾಳುವ ಕ್ಲಾಸ್‌ಅನ್ನು ಕೋರ್ಟ್‌ ತೆಗೆದುಹಾಕುತ್ತದೆ. ಇನ್ನೂ ಕೆಲವೊಂದು ಷರತ್ತಿನಲ್ಲಿ ತುರ್ತು ವಿಚ್ಛೇದನ ಸಿಗುತ್ತದೆ. ಆದರೆ, 13 ಬಿ ಸೆಕ್ಷನ್‌ನಲ್ಲಿ ವಿಚ್ಛೇದನ ಪಡೆಯಲು ಚಂದನ್‌ ಹಾಗೂ ನಿವೇದಿತಾ ಏನು ಕಾರಣ ನೀಡಿದ್ದಾರೆ ಅನ್ನೋದು ಸ್ಪಷ್ಟವಿಲ್ಲ.

ವಿಚ್ಛೇದನದ ಬಳಿಕ ನಿವೇದಿತಾ ಗೌಡ, ಚಂದನ್‌ ಶೆಟ್ಟಿ ಮೊದಲ ಪೋಸ್ಟ್‌, ಏನಂದ್ರು ಕ್ಯೂಟ್‌ ಕಪಲ್ಸ್!

ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಬಿಗ್‌ಬಾಸ್‌ ಸೀಸನ್‌ 5ರಲ್ಲಿ ಜನರಿಗೆ ಪರಿಚಯವಾಗಿದ್ದರು. ಇದೇ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ, ಲವ್‌ ಆಗಿತ್ತು. ನಿವೇದಿತಾ ಗೌಡರ ಮೇಳೆ ಬೊಂಬೆ ಬೊಂಬೆ ಎಂಬ ಹಾಡು ಬರೆದು ಎಲ್ಲರನ್ನೂ ರಂಜಿಸಿದ್ದರು.

ಬಿಗ್‌ ಬಾಸ್‌ ಟು ಡಿವೋರ್ಸ್‌..'ಬೊಂಬೆ..' ಬಾಳಿನಲ್ಲಿ ವಿಲನ್‌ ಆಗಿದ್ಯಾರು?

ಚಂದನ್‌ ಶೆಟ್ಟಿ-ನಿವೇದಿತಾ ಗೌಡ ವಿಚ್ಛೇದನದ ಸಂಪೂರ್ಣ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Latest Videos
Follow Us:
Download App:
  • android
  • ios