ವಿಚ್ಛೇದನದ ಬಳಿಕ ನಿವೇದಿತಾ ಗೌಡ, ಚಂದನ್ ಶೆಟ್ಟಿ ಮೊದಲ ಪೋಸ್ಟ್, ಏನಂದ್ರು ಕ್ಯೂಟ್ ಕಪಲ್ಸ್!
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಸುದ್ದಿ ಇಂದು ಸ್ಯಾಂಡಲ್‌ವುಡ್‌ಗೆ ಬರಸಿಡಿಲಿನಂತೆ ಬಡಿದಿದೆ. ಇವರ ವಿಚ್ಛೇದನವಾಗಿದ್ದು ಹೌದೋ ಇಲ್ಲವೋ ಎನ್ನುವ ಅನುಮಾನಗಳ ನಡುವೆ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಕುತೂಹಲ ಕೆರಳಿಸಿದೆ.
ಬೆಂಗಳೂರು (ಜೂ.7): ಸಂಗೀತ ನಿರ್ದೇಶಕ ಹಾಗೂ ರಾಪರ್ ಚಂದನ್ ಶೆಟ್ಟಿ (chandan shetty) ಹಾಗೂ ನಿವೇದಿತಾ ಗೌಡ (niveditha gowda) ತಮ್ಮ 4 ವರ್ಷಗಳ ದಾಂಪತ್ಯವನ್ನು (Wedding) ಕೊನೆ ಮಾಡಿದ್ದಾರೆ. ಇವರಿಗೆ ಒಂದೇ ದಿನದಲ್ಲಿ ಇಂದು ವಿಚ್ಛೇದನ (divorce ) ದೊರೆತಿದೆ. ಫ್ಯಾಮಿಲಿ ಕೋರ್ಟ್‌ನಲ್ಲಿ (Family Court) ಗುರುವಾರ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ಇವರಿಗೆ ಕೋರ್ಟ್ ಇಂದು ವಿಚ್ಛೇದನ ಮಂಜೂರು ಮಾಡಿದೆ. ಇದರ ಬೆನ್ನಲ್ಲಿಯೇ ಇವರು ವಿಚ್ಛೇದನವಾಗಿದ್ದು ಹೌದೋ ಇಲ್ಲವೋ ಎನ್ನುವ ಗೊಂದಲಗಳಿದ್ದವು. ಒಂದೇ ದಿನದಲ್ಲಿ ವಿಚ್ಛೇದನ ಹೇಗೆ ಸಾಧ್ಯ ಎನ್ನುವ ಪ್ರಶ್ನೆಗಳ ನಡುವೆ ಮಾಜಿ ದಂಪತಿಗಳು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social Media) ಇದನ್ನು ಖಚಿತಪಡಿಸಿದ್ದಾರೆ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರೂ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ನಾಲ್ಕು ವರ್ಷದ ದಾಂಪತ್ಯ ಪರಸ್ಪರ ಒಪ್ಪಿಗೆಯ ಮೇರೆಗೆ ಅಂತ್ಯವಾಗಿದೆ. ಎಲ್ಲರಿಗೂ ಥ್ಯಾಂಕ್ಸ್ ಎನ್ನುವ ನೋಟ್ ಕೂಡ ಬರೆದಿದ್ದಾರೆ.
'ಈ ದಿನ, ಚಂದನ್ ಶೆಟ್ಟಿ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನ ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ,ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತೆವೆ. ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು' ಎಂದು ನಿವೇದಿತಾ ಗೌಡ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ನಿವೇದಿತಾ ಗೌಡ ಅವರು ಪೋಸ್ಟ್ ಮಾಡಿದ ರೀತಿಯಲ್ಲೇ ಚಂದನ್ ಗೌಡ ಕೂಡ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ತಮ್ಮ ವಿಚ್ಛೇದನದ ಬಗ್ಗೆ ಅಧಿಕೃತವಾಗಿ ಇಬ್ಬರೂ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ದಾಂಪತ್ಯ ಜೀವನವನ್ನು ಕಾನೂನು ಬದ್ಧವಾಗಿ ಒಪ್ಪಿ ಕೊನೆಗೊಳಿಸಿಕೊಂಡಿರುವುದಾಗಿ ಅವರು ಪೋಸ್ಟ್ ಹಾಕಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ಅಧಿಕೃತ ಖಾತೆಗಳಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಈ ಪೋಸ್ಟ್ ಮಾಡಿದ್ದಾರೆ. ವಿಚ್ಛೇದನ ಪಡೆದಿದ್ದರು ನಾವು ಒಬ್ಬರನೊಬ್ಬರು ಗೌರವಿಸೋದಾಗಿ ಹೇಳಿದ್ದಾರೆ.
ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿಚ್ಛೇದನದ ಸಂಪೂರ್ಣ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನು ಚಂದನ್ ಶೆಟ್ಟಿ ಅವರ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಹೆಚ್ಚಿನವರು ನಿಮ್ಮ ಜೀವನದಲ್ಲಿ ನಿವೇದಿತಾ ಗೌಡ ಹೊರಗೆ ಹೋಗಿದ್ದೇ ಒಳ್ಳೆಯದಾಯಿತು ಎಂದಿದ್ದಾರೆ. 'ಒಳ್ಳೆದಾಯ್ತು ಬಿಡಿ ಚಂದನ್. ಮುಂದೆ ನಿಮ್ಮ ಹೆಸರು ಗೌರವವನ್ನ ಹೆಚ್ಚಿಸೋ ಹುಡುಗಿ ನಿಮ್ಮ ಜೀವನಕ್ಕೆ ಬರಲಿ. ಸ್ಟ್ರಾಂಗ್ ಆಗಿ ಇರಿ..' ಎಂದು ಬರೆದಿದ್ದಾರೆ. 'ಒಳ್ಳೆದೆ ಆಯ್ತು,, ನಮ್ ಹಳೆ ಶೆಟ್ರು ನಮ್ಗೆ ವಾಪಾಸ್ಸು ಬರ್ಲಿ... ಆ ಮ್ಯೂಸಿಕ್ ಮತ್ತೆ ಬರಬೇಕು' ಎಂದು ಇನ್ನೊಬ್ಬರು ಬರೆದಿದ್ದಾರೆ. ನೀವು ಡಿವೋರ್ಸ್ ತೆಗೆದುಕೊಂಡು ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಚಂದನ್‌ಗೆ ಬರೆದಿದ್ದಾರೆ.
ಬಿಗ್ ಬಾಸ್ ಟು ಡಿವೋರ್ಸ್..'ಬೊಂಬೆ..' ಬಾಳಿನಲ್ಲಿ ವಿಲನ್ ಆಗಿದ್ಯಾರು?
'ಡೈವೋರ್ಸ್ ಅನ್ನೋದು ಒಂದೂ ಶೋಕಿ ಆಗಿ ಹೋಗಿದೆ ಇವರಿಗೆಲ್ಲ, ಅಷ್ಟು ಸಣ್ಣ ವಯಸ್ಸಲ್ಲಿ ಮದುವೆ ಆಗಿ ಡೈವೋರ್ಸ್ ಅಂದ್ರೆ. ಪಬ್ಲಿಕ್ ಅಲ್ಲಿ ಪ್ರಪೋಸ್ ಮಾಡುವಾಗ ಇರೋ ಹುಮ್ಮಸ್ಸು ಲೈಫ್ ಲಾಂಗ್ ಇರ್ಬೇಕು ಇಲ್ಲ ಅಂದ್ರೆ ಅದ್ಕೆ ಬೇರೆ ಅರ್ಥಾನೆ ಬರುತ್ತೆ..' ಎಂದು ನಿವೇದಿತಾ ಗೌಡ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. 'ನೀನು ಒಳ್ಳೆವಳೇ ಆಗಿ ಉಳಿಬೇಕು ಅಂದ್ರೇ, ನನ್ನದೊಂದು ಸಲಹೆ, ಮತ್ತೆ ಈ ಬಣ್ಣದ ಲೋಕಕ್ಕೆ ಕಾಲು ಇಡಬೇಡ. ಯಾವುದೇ ಒಂದು ರಿಯಾಲಿಟಿ ಶೋ ಆಗ್ಲಿ, ಇನ್ನೊಂದು ಮಗದೊಂದು ಆಗ್ಲಿ, ಒಟ್ನಲ್ಲಿ ಈ ಬಣ್ಣದ ಲೋಕ ಬಿಟ್ಟು ದೂರ ಇರು.. ಇಲ್ಲ ಅಂದ್ರೇ ಕಾಯ್ತಾ ಕುಳಿತ ಕೆಳ ಕೆಟ್ಟ ಹುಳುಗಳು ನಿನ್ನ ಸರಿಯಾಗಿ ಬಳಕೆ ಮಾಡ್ಕೊಳೋಕೆ ತಡವರಸ್ತಾ ಇದ್ದಾರೆ ಅನ್ಸುತ್ತೆ.. ಇದು ನನ್ನ ವೈಯಕ್ತಿಕ ಮಾತು..' ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.
ಚಂದನ್ ಶೆಟ್ಟಿ, ನಿವೇದಿತಾ ಗೌಡ ಸಡನ್ ವಿಚ್ಛೇದನಕ್ಕೆ ದಿಗ್ಭ್ರಮೆ; ಕಾನೂನು ಬದಲಾಯಿತೇ?