ಚಕ್ರವರ್ತಿ ಚಂದ್ರಚೂಡ್, ಕಿಚ್ಚ ಸುದೀಪ್ ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕೆ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ. ಸುದೀಪ್ ರಾಜ್ಯ ಪ್ರಶಸ್ತಿ ತಿರಸ್ಕರಿಸಿದ್ದಕ್ಕೆ ಚಕ್ರವರ್ತಿ ಬೆಂಬಲ ವ್ಯಕ್ತಪಡಿಸಿದ್ದರು. ಇದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ, ಸುದೀಪ್ ನಿರ್ಧಾರಗಳಿಗೆ ಚಕ್ರವರ್ತಿ ಕಾರಣ ಎಂದು ದೂರಿದ್ದಾರೆ. ಚಕ್ರವರ್ತಿ ಸುದೀಪ್‌ರನ್ನು ಬಿಟ್ಟು ಹೋಗುವಂತೆ ಅವಹೇಳನಕಾರಿ ಕಾಮೆಂಟ್‌ಗಳು ಬಂದಿವೆ. ಚಕ್ರವರ್ತಿ ಸುದೀಪ್ ಮೇಲಿನ ಗೌರವ ಹಾಗೂ ಅಭಿಮಾನ ಶಾಶ್ವತ ಎಂದು ತಿಳಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 8’ ಶೋನಲ್ಲಿ ಭಾಗವಹಿಸಿದ್ದ ಚಕ್ರವರ್ತಿ ಚಂದ್ರಚೂಡ್ ಅವರು ಆಮೇಲೆ ಸಾಕಷ್ಟು ಕಡೆ ಕಿಚ್ಚ ಸುದೀಪ್ ಜೊತೆ ಕಾಣಿಸಿಕೊಂಡರು. ಅಷ್ಟೇ ಅಲ್ಲದೆ ಸಾಕಷ್ಟು ಬಾರಿ ಸುದೀಪ್ ಪರವಾಗಿ ಪೋಸ್ಟ್ ಹಂಚಿಕೊಂಡಿದ್ದರು. ಈಗ ಸುದೀಪ್ ಅಭಿಮಾನಿಗಳು ಚಕ್ರವರ್ತಿ ವಿರುದ್ಧ ಹರಿಹಾಯ್ದಿದ್ದಾರೆ. ಇದಕ್ಕೆ ಚಕ್ರವರ್ತಿ ಚಂದ್ರಚೂಡ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕೆಟ್ಟ ಕೆಟ್ಟ ಕಾಮೆಂಟ್ ಮಾಡೋದು ಯಾಕೆ?
ಕಿಚ್ಚ ಸುದೀಪ್ ಅವರಿಗೆ 2019 ರ ಸಾಲಿನ ಅತ್ಯುತ್ತಮ ನಟ ಎಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಅದನ್ನು ಸುದೀಪ್ ಅವರು ತಿರಸ್ಕರಿಸಿದ್ದರು. ಈ ವಿಚಾರವಾಗಿ ಅನೇಕರಿಗೆ ಖುಷಿಯಾದರೆ, ಇನ್ನೂ ಕೆಲವರು ಬೇಸರ ಹೊರಹಾಕಿದ್ದರು. ಈಗ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಅನೇಕರು ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಹರಿಹಾಯ್ದಿದ್ದಾರೆ. ಕಿಚ್ಚ ಸುದೀಪ್ ಅವರ ಜೊತೆ ಚಕ್ರವರ್ತಿ ಚಂದ್ರಚೂಡ್ ಸ್ನೇಹ ಆರಂಭಿಸಿದ ಮೇಲಕೆ ಸುದೀಪ್ ಈ ರೀತಿ ನಿರ್ಧಾರಗಳನ್ನು ಮಾಡ್ತಿದ್ದಾರೆ ಅಂತ ಕೆಲವರು ಅಸಭ್ಯ ಭಾಷೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಿದ್ದಾರೆ. ಇದಕ್ಕೆ ಚಕ್ರವರ್ತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನಟ ಕಿಚ್ಚ ಸುದೀಪ್ ಕಡೆಯಿಂದ ಬಂಪರ್ ಆಫರ್ ಪಡೆದ ʼBigg Bossʼ ಹಂಸ ನಾರಾಯಣಸ್ವಾಮಿ! ಏನದು?
ಚಕ್ರವರ್ತಿ ಚಂದ್ರಚೂಡ್ ಏನಂದ್ರು?
ಕಿಚ್ಚ ಸುದೀಪ್ ಅವರಿಂದ ಚಕ್ರವರ್ತಿ ಚಂದ್ರಚೂಡ್ ದೂರ ಆಗಬೇಕು, ಕಿಚ್ಚ ಸುದೀಪ್ ಇವರನ್ನು ಹೇಗೆ ಬಿಟ್ಕೊಂಡರು ಅಂತೆಲ್ಲ ಕೆಲವರು ಅಸಭ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಚಕ್ರವರ್ತಿ ಚಂದ್ರಚೂಡ್ ಅವರು “ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಇಷ್ಟು ಅಪಭ್ರಂಶವಾಗಲು ಸಾಧ್ಯವೇ? ಬಾದ್ ಶಾ ಎಂದರೆ ಗೌರವ ಅಭಿಮಾನ ಸದಾ ನನ್ನಲ್ಲಿ ಶಾಶ್ವತ.. ಒಂದು ವಿದಾಯ.ಅಂದ ಹಾಗೆ ನಿಮ್ಮ ತಾಯಿ ನನ್ನ ತಾಯಿಯೂ ಹೌದು” ಎಂದು ಹೇಳಿದ್ದಾರೆ.
'ಹಿಂದಿ ಬಿಗ್ ಬಾಸ್ 13' ಶೋನಲ್ಲಿ ನಡೆದ ರೋಮಾಂಚನಕಾರಿ ಘಟನೆಯೊಂದು ಕನ್ನಡ ಬಿಗ್ ಬಾಸ್‌ನಲ್ಲಿ ಮರುಕಳಿಸಿತು! ಏನದು?
ಅಂದಹಾಗೆ ಚಕ್ರವರ್ತಿ ಪೋಸ್ಟ್‌ಗೆ ಮೋಹನಾಮೃತ ಶೇಖರ್ ಎನ್ನುವವರು “ಸುದೀಪ್ ಅವರ ಎಲ್ಲಾ ನಿರ್ಧಾರಗಳಲ್ಲಿ ಇದು ಮನಸಿಗೆ ನೋವುಂಟು ಮಾಡಿದೆ. ಡಾಕ್ಟರೇಟ್ ನಿರಾಕರಣೆ ಮಾಡಿದ್ದು ಖಂಡಿತ ಅಭಿನಂದನೀಯ. ಆದ್ರೆ ಉತ್ತಮ ನಟ ಅಂದ್ರೆ ಅವರ ಪರಿಶ್ರಮ ಅಲ್ವಾ ಅದು? ಯಾಕ್ ಬೇಡ ಅನ್ಬೇಕು? ಅಭಿಮಾನಿಗಳಾಗಿ ನಮಗೂ ಅದು ಹೆಮ್ಮೆಯ ವಿಷಯ. ನಿಜಕ್ಕೂ ಅವರ ಮುಕುಟಕ್ಕೆ ಒಂದು ಪುಟ್ಟ ಗರಿಯ ಹಾಗೆ ಅದು. ಅಲಂಕರಿಸಲು ಬಿಟ್ಟಿದ್ರೆ ಇನ್ನಷ್ಟು ಮೆರುಗು ನೀಡ್ತಾ ಇತ್ತು. ತಾನಾಗೇ ಬಂದದ್ದನ್ನು ತಿರಸ್ಕಾರ ಮಾಡೋದು ಯಾಕೋ ಸರಿ ಅನ್ಸಿಲ್ಲ. ಪ್ರಶಸ್ತಿ ಹಿಂದೆ ಬೀಳೋರ ನಡುವೆ ಅಭಿಮಾನಿಗಳಿಗೆ ಇದು ಗರ್ವದ ವಿಷ್ಯ ಅಲ್ವಾ? ನಿಮಗೆ ಯಾಕ್ ಬೇರೆ ಜನ ಬೈತಾ ಇದಾರೆ ಅದೂ ಗೊತ್ತಾಗ್ತಾ ಇಲ್ಲ...ಸಾಧ್ಯ ಆದ್ರೆ ಸುದೀಪ್ ಅವರಿಗೆ ಅರ್ಥ ಮಾಡ್ಸಿ. ಡಾಕ್ಟರೇಟ್ ಬೇರೆ, ಉತ್ತಮ ನಟ ಪ್ರಶಸ್ತಿ ಬೇರೆ ಅಲ್ವಾ? 25 ವರ್ಷಕ್ಕೂ ಅಧಿಕ ಚಿತ್ರರಂಗದಲ್ಲಿ ಇದ್ದಾರೆ ಅಂದ್ರೆ ಅವರು ಉತ್ತಮ ನಟ ಆಗಿರೋದಕ್ಕೆ ಅಲ್ವಾ” ಎಂದು ಹೇಳಿದ್ದಾರೆ.
BBK 11: ಮೋಕ್ಷಿತಾ ಪೈಗೆ ಯಾಕೆ ಹತ್ತಿರವಾಗಲಿಲ್ಲ? ಅದಕ್ಕೆ ಈ ವ್ಯಕ್ತಿಯೇ ಕಾರಣವೆಂದ ತ್ರಿವಿಕ್ರಮ್
ರಾಜ್ಯ ಪ್ರಶಸ್ತಿ ತಿರಸ್ಕರಿಸಿದ್ದರ ಬಗ್ಗೆಯೂ ಚಕ್ರವರ್ತಿ ಅವರು ಸೋಶಿಯಲ್ ಮೀಡಿಯಾದಲ್ಲಿ “ಕಿಚ್ಚ ಸುದೀಪ್ ಅವರದ್ದು ಸ್ವಾಗತಾರ್ಹ ನಿರ್ಧಾರ....ಗೌರವ ಡಾಕ್ಟರೇಟ್ ನಿರಾಕರಣೆಗಿದ್ದ ಕಾರಣ ಇಲ್ಲಿಯೂ ಮುಂದುವರಿದಿದೆ ಅಷ್ಟೇ. ಇತ್ತೀಚಿನ ವರ್ಷಗಳಲ್ಲಿ ಅವರು ಸೈಮಾ ಅಥವಾ ಬೇರೆ ಯಾವುದೇ ಖಾಸಗಿ ಸಂಸ್ಥೆಗಳ ಬಹುಮತಿ ಸನ್ಮತಿ ಸ್ವೀಕರಿಸಿಲ್ಲ ..ಕಳೆದ ವರ್ಷಸೈಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಷ್ಟೆ. ನಿರಾಕರಣೆ ಮತ್ತು ಬದ್ಧತೆಗೆ ಅಂತಶಕ್ತಿ ಬೇಕು. ಒಂದು ಕೌತುಕ -ಬೆರಗು ಆಶ್ಚರ್ಯಗಳ ಸಂಕಲನವೇ ನಮ್ಮ ಬಾದ್ ಶಾ ಕಿಚ್ಚ ಸುದೀಪ್” ಎಂದು ಬರೆದುಕೊಂಡಿದ್ದರು.
