'ನನ್ನ ಖಾಸಗಿತನಕ್ಕೆ ಧಕ್ಕೆ ತರುತ್ತಿರುವ ಈ ಕಿಡಿಗೇಡಿಗಳನ್ನು ಸುಮ್ಮನೆ ಬಿಡಬಾರದು" ಎಂದು ಖಡಕ್ ಆಗಿ ಹೇಳಿದ್ದಾರೆ. ಸದ್ಯ ಸಂಜಯ್ ನಗರ ಪೊಲೀಸರು FIR ದಾಖಲಿಸಿಕೊಂಡಿದ್ದು, ಸೈಬರ್ ಕ್ರೈಮ್ ತಜ್ಞರ ನೆರವಿನೊಂದಿಗೆ ಈ 'ನಕಲಿ ಫ್ರೊಫೈಲ್' ಖದೀಮರ ಜಾಲವನ್ನು ಭೇದಿಸಲು ಸಜ್ಜಾಗಿದ್ದಾರೆ ಪೊಲೀಸರು.

ಸೋಶಿಯಲ್ ಮೀಡಿಯಾ ಕಿಡಿಗೇಡಿಗಳ ಹೆಡೆಮುರಿ ಕಟ್ಟಲು ನಿಂತ ಬಿಗ್‌ಬಾಸ್ ಬೆಡಗಿಐಶ್ವರ್ಯಾ ಸಿಂಧೋಗಿ..!

ಸೋಷಿಯಲ್ ಮೀಡಿಯಾ ಎನ್ನುವುದು ಇತ್ತೀಚಿನ ದಿನಗಳಲ್ಲಿ ಎರಡೂ ಬದಿಯ ಕತ್ತಿಯಂತಾಗಿದೆ. ಒಂದೆಡೆ ಅಭಿಮಾನಿಗಳ ಪ್ರೀತಿ ಸಿಕ್ಕರೆ, ಮತ್ತೊಂದೆಡೆ ಮುಖವಾಡ ಧರಿಸಿದ ಕಿಡಿಗೇಡಿಗಳ ಅಸಭ್ಯ ವರ್ತನೆ ಹೆಚ್ಚಾಗುತ್ತಿದೆ. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಅಸಭ್ಯ ಕಮೆಂಟ್ ಮಾಡುವ ಮೂಲಕ ಸುದ್ದಿಯಾಗಿದ್ದ 'ಟ್ರೋಲ್ ಹೈದರು' ಈಗ ಬಿಗ್ ಬಾಸ್ ಖ್ಯಾತಿಯ ಐಶ್ವರ್ಯಾ ಸಿಂಧೋಗಿ (Aishwarya Sindhogi) ಅವರ ಮೇಲೆ ತಮ್ಮ ಪ್ರಹಾರ ಶುರುಮಾಡಿಕೊಂಡಿದ್ದಾರೆ. ಆದರೆ, ಈ ಬಾರಿ ಈ ಕಿಡಿಗೇಡಿಗಳಿಗೆ ಸರಿಯಾದ ಪಾಠ ಕಲಿಸಲು ಐಶ್ವರ್ಯಾ 'ಸಿಂಹಿಣಿ'ಯಂತೆ ಘರ್ಜಿಸಿದ್ದಾರೆ!

ಏನಿದು ಅಸಲಿ ಕಥೆ?

ಕಿರುತೆರೆಯ ಚಂದದ ನಟಿ ಐಶ್ವರ್ಯಾ ಸಿಂಧೋಗಿ ಅವರು ತಮ್ಮ ಇನ್ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ಹಾಕುವ ಪೋಸ್ಟ್‌ಗಳ ಕೆಳಗೆ ಕೆಲವರು ಹದ್ದುಮೀರಿ ವರ್ತಿಸುತ್ತಿದ್ದರು. ಕೇವಲ ಟೀಕೆ ಮಾಡಿದ್ದರೆ ಸುಮ್ಮನಿರಬಹುದಿತ್ತು, ಆದರೆ ಇಲ್ಲಿ ನಡೆದಿರುವುದು ಅಕ್ಷರಶಃ ಚಾರಿತ್ರ್ಯ ವಧೆ! ಪದೇ ಪದೇ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಕಮೆಂಟ್‌ಗಳನ್ನು ಹಾಕುವ ಮೂಲಕ ನಟಿಯ ಮನಸ್ಸಿಗೆ ನೋವುಂಟು ಮಾಡಲಾಗಿತ್ತು. ಇಲ್ಲಿಯವರೆಗೂ ಹೇಗೋ ತಡೆದುಕೊಂಡಿದ್ದ ಈ ನಟಿ ಇದೀಗ ಪೊಲೀಸ್ ಸ್ಟೇಷನ್‌ ಕಡೆ ಮುಖ ಮಾಡಿದ್ದಾರೆ.

ಪರಿಚಯಸ್ಥನೇ ವಿಲನ್?

ಈ ಕಥೆಯಲ್ಲಿ ಒಂದು ಟ್ವಿಸ್ಟ್ ಇದೆ! ಐಶ್ವರ್ಯಾ ಅವರಿಗೆ ಈ ಕಾಟ ಕೊಡುತ್ತಿರುವುದು ಯಾರೋ ಅಪರಿಚಿತರಲ್ಲ, ಬದಲಾಗಿ ತಮಗೆ ಮೊದಲೇ ಪರಿಚಯವಿದ್ದ ಒಬ್ಬ ವ್ಯಕ್ತಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿಂದೆ ಕೂಡ ಇದೇ ವ್ಯಕ್ತಿ ಬೆದರಿಕೆ ಹಾಕಿದ್ದನಂತೆ, ಆಗಲೇ ಪೊಲೀಸರ ಮೆಟ್ಟಿಲೇರಿದ್ದ ನಟಿಗೆ ಈಗ ಮತ್ತೆ ಅದೇ ಕಿರುಕುಳ ಶುರುವಾಗಿದೆ. ಈಗ ಆತ ನಕಲಿ ಖಾತೆಗಳ (Fake Accounts) ಸೈನ್ಯವನ್ನೇ ಕಟ್ಟಿಕೊಂಡು ಐಶ್ವರ್ಯಾ ಅವರನ್ನು ಗುರಿಯಾಗಿಸಿಕೊಂಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪೊಲೀಸ್ ಠಾಣೆಯಲ್ಲಿ ಐಶ್ವರ್ಯಾ ಗರ್ಜನೆ!

ಸಹನೆಯ ಕಟ್ಟೆ ಒಡೆದಾಗ ನಟಿ ಸುಮ್ಮನೆ ಕೂರಲಿಲ್ಲ. ಸಂಜಯ್ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. "ನನ್ನ ಖಾಸಗಿತನಕ್ಕೆ ಧಕ್ಕೆ ತರುತ್ತಿರುವ ಈ ಕಿಡಿಗೇಡಿಗಳನ್ನು ಸುಮ್ಮನೆ ಬಿಡಬಾರದು" ಎಂದು ಖಡಕ್ ಆಗಿ ಹೇಳಿದ್ದಾರೆ. ಸದ್ಯ ಸಂಜಯ್ ನಗರ ಪೊಲೀಸರು FIR ದಾಖಲಿಸಿಕೊಂಡಿದ್ದು, ಸೈಬರ್ ಕ್ರೈಮ್ ತಜ್ಞರ ನೆರವಿನೊಂದಿಗೆ ಈ 'ನಕಲಿ ಫ್ರೊಫೈಲ್' ಖದೀಮರ ಜಾಲವನ್ನು ಭೇದಿಸಲು ಸಜ್ಜಾಗಿದ್ದಾರೆ. ಸದ್ಯ ತನಿಖೆ ಶುರುವಾಗಿದೆ.

ಎಚ್ಚರಿಕೆ ಗಂಟೆ!

ಈ ಹಿಂದೆಯೂ ರಮ್ಯಾ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದವರನ್ನು ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದರು. ಈಗ ಐಶ್ವರ್ಯಾ ಸಿಂಧೋಗಿ ಕೂಡ ಅದೇ ಹಾದಿಯಲ್ಲಿ ಸಾಗಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಫೋನ್ ಕೈಯಲ್ಲಿದೆ ಎಂದು ಏನೇನೋ ಟೈಪ್ ಮಾಡುವ ಮುನ್ನ ಎಚ್ಚರ! ಸೈಬರ್ ಪೊಲೀಸರ ಕಣ್ಣು ನಿಮ್ಮ ಮೇಲೆ ಬಿದ್ದರೆ, ಲೈಕ್ಸ್‌ಗಳ ಬದಲು ಪೊಲೀಸ್ ಲಾಠಿ ಏಟು ಗ್ಯಾರಂಟಿ!

ಒಟ್ಟಿನಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ಗೌರವ ಕೊಡದವರಿಗೆ ಈ ಪ್ರಕರಣ ಒಂದು ದೊಡ್ಡ ಪಾಠವಾಗುವುದರಲ್ಲಿ ಸಂಶಯವಿಲ್ಲ. ಐಶ್ವರ್ಯಾ ಅವರ ಈ ಧೈರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ, ಆದಷ್ಟು ಬೇಡ ಈ ನಕಲಿ ಅಕೌಂಟ್ಸ್‌ ಶುರರ ಕಾಟ ಎಲ್ಲರಿಗೂ ತಪ್ಪಲಿ ಎಂಬ ಆಶಯ ವ್ಯಕ್ತವಾಗುತ್ತಿದೆ.