- Home
- Entertainment
- TV Talk
- ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಫುಲ್ ಟ್ಯಾಂಕ್ ಮಾಡಿಸಿ ಚೌಕಾಸಿ ಮಾಡಿದ ನಟಿ ವೈಷ್ಣವಿ ಗೌಡ! ₹5600 ಬಿಲ್‌ಗೆ ₹3000 ಕೊಡ್ತೀನಿ ಅನ್ನೋದಾ?
ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಫುಲ್ ಟ್ಯಾಂಕ್ ಮಾಡಿಸಿ ಚೌಕಾಸಿ ಮಾಡಿದ ನಟಿ ವೈಷ್ಣವಿ ಗೌಡ! ₹5600 ಬಿಲ್‌ಗೆ ₹3000 ಕೊಡ್ತೀನಿ ಅನ್ನೋದಾ?
'ಸೀತಾರಾಮ' ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಪೆಟ್ರೋಲ್ ಬಂಕ್‌ನಲ್ಲಿ ತಮ್ಮ ಪತಿಯೊಂದಿಗೆ ಚೌಕಾಸಿ ಮಾಡಿದ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ₹5600 ಬಿಲ್‌ಗೆ ₹3000 ನೀಡುವುದಾಗಿ ಹೇಳಿ ನೆಟ್ಟಿಗರನ್ನು ನಗಿಸಿದ್ದು, ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ಪೆಟ್ರೋಲ್‌ಗೆ ಚೌಕಾಸಿ ಮಾಡಿದ ನಟಿ
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ 'ಅಗ್ನಿಸಾಕ್ಷಿ' (Agni Sakshi) ಹಾಗೂ 'ಸೀತಾರಾಮ' (Seetha Rama) ಖ್ಯಾತಿಯ ನಟಿ ವೈಷ್ಣವಿ ಗೌಡ (Vaishnavi Gowda) ಅವರ ತಮಾಷೆಯ ವಿಡಿಯೋ ಒಂದಿಷ್ಟೂ ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರಿ ವೈರಲ್ ಆಗಿದೆ. ಪೆಟ್ರೋಲ್ ಬಂಕ್‌ನಲ್ಲಿ ಪತಿ ಜೊತೆ ತೆರಳಿದ್ದ ವೈಷ್ಣವಿ, ಬಿಲ್ ನೋಡಿ ಚೌಕಾಸಿ ಮಾಡಲು ಹೋಗಿ ನೆಟ್ಟಿಗರನ್ನು ಬಿದ್ದೂ ಬಿದ್ದೂ ನಗುವಂತೆ ಮಾಡಿದ್ದಾರೆ!
ವಿಡಿಯೋದಲ್ಲಿ ಏನಿದೆ?:
ನಟಿ ವೈಷ್ಣವಿ ಗೌಡ ಅವರು ತಮ್ಮ ಪತಿ ಅನುಕೂಲ್ ಮಿಶ್ರಾ (Anukool Mishra) ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ತಮಾಷೆಯ ಪ್ರಸಂಗ ನಡೆದಿದೆ. ಕಾರು ಚಲಾಯಿಸುತ್ತಿದ್ದ ಪತಿ, 'ನೀನೇನು ನನ್ನ ಮುಖ ನೋಡ್ತಿದ್ದೀಯಾ? ಕಾರಿಗೆ ಪೆಟ್ರೋಲ್ ಹಾಕಿಸುವ ಯೋಚನೆ ಮಾಡ್ತಿದ್ದೀಯಾ?' ಎಂದು ಚಾಲೆಂಜ್ ಮಾಡುತ್ತಾರೆ. ಅಷ್ಟೇ ಅಲ್ಲದೆ, 'ನನ್ನ ಬಳಿ ವಿಡಿಯೋ ಸಾಕ್ಷಿ ಇದೆ, ನೀನು ಪೆಟ್ರೋಲ್ ಹಾಕಿಸಿಲ್ಲ ಅಂದ್ರೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕ್ತೀನಿ' ಎಂದು ರೇಗಿಸುತ್ತಾರೆ. ಕೊನೆಗೆ ನಟಿ ವೈಷ್ಣವಿ, 'ಆಯ್ತು ನಾನೇ ಪೆಟ್ರೋಲ್ ಹಾಕಿಸ್ತೀನಿ' ಎಂದು ಒಪ್ಪಿಕೊಳ್ಳುತ್ತಾರೆ.
ಪವರ್ ಪೆಟ್ರೋಲ್ ಫುಲ್ ಟ್ಯಾಂಕ್!
ಇದೇ ಸರಿಯಾದ ಸಮಯ ಎಂದುಕೊಂಡ ಪತಿ, ತಕ್ಷಣವೇ ಕಾರನ್ನು ಪೆಟ್ರೋಲ್ ಬಂಕ್‌ಗೆ (Petrol Bunk) ತೆಗೆದುಕೊಂಡು ಹೋಗಿ ಬಂಕ್ ಸಿಬ್ಬಂದಿಗೆ ದುಬಾರಿ ಬೆಲೆಯ 'ಪವರ್ ಪೆಟ್ರೋಲ್' (Power Petrol) ಫುಲ್ ಟ್ಯಾಂಕ್ ಮಾಡುವಂತೆ ಹೇಳುತ್ತಾರೆ. 'ಫುಲ್ ಟ್ಯಾಂಕ್ ಮಾಡಿಸ್ತೀರಾ?' ಎಂದು ವೈಷ್ಣವಿ ಶಾಕ್‌ನಿಂದ ಗಂಡನ ಮುಖ ನೋಡಿದರೂ, ಪತಿ 'ಕೊಟ್ಟ ಮಾತು ತಪ್ಪಬಾರದು' ಎಂದಾಗ ಸುಮ್ಮನಾಗುತ್ತಾರೆ.
5000 ಬಿಲ್‌ಗೆ ₹3000 ಚೌಕಾಸಿ!
ಪೆಟ್ರೋಲ್ ಹಾಕಿಸಿದ ನಂತರ ಬಂಕ್ ಸಿಬ್ಬಂದಿ ಬಂದು '5,600 ರೂಪಾಯಿ ಬಿಲ್ ಆಗಿದೆ' ಎಂದು ಕೇಳುತ್ತಾರೆ. ಬಿಲ್ ಮೊತ್ತ ಕೇಳಿ ಸಂಪೂರ್ಣ ಶಾಕ್ ಆದ ವೈಷ್ಣವಿ ಗೌಡ, '5 ಸಾವಿರನಾ?... ಕಮ್ಮಿ ಮಾಡ್ಕೊಳಿ, 3,000 ರೂಪಾಯಿ ಕೊಡ್ತೀನಿ!' ಎಂದು ಬಂಕ್ ಚೌಕಾಸಿ (Bargain) ಮಾಡಲು ಮುಂದಾಗುತ್ತಾರೆ! ಇದನ್ನು ನೋಡಿ ಜೋರಾಗಿ ನಕ್ಕ ಪತಿ, 'ಇದೇನು ಸೊಪ್ಪು, ತರಕಾರಿ ಮಾರಾಟ ಮಾಡುವ ಅಂಗಡಿ ಅಂದುಕೊಂಡಿದ್ದೀಯಾ?' ಎಂದು ತಮಾಷೆ ಮಾಡುತ್ತಾರೆ.
ಗಂಡನ ಮೇಲೆ ಹುಸಿಕೋಪ
ಗಂಡನ ಮಾತಿಗೆ ಕೋಪಗೊಂಡ ವೈಷ್ಣವಿ ಗೌಡ, ಕೊನೆಗೆ ಪೂರ್ತಿ ₹5600 ಹಣವನ್ನು ಯುಪಿಐ ಪೇಮೆಂಟ್ (UPI Payment) ಮೂಲಕ ಪಾವತಿಸುತ್ತಾರೆ. ಬಳಿಕ ಕೋಪಗೊಂಡಿದ್ದ ಹೆಂಡತಿಯನ್ನು ಪತಿ ಸಮಾಧಾನಪಡಿಸುವ ದೃಶ್ಯ ವಿಡಿಯೋದಲ್ಲಿದೆ.
ವಿಡಿಯೋ ನೋಡಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ವೈಷ್ಣವಿ-ಅನುಕೂಲ್ ದಂಪತಿ:
ಕನ್ನಡತಿಯಾಗಿದ್ದರೂ ವೈಷ್ಣವಿ ಗೌಡ ಅವರು ಹೊರ ರಾಜ್ಯದ ಉದ್ಯಮಿ ಅನುಕೂಲ್ ಮಿಶ್ರಾ ಅವರೊಂದಿಗೆ 2025ರ ಜೂನ್ 4ರಂದು ಮದುವೆ ಮಾಡಿಕೊಂಡಿದ್ದಾರೆ.ಮದುವೆಯ ಸಮಾರಂಭವನ್ನು ಬೆಂಗಳೂರಿನ ರೆಸಾರ್ಟ್‌ನಲ್ಲಿ ಅದ್ಧೂರಿಯಾಗಿ ನಡೆಸಿದ್ದರು. ಪ್ರಸ್ತುತ ಈ ದಂಪತಿ ಪ್ರವಾಸ ಹಾಗೂ ತಮಾಷೆಯ ರೀಲ್ಸ್‌ಗಳನ್ನು (Reels) ಶೇರ್ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ಈ ಕ್ಯೂಟ್ ವಿಡಿಯೋವನ್ನು ನೋಡಿ ಫ್ಯಾನ್ಸ್ ಫುಲ್ ಎಂಜಾಯ್ ಮಾಡುತ್ತಿದ್ದಾರೆ.
ಇನ್ನು ನಟಿ ಇದೀಗ ಗೆಳತಿ ಗಾಯತ್ರಿ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಕಮ್ ಬ್ಯಾಕ್ ಮಾಡಲಿದ್ದಾರೆ. ಈ ಮೂಲಕ ಮತ್ತೊಮ್ಮೆ ತಮ್ಮ ನಟನೆ ಮೂಲಕ ಜನರಿಗೆ ಮೋಡಿ ಮಾಡಲಿದ್ದಾರೆ ಎಂಬುದು ವೀಕ್ಷಕರ ಅಂಬೋಣವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

