ಬಿಗ್‌ಬಾಸ್ 11ರಿಂದ ಹೊರಬಂದ ಐಶ್ವರ್ಯ ಸಿಂಧೋಗಿ, ಭಾವುಕ ವಿದಾಯದ ಬಗ್ಗೆ ಮಾತನಾಡಿದ್ದಾರೆ. ಬಿಗ್‌ಬಾಸ್ "ಮಗಳೇ" ಎಂದು ಸಂಬೋಧಿಸಿದ್ದು ವಿಶೇಷ ಗಿಫ್ಟ್ ಎಂದಿದ್ದಾರೆ. ಸದ್ಯಕ್ಕೆ ಮದುವೆ ಯೋಚನೆ ಇಲ್ಲ, ಒಳ್ಳೆಯ ಹುಡುಗ ಸಿಕ್ಕರೆ ಮದುವೆಯಾಗುವುದಾಗಿ ಹೇಳಿದ್ದಾರೆ. ವೀಕ್ಷಕರ ಪ್ರೀತಿಗೆ ಚಿರಋಣಿ ಎಂದೂ ತಿಳಿಸಿದ್ದಾರೆ.
ಬಿಗ್‌ಬಾಸ್ ಕನ್ನಡ 11ನೇ ಸೀಸನ್ನಲ್ಲಿ, ಉತ್ತಮ ರೀತಿಯಲ್ಲಿ ಭಾವಪೂರ್ಣವಾಗಿ ಅಷ್ಟೇ ಭಾವುಕ ಎನ್ನಿಸುವಂತೆ ಮನೆಯಿಂದ ಹೊರಕ್ಕೆ ಬಂದವರು ಐಶ್ವರ್ಯಾ ಸಿಂಧೋಗಿ. ಬಿಗ್ ಬಾಸ್ ಪತ್ರ ಬರೆಯುವ ಮೂಲಕ ಐಶ್ವರ್ಯಗೆ ಗುಡ್ಬೈ ಹೇಳಿದ್ದ ದೃಶ್ಯ ಕೆಲ ಕಾಲ ಮನೆಯಲ್ಲಿ ಭಾವುಕ ಸನ್ನಿವೇಶಕ್ಕೆ ಕಾರಣವಾಗಿತ್ತು. ಆಕೆಯನ್ನು ಮಗಳೇ ಎಂದು ಪತ್ರದಲ್ಲಿ ಬರೆದಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. 'ಪ್ರೀತಿಯ ಐಶ್ವರ್ಯ 13 ವಾರಗಳ ಕಾಲ ಒಬ್ಬ ಪ್ರಬಲ ಸ್ಪರ್ಧಿಯಾಗಿ ಈ ಮನೆಯಿಂದ ಜೀವಿಸಿರುವುದು ಸಂತೋಷಕರ ವಿಷಯ. ತುಸು ಬೇಸರವಿದ್ದರೂ ನಗು ದುಃಖ, ಕೋಪ, ತುಂಟಾಟ ಹೀಗೆ ನಿಮ್ಮ ಭಾವನೆಗಳಿಗೆ ಸಾಕ್ಷಿಯಾಗಿರುವ ಈ ಮನೆಯಿಂದ ಈಗ ನಿಮ್ಮನ್ನು ಕಳುಹಿಸಿಕೊಡಲೇಬೇಕಾಗಿದೆ' ಎಂದು ಅದರಲ್ಲಿ ಬರೆಯಲಾಗಿತ್ತು. ಈ ಮೂಲಕ, 13ನೇ ವಾರದಲ್ಲಿ ಅವರು ಬಿಗ್ ಬಾಸ್ ಶೋನಿಂದ ಹಲವು ವೀಕ್ಷಕರ ನೆಚ್ಚಿನ ಐಶ್ವರ್ಯ ಹೊರಕ್ಕೆ ಬಂದಿದ್ದರು.
ಸಹಜವಾಗಿ ಬಿಗ್‌ಬಾಸ್ ಮನೆಯಿಂದ ಹೊರಕ್ಕೆ ಬಂದ ಮೇಲೆ ಸಂದರ್ಶನಗಳ ಸುರಿಮಳೆಯೇ ಆಗುತ್ತದೆ. ಮುಂದಿನ ಬಿಗ್‌ಬಾಸ್ ಬರುವವರೆಗೂ ಹಿಂದಿನವರು ಸೆಲೆಬ್ರಿಟಿಗಳಂತೆ ಮಿಂಚುತ್ತಿರುತ್ತಾರೆ. ಅವರಿಗೆ ಡಿಮಾಂಡ್ ಜಾಸ್ತಿ ಇರುತ್ತದೆ. ಕೆಲವೇ ಕೆಲವರಿಗೆ ಒಳ್ಳೆಯ ಅವಕಾಶಗಳು ಹುಡುಕಿ ಬಂದರೆ, ಮತ್ತೆ ಕೆಲವರು ಕೆಲ ತಿಂಗಳಿನಿಂದಲೇ ಮಿಂಚಿ ಮರೆಯಾಗುತ್ತಾರೆ. ಬಿಗ್‌ಬಾಸ್ ಮನೆಯಲ್ಲಿ ಒಳ್ಳೆಯ ಹೆಸರು ಮಾಡಿದ್ದ ಐಶ್ವರ್ಯ ಅವರು ಇದಾಗಲೇ ತಮ್ಮ ಜೀವನದ ಹಲವು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದೀಗ ಅವರಿಗೆ ಮದುವೆಯ ಬಗ್ಗೆ ಪ್ರಶ್ನೆ ಎದುರಾಗಿದೆ. ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಐಶ್ವರ್ಯ ಅವರು ಮದುವೆಯ ಬಗ್ಗೆ ಮಾತನಾಡಿದ್ದಾರೆ.
ಬಿಗ್‌ಬಾಸ್ ಇತಿಹಾಸದಲ್ಲೇ ಸಿಕ್ಕಿರದ ಗಿಫ್ಟ್ ನನಗೆ ಸಿಕ್ಕಿದೆ: ಲೈವ್ನಲ್ಲಿ ಬಂದು ಖುಷಿ ಹಂಚಿಕೊಂಡ ಐಶ್ವರ್ಯಾ
ನನಗೆ ಇನ್ನೂ ಮಾಡಬೇಕಾದದ್ದಷ್ಟು ಬಹಳ ಇದೆ. ಕರಿಯರ್ನಲ್ಲಿ ಮುಂದೆ ಹೋಗಬೇಕು ಎಂದು ಇದೆ. ಸದ್ಯ ಮದುವೆ ಇಲ್ಲ. ಆದರೆ ಮದುವೆ ಮತ್ತು ಲವ್ ಯಾವಾಗ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಅದನ್ನು ನಾವಾಗಿಯೇ ಮಾಡಿಕೊಂಡು ಹೋಗುವುದಲ್ಲ, ತಂತಾನೆಯಾಗಿಯೇ ಆಗಿಬಿಡುತ್ತದೆ. ಅದಕ್ಕಾಗಿ ಇಷ್ಟು ವರ್ಷ ಅಂತೆಲ್ಲಾ ನಾನು ಹೇಳುವುದಿಲ್ಲ. ಆದರೆ ಒಳ್ಳೆಯ ಹುಡುಗ, ತುಂಬಾ ಕೇರಿಂಗ್ ಮಾಡುವವ ಇದ್ದರೆ ಮದುವೆಯಾಗುವೆ. ಅದಕ್ಕಿಂತ ಮುಖ್ಯವಾಗಿ ಗೌರವ ಕೊಡುವುದು ಆತನಿಗೆ ತಿಳಿದಿರಬೇಕು. ಹಾಗಿದ್ದರೆ ಮಾತ್ರ ದಾಂಪತ್ಯ ಜೀವನ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ ಎಂದಿದ್ದಾರೆ ಐಶ್ವರ್ಯ. ಒಟ್ಟಿನಲ್ಲಿ ಐಶ್ವರ್ಯ ಅವರ ಮದುವೆ ಯಾವಾಗ ಎಂದು ಕಾಯುತ್ತಿದ್ದಾರೆ ಅವರ ಅಭಿಮಾನಿಗಳು.
ಕೆಲ ದಿನಗಳ ಹಿಂದೆ ಬಿಗ್‌ಬಾಸ್ ಮನೆಯಿಂದ ಹೊರಕ್ಕೆ ಬಂದಾಗ ಅವರು ಬಿಗ್ಬಾಸ್ನ ಬಗ್ಗೆ ತಿಳಿಸಿದ್ದರು. ಮನೆಯ ಒಳಗೆ ಇದ್ದಾ ಹೊರಗಡೆ ಏನು ನಡೆಯುತ್ತೆ ಎನ್ನುವುದು ಗೊತ್ತಿರುವುದಿಲ್ಲ. ಆದರೆ ಹೊರಗಡೆ ಬಂದು ನನ್ನ ಬಗೆಗಿನ ಕಮೆಂಟ್ಸ್ ನೋಡಿ ಭಾವುಕಳಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ. ತುಂಬಾ ಪ್ರೀತಿ ಕೊಟ್ಟಿದ್ದೀರಿ ಎಂದು ಹೇಳಿದ್ದರು. ಇದರ ಜೊತೆಗೆ ಬಿಗ್‌ಬಾಸ್ ಅನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ. ಆದರೆ ಬಿಗ್‌ಬಾಸ್ ಇತಿಹಾಸದಲ್ಲಿ ಯಾರಿಗೂ ಸಿಗದ ಗಿಫ್ಟ್ ನನಗೆ ಸಿಕ್ಕಿದೆ ಎನ್ನುತ್ತಲೇ ಅದರ ಬಗ್ಗೆ ಐಶ್ವರ್ಯ ಮಾತನಾಡಿದ್ದರು. ಅದು ನನಗೆ ಸಿಕ್ಕಿರುವ ಭಾವುಕ ವಿದಾಯ. ಬಿಗ್‌ಬಾಸ್ ಸ್ವತಃ ಮಾತನಾಡಿ ತವರಿನಿಂದ ಹೋಗುವ ರೀತಿಯಲ್ಲಿ ಮನೆಮಗಳಿಗೆ ಹೇಳುವಂತೆ ಹೋಗಿ ಬಾ ಮಗಳೇ ಎಂದಿದ್ದಾರೆ. ಇದು ಯಾರಿಗೂ ಸಿಗದ ಗಿಫ್ಟ್. ಇದು ನನಗೆ ಖುಷಿ ಕೊಟ್ಟಿದೆ. ಬಿಗ್ಬಾಸ್ಗೆ ಎಷ್ಟು ಧನ್ಯವಾದ ಹೇಳಿದರೂ ಸಾಲುವುದಿಲ್ಲ ಎಂದಿದ್ದರು.
ಉಪೇಂದ್ರ ಇರೋ ಕಡೆ ಬಿಗ್‌ಬಾಸ್ ಯಾಕೆ? ಅವ್ರೊಂದು ಹೇಳಿದ್ರೆ, ಇವ್ರೊಂದು ಹೇಳ್ತಾರೆ- ಸುದೀಪ್ ಮಾತು ಕೇಳಿ...
