ಡಾ ವಿಷ್ಣುವರ್ಧನ್ ಹಾಗೂ ಭಾರತಿ ಪ್ರೀತಿಸಿ ಮದುವೆಯಾಗಿದ್ದವರು. ಇಂದು ಇವರು ಮದುವೆಯಾಗಿ 50 ವರ್ಷಗಳು ಉರುಳಿವೆ. ಈ ಬಗ್ಗೆ ವಿಶೇಷ ಮಾಹಿತಿ ಇಲ್ಲಿದೆ.
“ಅಪ್ಪ-ಅಮ್ಮನಿಗೆ ಹ್ಯಾಪಿ ಗೋಲ್ಡನ್ ಆನಿವರ್ಸಿರಿ. ಮದುವೆಯಾಗಿ 50 ವರ್ಷಗಳು ಆಯ್ತು. ನಿಮ್ಮ ಪ್ರೀತಿ ಮೇಲೆ ನಮ್ಮ ಕುಟುಂಬ ರೂಪಿತವಾಗಿದೆ. ನಾವೆಲ್ಲ ಒಟ್ಟಾಗಿ ಸಮಯ ಕಳೆದಿದ್ದಕ್ಕೆ ಧನ್ಯವಾದಗಳು. ಪ್ರತಿಯೊಬ್ಬರನ್ನು ಪ್ರೀತಿಸುವ ನಿಮ್ಮ ಗುಣವೇ ನಮಗೆ ಸ್ಫೂರ್ತಿ. ನಿಮ್ಮ ಪ್ರೀಯಿಯೇ ನಿಜವಾದ ಸಂಬಂಧದ ಅರ್ಥವನ್ನು ಹೇಳಿದೆ” ಎಂದು ಅನಿರುದ್ಧ ಜತ್ಕರ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಮದುವೆಯಲ್ಲಿ ಜನಸಾಗರ
1966ರಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಭಾರತಿ ಅವರು ಎರಡು ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿಯೂ ಭಾರತಿ ನಟಿಸಿದ್ದಾರೆ. ಇನ್ನು ಡಾ ವಿಷ್ಣುವರ್ಧನ್ ಕೂಡ ದೊಡ್ಡ ಹೆಸರು ಮಾಡಿರುವ ನಟ. ಇವರಿಬ್ಬರ ಮದುವೆಗೆ ಜನಸಾಗರವೇ ಬಂದಿತ್ತಂತೆ.
ತಂದೆ ನೆನಪಿಗಾಗಿ ಸೌಂದರ್ಯ ನಿರ್ಮಿಸಿದ ಏಕೈಕ ಸಿನಿಮಾವಿದು, ರಾಷ್ಟ್ರವೇ ಮೆಚ್ಚಿದ ಕನ್ನಡ ಚಿತ್ರ!
ಲವ್ ಮ್ಯಾರೇಜ್
ವಿಷ್ಣುವರ್ಧನ್ ಹಾಗೂ ಭಾರತಿ ಪ್ರೀತಿಸಿ ಮದುವೆಯಾದರು. ವಿಷ್ಣುವರ್ಧನ್ ಅವರು ಭಾರತಿ ತಂದೆ-ತಾಯಿಗೆ ಹತ್ತಿರ ಆದರಂತೆ. ಮದುವೆಗೂ ಮುನ್ನ ಎಲ್ಲೆಲ್ಲೋ ಥಿಯೇಟರ್ ಹುಡುಕಿಕೊಂಡು ಭಾರತಿ ಅವರ ಸಿನಿಮಾಗಳನ್ನು ವಿಷ್ಣುವರ್ಧನ್ ನೋಡುತ್ತಿದ್ದರಂತೆ. ಮದುವೆಯಾದ ನಂತರ ಅವರು ಭಾರತಿ ಜೊತೆಗೆ ಸಿನಿಮಾ ನೋಡುತ್ತಿರಲಿಲ್ಲ.
ಚೈನೀಸ್ ಮಾತಾಡ್ತಿದ್ರು
ವೀಕೆಂಡ್ ವಿಥ್ ರಮೇಶ್ ಸೀಸನ್ 3 ಶೋನಲ್ಲಿ ಮಾತನಾಡಿದ್ದ ಭಾರತಿ ವಿಷ್ಣುವರ್ಧನ್ ಅವರು, “ವಿಷ್ಣು ತುಂಬ ಪೊಸೆಸ್ಸಿವ್, ನನ್ನನ್ನು ಅವರು ಬೇರೆಯವರ ಜೊತೆ ನೋಡಲು ಇಷ್ಟಪಡುತ್ತಿರಲಿಲ್ಲ. ನಾನು, ವಿಷ್ಣು ಚೈನೀಸ್ ಮಾತಾಡುತ್ತಿದ್ದೆವು” ಎಂದು ಹೇಳಿದ್ದರು.
ಆರತಿಗೂ ಪುಟ್ಟಣ್ಣಗೂ ಮಧ್ಯೆ ಬಂದ ಮಂತ್ರಿ..! ಆದ್ರೆ ಆ ಮಂತ್ರಿಯೂ ಕೈ ತಪ್ಪಿ ಹೋಗಿ ಆಮೇಲೇನಾಯ್ತು!
ಗಲಾಟೆ ಮದುವೆ
“ನಮ್ಮದು ಗಲಾಟೆ ಮದುವೆ, ನಮ್ಮ ಮದುವೆಗೆ ಜನಸಾಗರವೇ ಬಂದಿತ್ತು. ನಮ್ಮ ಮದುವೆಯಲ್ಲಿ ನಮಗೆ ಊಟವೇ ಸಿಗಲಿಲ್ಲ. ಗೇಟ್ ಮುರಿದು ಜನರು ಬರುತ್ತಿದ್ದರು. ಮದುವೆಯಾಗಿ ನಾವು ಹಿಂದಿನ ಡೋರ್‌ನಿಂದ ಹೋದೆವು. ವಿಷ್ಣುಗೆ ಹ್ಯಾಂಡ್‌ಶೇಕ್ ಮಾಡಲು ಬಂದವರು ಕೈ ಉಂಗುರ ಕಿತ್ತುಕೊಂಡು ಹೋದರು. ಅಂಬರೀಶ್ ಅವರಿಂದಲೂ ಹ್ಯಾಂಡಲ್ ಮಾಡಲು ಆಗಲಿಲ್ಲ. ಚಿತ್ರರಂಗದಿಂದ ಬಂದವರಿಗೆ ಕೂಡ ಒಳಗಡೆ ಬರಲು ಅವಕಾಶ ಸಿಗಲಿಲ್ಲ” ಎಂದು ಭಾರತಿ ವಿಷ್ಣುವರ್ಧನ್ ಅವರು ಹೇಳಿದ್ದಾರೆ.
ವಿಷ್ಣುವರ್ಧನ್‌ಗೆ 'ಕೈ ಕಡಗ' ಸಿಕ್ಕಿದ್ದು ಎಲ್ಲಿ? ಅದರ ಹಿಂದಿದೆ ಬಲು ರೋಚಕ ಕಹಾನಿ!
ಮೊದಲ ರಾತ್ರಿ ದಿನ…!
ಅಂಬರೀಶ್ ಅವರು ಭಾರತಿ, ವಿಷ್ಣುವರ್ಧನ್ ಮೊದಲ ರಾತ್ರಿಗೆ ಹೋಟೆಲ್ ರೂಮ್ ಬುಕ್ ಮಾಡಿದ್ದರು. ನೀವೆಲ್ಲ ಹೊರಗಡೆ ಇರಬೇಕು ಅಂತ ಅಂಬಿಗೆ ವಿಷ್ಣು ಹೇಳಿದ್ದರಂತೆ, ಹೀಗಾಗಿ ಆ ರೂಮ್‌ನ ಹೊರಗಡೆ ಇರೋ ಸೋಫಾ ಮೇಲೆ ಅಂಬರೀಶ್, ರಾಜೇಂದ್ರ ಸಿಂಗ್ ಬಾಬು ಮಲಗಿದ್ದರಂತೆ.
ಮದುವೆ ಸಂಸಾರ ಶುರು ಮಾಡಿದಮೇಲೆ ಭಾರತಿ ಅವರು ಅನೇಕ ವರ್ಷಗಳ ಕಾಲ ಸಿನಿಮಾ ಮಾಡಲಿಲ್ಲ. “ಮದುವೆ ಮಾಡಿದಮೇಲೆ ಮನೆ ಕಡೆ ಗಮನ ಕೊಡಬೇಕು ಅಂತ ಸಿನಿಮಾ ಮಾಡಲಿಲ್ಲ” ಎಂದು ಭಾರತಿ ವಿಷ್ಣುವರ್ಧನ್ ಹೇಳಿದ್ದರು.
