ಅದೇ ಕಾರಣಕ್ಕೆ ಪುಟ್ಟಣ್ಣ ಸಾಯುವ ಸ್ವಲ್ಪ ಕಾಲದ ಮೊದಲು ಆರತಿ ಹಾಗೂ ಪುಟ್ಟಣ್ಣ ದೂರವಾಗಿದ್ದರು.. ಆದರೆ, ಪುಟ್ಟಣ್ಣ ಇಹಲೋಕ ತ್ಯಜಿಸಿದ ಮೇಲೆ ಮಂತ್ರಿಯಾಗಿದ್ದ ಆ ವ್ಯಕ್ತಿ.. ಆ ಬಳಿಕ ನಟಿ ಆರತಿಯವರು ಎಂಜಿನಿಯರ್...
ಕನ್ನಡ ಚಿತ್ರರಂಗದಲ್ಲಿ 70ರ ದಶಕದಲ್ಲಿ ಸಹಜ ಸುಂದರಿ ನಟಿ ಅಂದ್ರೆ ಆರತಿ. ಗ್ಲಾಮರಸ್ ಆಗಿಯೇನೂ ಇರದ ಆರತಿ (Aarathi), ಅಮೋಘ ಅಭಿನಯದ ಮೂಲಕವೇ ಗಮನ ಸೆಳೆದವರು. ವಿಷ್ಣುವರ್ಧನ್ ಅಭಿನಯದ ನಾಗರಹಾವು, ಗೆಜ್ಜೆ ಪೂಜೆ, ತುಳಸೀದಳ ಸೇರಿದಂತೆ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡದ ಸಿನಿರಂಗದ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಆ ಕಾಲದಲ್ಲಿ ಅಚ್ಚುಮೆಚ್ಚಿನ ಸ್ಟಾರ್ ನಟಿ ಎನ್ನಿಸಿಕೊಂಡವರು.
ಆದರೆ, ಸ್ವತಃ ಆರತಿ ಬದುಕು ಹಾಗು ಅವರನ್ನು ನಂಬಿದ ಪುಟ್ಟಣ್ಣ ಕಣಗಾಲ್ (Puttanna Kanagal) ಬದುಕು ದುರಂತವಾಯ್ತೇ? ಇಲ್ಲಿದೆ ನೋಡಿ ಸಿಕ್ರೆಟ್..! ಆರತಿ ಒಂದು ಕಾಲದಲ್ಲಿ ಕನ್ನಡದ ಮೇರು ನಿರ್ದೇಶಕ ಪುಟ್ಟಣ್ಣ ಕನಗಾಲ್ ಅವರ ಹೆಂಡತಿ ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತು. ಆದರೆ, ಅವರಿಬ್ಬರ ಮಧ್ಯೆ ಬಹಳಷ್ಟು ಮನಸ್ತಾಪ ಮೂಡಿ, ಭಾರೀ ಕಂದಕ ಸೃಷ್ಟಿಯಾಗಿದ್ದು ಆ ಕಾಲದ ಬಹುದೊಡ್ಡ ಸುದ್ದಿ.
ವಿಷ್ಣುವರ್ಧನ್‌ಗೆ 'ಕೈ ಕಡಗ' ಸಿಕ್ಕಿದ್ದು ಎಲ್ಲಿ? ಅದರ ಹಿಂದಿದೆ ಬಲು ರೋಚಕ ಕಹಾನಿ!
ಹಾಗಿದ್ರೆ ಆಗಿದ್ದೇನು? ದಿವಂಗತ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಮಂತ್ರಿಯಾಗಿದ್ದ ಎಂ ರಘುಪತಿ ಅವರೊಂದಿಗೆ ಆರತಿಯವರಿಗೆ ಅತಿಯಾದ ಒಡನಾಟವಿತ್ತು, ಸ್ನೇಹವಿತ್ತು. ಇದೇ ಕಾರಣಕ್ಕೆ ಆರತಿ ಹಾಗೂ ಪುಟ್ಟಣ್ಣ ಕಣಗಾಲ್ ನಡುವೆ ದ್ವೇಷ ಹಾಗು ವೈಮನಸ್ಯ ಹೊಗೆಯಾಡತೊಡಗಿತ್ತು. ಪುಟ್ಟಣ್ಣ ಕಣಗಾಲ್ ತೀರಿಕೊಂಡ ಬಳಿಕ ರಘುಪತಿ ಹಾಗೂ ಆರತಿವರು ಸುತ್ತಾಡಿದ್ರು ಅನ್ನೋದು ಅಂದು ಭಾರೀ ಸುದ್ದಿಯೂ ಆಗಿತ್ತು.
ಅದೇ ಕಾರಣಕ್ಕೆ ಪುಟ್ಟಣ್ಣ ಸಾಯುವ ಸ್ವಲ್ಪ ಕಾಲದ ಮೊದಲು ಆರತಿ ಹಾಗೂ ಪುಟ್ಟಣ್ಣ ದೂರವಾಗಿದ್ದರು ಎನ್ನಲಾಗಿದೆ. ಆದರೆ, ಪುಟ್ಟಣ್ಣ ಇಹಲೋಕ ತ್ಯಜಿಸಿದ ಮೇಲೆ ಮಂತ್ರಿಯಾಗಿದ್ದ ರಘುಪತಿ ಕೂಡ ಆರತಿಯವರನ್ನು ತೊರೆದು ದೂರ ಹೋಗಿಟ್ಟರು. ಆ ಬಳಿಕ ನಟಿ ಆರತಿಯವರು ಎಂಜಿನಿಯರ್ ಆಗಿದ್ದ ಚಂದ್ರಶೇಖರ್ ಗೌಡ ಅವರನ್ನು ಮದುವೆಯಾಗಿ ಅಮೆರಿಕಾದಲ್ಲಿ ಸೆಟ್ಲ್ ಆದ್ರು ಅನ್ನೋದು ಸದ್ಯದ ಮಾಹಿತಿ.
ಉಪೇಂದ್ರ ಬಗ್ಗೆ ಶಿವಣ್ಣ 'ಓಂ' ರಿಲೀಸ್‌ಗೂ ಮೊದಲು ಹೇಳಿದ್ದ ಮಾತು ವೈರಲ್, ಸುಮ್ನೇ ಏನಲ್ಲ!
ಆದರೆ, ನಟಿ ಆರತಿಯವರು ಅಮೆರಿಕಾದಲ್ಲಿ ಇದ್ದರೂ ಕೂಡ ಕೋಲಾರದ 20 ಹಳ್ಳಿಗಳನ್ನು ದತ್ತು ಸ್ವೀಕರಿಸಿ, ಅವರುಗಳ ಪಾಲನೆ-ಪೋಷಣೆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಚಾರದಿಂದ ಈಗ ಬಹುದೂರ ಇರುವ ಆರತಿಯವರು, ಯಾವುದನ್ನೂ ಹೇಳುತ್ತಿಲ್ಲ. ಆದರೆ, ಬಹಳಷ್ಟು ಸಮಾಜಸೇವೆ ಮಾಡುತ್ತಿದ್ದಾರೆ ಎನ್ನಲಾಗಿದೆ.
