- Home
- Entertainment
- Sandalwood
- ತಂದೆ ನೆನಪಿಗಾಗಿ ಸೌಂದರ್ಯ ನಿರ್ಮಿಸಿದ ಏಕೈಕ ಸಿನಿಮಾವಿದು, ರಾಷ್ಟ್ರವೇ ಮೆಚ್ಚಿದ ಕನ್ನಡ ಚಿತ್ರ!
ತಂದೆ ನೆನಪಿಗಾಗಿ ಸೌಂದರ್ಯ ನಿರ್ಮಿಸಿದ ಏಕೈಕ ಸಿನಿಮಾವಿದು, ರಾಷ್ಟ್ರವೇ ಮೆಚ್ಚಿದ ಕನ್ನಡ ಚಿತ್ರ!
ಸೌಂದರ್ಯ ಕೇವಲ ನಟಿಯಾಗಿ ಮಾತ್ರವಲ್ಲದೆ ನಿರ್ಮಾಪಕಿಯೂ ಆಗಿದ್ದರು ಅಂತ ನಿಮಗೆ ಗೊತ್ತಾ? ಅಷ್ಟೇ ಅಲ್ಲ, ಅವರು ಸ್ವತಃ ನಟಿಸಿ ಒಂದು ಚಿತ್ರವನ್ನು ನಿರ್ಮಿಸಿದರು ಅನ್ನೋದು ಎಷ್ಟು ಜನಕ್ಕೆ ಗೊತ್ತು? ಅದು ಕೂಡ ಕನ್ನಡದ ಬಹುಜನ ಮೆಚ್ಚಿದ ಸಿನೆಮಾ ಎಂಬುದು ಗೊತ್ತಾ?

ದಕ್ಷಿಣ ಭಾರತದ ಸಿನಿ ರಂಗಕ್ಕ ಸಿಕ್ಕ ಆಣಿ ಮುತ್ತಿನಂತ ಹೀರೋಯಿನ್ ಸೌಂದರ್ಯ. ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಗಳಲ್ಲಿ ಎಷ್ಟೋ ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ. ಅನೇಕ ಸ್ಟಾರ್ ಹೀರೋಗಳ ಜೊತೆಗೂ ಇವರು ನಟಿಸಿದ್ದಾರೆ.
ದಕ್ಷಿಣ ಭಾರತ ಭಾಷೆಗಳಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದರು. 90ರ ದಶಕದಲ್ಲಿ ಸೌತ್ ಇಂಡಿಯನ್ ಸಿನಿಮಾಗೆ ಸ್ಟಾರ್ ಹೀರೋಗಳಾಗಿದ್ದ, ವಿಷ್ಣುವರ್ಧನ್, ಚಿರಂಜೀವಿ, ರಜನಿಕಾಂತ್, ಕಮಲ್ ಹಾಸನ್, ಮೋಹನ್ ಲಾಲ್, ವೆಂಕಟೇಶ್, ನಾಗಾರ್ಜುನ, ಜೊತೆಗೆ ಶ್ರೀಕಾಂತ್, ಜಗಪತಿ ಬಾಬು ಅವರಂತಹ ಸ್ಟಾರ್ಸ್ ಜೊತೆಗೂ ಫ್ಯಾಮಿಲಿ ಮೂವೀಸ್ ಅಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ.
1972ರಲ್ಲಿ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಸೌಂದರ್ಯ ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಸ್ಟೇಟಸ್ ಪಡೆದರು. ಆಮೇಲೆ ತಮಿಳಿನಲ್ಲಿ ಫೇಮಸ್ ಆದ್ರು. ಆದ್ರೆ ತನ್ನ ಮಾತೃ ಭಾಷೆನ ಮಾತ್ರ ಬಿಟ್ಟುಕೊಡಲಿಲ್ಲ ಸೌಂದರ್ಯ ಕನ್ನಡದಲ್ಲೂ ಸ್ಟಾರ್ ಹೀರೋಗಳ ಜೊತೆ ನಟಿಸಿ ಮೆಚ್ಚುಗೆ ಪಡೆದಿದ್ದಾರೆ. ತುಂಬಾ ಜನಕ್ಕೆ ಗೊತ್ತಿರಲಿಕ್ಕಿಲ್ಲ ಸೌಂದರ್ಯ ಸಿನಿಮಾ ಕುಟುಂಬದಿಂದ ಬಂದವರು. ಅವರ ತಂದೆ ಸತ್ಯನಾರಾಯಣ ಅಯ್ಯರ್ ಕನ್ನಡದಲ್ಲಿ ಲೇಖಕ, ನಿರ್ಮಾಪಕ. ಎಷ್ಟೋ ಸಿನಿಮಾಗಳನ್ನು ನಿರ್ಮಿಸಿದ್ದಾರೆ.
ತಂದೆ ಪ್ರೋತ್ಸಾಹದಿಂದಲೇ ಇಂಡಸ್ಟ್ರಿಗೆ ಕಾಲಿಟ್ಟಿದ್ದು ಸೌಂದರ್ಯ. ಅನಿರೀಕ್ಷಿತವಾಗಿ ನಟಿಯಾದರು ಸೌಂದರ್ಯ. ಬಾಲನಟಿಯಾಗಿ ಕನ್ನಡದಲ್ಲಿ ಇಂಟ್ರಡ್ಯೂಸ್ ಆದ್ರು. ಆಮೇಲೆ ಹೀರೋಯಿನ್ ಆಗಿ ಫುಲ್ ಬ್ಯುಸಿ ಆಗಿಬಿಟ್ಟರು. ಆದ್ರೆ ಸೌಂದರ್ಯ ಒಂದು ಹಂತದಲ್ಲಿ ಇರುವಾಗಲೇ ಅವರ ತಂದೆ ತೀರಿಕೊಂಡರು. ಅದಕ್ಕೆ ತಂದೆ ಅಂದ್ರೆ ಎಷ್ಟೋ ಪ್ರೀತಿ ಇರೋ ಈ ಹೀರೋಯಿನ್.. ತಂದೆ ಹೆಸರಲ್ಲಿ ಏನಾದ್ರೂ ಮಾಡಬೇಕು ಅಂದುಕೊಂಡ್ರಂತೆ. ಅದಕ್ಕೆ ತನಗೆ ಬಂದ ಐಡಿಯಾದಿಂದ ಅವರು ನಿರ್ಮಾಪಕರಾದರು.
ತನ್ನ ತಂದೆಗೆ ಗೌರವವಾಗಿ ಒಂದು ಸಿನಿಮಾ ತೆಗೀಬೇಕು ಅಂದುಕೊಂಡ್ರಂತೆ. ತನ್ನ ತಂದೆ ಹೆಸರಲ್ಲಿ `ಸತ್ಯ ಮೂವಿ ಮೇಕರ್ಸ್` ಅಂತ ಹೊಸ ನಿರ್ಮಾಣ ಸಂಸ್ಥೆ ಶುರು ಮಾಡಿ 2002ರಲ್ಲಿ "ದ್ವೀಪ" ಅಂತ ಕನ್ನಡ ಸಿನಿಮಾ ನಿರ್ಮಿಸಿದ್ರು ಸೌಂದರ್ಯ. ಈ ಸಿನಿಮಾದಲ್ಲಿ ತಾನೇ ಸ್ವತಃ ನಟಿಸಿದ್ರು. ಇದು ಒಂದು ಆರ್ಟ್ ಮೂವಿ.
ಕನ್ನಡದಲ್ಲಿ ರಿಲೀಸ್ ಆದ ಈ ಚಿತ್ರಕ್ಕೆ ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿದ್ರು. ಇದರಲ್ಲಿ ಸೌಂದರ್ಯ ಸ್ವತಃ ಹೀರೋಯಿನ್ ಆಗಿ ನಟಿಸಿದ್ರು. ಅಷ್ಟೇ ಅಲ್ಲ ಈ ಚಿತ್ರ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು ಗಮನಾರ್ಹ. ಆದ್ರೆ ಆಮೇಲೆ ಸೌಂದರ್ಯ ಯಾವ ಸಿನಿಮಾನೂ ನಿರ್ಮಿಸಲಿಲ್ಲ.