ನಟ ವಿಷ್ಣುವರ್ಧನ್ ಅವರು ಎಡಗೈ ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಅವರು ತಮ್ಮ ಬಲಗೈಗೆ ಒಂದು ಕಡಗವನ್ನು ತಮ್ಮ ಜೀವಿತದ ಕೊನೆಯ ದಿನಗಳವರೆಗೂ ಹಾಕಿದ್ದಾರೆ. ಬಲಗೈಯನ್ನು ಎಡಗೈನಲ್ಲಿ ಹಿಡಿದು ಅವರು ಸಾಹಸ ದೃಶ್ಯಗಳನ್ನು ಮಾಡುತ್ತಿದ್ದರೆ ಪ್ರತಿಯೊಬ್ಬರೂ ಕೂಡ ಅವರ ಬಲಗೈ ಕಡಗವನ್ನು...
ನಟ ಸಾಹಸಸಿಂಹ ಖ್ಯಾತಿಯ ವಿಷ್ಣುವರ್ಧನ್ (Vishnuvardhan) ಅವರ ಬಗ್ಗೆ ಕನ್ನಡನಾಡಿನ ಸಿನಿಪ್ರೇಮಿಗಳಿಗೆ ಹೇಳಲೇಬೇಕಿಲ್ಲ. ಅವರು ಸಾಕಷ್ಟು ರೆಬೆಲ್ ಕ್ಯಾರೆಕ್ಟರ್ ಮಾಡಿದ್ದರೂ, ಅವರನ್ನು ಅಭಿಮಾನಿಗಳು 'ದಾದಾ' ಎಂದು ಕರೆಯುತ್ತಿದ್ದರೂ ಕೂಡ ಅವರ ಒರಿಜಿನಲ್ ಸ್ವಭಾವ ಮೃದು. ಆದರೆ, ಸಿನಿಮಾದಲ್ಲಿ ಸಾಕಷ್ಟು ರಫ್ ಅಂಡ್ ಟಫ್ ಪಾತ್ರ ಮಾಡಿದ್ದಾರೆ ನಟ ವಿಷ್ಣುವರ್ಧನ್. ಅಷ್ಟೇ ಅಲ್ಲ, ಅವರು ಮುಷ್ಟಿ ಬಿಗಿಹಿಡದು ಎಡಗೈ ಗರಗರನೇ ತಿರುಗಿಸುತ್ತಿದ್ದರೆ ಎದುರಾಳಿ ವಿಲ್‌ಗಳಿಗೆ ನಡುಕ ಸಹಜವಾಗಿತ್ತು. ಆಗ ಪ್ರತಿಯೊಬ್ಬ ಪ್ರೇಕ್ಷಕ ಕೂಡ ವಿಷ್ಣು ಅವರ ಕೈ ಕಡಗವನ್ನು ಗಮನಿಸುತ್ತಿದ್ದರು.
ಹೌದು, ನಟ ವಿಷ್ಣುವರ್ಧನ್ ಅವರು ಎಡಗೈ ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಅವರು ತಮ್ಮ ಬಲಗೈಗೆ ಒಂದು ಕಡಗವನ್ನು (Bracelet) ತಮ್ಮ ಜೀವಿತದ ಕೊನೆಯ ದಿನಗಳವರೆಗೂ ಹಾಕಿದ್ದಾರೆ. ಬಲಗೈಯನ್ನು ಎಡಗೈನಲ್ಲಿ ಹಿಡಿದು ಅವರು ಸಾಹಸ ದೃಶ್ಯಗಳನ್ನು ಮಾಡುತ್ತಿದ್ದರೆ ಪ್ರತಿಯೊಬ್ಬರೂ ಕೂಡ ಅವರ ಬಲಗೈ ಕಡಗವನ್ನು ನೋಡುತ್ತಲೇ ಇರುತ್ತಿದ್ದರು. ಅಷ್ಟರಮಟ್ಟಿಗೆ ನಟ ವಿಷ್ಣುವರ್ಧನ್ ಕಡಗ ಫೇಮಸ್. ಹಾಗಿದ್ದರೆ, ಮೇರು ನಟ ವಿಷ್ಣುವರ್ಧನ್ ಅವರಿಗೆ ಆ ಕಡಗ ಸಿಕ್ಕಿದ್ದಾದ್ದರೂ ಹೇಗೆ? ಸೀಕ್ರೆಟ್ ರಿವೀಲ್ ಆಗಿದೆ ನೋಡಿ..
ಉಪೇಂದ್ರ ಬಗ್ಗೆ ಶಿವಣ್ಣ 'ಓಂ' ರಿಲೀಸ್‌ಗೂ ಮೊದಲು ಹೇಳಿದ್ದ ಮಾತು ವೈರಲ್, ಸುಮ್ನೇ ಏನಲ್ಲ!
ಈ ಕಡಗವು ನಟ ವಿಷ್ಣುವರ್ಧನ್ ಅವರಿಗೆ ಬೀದರ್‌ನ ಗುರುದ್ವಾರದ ಒಬ್ಬರು ಗುರುಗಳ ಕಾಣಿಕೆಯಾಗಿ ಬಂದಿದೆ. ಅದು ಅವರ ಜೀವನದಲ್ಲಿ ಪ್ರವೇಶವಾದ ಬಳಿಕ ಅವರಲ್ಲಿ ಬಹಳಷ್ಟು ಬದಲಾವಣೆ ಆಗಿವೆ. ಆ ಕಡಗವನ್ನು ನಟ ವಿಷ್ಣುವರ್ಧನ್ ಅವರು ಧರಿಸಿದ ಬಳಿಕ ಅವರಲ್ಲಿ ಬಹಳಷ್ಟು ಪೊಸೆಟಿವ್ ವೈಬ್ರೇಷನ್ ಪಾಸ್ ಆಗುತ್ತಿತ್ತು. ಆ ಕಡಗವನ್ನು ನಟ ವಿಷ್ಣುವರ್ಧನ್ ಅವರು 1980 ರಿಂದ ಅವರು ನಿಧನರಾಗುವವರೆಗೂ ಧರಿಸಿಯೇ ಇದ್ದರು.
ನಟ ವಿಷ್ಣುವರ್ಧನ್ ಅವರು ಬೀದರ್ ಗುರುದ್ವಾರದ ಬಗ್ಗೆ, ಆ ಕಡಗವನ್ನು ಕೊಟ್ಟ ಗುರುಗಳ ಬಗ್ಗೆ ಹಾಗೂ ಆ ಕಡಗದ ಬಗ್ಗೆ ಅದೆಷ್ಟು ಪ್ರಾಮುಖ್ಯತೆ ಕೊಟ್ಟಿದ್ದರು ಎಂಬುದು ಅರ್ಥವಾಗುತ್ತದೆ. ತಮ್ಮ ಜೀವನದ ಕೊನೆಯ ಉಸಿರು ಇರೋವರೆಗೂ ಆ ಕಡಗವನ್ನು ಅವರು ಧರಿಸಿಯೇ ಇದ್ದರು. ಜೊತೆಗೆ, ನಟ ವಿಷ್ಣುವರ್ಧನ್ ಅವರು ಎಡಚರರು (ಮುಖ್ಯವಾಗಿ ಎಡಗೈ ಉಪಯೋಗಿಸುವವರು) ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿದೆ.
ಪರಭಾಷೆ ಸಿನಿಮಾಗಳ ಕರಾಳ ಸತ್ಯವನ್ನು ಬಿಚ್ಚಿಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್, ಹೀಗೂ ಉಂಟೇ..!
ಆ ಕಡಗವನ್ನು ಅವರು ಧರಿಸುವ ಮೂಲಕ ಅವರಲ್ಲಿ ಎಡಗೈ ಹಾಗೂ ಬಲಗೈ ಮಧ್ಯೆ ಬ್ಯಾಲೆನ್ಸ್ ಬರಲು ಕೂಡ ಅದು ಸಹಕಾರಾಯಾಗಿತ್ತು ಎನ್ನಲಾಗಿದೆ. ಒಟ್ಟಿನಲ್ಲಿ, ನಟ ವಿಷ್ಣುವರ್ಧನ್ ನೆನಪು ಮಾಡಿದ ತಕ್ಷಣ ಅವರ ಬಲಗೈನ ಕಡಗ ಖಂಡಿತ ನೆನಪಾಗುತ್ತದೆ. ಆ ಬಗ್ಗೆ ರೋಚಕ ಕಹಾನಿ, ಆ ಕಡಗದ ಸೀಕ್ರೆಟ್ ಇದೀಗ ರಿವೀಲ್ ಆಗಿದೆ.
